Month: July 2026

LATEST NEWS

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿರುಸಿನ S.I.R ಮನೆ-ಮನೆ ಸಂಪರ್ಕ ನಡೆಸಿದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ಎಸ್.ಐ.ಆರ್ (S.I.R) ಮಹಾ ಅಭಿಯಾನ’ದ ಅಂಗವಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿವಿಧ ಬೂತ್‌ಗಳಿಗೆ ತೆರಳಿ ಬಿರುಸಿನ ಮನೆ-ಮನೆ ಸಂಪರ್ಕ ಹಾಗೂ ಪಕ್ಷದ ಪ್ರಮುಖರ ಭೇಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಪ್ರಮುಖರ ಮನೆಗೆ ಭೇಟಿ ಹಾಗೂ ಸಮಾಲೋಚನೆ: ಅಭಿಯಾನದ ಅಂಗವಾಗಿ ಅದ್ಯಪಾಡಿ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 174 ಹಾಗೂ 175 ರಲ್ಲಿ ಶಾಸಕರು ವ್ಯಾಪಕ […]

LATEST NEWS

*ಬೈಲೂರು: ಊರು ಬೋಡು ಪುದರ್ ಬೊಡ್ಚಿ ನಾಟಕದ ಶುಭಮುಹೂರ್ತ*

ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ತುಳು ಹಾಸ್ಯಮಯ ನಾಟಕ “ಊರು ಬೋಡು ಪುದರ್ ಬೊಡ್ಚಿ” ಇದರ ಶುಭ ಮುಹೂರ್ತ ಕಾರ್ಯಕ್ರಮ ಜುಲೈ 16ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು. ಅರ್ಚಕರಾದ ನಾರಾಯಣ ಭಟ್ ಕೌಡೂರು ನಾಟಕ ಮುಹೂರ್ತದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ನಾಟಕದ ಯಶಸ್ವಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ತಂಡದ ಸಾರಥಿ ನಾಟಕದ ಕರ್ತೃ ಪ್ರಸನ್ನ ಶೆಟ್ಟಿ ಬೈಲೂರು , ಪದ್ಮರಾಜ ಹೆಗ್ಡೆ, ಹರೀಶ್ ಶೆಟ್ಟಿ, ಹರಿಜೀವನ ಹೆಗ್ಡೆ, ಕುಟ್ಟಿ ಶೇರಿಗಾರ್, ಗುಣಕರ […]

COMMUNITY NEWS LATEST NEWS

ನಿಡ್ಡೋಡಿ ಚರ್ಚಿನಲ್ಲಿ ಕಥೊಲಿಕ್ ಸಭಾದಿಂದ ವನಮಹೋತ್ಸವ: ನೆಟ್ಟ ಗಿಡಗಳ ನಿರ್ವಹಣೆಗೆ ಶ್ರಮದಾನ

ಮೂಡಬಿದ್ರೆ : ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ ವನಮಹೋತ್ಸವ ಹಾಗೂ ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಲಿಯೋ ವಿಲಿಯಂ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಕೇವಲ ಗಿಡಗಳನ್ನು ನೆಡುವುದಷ್ಟೇ ವನಮಹೋತ್ಸವದ ಉದ್ದೇಶವಾಗಬಾರದು, ಬದಲಿಗೆ ಅವುಗಳನ್ನು ನಿರಂತರವಾಗಿ ಪೋಷಿಸಿ, ಬೆಳೆಸಿ ಹೆಮ್ಮರವಾಗಿಸುವ […]

LATEST NEWS

ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ: ಮಂಗಳೂರಿನಲ್ಲಿ ಬೃಹತ್ ಬೈಕ್ ರ್ಯಾಲಿ

ಮಂಗಳೂರು, ಜು.18 :- ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಸ್ವೀಪ್ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ ಆಶ್ರಯದಲ್ಲಿ ವಿಶೇಷ ಜಾಗೃತಿ ಅಭಿಯಾನದ ಅಂಗವಾಗಿ ಶನಿವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರ್ಯಾಲಿ ಆಯೋಜಿಸಲಾಗಿದ್ದು, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಲಾಲ್‍ಬಾಗ್ ಮಂಗಳೂರು ಮಹಾನಗರಪಾಲಿಕೆ ಆವರಣದಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿ ಕದ್ರಿ ಉದ್ಯಾನವನದವರೆಗೆ ನಡೆಯಿತು. ಈ ಸಂದರ್ಭದಲ್ಲಿ […]

LATEST NEWS

ಸಾಹಿತ್ಯ ಮತ್ತು ಶಿಕ್ಷಣದ ಮೂಲಕವೇ ಸಂಸ್ಕಾರಯುತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ: ಸಾಹಿತಿ ಚಂದ್ರಕಲಾ ನಂದಾವರ

ಮಂಗಳೂರು, ಜುಲೈ:18: ಮಂಗಳೂರಿನ ಕೋರ್ಟ್ ಗುಡ್ಡೆಯ ಆಲದ ಮರದಡಿಯಲ್ಲಿ ಸಮಾನ ಸಾಹಿತ್ಯಾಸಕ್ತರು, ಕನ್ನಡ ಭಾಷಾ ಪಂಡಿತರ ಸಾಹಿತ್ಯ ಚರ್ಚೆಯಲ್ಲಿ ಆರಂಭವಾದ ಮಿತ್ರ ಮಂಡಳಿ ಸಾಹಿತ್ಯ ಲೋಕಕ್ಕೆ ದಿಗ್ಗಜ ಸಾಹಿತಿಗಳನ್ನು ನೀಡಿದೆ. ಮಿತ್ರ ಮಂಡಳಿಯಿಂದ ಬಿಡುಗಡೆಯಾದ ಪುಸ್ತಕಗಳು ಚರಿತ್ರೆಯ ಪುಟಗಳಲ್ಲಿ ಶ್ರೇಷ್ಟ ಸಾಹಿತ್ಯ ಪ್ರಕಾರಗಳಾಗಿ ದಾಖಲಾಗಿವೆ. ಇದರಲ್ಲಿ ಕೆನರಾ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಕೊಡುಗೆ ದೊಡ್ಡದಿದೆ. ಆ ನಿಟ್ಟಿನಲ್ಲಿ ಮಿತ್ರ ಮಂಡಳಿಯನ್ನು ಮತ್ತೇ ಪುನರುಜ್ಜೀನವನಗೊಳಿಸುವ ಕಾರ್ಯವನ್ನು ಕೆನರಾ ಶಿಕ್ಷಣ ಸಂಸ್ಥೆ ಮಾಡಿರುವುದು ಉತ್ತಮ ಹೆಜ್ಜೆ ಎಂದು ಖ್ಯಾತ […]

DAKSHINA KANNADA HOME LATEST NEWS

ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ – ರೈತರ ನೋಂದಣಿಗೆ ಜುಲೈ 31 ಕೊನೆಯ ದಿನ

ಮಂಗಳೂರು, ಜುಲೈ 18:- ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2026-27 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಯೋಜನೆಯಡಿ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರು ನೋಂದಾವಣೆ ಗೊಳ್ಳಬಹುದು. ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ […]

LATEST NEWS

ಬಿ.ಸಿ. ರೋಡ್ ಲಾವಣ್ಯ ಹತ್ಯೆ ಅತ್ಯಂತ ಪೈಶಾಚಿಕ ಕೃತ್ಯ; ಆರೋಪಿಗೆ ಗಲ್ಲು ಶಿಕ್ಷೆ ಅಥವಾ ಎನ್‌ಕೌಂಟರ್ ಮಾಡಿ: ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಪುತ್ತೂರು: ಬಿ.ಸಿ. ರೋಡ್‌ನ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದ ಬಳಿ ದುಷ್ಕರ್ಮಿಯಿಂದ ಬರ್ಬರವಾಗಿ ಹತ್ಯೆಯಾದ ಯುವತಿ ಲಾವಣ್ಯ ಅವರ ನಿವಾಸಕ್ಕೆ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಭೇಟಿ ನೀಡಿ, ಶೋಕತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಸಮಾಜದ ಮಾನಸಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮಾಜದ ಜಡತ್ವಕ್ಕೆ ಶಾಸಕರ ಬೇಸರ: “ನಡುಹಗಲಲ್ಲೇ ಹೆಣ್ಣುಮಗಳೊಬ್ಬಳಿಗೆ ರಕ್ಷಣೆ ಇಲ್ಲ […]

LATEST NEWS

ಉರ್ವಾ ಸುಂಕದಕಟ್ಟೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ: ಸ್ಥಳಕ್ಕೆ ಐವನ್ ಡಿ’ಸೋಜಾ ಭೇಟಿ 24 ಗಂಟೆ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ

ಮಂಗಳೂರು, ಜುಲೈ 18: ಮಂಗಳೂರು ನಗರದ ಉರ್ವಾ ಸ್ಫೋರ್ ಸಮೀಪದ ಸುಂಕದಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ನೀರು ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ನಿರಂತರ ಮಳೆಯಾಗುತ್ತಿದ್ದರೂ ಪ್ರದೇಶದಲ್ಲಿ ಕುಡಿಯುವ ನೀರನ್ನು ರೇಷನಿಂಗ್ ಪದ್ಧತಿಯಲ್ಲಿ ಮಾತ್ರ ಪೂರೈಸಲಾಗುತ್ತಿದ್ದು, ಅದೂ ರಾತ್ರಿ 12 […]

LATEST NEWS

ಎಸ್‌ಐಆ‌ರ್ ಪ್ರಕ್ರಿಯೆಯಲ್ಲಿ ಅಕ್ರಮ: ಎಂ.ಎಲ್.ಸಿ. ಐವನ್ ಡಿ’ಸೋಜಾ ನೇತೃತ್ವದ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು, ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎನ್ಯುಮರೇಷನ್ ಪ್ರಕ್ರಿಯೆಯಲ್ಲಿ ಕಂಡುಬರುತ್ತಿರುವ ಅಕ್ರಮಗಳು ಮತ್ತು ಅವ್ಯವಸ್ಥೆಗಳ ಕುರಿತು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾ ಅವರು, ಜಿಲ್ಲೆಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗುವಂತೆ ಕಾಂಗ್ರೆಸ್ ಪಕ್ಷವು 1,750ಕ್ಕೂ ಅಧಿಕ ಬಿ.ಎಲ್.ಎ. (Booth Level Agents)ಗಳನ್ನು ನೇಮಿಸಿದೆ. […]

LATEST NEWS

‘ಸ್ವಚ್ಛ ಭಾರತ್’ ಬಸ್ ತಂಗುದಾಣದಲ್ಲಿ ಗ್ಲಾಸ್ ಚೂರುಗಳ ರಾಶಿ: ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ, ಪಾಲಿಕೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

ಮಂಗಳೂರು:ನಗರದ ಹೃದಯಭಾಗದಲ್ಲಿರುವ ಬೆಂದೂರ್ ಸೇಂಟ್ ಆಗ್ನೆಸ್ ಶಾಲಾ-ಕಾಲೇಜು ಸಮೀಪದ ಬಸ್ ತಂಗುದಾಣವು ಪ್ರಸ್ತುತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪಾಲಿಗೆ ಅಪಾಯಕಾರಿಯಾಗಿ ಮಾರ್ಪಟ್ಟಿದ್ದು, ಮಂಗಳೂರು ಮಹಾನಗರ ಪಾಲಿಕೆಯ ತೀವ್ರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೆಲವು ದಿನಗಳ ಹಿಂದೆ ಸಂಭವಿಸಿದ ಮರ ಬಿದ್ದ ಘಟನೆಯಿಂದಾಗಿ ಈ ಸುಸಜ್ಜಿತ ಬಸ್ ತಂಗುದಾಣದ ಗ್ಲಾಸ್‌ಗಳು ಒಡೆದು ಚೂರುಚೂರಾಗಿವೆ. ಆದರೆ, ಘಟನೆ ನಡೆದು ಹಲವು ದಿನಗಳು ಕಳೆದರೂ ಒಡೆದ ಗ್ಲಾಸ್ ಚೂರುಗಳನ್ನು ಸ್ಥಳದಿಂದ ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ. ಬಸ್ ತಂಗುದಾಣದ ಆಸನಗಳು ಹಾಗೂ ನೆಲದಾದ್ಯಂತ ಈ […]