ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ಎಸ್.ಐ.ಆರ್ (S.I.R) ಮಹಾ ಅಭಿಯಾನ’ದ ಅಂಗವಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿವಿಧ ಬೂತ್‌ಗಳಿಗೆ ತೆರಳಿ ಬಿರುಸಿನ ಮನೆ-ಮನೆ ಸಂಪರ್ಕ ಹಾಗೂ ಪಕ್ಷದ ಪ್ರಮುಖರ ಭೇಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು.
ಪ್ರಮುಖರ ಮನೆಗೆ ಭೇಟಿ ಹಾಗೂ ಸಮಾಲೋಚನೆ:ಅಭಿಯಾನದ ಅಂಗವಾಗಿ ಅದ್ಯಪಾಡಿ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 174 ಹಾಗೂ 175 ರಲ್ಲಿ ಶಾಸಕರು ವ್ಯಾಪಕ ಸಂಚಾರ ನಡೆಸಿದರು. ಈ ವೇಳೆ ಆದಿನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸದಾಶಿವ ಭಟ್, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ಹಾಗೂ ಪ್ರಮುಖರಾದ ಕುಮಾರ್ ಡಿ. ಶೆಟ್ಟಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಗಂಜಿಮಠ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶೋಧನ್ ಆದ್ಯಪಾಡಿ, ಪಕ್ಷದ ಪ್ರಮುಖರಾದ ಯಾದವ ಕುಲಾಲ ಹಾಗೂ ಬೂತ್ ಸಂಖ್ಯೆ 175ರ ಅಧ್ಯಕ್ಷರಾದ ಕೃಷ್ಣ ಕುಲಾಲ ಅವರ ಮನೆಗಳಿಗೆ ಶಾಸಕರು ಖುದ್ದಾಗಿ ಭೇಟಿ ನೀಡಿದರು.
ಬಿ.ಎಲ್.ಓ (BLO) ಗಳ ಭೇಟಿ: ಚುನಾವಣಾ ಪ್ರಕ್ರಿಯೆಯ ಬಹುಮುಖ್ಯ ಕೊಂಡಿಯಾಗಿ ರುವ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಸಂಪರ್ಕಿಸುವ ನಿಟ್ಟಿನಲ್ಲಿ ಶಾಸಕರು ವಿಶೇಷ ಒತ್ತು ನೀಡಿದರು. ಬೂತ್ ಸಂಖ್ಯೆ 174ರ ಬಿ.ಎಲ್.ಓ ಅಕ್ಷತಾ, ಬೂತ್ ಸಂಖ್ಯೆ 175ರ ಬಿ.ಎಲ್.ಓ ಸೌಮ್ಯ ಹಾಗೂ ಕಂದಾವರ ವ್ಯಾಪ್ತಿಯ ಬೂತ್ ಸಂಖ್ಯೆ 173ರ ಬಿ.ಎಲ್.ಓ ಉಷಾ ಅವರ ಮನೆಗಳಿಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಅದ್ಯಾಪಡಿ, ಕಂದಾವರ, ಕೊಳಂಬೆ ಭಾಗದಲ್ಲಿ ಬಿರುಸಿನ ‘ಮನೆ-ಮನೆ ಭೇಟಿ’: ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿದ ಶಾಸಕರು ಬೂತ್ ಮಟ್ಟದಲ್ಲಿ ಜನಸಾಮಾನ್ಯರನ್ನು ನೇರವಾಗಿ ತಲುಪುವ ಕಾರ್ಯ ಮಾಡಿದರು. ಅದ್ಯಾಪಡಿ, ಕಂದಾವರ ಮತ್ತು ಕೊಳಂಬೆ ಭಾಗದ ಪ್ರತಿಯೊಂದು ಮನೆಗೂ ಭೇಟಿ ನೀಡಿದ ಶಾಸಕರು, ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಪಕ್ಷದ ಸಿದ್ಧಾಂತಗಳನ್ನೊಳ ಗೊಂಡ ಕೈಪಿಡಿಯನ್ನು ವಿತರಿಸಿದರು. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.ಅದ್ಯಾಪಡಿ ವ್ಯಾಪ್ತಿ: ಬೂತ್ ಸಂಖ್ಯೆ 174 ಮತ್ತು 175 ರಲ್ಲಿ ಮನೆ-ಮನೆಗೆ ಭೇಟಿ ನೀಡಿ ಅಭಿಯಾನದ ಮಾಹಿತಿ ತಲುಪಿಸಲಾಯಿತು.ಕಂದಾವರ ವ್ಯಾಪ್ತಿ: ಬೂತ್ ಸಂಖ್ಯೆ 170, 171, 172 ಹಾಗೂ 173 ರ ವ್ಯಾಪ್ತಿಯಲ್ಲಿ ಬಿರುಸಿನ ಪಾದಯಾತ್ರೆ ಹಾಗೂ ಮನೆ-ಮನೆ ಸಂಪರ್ಕ ನಡೆಸಲಾಯಿತು.ಕೊಳಂಬೆ ವ್ಯಾಪ್ತಿ: ಬೂತ್ ಸಂಖ್ಯೆ 176, 177, 178 ಹಾಗೂ 179 ರಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ಮನೆ-ಮನೆ ಅಭಿಯಾನವನ್ನು ಯಶಸ್ವಿಗೊಳಿಸಲಾಯಿತು.ವಿಎಚ್‌ಪಿ, ಬಜರಂಗದಳ ಘಟಕ ಉದ್ಘಾಟನೆ: ಈ ಸಾಲುಗಟ್ಟಿದ ಅಭಿಯಾನಗಳ ನಡುವೆ, ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದ ಮೂಡುಕರೆ-ಕಂದಾವರ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಘಟನೆಯ ಕಾರ್ಯಕರ್ತರಿಗೆ ಶುಭಕೋರಿದರು.ಈ ಎಲ್ಲಾ ಬಿರುಸಿನ ಪ್ರವಾಸ ಮತ್ತು ಸಂಪರ್ಕ ಕಾರ್ಯಕ್ರಮಗಳ ಉದ್ದಕ್ಕೂ ಗಂಜಿಮಠ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶೋಧನ್ ಆದ್ಯಪಾಡಿ ಹಾಗೂ ಅಪಾರ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಾಸಕರೊಂದಿಗೆ ಉಪಸ್ಥಿತರಿದ್ದರು.



