• Home  
  • ನಿಡ್ಡೋಡಿ ಚರ್ಚಿನಲ್ಲಿ ಕಥೊಲಿಕ್ ಸಭಾದಿಂದ ವನಮಹೋತ್ಸವ: ನೆಟ್ಟ ಗಿಡಗಳ ನಿರ್ವಹಣೆಗೆ ಶ್ರಮದಾನ
- COMMUNITY NEWS - LATEST NEWS

ನಿಡ್ಡೋಡಿ ಚರ್ಚಿನಲ್ಲಿ ಕಥೊಲಿಕ್ ಸಭಾದಿಂದ ವನಮಹೋತ್ಸವ: ನೆಟ್ಟ ಗಿಡಗಳ ನಿರ್ವಹಣೆಗೆ ಶ್ರಮದಾನ

ಮೂಡಬಿದ್ರೆ : ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ ವನಮಹೋತ್ಸವ ಹಾಗೂ ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಲಿಯೋ ವಿಲಿಯಂ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಕೇವಲ ಗಿಡಗಳನ್ನು ನೆಡುವುದಷ್ಟೇ ವನಮಹೋತ್ಸವದ ಉದ್ದೇಶವಾಗಬಾರದು, ಬದಲಿಗೆ ಅವುಗಳನ್ನು ನಿರಂತರವಾಗಿ ಪೋಷಿಸಿ, ಬೆಳೆಸಿ ಹೆಮ್ಮರವಾಗಿಸುವ […]

Share News

ಮೂಡಬಿದ್ರೆ : ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ ವನಮಹೋತ್ಸವ ಹಾಗೂ ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಚರ್ಚಿನ ಧರ್ಮಗುರುಗಳಾದ ವಂದನೀಯ ಲಿಯೋ ವಿಲಿಯಂ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಕೇವಲ ಗಿಡಗಳನ್ನು ನೆಡುವುದಷ್ಟೇ ವನಮಹೋತ್ಸವದ ಉದ್ದೇಶವಾಗಬಾರದು, ಬದಲಿಗೆ ಅವುಗಳನ್ನು ನಿರಂತರವಾಗಿ ಪೋಷಿಸಿ, ಬೆಳೆಸಿ ಹೆಮ್ಮರವಾಗಿಸುವ ಇಂತಹ ನಿರ್ವಹಣಾ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ತೀರಾ ಅಗತ್ಯವಾಗಿವೆ” ಎಂದು ಕಥೊಲಿಕ್ ಸಭಾದ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಂಗವಾಗಿ ಕಥೊಲಿಕ್ ಸಭಾದ ಪದಾಧಿಕಾರಿಗಳು ಹಾಗೂ ಸದಸ್ಯರು ಚರ್ಚ್ ಆವರಣದಲ್ಲಿ ಶ್ರಮದಾನ ನಡೆಸಿದರು. ಈಗಾಗಲೇ ನೆಡಲಾಗಿದ್ದ ಗಿಡಗಳ ಸುತ್ತ ಬೆಳೆದಿದ್ದ ಅನಗತ್ಯ ಕಳೆಗಳನ್ನು ಕಿತ್ತು, ಗೊಬ್ಬರ ಹಾಗೂ ಮಣ್ಣು ಹಾಕಿ ಗಿಡಗಳ ಸಂರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಿದರು.

ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷರಾದ ಶ್ರೀಮತಿ ಸರಿತಾ ತಾವ್ರೊ ಅವರು ಉಪಸ್ಥಿತರಿದ್ದ ಗಣ್ಯರನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಪ್ರಿಮಾ ಕೊರೆಯಾ, ಸರ್ವ ಆಯೋಗಗಳ ಸಂಯೋಜಕರಾದ ಮ್ಯಾಕ್ಸಿಮ್ ಪಿಂಟೊ ಹಾಗೂ ಕಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಡಿಸೋಜಾ ಸೇರಿದಂತೆ ಘಟಕದ ಹಲವು ಪ್ರಮುಖರು ಹಾಗೂ ಸದಸ್ಯರು ಹಾಜರಿದ್ದು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಘಟಕದ ಕಾರ್ಯದರ್ಶಿ ಶ್ರೀ ಜೀವನ್ ಕ್ರಾಸ್ತಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

Share News