Month: July 2026

Bypass

The First Berserker: Khazan Deluxe Edition ElAmigos Release

🧮 Hash-code: bc1dd19aed66291191b7ac0618cfb7ec • 📆 2026-07-24 Verify CPU: modern architecture (Zen 3 / Alder Lake minimum) RAM: 32 GB highly recommended for Ultra Storage:100 GB free space Graphics: DLSS 3 / FSR 3 frame generation compatible chip Reclaiming General Khazan’s Legacy As the exiled warrior General Khazan, you are driven by an unrelenting thirst for […]

DAKSHINA KANNADA HOME LATEST NEWS

ಲಾವಣ್ಯ ಕೊಲೆ ಪ್ರಕರಣ: ಕತ್ತಿ ಖರೀದಿಸಿದ್ದ ಅಂಗಡಿಯಲ್ಲಿ ಮಹಜರು

ಉಪ್ಪಿನಂಗಡಿ: ಜುಲೈ 16 ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಹತ್ಯೆ ಮಾಡಿದ್ದ ಆರೋಪಿಯು ಕೊಲೆಗೆ ಬಳಸಿದ್ದ ಮಾರಾಕಾಸ್ತ್ರವನ್ನು ಉಪ್ಪಿನಂಗಡಿಯಲ್ಲಿ ಖರೀದಿಸಿದ್ದ, ಈ ಹಿನ್ನೆಲೆ ಉಪ್ಪಿನಂಗಡಿಯಲ್ಲಿ ಬುಧವಾರದಂದು ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು. ಲಾವಣ್ಯಳನ್ನು ಕೊಲೆಗೈಯುವ ಬಗ್ಗೆ ಪೂರ್ವ ಯೋಜನೆಯನ್ನು ರೂಪಿಸಿದ್ದ ಎನ್ನಲಾಗಿದ್ದು, ಪೂರಕವಾಗಿ ಜುಲೈ 15 ರಂದೇ ಉಪ್ಪಿನಂಗಡಿಗೆ ಆಗಮಿಸಿ ಅಲ್ಲಿ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ. ಅಲ್ಲಿ ಕೃಷಿಕರು ಬಳಕೆಗೆ ಬೇಕಾಗುವ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆಯನ್ನು ಕೇಳಿದ್ದ. […]

LATEST NEWS

ಬ್ಯಾಂಕ್ ಆಫ್ ಬರೋಡಾದ 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಣಕಾಸು ಫಲಿತಾಂಶಗಳು: ಪ್ರಮುಖ ಮುಖ್ಯಾಂಶಗಳು

ಮಂಗಳೂರು:  ಬ್ಯಾಂಕ್ ಆಫ್ ಬರೋಡಾವು 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಬಲಿಷ್ಠ ಆಸ್ತಿ ಗುಣಮಟ್ಟದೊಂದಿಗೆ ತನ್ನ ನಿರಂತರ ಸದೃಢ ಬೆಳವಣಿಗೆಯನ್ನು ಯಶಸ್ವಿಯಾಗಿ ಮುಂದುವರೆಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಜಾಗತಿಕ ವ್ಯವಹಾರವು ಗಣನೀಯವಾಗಿ ಏರಿಕೆಯಾಗಿ ₹30,50,457 ಕೋಟಿಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ (YoY) 15.4 ಪ್ರತಿಶತದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕ್‌ನ ಒಟ್ಟು ಜಾಗತಿಕ ಮುಂಗಡಗಳು 17.4 ಪ್ರತಿಶತ ಹಾಗೂ ದೇಶೀಯ ಮುಂಗಡಗಳು 16.1 ಪ್ರತಿಶತದಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸಿವೆ. ಪ್ರಮುಖವಾಗಿ […]

HOME LATEST NEWS

ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ‘ಮಂಗಳೂರು IAS’ ನಲ್ಲಿ ಪ್ರವೇಶಾತಿ ಆರಂಭ

ಮಂಗಳೂರು: ಭಾರತೀಯ ಯುವಕರಲ್ಲಿ ಸರ್ಕಾರಿ ಸೇವೆಯು ಅತ್ಯಂತ ಬೇಡಿಕೆಯ ವೃತ್ತಿ ಆಯ್ಕೆಗಳಲ್ಲಿ ಒಂದಾಗಿ ಮುಂದುವರಿಯುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ವ್ಯಾಪಕ ಶ್ರೇಣಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸಲು ವಿನ್ಯಾಸಗೊಳಿಸಲಾದ ತನ್ನ ಹೊಸ ಬ್ಯಾಚ್‌ಗಳ ತರಬೇತಿ ಕಾರ್ಯಕ್ರಮಗಳಿಗೆ ‘ಮಂಗಳೂರು ಐಎಎಸ್ – ಎ ಸ್ಕೂಲ್ ಫಾರ್ ಸಿವಿಲ್ ಸರ್ವಿಸಸ್’ (Mangalore IAS – A School for Civil Services) ಪ್ರವೇಶಾತಿಯನ್ನು ಪ್ರಕಟಿಸಿದೆ. ಮಂಗಳೂರಿನ ನಂತೂರು ಬಜ್ಜೋಡಿಯ ಪ್ರೇಮ್‌ನಗರದಲ್ಲಿರುವ ಸಂದೇಶ ಪ್ರತಿಷ್ಠಾನದ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು, ಕರಾವಳಿ ಕರ್ನಾಟಕ […]

DAKSHINA KANNADA HOME LATEST NEWS

ಬಂಟ್ವಾಳ: ಚಿನ್ನಾಭರಣಕ್ಕಾಗಿ ವೃದ್ಧೆಯ ಕೊಲೆ ಪ್ರಕರಣ- ಕೆಲಸದಾಕೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

ಬಂಟ್ವಾಳ: ಚಿನ್ನಾಭರಣದ ಆಸೆಗಾಗಿ ವೃದ್ಧೆಯ ಆರೈಕೆಗಾಗಿ ನಿಂತಿದ್ದಾಕೆಯೇ ತನ್ನ ಇಬ್ಬರು ಸಹಚರರೊಂದಿಗೆ ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಪ್ರಕರಣದ ವಿವರ ಬಂಟ್ವಾಳ ಅಮ್ಮುಂಜೆ ನಿವಾಸಿಯಾದ ವೃದ್ದೆ ಬೆನಡಿಕ್ಟ್ ಕಾರ್ಲೋ (73) ಎಂಬವರ ಆರೈಕೆ ನೋಡಿಕೊಳ್ಳುತ್ತಿದ್ದ ಆರೋಪಿತೆ ಬಂಟ್ವಾಳ ಅಮ್ಟಾಡಿ ನಿವಾಸಿ ಕು.ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23)ಎಂಬಾಕೆಯು, ವೃದ್ದೆಯ ಬಳಿಯಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡುವ ಉದ್ದೇಶದಿಂದ, ತನ್ನ ಸ್ನೇಹಿತ ಬಂಟ್ವಾಳ ನರಿಕೊಂಬು ನಿವಾಸಿ ಸತೀಶ ನಾಯಕ್ (28) ಎಂಬಾತನ ಸಹಾಯದಿಂದ ವೃದ್ದೆ ಸೇವಿಸುವ ಆಹಾರದಲ್ಲಿ ವಿಷ […]

DAKSHINA KANNADA HOME LATEST NEWS

ಮಂಗಳೂರು ನಗರ ಪೊಲೀಸರಿಂದ ₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ

ಮಂಗಳೂರು: ಮಂಗಳೂರು ನಗರ ಪೊಲೀಸ್ ವತಿಯಿಂದ ಸುಮಾರು 82 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಬುಧವಾರ ನ್ಯಾಯಾಲಯದ ಅನುಮತಿಯೊಂದಿಗೆ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ನಾಶಪಡಿಸಲಾಯಿತು. 2026ನೇ ಸಾಲಿನಲ್ಲಿ ಇದುವರೆಗೆ 87 ಎನ್ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ 157 ಪೆಡ್ಲರ್ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ 8,18,30,130 ರೂ. ಮೌಲ್ಯದ 148 ಕೆ.ಜಿ. 615 ಗ್ರಾಂ ಗಾಂಜಾ, 7 ಕೆ.ಜಿ. 165 ಗ್ರಾಂ ಎಂ.ಡಿ.ಎಂ.ಎ., 1 ಕೆ.ಜಿ. 705 ಗ್ರಾಂ ಹೈಡ್ರೋ ವೀಡ್ ಗಾಂಜಾ ಸೇರಿದಂತೆ […]

LATEST NEWS

ಯಶ್ಪಾಲ್ ಸುವರ್ಣ ವಿರುದ್ಧ ಕಠಿಣ ಕಾನೂನು ಕ್ರಮ: ಮಂಜುನಾಥ ಭಂಡಾರಿ

ಉಡುಪಿ : ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ದ್ವೇಷಪೂರಿತ, ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸಿ ಕಾನೂನಿನ ಅನ್ವಯ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ತಿಳಿಸಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ದುರಾಡಳಿತದಿಂದ ದೇಶಾದ್ಯಂತ ತೀವ್ರ […]

DAKSHINA KANNADA HOME LATEST NEWS

ಕೊಣಾಜೆಯಲ್ಲಿ ಪೊಲೀಸರಿಂದ ವಿದ್ಯಾರ್ಥಿಗಳ ದಿಢೀರ್ ಡ್ರಗ್ಸ್ ಪರೀಕ್ಷೆ: ಓರ್ವ ಪಾಸಿಟಿವ್‌

ಮಂಗಳೂರು: ನಗರದ ಕೊಟೆಕಾರ್ ಬೀರಿ ಹಾಗೂ ಕೊಣಾಜೆಯ ಬಂಟರ ಭವನದ ಬಳಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಂಗಳೂರು ಪೊಲೀಸರು ಮಂಗಳವಾರ ದಿಢೀರ್ ಡ್ರಗ್ಸ್ ಪರೀಕ್ಷೆ ನಡೆಸಿದ್ದಾರೆ. ಕೊಟೆಕಾರ್ ಬೀರಿ (ಉಳ್ಳಾಲ ವ್ಯಾಪ್ತಿ): ಪರ ಕಾಲೇಜು, ನಿಟ್ಟೆ ಕೆ.ಎಸ್.ಹೆಗ್ಡೆ, ಸೈಂಟ್ ಅಲೋಶಿಯಸ್, ಪಿಎ ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಇವರಲ್ಲಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಗೆ ಡ್ರಗ್ಸ್ ಸೇವನೆ ಪಾಸಿಟಿವ್ ಕಂಡುಬಂದಿದೆ. […]

DAKSHINA KANNADA HOME LATEST NEWS

MLA ಅಶೋಕ್ ರೈ ಹೆಸರಲ್ಲಿ ಕ್ಯಾನ್ಸರ್‌ ರೋಗಿಗೆ ವಂಚನೆ: ಮಾನವೀಯತೆ ಮೆರೆದ ಶಾಸಕ

ಪುತ್ತೂರು: ಸುಳ್ಯ ತಾಲೂಕಿನ ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ ಮಹಿಳೆಯೋರ್ವರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರಿನಲ್ಲಿ ವಂಚನೆ ಮಾಡಿದ್ದ ಮಹಿಳೆಯೋರ್ವರಿಗೆ ಮಾನವೀಯತೆ ಮೆರೆದ ಪುತ್ತೂರು ಶಾಸಕರು ಮಹಿಳೆ ಕಳೆದುಕೊಂಡ ಮೊತ್ತವನ್ನು ಪಾವತಿಸಿದ ಘಟನೆ ನಡೆದಿದೆ. ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ ಗಣೇಶ್‌ರವರ ಪತ್ನಿ ಪುಷ್ಪಾವತಿ ಹಣ ಕಳೆದುಕೊಂಡ ಗೃಹಿಣಿ. ಪುಷ್ಪಾವತಿಯವರ ಗಂಡ ಗಣೇಶ್ ಕ್ಯಾನರ್ ಪೀಡಿತರಾಗಿದ್ದು ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರ ಕಷ್ಟವನ್ನು ಕಂಡು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೂ ಭಿತ್ತರವಾಗಿತ್ತು. […]

DAKSHINA KANNADA HOME LATEST NEWS

ಉಪ್ಪಿನಂಗಡಿ: ನಿಂತಿದ್ದ ಟಿಪ್ಪರ್‌ಗೆ ಕಾರು ಢಿಕ್ಕಿ- 4 ವರ್ಷದ ಮಗು ಸೇರಿ ಐವರಿಗೆ ಗಾಯ

ಉಪ್ಪಿನಂಗಡಿ: ನಿಂತಿದ್ದ ಟಿಪ್ಪರೊಂದರ ಹಿಂಬದಿಗೆ ಕಾರೊಂದು ಢಿಕ್ಕಿಯಾಗಿ ಕಾರಿನಲ್ಲಿದ್ದ 4 ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡ ಘಟನೆ ಪೆರ್ನೆಯ ಮೈರಕಟ್ಟೆ ಎಂಬಲ್ಲಿ ಜು.28ರಂದು ನಡೆದಿದೆ. ಕಾರಿನಲ್ಲಿದ್ದ ಚಾಲಕ ಮೊಹಮ್ಮದ್ ಫಾರೂಕ್ (31), ಪ್ರಯಾಣಿಕರಾದ ಫಾತಿಮತ್ ತಸ್ಪಿಯಾ (25), ಜುಲೈಕಾ (52), ಮಹಮ್ಮದ್ ಅಫ್ವಾನ್ (15) ಹಾಗೂ ಮಹಮ್ಮದ್ ಇಲ್ಹಾನ್ (4) ಗಾಯಗೊಂಡವರು. ಮೂಲತಃ ಫರಂಗಿಪೇಟೆಯವರಾದ ಇವರು ಫರಂಗಿಪೇಟೆ ಕಡೆಯಿಂದ ಉಪ್ಪಿನಂಗಡಿ ಕಡೆ ಸಂಚರಿಸುವಾಗ ಈ ದುರ್ಘಟನೆ ನಡೆದಿದೆ. ಮೈರಕಟ್ಟೆ ಎಂಬಲ್ಲಿ ಹೆದ್ದಾರಿ ಬದಿ ಟಿಪ್ಪರೊಂದು ನಿಂತಿದ್ದು, […]