Month: December 2025

COMMUNITY NEWS DAKSHINA KANNADA HOME

*ಹೊಸ ವರುಷ ಕ್ರೈಸ್ತರು ಚರ್ಚ್ ಗಳಲ್ಲಿ ವಿಶೇಷ ಪರಮಪ್ರಸಾದದ ಆರಾಧನೆ, ಬಲಿಪೂಜೆ ಶಾಂತಿ,ನೆಮ್ಮದಿಗಾಗಿ ಪ್ರಾರ್ಥನೆ*

ಮಂಗಳೂರು, ಡಿ.31: ಹೊಸ ವರುಷ ಹಾಗೂ ದೇವಮಾತೆಯ ಹಬ್ಬವನ್ನು ಮಂಗಳೂರಿನ ಕ್ರೈಸ್ತರು ಇಂದು ಆಚರಿಸುತ್ತಿದ್ದು, ಈ ಹಿನ್ನೆಲೆ ಬುಧವಾರ ರಾತ್ರಿ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆಗಳು ನಡೆದವು. ಹಳೆಯ ವರ್ಷದಲ್ಲಿ ದೇವರು ಕರುಣಿಸಿದ ವರಗಳಿಗೆ ಕೃತಜ್ಞತೆ ಸಲ್ಲಿಸುವ ಜತೆಗೆ ಹೊಸ ವರುಷ ಜಗತ್ತಿಗೆ ಹರುಷ ತರಲಿ ಎಂದು ಪ್ರಾರ್ಥಿಸಲಾಯಿತು. ಮಂಗಳೂರಿನ ರೊಸಾರಿಯೋ ಕ್ಯಾಥೆಡ್ರಲ್, ಮಿಲಾಗ್ರಿಸ್, ಕೊರ್ಡೆಲ್, ಬೆಂದೂರು, ಕೂಳೂರು, ಬಿಜೈ, ಅಶೋಕ ನಗರ, ಆಂಜೇಲೋರ್, ಬೊಂದೇಲ್, ವಾಮಂಜೂರು, ಫಳ್ನೀರ್, ಕಾಸಿಯಾ, ಬಜಾಲ್, ಪಾಲ್ದನೆ, ದೇರೆಬೈಲ್, ಶಕ್ತಿನಗರ, ಕೆಲರೈ […]

COMMUNITY NEWS DAKSHINA KANNADA HOME

*ಬಿಕರ್ನಕಟ್ಟೆ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಜ.14,15: ವಾರ್ಷಿಕ ಮಹೋತ್ಸವ*

ಮಂಗಳೂರು. ಡಿ.31: ಮಂಗಳೂರಿನ ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ ನಲ್ಲಿರುವ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಜ. 14 ಹಾಗೂ 15 ರಂದು ವಾರ್ಷಿಕ ಮಹೋತ್ಸವ ನಡೆಯಲಿದೆ. ಜ. 14ರಂದು ಸಂಜೆ 6 ಗಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಉಶುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಜೆರಾಲ್ಡ್ ಐಸಾಕ್ ಲೋಬೊ ನಡೆಸಿಕೊಡಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತೀ ವಂದನೀಯ ಡಾ। ಅಲೋಶಿಯಸ್ ಪಾವ್ಲ್ ಡಿಸೋಜಾ ಬಲಿಪೂಜೆ ನೆರವೇರಿಸಲಿದ್ದಾರೆ ಎಂದು ಬಾಲಯೇಸು […]

DAKSHINA KANNADA HOME LATEST NEWS

ಕಬಕ : ರಸ್ತೆ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9 ನೇ ಅಡ್ಡ ರಸ್ತೆಯಲ್ಲಿ ಸ್ಥಳೀಯ ಮನೆಗಳ ಸಂಪರ್ಕದ ರಸ್ತೆ ವಿವಾದ ಇತ್ಯರ್ಥವಾಗಿದೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಸೌಹಾರ್ಧಸಭೆಯಲ್ಲಿ ವಿವಾದವನ್ನು ಇತ್ಯರ್ಥಪಡಿಸಲಾಗಿದೆ. ಈ ರಸ್ತೆಯ ಪಕ್ಕದಲ್ಲಿ 6 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ಅಲ್ಲಿಗೆ ತೆರಳುವ ರಸ್ತೆಯ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಿತ್ತು. ರಸ್ತೆಗಾಗಿ ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಹೋರಾಟವನ್ನೇ ಮಾಡಿದ್ದರು. ಕೆಲದಿನಗಳ ಹಿಂದೆ ಶಾಸಕರ ನೇತೃತ್ವದಲ್ಲಿ ಮಾತುಕತೆ ನಡೆದಿದ್ದು […]

DAKSHINA KANNADA HOME LATEST NEWS STATE

ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ರೈಲ್ವೇ ಮಾರ್ಗದ ವಿದ್ಯುದೀಕರಣ ಯಶಸ್ವಿ

ಮಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಈಡೇರಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಆಗಿದೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಘಾಟ್ ಮಾರ್ಗದ ವಿದ್ಯುದ್ದೀಕರಣ ಯೋಜನೆಯು ನಮ್ಮ ಭಾಗದ ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ದೊಡ್ಡ ಮಟ್ಟದ ವೇಗ ನೀಡಲಿದ್ದು, ಕರಾವಳಿಗೆ ಸರಕು ಸಾಗಾಣೆ, ಬಂದರು ಕಾರ್ಯಾಚರಣೆ, ಸುಗಮ ರೈಲು ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೆ ಹೆಚ್ಚಿನ ಅನುಕೂಲ […]

DAKSHINA KANNADA HOME LATEST NEWS

ಮಂಗಳೂರು: ಹೊಸ ವರ್ಷಾಚರಣೆಗೆ ಪೊಲೀಸ್‌ ಮಾರ್ಗಸೂಚಿ

ಮಂಗಳೂರು: ಹೊಸ ವರ್ಷಾಚರಣೆ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇವುಗಳನ್ನು ಎಲ್ಲ ಕಾರ್ಯಕ್ರಮಗಳ ಆಯೋಜಕರು, ಸಾರ್ವಜನಿಕರು ಕಡ್ಡಾಯವಾಗಿಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಆದೇಶ ನೀಡಿದ್ದಾರೆ. ಮಾರ್ಗಸೂಚಿಗಳ ವಿವರ ಇಂತಿವೆ *ಅನುಮತಿ ಪಡೆಯದೇ ಸಾರ್ವಜನಿಕವಾಗಿ ಯಾವುದೇ ಆಚರಣೆಗಳನ್ನು ಮಾಡಲು ಅವಕಾಶ ಇರುವುದಿಲ್ಲ. *ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು,ಕಿರುಕುಳವಾಗದಂತೆ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ನಡೆಸುವಂತೆ ಸೂಚಿಸಲಾಗಿದೆ. *ಸಂಭ್ರಮಾಚರಣೆ ಹೆಸರಿನಲ್ಲಿ ಅತೀವೇಗದ ಚಾಲನೆ, ವೀಲಿಂಗ್‌ನ ನಡೆಸುವುದು, ಅಸಭ್ಯವರ್ತನೆ, ಸಾರ್ವಜನಿಕ ಕಿರುಕುಳದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. […]

DAKSHINA KANNADA HOME LATEST NEWS

ತುಳು ಭಾಷೆ ಸಂಸ್ಕೃತಿ ಉತ್ತೇಜನಕ್ಕೆ ಎಲ್ಲರ ಪ್ರಯತ್ನ ಅಗತ್ಯ : ಕಿಶೋರ್ ಆಳ್ವ

ಮಂಗಳೂರು : ಪುರಾತನ ಹಿನ್ನೆಲೆ ಹೊಂದಿರುವ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ, ಸಮುದಾಯ ಹಾಗೂ ಖಾಸಗಿ ರಂಗ ಜೊತೆಯಾಗಿ ಕೈಜೋಡಿಸಬೇಕಾಗಿದೆ ಎಂದು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಹೇಳಿದರು. ಅವರು ಮಂಗಳೂರಿನ ತುಳು ಭವನದಲ್ಲಿ ‘ಎಸ್ .ಯು. ಪಣಿಯಾಡಿ ತುಳುನಾಡ ಚಾವಡಿ’ಯಲ್ಲಿ ಹಿರಿಯ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರಿನ ಛಾಯಾಚಿತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ತುಳು ಭಾಷೆ […]

COMMUNITY NEWS DAKSHINA KANNADA HOME

ವಂ. ಫಾ ಫೆಲಿಕ್ಸ್ ಲಿಯೋ ಪಿಂಟೊ ನಿಧನ

ಬಂಟ್ವಾಳ : ಅಸ್ಸಾಂ ರಾಜ್ಯದ ಬೊಂಗ್ಯಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ (57) ಅವರು ಅಸೌಖ್ಯದಿಂದ ಡಿಸೆಂಬರ್ 30ರಂದು ಮುಂಜಾನೆ ನಿಧನ ಹೊಂದಿದರು. ಅವರ ನಿಧನದ ಸುದ್ದಿ ಸೂರಿಕುಮೇರು ಸೇರಿದಂತೆ ಧಾರ್ಮಿಕ ವಲಯದಲ್ಲಿ ತೀವ್ರ ದುಃಖ ಮತ್ತು ಶೋಕವನ್ನುಂಟು ಮಾಡಿದೆ. ಬೊನವೆಂಚರ್ ಪಿಂಟೊ ಮತ್ತು ಆಲಿಸ್ ಪಿಂಟೊ ದಂಪತಿಯ ಪುತ್ರರಾಗಿ 1968ರ ಫೆಬ್ರವರಿ 28ರಂದು ಜನಿಸಿದ ಫೆಲಿಕ್ಸ್ […]

DAKSHINA KANNADA HOME

*ವಿಟ್ಲ ಮುಡೂರು: ಮಾಣಾಜೆ ಮೂಲೆ ರಸ್ತೆ ವಿವಾದ ಇತ್ಯರ್ಥ ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು*

ಪುತ್ತೂರು: ವಿಟ್ಲ ಮುಡೂರು ಗ್ರಾಮದ ಮಾಣಾಜೆ ಮೂಲೆಯಲ್ಲಿ ಕಳೆದ 25 ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ರಸ್ತೆ ವಿವಾದವನ್ನು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬಗೆಹರಿಸಲಾಗಿದ್ದು, ವಿವಾದ ಇತ್ಯರ್ಥಪಡಿಸಿದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದ್ದಾರೆ. ಮಾಣಾಜೆ ಮೂಲೆಯಲ್ಲಿ ಸುಮಾರು 15 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ರಸ್ತೆಗಾಗಿ ಹೋರಾಟ ಮಾಡಿದ್ದರೂ ಅದು ವ್ಯರ್ಥವಾಗಿತ್ತು. ಅನೇಕ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡಿದ್ದರೂ ವಿವಾದ ಇತ್ಯರ್ಥಪಡಿಸುವಲ್ಲಿ ಸಫಲರಾಗಿರಲಿಲ್ಲ. ಈ ವಿಚಾರವನ್ನು ಗ್ರಾಮದ ಹಿರಿಯರಾದ ಪೂವಪ್ಪ ಮೂಲ್ಯ ಎಂಬವರು ಶಾಸಕ […]

DAKSHINA KANNADA HOME LATEST NEWS

ವಿಟ್ಲ: ರಕ್ತದಾನ ಮಾಡಿ ಕುಸ್ವಾರ್ ಹಂಚಿ ಕ್ರಿಸ್ಮಸ್ ಆಚರಿಸಿದ ಸರ್ವಧರ್ಮೀಯರು

ವಿಟ್ಲ: ಒಬ್ಬರ ಜೀವ ಉಳಿಸುವ ಪುಣ್ಯವೇ ಬಂಧುತ್ವ-ಸಹೋದತ್ವ ಎಂದು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಂ.ಫಾ. ಸೈಮನ್ ಡಿಸೋಜ ಅವರು ಹೇಳಿದರು. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿಯ ಮುಚ್ಚಿರಪದವಿನಲ್ಲಿ ಫಾತಿಮಾ ಮಾತೆಯ ದೇವಾಲಯ ಇದರ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಹಾಗೂ ಐಸಿವೈಎಂ, ಹ್ಯುಮಾನಿಟಿ ಅಭಿಮಾನಿ ಬಳಗ ವಿಟ್ಲ, ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗ ಮುರುವ-ಮಾಣಿಲ, ಶ್ರೀ ವಿಷ್ಣುಮೂರ್ತಿ ಮಹಿಳಾ ಸಂಘ ಮುರುವ-ಮಾಣಿಲ ಹಾಗೂ ಟಾಸ್ಕ್ ಬಳಗ ಪೆರುವಾಯಿ ಇದರ ಜಂಟಿ ಆಶ್ರಯದಲ್ಲಿ ಬಂಧುತ್ವ ಕ್ರಿಸ್ಮಸ್-2025 ಹಾಗೂ […]

DAKSHINA KANNADA HOME

ಬಿಕರ್ನಕಟ್ಟೆಯಲ್ಲಿ ಪರಿಸರ ಸ್ನೇಹಿ-ಸೃಜನಶೀಲ ಕ್ರಿಸ್‌ಮಸ್ ನಕ್ಷತ್ರ ಸ್ಪರ್ಧೆ

ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರವು ಈ ಬಾರಿ ಆಯೋಜಿಸಿದ್ದ ಕ್ರಿಸ್‌ಮಸ್ ನಕ್ಷತ್ರ ಸ್ಪರ್ಧೆಯು ಕೇವಲ ಒಂದು ಕಲಾ ಪ್ರದರ್ಶನವಾಗಿರದೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಮಹೋತ್ಸವವಾಗಿ ಹೊರಹೊಮ್ಮಿತು. ನಗರದ ವಿವಿಧ ಮೂಲೆಗಳಿಂದ ಬಂದ 20ಕ್ಕೂ ಹೆಚ್ಚು ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಪ್ರತಿಯೊಂದು ನಕ್ಷತ್ರವೂ ತನ್ನದೇ ಆದ ವಿಶಿಷ್ಟ ಸಂದೇಶವನ್ನು ಸಾರಿತು. ಈ ಸ್ಪರ್ಧೆಯ ಅತ್ಯಂತ ಗಮನಾರ್ಹ ಅಂಶವೆಂದರೆ ಸುಸ್ಥಿರತೆಗೆ ನೀಡಿದ ಆದ್ಯತೆ; ಎಲ್ಲಾ ನಕ್ಷತ್ರಗಳನ್ನು ತೆಂಗಿನ ಚಿಪ್ಪು, ಒಣ ಹುಲ್ಲು, […]