Month: February 2026

DAKSHINA KANNADA HOME

* ಜಿಲ್ಲಾ ಮಟ್ಟದ ವಿಕಸಿತ್ ಭಾರತ್ ಯುವ ಸಂಸತ್*

ಮಂಗಳೂರು,ಫೆ.27 :ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ‘ಮೈ ಭಾರತ್’ ದಕ್ಷಿಣ ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಘಟಕ ಹಾಗೂ ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ‘ವಿಕಸಿತ್ ಭಾರತ್ ಯುವ ಸಂಸತ್ 2026’ ಜಿಲ್ಲಾ ಮಟ್ಟದ ಸ್ಪರ್ಧೆಯು ಸೈಂಟ್ ಆಗ್ನೆಸ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮವನ್ನು ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಉಪ ಪ್ರಾಂಶುಪಾಲೆ ಸಿಸ್ಟರ್ ಡಾ. ರೂಪಾ ರೋಡ್ರಿಗಸ್ ಎ.ಸಿ. ಉದ್ಘಾಟಿಸಿದರು. ಮೈ ಭಾರತ್ ದಕ್ಷಿಣ […]

DAKSHINA KANNADA HOME

*ಮಂಗಳೂರಿನ ಕದ್ರಿ, ಶಕ್ತಿನಗರದಲ್ಲಿ ಚಿರತೆ ಆತಂಕ: ಶಾಸಕ ವೇದವ್ಯಾಸ ಕಾಮತ್ ಅರಣ್ಯಾಧಿಕಾರಿಗಳೊಂದಿಗೆ ತುರ್ತು ಸಭೆ*

ಮಂಗಳೂರು: ನಗರದ ಕದ್ರಿ ಮತ್ತು ಶಕ್ತಿನಗರದ ವಸತಿ ಪ್ರದೇಶಗಳಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಶಾಸಕ ವೇದವ್ಯಾಸ ಕಾಮತ್ ಅವರು ಅರಣ್ಯಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅವರು ಸಮಗ್ರ ಮಾಹಿತಿ ಪಡೆದರು. ಬೋನು ಅಳವಡಿಕೆ: ಕದ್ರಿ ಕೈಬಟ್ಟಲ್ ಹಾಗೂ ಶಕ್ತಿನಗರದ ಕೋರ್ಡೆಲ್‌ ಪ್ರದೇಶದ ಸಿಸಿಟಿವಿಗಳಲ್ಲಿ ಚಿರತೆ ಸಂಚಾರ ಪತ್ತೆಯಾಗಿದ್ದು, ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಈಗಾಗಲೇ ಆಯಕಟ್ಟಿನ ಸ್ಥಳಗಳಲ್ಲಿ ಬೋನುಗಳನ್ನು ಇರಿಸಿದೆ. […]

HOME

ಮಾರುಕಟ್ಟೆಯಲ್ಲಿ ತರಕಾರಿ ಚೀಲ ಹೊತ್ತ ನೋವಿನಿಂದಲೇ ಹುಟ್ಟಿತು ಈ ‘AI ಕಾರ್ಡ್’: ಗ್ರಾಮೀಣ ಯುವಕನ ಶೈಕ್ಷಣಿಕ ಕ್ರಾಂತಿ!

ಮಂಗಳೂರು: ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಯುವಜನತೆಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (YatiCorp India Pvt Ltd) ಅತ್ಯಂತ ವಿಶಿಷ್ಟವಾದ ‘AI ಕಾರ್ಡ್’ ಯೋಜನೆಯನ್ನು ಜಾರಿಗೆ ತಂದಿದೆ. ಈ ಮಹತ್ವದ ಯೋಜನೆಯಲ್ಲಿ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ (KPT) ಮಂಗಳೂರು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕೆಪಿಟಿಯೇ ಈ ಕೋರ್ಸ್‌ಗಳಿಗೆ ಪರೀಕ್ಷೆ ನಡೆಸಿ ಸರ್ಕಾರಿ ಮಾನ್ಯತೆಯುಳ್ಳ ಪ್ರಮಾಣಪತ್ರವನ್ನು ನೀಡಲಿದೆ. ₹1.5 ಲಕ್ಷ ಮೌಲ್ಯದ ಕೋರ್ಸ್ ಈಗ ಮೊಬೈಲ್ ರೀಚಾರ್ಜ್ ದರದಲ್ಲಿ ! ಇಂದಿನ ಮಾರುಕಟ್ಟೆಯಲ್ಲಿ ಸುಮಾರು 1.5 […]

DAKSHINA KANNADA

*ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು – ಟಿ.ಎಂ ಶಾಹೀದ್*

ಮಂಗಳೂರು,ಫೆ.27: ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಅವರಿಗೆ ಅರ್ಹವಾಗಿ ದೊರಕಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹೀದ್ ತೆಕ್ಕಿಲ್ ತಿಳಿಸಿದರು. ಅವರು ಶುಕ್ರವಾರ ಪದವಿನಂಗಡಿ ದೇವಿನಗರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಕಾರ್ಖಾನೆಗಳು, ಬಾಯ್ಲರ್‍ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಇವರ ಸಹಯೋಗದಲ್ಲಿ ದಕ್ಷಿಣ […]

DAKSHINA KANNADA HISTORY

ಪುತ್ತೂರು: ಧೂಳಿನ ಸಮಸ್ಯೆ- ಶಾಸಕರ ಜತೆ ವಾಗ್ವಾದ ನಡೆಸಿದ್ದ ಪ್ರಾಂಶುಪಾಲೆ ಅಮಾನತು

ಪುತ್ತೂರು, ಫೆ. 27 : ಕಾಲೇಜು ಪಕ್ಕದ ಆರೋಗ್ಯ ಇಲಾಖೆಯ ಕಟ್ಟಡದ ಕಾಮಗಾರಿಯಿಂದ ಬರುತ್ತಿದ್ದ ಧೂಳಿನ ವಿರುದ್ಧ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಪ್ರಾಂಶುಪಾಲೆಯನ್ನೇ ಶಾಸಕರ ಶಿಫಾರಸಿನ ಮೇಲೆ ಉನ್ನತ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀನಿಡ್ಯಾ ಅಮಾನತು ಆದವರು. ಗುರುವಾರ ಸಂಜೆ ಅಮಾನತು ಪತ್ರ ಬಹಿರಂಗಗೊಂಡಿದೆ. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಯಾಗಿರುವ ವೇದಶ್ರೀ ನಿಡ್ಯಾ ನೂತನ ಕಟ್ಟಡಕ್ಕಾಗಿ […]

COMMUNITY NEWS HOME

ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಸಮ್ಮೇಳನಕ್ಕೆ ಚಾಲನೆ

ಮಂಗಳೂರು,ಫೆ. 27: ಮಂಗಳೂರು ಧರ್ಮಪ್ರಾಂತ್ಯದ ಕ್ಯಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಸಹಯೋಗದೊಂದಿಗೆ ಬೈಬಲ್ ಸಮ್ಮೇಳನಕ್ಕೆ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್‌ ಮೈದಾನದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಹಿರಿಯ ಗುರು ಮೊನ್ಸಿಂಜೊರ್ ವಂ| ಮ್ಯಾಕ್ಸಿಮ್ ಎಲ್. ನೊರೊನ್ಹಾ ಅವರು ಧ್ವಜಾರೋಹನ ಮಾಡುವ ಮೂಲಕ ಚಾಲನೆ ನೀಡಿ ಬಲಿಪೂಜೆ ನೆರವೇರಿಸಿದರು. ಬಲಿಪೂಜೆಯಲ್ಲಿ “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲೆಸಿದೆ” ಎಂಬ ಕುರಿತು ಪ್ರವಚನ ನೀಡಿದ ಅವರು, ನಾವು ದೇವರ ಮುಂದೆ ಪ್ರಾರ್ಥನೆ ಮಾಡುವಾಗ […]

DAKSHINA KANNADA HOME LATEST NEWS

ಪೆರುವಾಯಿ ಕಾಲಾವಧಿ ಜಾತ್ರೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ವಿಟ್ಲ: ಬಂಟ್ವಾಳ ತಾಲೂಕಿನ ಪೆರುವಾಯಿ ಸಮೀಪದ ಬದಿಯಾರು ಶ್ರೀ ಮೂವರು ದೈವಂಗಳು ಪಂಜುರ್ಲಿ ಮತ್ತು ಪಿಲಿಚಾಮುಂಡಿ ದೈವಸ್ಥಾನದಲ್ಲಿ 2026ನೇ ಸಾಲಿನ ಕಾಲಾವಧಿ ಜಾತ್ರೋತ್ಸವವು ಅತ್ಯಂತ ವೈಭವದಿಂದ ಜರುಗಿತು. ಬದಿಯಾರು ಕ್ಷೇತ್ರದಲ್ಲಿ ಫೆಬ್ರವರಿ 20, 2026ರ ಶುಕ್ರವಾರದಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 22ರ ಆದಿತ್ಯವಾರದವರೆಗೆ ವಿಜೃಂಭಣೆಯಿಂದ ನಡೆದವು. ಮೂರು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು, ದೈವಗಳ ನೇಮೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳ ಸಮ್ಮುಖದಲ್ಲಿ ಸಂಪನ್ನಗೊಂಡವು. ಪೆರುವಾಯಿ ಮತ್ತು ಸುತ್ತಮುತ್ತಲಿನ ಗ್ರಾಮಗಳ […]

DAKSHINA KANNADA

ಭಾರತೀಯ ಮಜ್ದೂರ್ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ಮತ್ತು ಪ್ರಧಾನಮಂತ್ರಿಗೆ ಮನವಿ

ಮಂಗಳೂರು ಫೆ. 26 ಭಾರತೀಯ ಮಜ್ದೂರ್ ಸಂಘ (BMS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ವಿವಿಧ ಕಾರ್ಮಿಕರ ಬೇಡಿಕೆಗಳ ಈಡೇರಿಕಾಗಿ ಪ್ರತಿಭಟನೆ ಮತ್ತು ಮನವಿಯನ್ನು ದ ಕ ಜಿಲ್ಲಾಧಿಕಾರಿಗಳ ಮತ್ತು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಯಲ್ಲಿ ಮಾನ್ಯ ಪ್ರಧಾನಮಂತ್ರಿಗಳಿಗೆ, ಕೇಂದ್ರ ಕಾರ್ಮಿಕ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗೆ, ರಾಜ್ಯ ಕಾರ್ಮಿಕ ಸಚಿವರಿಗೆ ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳು ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಾಡಲಾಯಿತು. ಪ್ರತಿಭಟನೆ ಮತ್ತು ಮನವಿಯ ನೇತೃತ್ವವನ್ನು ಬಿಎಮ್ಎಸ್ ಜಿಲ್ಲಾ ಅಧ್ಯಕ್ಷ, ವಕೀಲರಾದ ಅನಿಲ್ […]

COMMUNITY NEWS HOME

*ಪೆರುವಾಯಿಯಲ್ಲಿ ಕ್ರೈಸ್ತ ಶಿಕ್ಷಣ ದಿವಸ್ ಆಚರಣೆ*

ಪೆರುವಾಯಿ, ಫೆ. 26: ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಪೆರುವಾಯಿಯಲ್ಲಿ ಕ್ರೈಸ್ತ ಶಿಕ್ಷಣದ ದಿನವನ್ನು ಆಚರಿಸಲಾಯಿತು. ಮೊದಲು ಪವಿತ್ರ ಬಲಿ ಪೂಜೆಯನ್ನು ಫಾ. ಸೈಮನ್ ಡಿ ಸೋಜ‌ ಅವರು ನೆರವೇರಿಸಿದರು. ಬಳಿಕ ಪ್ರವಚನ ನೀಡಿದ ಅವರು, ಮಕ್ಕಳಿಗೆ ಶಾಲಾ ಪಾಠದ ಜೊತೆಗೆ ಭಾನುವಾರ ಕ್ರೈಸ್ತ ಶಿಕ್ಷಣ ಅತೀ ಅಗತ್ಯ. ಕ್ರೈಸ್ತ ಶಿಕ್ಷಣ ಕಲಿಸಲು ಮುಂದೆ ಬಂದ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿದರು. ಇದು ಒಂದು ದೇವರ ಸೇವೆ. ಎಲ್ಲರಿಗೂ ಇದರ ಭಾಗ್ಯ ಸಿಗುವುದಿಲ್ಲ. ನಿಮ್ಮ ಸಮಯವನ್ನು ತ್ಯಾಗ ಮಾಡಿ […]

DAKSHINA KANNADA HOME LATEST NEWS

ಕರಾವಳಿಯಲ್ಲಿ ಸಂಜೆ-ರಾತ್ರಿ ವೇಳೆಗೆ ತುಂತುರು ಮಳೆಯಾಗಬಹುದು: ಹವಾಮಾನ ಮುನ್ಸೂಚನೆ

ಮಂಗಳೂರು: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಇಂದು ಹಗುರ ಮಳೆಯ ಮುನ್ಸೂಚನೆ ಇದೆ. ನಿನ್ನೆ ಸುಳ್ಯ-ಬೆಳ್ತಂಗಡಿ ಸೇರಿದಂತೆ ಕೆಲವು ಕಡೆ ಮಳೆಯಾಗಿತ್ತು. ಬೆಳ್ತಂಗಡಿಯಲ್ಲಿ ಒಂದು ಮನೆಗೆ ಹಾನಿಯಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂದು ಆಕಾಶ ಮೋಡದಿಂದ ಕೂಡಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ತುಂತುರು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 33°C ರಿಂದ 34°C ವರೆಗೆ ಇರಲಿದ್ದು, ಮಧ್ಯಾಹ್ನ ಸೆಖೆಯ ಅನುಭವ ಹೆಚ್ಚಿರಲಿದೆ. ಸಮುದ್ರದ […]