Month: September 2025

DAKSHINA KANNADA HOME

*ಸಂಜೀವಿನಿ 2025 – ಒಂದು ಸ್ವಯಂಸೇವಾ ರಕ್ತದಾನ ಶಿಬಿರ*

ಮಂಗಳೂರು ಸೆಪ್ಟೆಂಬರ್ 29: ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ, ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಎಐಎಂಐಟಿ ಸೆಂಟರ್, ಬೀರಿ, ಮಂಗಳೂರಿನಲ್ಲಿ ಒಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ನಿರ್ದೇಶಕ ಡಾ. (ಫಾ.) ಕಿರಣ್ ಕೋತ್ ಎಸ್.ಜೆ. ಅವರು ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದರು ಅವರು, ಸ್ವಯಂಸೇವಾ ರಕ್ತದಾನವು ಸಮಾಜಕ್ಕೆ ಒಂದು ಜೀವರಕ್ಷಕ ಸೇವೆಯಾಗಿದೆ ಎಂದು ಹೇಳಿದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರಿನ ವೈದ್ಯರುಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡಿರುವ ವೈದ್ಯಕೀಯ ತಂಡವು, […]

DAKSHINA KANNADA HOME

ಧಾರ್ಮಿಕ ಕೇಂದ್ರಗಳ ಅಭಿವೃದ್ದಿ ಮಾಡುವುದೇ ನಿಜವಾದ ಹಿಂದುತ್ವ: ಶಾಸಕ ಅಶೋಕ್ ರೈ

ಪುತ್ತೂರು: ಧಾರ್ಮಿಕ ಕೇಂದ್ರಗಳಿಗೆ ಬಂದು ಹಿಂದುತ್ವದ ಭಾಷಣ ಮಾಡಿ, ಶಾಲು ಹಾಕಿಸಿಕೊಳ್ಳುವುದು ಹಿಂದುತ್ವವಲ್ಲ, ಹಿಂದೂ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿ ಮಾಡುವುದೇ ನಿಜವಾದ ಹಿಂದುತ್ವವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾಮಂದಿರದಲ್ಲಿ ೫ ಲಕ್ಷ ರೂವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿಂದುತ್ವದ ಬಗ್ಗೆ ಎಷ್ಟೋ ವರ್ಷಗಳಿಂದ ವೇದಿಕೆ ಸಿಕ್ಕಾಗಲೆಲ್ಲಾ ಭಾಷಣ ಮಾಡಿ ಅಧಿಕಾರಕ್ಕೇರಿದವರು ಇಲ್ಲಿನ ದೇವಸ್ಥಾನ, ದೈವಸ್ಥಾನ, ಕಟ್ಟೆಗಳ ಅಭಿವೃದ್ದಿ ಮಾಡಿಲ್ಲ, ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳ ಜಾಗದ […]

DAKSHINA KANNADA HOME

ಕುಡ್ಲದ ಪಿಲಿಪರ್ಬ-2025 ಸೀಸನ್ 4 ಉದ್ಘಾಟನೆ

ಮಂಗಳೂರು ಸೆ.30 : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಕುಡ್ಲದ ಪಿಲಿಪರ್ಬ-2025 ಸೀಸನ್ 4 ರ ಉದ್ಘಾಟನಾ ಸಮಾರಂಭವು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದ್ದು ಸಾಂಪ್ರದಾಯಿಕ ಕಲೆಯಾಗಿರುವ ಈ ಹುಲಿವೇಷಕ್ಕೆ ಇಂದು ಸ್ಪರ್ಧಾಕೂಟದ ಸ್ಪರ್ಶ ಲಭಿಸಿದೆ. ಜಿಲ್ಲೆಯ […]

DAKSHINA KANNADA HOME

*ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭ*

ಬೆಂಗಳೂರು, : ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭ ಶನಿವಾರ ದಂದು ನಡೆಯಿತು. ಮೊದಲಿಗೆ ರ‍್ಯಾಂಕ್ ಹೋಲ್ಡರ್ಸ್ ಮತ್ತು ವಿಶೇಷ ಪ್ರಶಸ್ತಿ ವಿಜೇತರ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ|ಎಂ.ಸಿ. ಸುಧಾಕರ್, ಹಾಗೂ ಮುಖ್ಯ ಅತಿಥಿ ಡಾ. ಜೆ.ಎನ್ .ಮೂರ್ತಿ ,ನಿರ್ದೇಶಕರು, ಐಐಎಸ್ಇಆರ್ , ತಿರುವನಂತಪುರಂ. ಚಾನ್ಸಲರ್ ವಂದನೀಯ ಡೈನೋಸಿಯಸ್ ವಾಸ್, ಉಪಕುಲಪತಿ ವಂದನೀಯ ವಿಕ್ಟರ್ ಲೋಬೋ ಉಪಸ್ಥಿತರಿದ್ದರು ಒಟ್ಟು 2,747 ವಿದ್ಯಾರ್ಥಿಗಳು ಪದವಿ […]

DAKSHINA KANNADA HOME

*ರೋಹನ್ ಕಾರ್ಪೊರೇಶನ್ ವತಿಯಿಂದ ಮಂಗಳೂರು ಪಾಲಿಕೆಯ ಪೌರ ಕಾರ್ಮಿಕರಿಗೆ ಸುರಕ್ಷತಾ ಪಾದರಕ್ಷೆಗಳ ವಿತರಣೆ*

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ರೋಹನ್ ಕಾರ್ಪೊರೇಶನ್ ವತಿಯಿಂದ ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಳಜಿ ವಹಿಸುವ ಉದ್ದೇಶದಿಂದ, ಸೆಪ್ಟೆಂಬರ್ 29 ರಂದು ಮಂಗಳೂರು ಮಹಾನಗರ ಪಾಲಿಕೆಗೆ 100 ಜೋಡಿ ಸುರಕ್ಷತಾ ಪಾದರಕ್ಷೆಗಳನ್ನು ವಿತರಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಂಡಿತು. ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀರವಿಚಂದ್ರ ನಾಯಕ್ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಕಾರ್ಮಿಕರಿಗೆ […]

DAKSHINA KANNADA HOME

*ಪಿಲಿನಲಿಕೆ ದಶಮ ಸಂಭ್ರಮಕ್ಕೆ* 25ಸಾವಿರ ಆಸನ ವ್ಯವಸ್ಥೆ* ಸಿನಿಮಾ, ಕ್ರಿಕೆಟ್ ಸೆಲೆಬ್ರಿಟಿಗಳ ದಂಡು.

ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನದ ಸಂಸ್ಥಾಪಕ, ಯುವನಾಯಕ ಎಂ. ಮಿಥುನ್ ರೈ ನೇತೃತ್ವದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಪಂಥಕ್ಕೆ ಹತ್ತನೇ ವರ್ಷದ ಸಂಭ್ರಮವಾಗಿದ್ದು, ಅ.1ರಂದು ನಡೆಯಲಿರುವ ಪಿಲಿನಲಿಕೆ ಪಂಥ-10ಕ್ಕೆ ಮಂಗಳಾ ಸ್ಟೇಡಿಯಂನ ಕರಾವಳಿ ಉತ್ಸವ ಮೈದಾನ ಸಜ್ಜುಗೊಂಡಿದೆ. ನಗರದ ದೀಪಾ ಕಂಫರ್ಟ್ ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಶಿವಶರಣ್ ಶೆಟ್ಟಿ ನೇತೃತ್ವದ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದೆ. ಈ ಬಾರಿ ಸೆಲೆಬ್ರಿಟಿಗಳ ದಂಡೇ ಪಿಲಿನಲಿಕೆ ಪಂಥಕ್ಕೆ ಆಗಮಿಸಲಿದೆ. ಸಿನಿಮಾ […]

DAKSHINA KANNADA HOME

ವೇದಿಕೆಯಲ್ಲಿ ಮಹಿಳೆಯರು, ವೇದಿಕೆ ಕೆಳಗೆ ಸಚಿವ, ಶಾಸಕರು! ಮಂಜುನಾಥ ಭಂಡಾರಿ ಆಲೋಚನೆಗೆ ವ್ಯಾಪಕ ಮೆಚ್ಚುಗೆ

ಶಿವಮೊಗ್ಗ: ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ವೇದಿಕೆಯನ್ನು ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ಮುಖಂಡರು ಆವರಿಸಿಕೊಂಡಿರುತ್ತಾರೆ. ಅದರಲ್ಲೂ ಪುರುಷರದ್ದೇ ಪಾರುಪಥ್ಯ ಇರುತ್ತದೆ. ಮಹಿಳಾ ನಾಯಕಿಯರು ಮತ್ತು ಕಾರ್ಯಕರ್ತೆಯರನ್ನು ರಾಜಕೀಯ ಪಕ್ಷಗಳ ವೇದಿಕೆಗಳಲ್ಲಿ ಕಡೆಗಣಿಸಲಾಗುತ್ತದೆ ಎಂಬ ಆರೋಪಗಳು ಸುಳ್ಳಲ್ಲ. ಇದಕ್ಕೆ ಅಪವಾದ ಎಂಬಂತೆ ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆಯನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ, ಶಾಸಕರು ಮತ್ತು ಮುಖಂಡರು ವೇದಿಕೆಯ ಕೆಳಗೆ ಸಭಿಕರ ಸಾಲಿನಲ್ಲಿ‌ ಆಸೀನರಾಗಿದ್ದರು. ಅಪರೂಪದಲ್ಲೇ ಅಪರೂಪದ ಈ ಕ್ಷಣಗಳಿಗೆ ಸಾಕ್ಣಿಯಾಗಿದ್ದು ಇಂದು […]

DAKSHINA KANNADA HOME

ಮಂಗಳೂರು ದಸರಾ ಮೆರವಣಿಗೆ ಟ್ಯಾಬ್ಲೋ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳ ಸಭೆ ಡಿಜೆಗೆ ಅವಕಾಶವಿಲ್ಲ

ಮಂಗಳೂರು ದಸರಾ ಮಹೋತ್ಸವದ ವೈಭವದ ಮೆರವಣಿಗೆ ಅ.2ರಂದು ನಡೆಯಲಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಗಳು ಬಹುತೇಕ ಪೂರ್ಣವಾಗಿದೆ. ವರ್ಷಂಪ್ರತಿಯಂತೆ ಮೆರವಣಿಗೆ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ದಸರಾ ಮಹೋತ್ಸವ ಮೆರವಣಿಗೆ ಹಿನ್ನಲೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಶುಕ್ರವಾರ ಟ್ಯಾಬ್ಲೋ ಮುಖ್ಯಸ್ಥರು ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮೆರವಣಿಗೆಯಲ್ಲಿ ದೇಶ-ವಿದೇಶದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಕಡೆಯಿಂದ […]

DAKSHINA KANNADA HOME

ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆ: 25 ವರ್ಷಗಳ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆಗೆ ಕೊನೆಗೂ‌ಮುಕ್ತಿ ದೊರಕಿದೆ. ರಸ್ತೆ ವಿವಾದದಿಂದ‌ಇಲ್ಲಿನ ಸುಮಾರು ಕುಟುಂಬಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು. ಈ ವಿಚಾರವನ್ನು ಶಾಸಕ ಅಶೋಕ್ ರೈ ಗಮನಕ್ಕೆ ತಂದ ಗ್ರಾಮಸ್ಥರು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರು. ವಿವಾದಯುತ ರಸ್ತೆಯ ವಿಚಾರವಾಗಿ ಮಾತುಕತೆ ನಡೆಸಿದ ಶಾಸಕರು ರಸ್ತೆ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ 25 ವರ್ಷಗಳ ನರಕಯಾತನೆಗೆ ಮುಕ್ತಿಯನ್ನು ನೀಡಿದ್ದಾರೆ. ರಸ್ತೆ ಮಾಡಿಸಿಕೊಟ್ಟ ಶಾಸಕ ಅಶೋಕ್ ರೈ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಈ ವೇಳೆ ಮಾತನಾಡಿದ […]

DAKSHINA KANNADA HOME

ಕರ್ನಾಟಕ ಪರಿಸರ ಪ್ರವಾಸೋಧ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಶಾಲೆಟ್ ಪಿಂಟೋ ನೇಮಕ

ಮಂಗಳೂರು ಸೆ 26: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಶಾಲೆಟ್ ಪಿಂಟೋರವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ವಿಶಿಷ್ಟ ಸಾಮರ್ಥ್ಯ ಹಾಗೂ ಅನುಭವವನ್ನು ಹೊಂದಿರುವ ಶಾಲೆಟ್ ಪಿಂಟೋ ಅವರ ನೇಮಕವನ್ನು ಕಾಂಗ್ರೆಸ್ ಪಕ್ಷದವರು ಸಂತೋಷದಿಂದ ಸ್ವಾಗತಿಸಿದ್ದಾರೆ. ಅಂಜಲೋರ್ ಚರ್ಚ್ ನಲ್ಲಿ ಜನಿಸಿದ ಶಾಲೆಟ್ ಪಿಂಟೊ, ಅಂಬೋಸ್ ವಾಸ್ ಹಾಗೂ ಲೀನಾ ವಾಸ್ ದಂಪತಿಯ ಪುತ್ರಿಯಾಗಿದ್ದಾರೆ. ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಬಿ.ಎ. ಲಾ, ಎಲ್.ಎಲ್.ಬಿ. ಪದವಿ ಪಡೆದಿರುವ ಇವರು, ಜೊಸ್ಸಿ […]