Month: May 2025

HOME

ಅದು ಮುಸ್ಲಿಂ ಮಗು, ಅವುಗಳು ಹಿಂದೂ ಮಕ್ಕಳು ನಾವು ರಕ್ಷಣೆಗೆ ಬರಲ್ಲ! ತಮ್ಮವರ ರಕ್ಷಣೆಗೆ ಬರಲೇ ಇಲ್ಲ ಕೋಮು ದಲ್ಲೂರಿಗಳು; ಧರ್ಮದ ವಿಷ ಖಾರುವವರು ಮಳೆಯಲ್ಲಿ ಕೊಚ್ಚಿ ಹೋದರೇ!

ಉಳ್ಳಾಲ, ಮೇ 31: ಭಾರೀ ಮಳೆಗೆ ತತ್ತರಿಸಿದ್ದ ಉಳ್ಳಾಲ ತಾಲೂಕಿನಲ್ಲಿ ಒಂದೇ ದಿನ ಮೂವರು ಪುಟ್ಟ ಕಂದಮ್ಮಗಳು ಜೀವ ತೆತ್ತಿವೆ. ಈ ಪೈಕಿ ಇಬ್ಬರು ಹಿಂದೂ ಧರ್ಮಕ್ಕೆ ಸೇರಿದ್ದರೆ ಮತ್ತೊಬ್ಬಾಕೆ ಮುಸ್ಲಿಂ ಸಮುದಾಯದ ಬಾಲಕಿ. ಈ ಮೂವರಿಗೂ ತಾವು ಧರ್ಮದ ಮಿತಿಯೊಳಗೆ ಅವಿತುಕೊಂಡಿದ್ದೇವೆ ಅನ್ನೋ ಅರಿವು ಇಲ್ಲದ ಪ್ರಾಯವದು. ಬಾಳಿ ಬದುಕಬೇಕಿದ್ದ ಕಂದಮ್ಮಗಳು ಮಣ್ಣಿನಡಿ ಸಿಲುಕಿ ನರಳಿ ನರಳಿ ಪ್ರಾಣ ಅರ್ಪಿಸಿವೆ. ಆದರೆ ಆ ಕಂದಮ್ಮಗಳ ರಕ್ಷಣೆಗೆ ಯಾವುದೇ ಸಂಘಟನೆಗಳು ಧಾವಿಸಿಲ್ಲ. ಯಾವುದೇ ಪಕ್ಷದ ಕಾರ್ಯಕರ್ತರು ಬಂದಿಲ್ಲ. […]

DAKSHINA KANNADA HOME LATEST NEWS

ಭಾರಿ ಮಳೆ ಹಿನ್ನೆಲೆ: ದ.ಕ ಶಾಲೆಗಳಿಗೆ ಮೇ.31 ರಂದು ರಜೆ

ಮಂಗಳೂರು: ಕಳೆದ 24 ತಾಸುಗಳಲ್ಲಿ ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದೆ. ಇದೇ ಹವಾಮಾನ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆ (ಮೇ. 31ರಂದು) ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

HOME

ಭಾರೀ ಮಳೆಗೆ ಉಳ್ಳಾಲದಲ್ಲಿ ಮಗು, ಮಹಿಳೆ ಸಾವು; ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿರುವ ಮೂವರ್

ಉಳ್ಳಾಲ: ಕಳೆದ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದರೆ, ಪ್ರತ್ಯೇಕ ಸ್ಥಳಗಳಲ್ಲಿ ಎರಡು ಮನೆಗಳ ಮೇಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ್ದ ಒಟ್ಟು ಆರು ಮಂದಿ ಪೈಕಿ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಉಳಿದವರ ರಕ್ಷಣೆ ಕಾರ್ಯಾಚರಣೆ ಮುಂದುವರಿದಿದೆ. ದೇರಳಕಟ್ಟೆ ಕಾನಕೆರೆಯಲ್ಲಿ ಮನೆಗೆ ಗುಡ್ಡ ಕುಸಿದು ಫಾತಿಮಾ ನಯೀಮ ಎಂಬ 11 ವರ್ಷದ ಬಾಲಕಿ ಮೃತಪಟ್ಟಿದ್ದರೆ, ಮೋಂಟೆಪದವು ಬಳಿ ಗುಡ್ಡ ಕುಸಿದು ಸಿಲುಕಿದ್ದವರಲ್ಲಿ ಪ್ರೇಮಾ ಪೂಜಾರಿ (52) ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ದಳ, […]

DAKSHINA KANNADA HOME LATEST NEWS

ತೀವ್ರ ಮಳೆ: ಇಂದು (ಮೇ.30) ಶಾಲೆಗಳಿಗೆ ರಜೆ

ಮಂಗಳೂರು: ಕಳೆದ 24 ತಾಸುಗಳಲ್ಲಿ ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದೆ. ಇದೇ ಹವಾಮಾನ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆ (ಮೇ. 30)ಇಂದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

DAKSHINA KANNADA HOME LATEST NEWS STATE

ಕರಾವಳಿ ಪೊಲೀಸ್‌ ಇಲಾಖೆಗೆ ಭರ್ಜರಿ ಸರ್ಜರಿ ಎಸ್ಪಿ ಹಾಗೂ ಪೊಲೀಸ್‌ ಕಮೀಷನರ್‌ ಎತ್ತಂಗಡಿ

ಮಂಗಳೂರು: ಕರಾವಳಿಯಲ್ಲಿ ನಡೆದ ಕೋಮುಹತ್ಯೆಯನ್ನು ಹತ್ತಿಕ್ಕುವಲ್ಲಿ ವಿಫಲವಾದ ಪೊಲೀಸ್‌ ಇಲಾಖೆಗೆ ರಾಜ್ಯ ಸರ್ಕಾರ ಸರ್ಜರಿ ಮಾಡಿದ್ದು, ಇದರ ಮೊದಲ ಭಾಗವಾಗಿ ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯನ್ನು  ವರ್ಗಾವಣೆ ಮಾಡಲಾಗಿದೆ.  ನೂತನ ಪೊಲೀಸ್‌ ಆಯುಕ್ತರಾಗಿ ಸುಧೀರ್‌ ಕುಮಾರ್‌ ರೆಡ್ಡಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಎಸ್ಪಿ ಸ್ಥಾನಕ್ಕೆ ಹಾಲಿ ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್‌ ಕೆ ಅವರನ್ನು ನೇಮಿಸಲಾಗಿದೆ. 2010 ನೇ ಬ್ಯಾಚ್‌ನ ಐಪಿಎಸ್‌ […]

DAKSHINA KANNADA HOME LATEST NEWS

ಬಂಟ್ವಾಳ: ಅಬ್ದುಲ್‌ ಕೊಲೆ ಪ್ರಕರಣ- ಸ್ಪೀಕರ್‌ ಯು.ಟಿ ಖಾದರ್‌ ಖಂಡನೆ

ಬಂಟ್ವಾಳ: ಕೊಳತ್ತಮಜಲು ಬಳಿ ಇಬ್ಬರು ಮುಸ್ಲಿಂ ಯುವಕರ ಹಲ್ಲೆ ನಡೆಸಿದ ಪರಿಣಾಮ ಒಬ್ಬರು ದಾರುಣವಾಗಿ ಮೃತಪಟ್ಟ ಘಟನೆಯನ್ನು ಪವಿತ್ರ ಮದೀನಾದಲ್ಲಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಬಲವಾಗಿ ಖಂಡಿಸಿದ್ದಾರೆ. ಕಳೆದ ಹಲವಾರು ದಿವಸಗಳಿಂದ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವ ರೌಡಿಗಳು,ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡುವವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹುಟ್ಟಿಸುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರೂ,ಇಲಾಖೆ ನಿರ್ಲಕ್ಷ್ಯತನ ವಹಿಸಿರುವುದೇ ಮತ್ತೆ ಅಹಿತಕರ ಘಟನೆ ಮರುಕಳಿಸಲು ಕಾರಣವಾಗಿರಬಹುದು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ. ಇನ್ನಾದರೂ ಈ […]

COMMUNITY NEWS HOME LATEST NEWS

ವಿಟ್ಲ: ದೇಲಂತಬೇಟ್ಟು ಚರ್ಚ್‌ಗೆ ನೂತನ ಧರ್ಮಗುರು ಆಗಮನ- ವಂ. ಸುನೀಲ್‌ ಪಿಂಟೋಗೆ ವಿದಾಯ

ವಿಟ್ಲ: ಸಂತ ಪೌಲರ ದೇವಾಲಯ ದೇಲಂತ ಬೇಟ್ಟು ಇಲ್ಲಿಗೆ ನೂತನ ಧರ್ಮ ಗುರುಗಳಾಗಿ ಫಾದರ್ ರಿಚಾರ್ಜ್ ಡಿಸೋಜ ಅವರು ಮೇ 27 ರಂದು ಆಗಮಿಸಿದರು. ಈ ವೇಳೆ ಅವರನ್ನು ಭಕ್ತಾದಿಗಳು ಸ್ವಾಗತಿಸಿದರು. ನಿರ್ಗಮಿತ ಧರ್ಮಗುರು ವಂ. ಸುನೀಲ್‌ ಅವರು ನೂತನ ಧರ್ಮಗುರುಗಳಿಗೆ ಅಧಿಕಾರ ಹಸ್ತಾಂತರಿಸಿದರು. ನಿರ್ಗಮಿತ ಧರ್ಮಗುರುಗಳಿಗೆ ವಿದಾಯ ಸಂತ ಪೌಲರ ದೇವಾಲಯದಲ್ಲಿ ಆರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಧರ್ಮಗುರು ವಂ. ಸುನೀಲ್‌ ಅವರನ್ನು ಚರ್ಚ್‌ ಭಕ್ತಾಧಿಗಳು ಭಾರವಾದ ಮನಸ್ಸಿನಿಂದ ವಿದಾಯ ಹೇಳಿದರು. ಈ ವೇಳೆ ಅವರು […]

DAKSHINA KANNADA HOME INETRNATIONAL LATEST NEWS NATIONAL

ಭಾರತದ ಸ್ಷಪ್ಟ ಸಂದೇಶ ವಿಶ್ವಕ್ಕೆ ತಲುಪಿಸಲು ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಹೆಮ್ಮೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ನಂತರದ ರಾಜತಾಂತ್ರಿಕ ಕಾರ್ಯತಂತ್ರದ ಭಾಗವಾಗಿ, ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆ ಬಗ್ಗೆ ಜಾಗತಿಕ ಸಮುದಾಯಕ್ಕೆ ವಾಸ್ತವಾಂಶಗಳನ್ನು ವಿವರಿಸಲು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಒಳಗೊಂಡ ಡಿಎಂಕೆ ಕನಿಮೊಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ಇಂದು ಬೆಳಗ್ಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದೆ. ಗುರುವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣ ಮೂಲಕ ಬೆಳಗ್ಗೆ 11 ಗಂಟೆಗೆ ಹೊರಟ ತಂಡದಲ್ಲಿ ಕ್ಯಾ. ಚೌಟ ಅವರ ಜತೆಗೆ ಡಿಎಂಕೆ ಪಕ್ಷದ ಸಂಸದೆ ಕನಿಮೋಳಿ, ಸಮಾಜವಾದಿ ಪಕ್ಷದ […]

DAKSHINA KANNADA HOME LATEST NEWS

ಭಾವೈಕ್ಯದ ಪ್ರತೀಕ ಎಂದೇ ಪ್ರಸಿದ್ದಿ ಪಡೆದಿದ್ದ ಬ್ಯಾಷ್ಠಿಸ್ಟ್ ಡಿ’ಕುನ್ಹಾ ನಿಧನ

ಮಂಗಳೂರು ಬಿಕರ್ಣಕಟ್ಟೆ ಜಯಶ್ರೀಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರುನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ ಪಡೆದಿದ್ದ ಜನೋಪಕಾರಿ, ಕೊಡುಗೈದಾನಿ ಬ್ಯಾಷ್ಠಿಸ್ಟ್ ಡಿ’ಕುನ್ಹಾ (85) ಇಂದಿಲ್ಲಿ ಬುಧವಾರ 21, ಮೇ 2025 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಂಟ್ವಾಳ ಪಾಣೆಮಂಗಳೂರು (ಕಲ್ಲಡ್ಕ ಮೊಗರ್ನಾಡ್) ಮಾತೆ ಇಗರ್ಜಿಯ ಪಾಲನಾ ಸಮಿತಿ ಸದಸ್ಯರಾಗಿ, ಮೆಲ್ಕಾರ್ ಯುವಕ ಸಂಘದ ಅಧ್ಯಕ್ಷರಾಗಿ ಮೆಲ್ಕಾರ್ ದಸರಾ (ಟ್ಯಾಬ್ಲೋ) ರೂವಾರಿ ಎಂದೆಣಿಸಿ ಎಲ್ಲಾ ಸಮುದಾಯದವರಲ್ಲೂ ಭಾವೈಕ್ಯತೆ ಹೊಂದಿ ಸಾಮರಸ್ಯದ […]

DAKSHINA KANNADA HOME LATEST NEWS STATE

ತಮಿಳುನಾಡಿನ ಕುಂಬಕೋಣಂನಲ್ಲಿ ಶ್ರೀ ಗಿರಿ ಅವರ ಕುಟುಂಬದೊಂದಿಗೆ ಆನಂದದ ಪುನರ್ಮಿಲನ

ಕುಂಬಕೋಣಂ, ಮೇ 17, 2025: ತಂಜಾವೂರು ಜಿಲ್ಲೆಯ ಕುಂಬಕೋಣಂನ ಮೇಲಕವೇರಿ ಗ್ರಾಮದ ಪೆರುಮಂಡಿ ಉತ್ತರ ಬೀದಿಯ ನಿವಾಸಿ ಶ್ರೀ ಗಿರಿ ಅವರು ಆರು ತಿಂಗಳು ನಾಪತ್ತೆಯಾಗಿದ್ದ ನಂತರ, ಮೇ 15, 2025 ರಂದು ತಮ್ಮ ಕುಟುಂಬದೊಂದಿಗೆ ಅತೀ ಸಂತೋಷದಿಂದ ಪುನರ್ಮಿಲನಗೊಂಡರು. ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಸಹಾಯದಿಂದ ನಡೆದ ಈ ಪುನರ್ಮಿಲನವು ಅವರ ತಂದೆ, ತಾಯಿ ಮತ್ತು ಇಬ್ಬರು ಸಹೋದರಿಯರಿಗೆ ಅಪಾರ ಆನಂದ ತಂದಿತು. ವಿವಾಹವಾಗದಿರುವ ಶ್ರೀ ಗಿರಿ ಅವರು ಕಳೆದ ಎರಡು ವರ್ಷಗಳಿಂದ ಮಾನಸಿಕ ಆರೋಗ್ಯ […]