Month: March 2026

LATEST NEWS

*ವಿದ್ಯೆಯು ಮಾನವನಿಗೆ ಸನ್ಮಾರ್ಗ ತೋರಿಸುವ ದೀಪ: ಖತೀಬ್ ಅಬ್ದುಲ್ ನಾಸಿರ್ ಸಅದಿ*

ಮಂಗಳೂರು:“ಜನರು ಸಂಪಾದಿಸುವ ಆಸ್ತಿಗಳಲ್ಲೇ ಅತ್ಯುತ್ತಮವಾದದ್ದು ವಿದ್ಯೆ. ವಿದ್ಯೆ ಪಡೆದವನು ಎಲ್ಲವನ್ನೂ ಕರಗತ ಮಾಡಿಕೊಳ್ಳಲು ಸಾಧ್ಯ ಮತ್ತು ಇದು ಮಾನವನಿಗೆ ಸನ್ಮಾರ್ಗವನ್ನು ತೋರಿಸುವ ದೀಪವಾಗಿದೆ” ಎಂದು ಖತೀಬ್ ಅಬ್ದುಲ್ ನಾಸಿರ್ ಸಅದಿ ಅವರು ಹೇಳಿದರು. ಅವರು ಇತ್ತೀಚೆಗೆ ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದ ಮದ್ರಸಾ ಹಾಲ್‌ನಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ಅವರ ಅಧ್ಯಕ್ಷತೆಯಲ್ಲಿ ನಡೆದ. ‘ಮದ್ರಸ ಪ್ರಾರಂಭೋತ್ಸವ ಹಾಗೂ ಫತ್ಹೇ ಮುಬಾರಕ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿಯ […]

HOME

*ದೇರಳಕಟ್ಟೆಯಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ‘ಮುಲ್ಲರ್ ಕಾಂಪ್ಲೆಕ್ಸ್’ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ*

ಮಂಗಳೂರು, ಮಾರ್ಚ್ 31:ದೇರಳಕಟ್ಟೆಯ ಪ್ರದೇಶದಲ್ಲಿ ಫಾದ‌ರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು ನೀಡುತ್ತಿರುವ ಸೇವೆಗಳ ಮಹತ್ವದ ವಿಸ್ತರಣೆಯಾಗಿ, ಹೊಸ ವಾಣಿಜ್ಯ ಗುರುತಾದ “ಫಾದರ್ ಮುಲ್ಲರ್ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣವನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಉದ್ಘಾಟನೆ ಮತ್ತು ಆಶೀರ್ವಾದವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಮಾನ್ಹಾ ಅವರು ನೆರವೇರಿಸಿದರು. ಪ್ರಾರ್ಥನಾ ಸೇವೆಯ ವೇಳೆ, ಬಿಷಪ್ ಅವರು ದೇವರ ವಾಕ್ಯವನ್ನು ಚಿಂತನೆಗೈದು, ಈ ಹೊಸ ಕಟ್ಟಡವನ್ನು ದೇವರಿಗೆ […]

COMMUNITY NEWS

ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 40 ಗಂಟೆಗಳ ನಿರಂತರ ದಿವ್ಯ ಪ್ರಸಾದ ಆರಾಧನೆ

ಮಂಗಳೂರು: ವಿಶ್ವದಲ್ಲಿ ಶಾಂತಿ ನೆಲೆಸಲಿ ಮತ್ತು ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಶೀಘ್ರವೇ ಅಂತ್ಯವಾಗಲಿ ಎಂಬ ಉದಾತ್ತ ಉದ್ದೇಶದೊಂದಿಗೆ, ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 40 ಗಂಟೆಗಳ ನಿರಂತರ ದಿವ್ಯ ಪ್ರಸಾದ ಆರಾಧನೆಯು ಮಾರ್ಚ್ 31ರಂದು ಬೆಳಿಗ್ಗೆ 6:00 ಗಂಟೆಗೆ ಆರಂಭವಾಯಿತು.ಕಳೆದ 16 ವರ್ಷಗಳಿಂದ ಈ ಆಧ್ಯಾತ್ಮಿಕ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದ್ದು, ಸೇಂಟ್ ಜೋಸೆಫ್ ಆಶ್ರಮದ ಸುಪೀರಿಯರ್ ವಂ| ಮೆಲ್ವಿನ್ ಡಿಕುನ್ಹಾ ಅವರ ನೇತೃತ್ವದಲ್ಲಿ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ […]

DAKSHINA KANNADA HOME LATEST NEWS

ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟ ವಿದ್ಯಾರ್ಥಿನಿಯರು- ಗಂಭೀರ ಗಾಯ

ಬೆಳ್ತಂಗಡಿ: ಶಾಲೆಗೆ ತೆರಳುತ್ತಿದ್ದ ಅಕ್ಕ ತಂಗಿಯರು ಬಸ್ ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿರುವ ಘಟನೆ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ನಡೆದಿದೆ. ನ್ಯಾಯತರ್ಪು ಗ್ರಾಮದ ಕಲಾಯಿತೊಟ್ಟು ರೂಪ ಮತ್ತು ನಾಗರಾಜ್ ಗೌಡ ದಂಪತಿಯ ಪುತ್ರಿಯರಾದ ದ್ವೀತಿಯ ಪಿಯುಸಿ ವಿದ್ಯಾರ್ಥಿ ಚರಿಷ್ಮಾ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಚದ್ಮಿಕಾ ಗಾಯಗೊಂಡವರು. ಇಬ್ಬರು ಇಂದು ಬೆಳಿಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗೆ ಹತ್ತಿದ್ದು, ರೇಷ್ಮೆ ರೋಡ್ ಎಂಬಲ್ಲಿ ಒಮ್ಮೆಲೆ ಬಸ್ […]

DAKSHINA KANNADA HOME LATEST NEWS

ರಾಜ್ಯಾದ್ಯಂತ ಎ.2ರವರೆಗೆ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಎ.2ರವರೆಗೆ ಒಣ ಹವೆ, ಬಿಸಿಲಿನ ವಾತಾವರಣ ಮುಂದುವರಿಯಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೀದರ್ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ತಿಳಿಸಿದೆ. […]

COMMUNITY NEWS

*ಬಿಕರ್ನಕಟ್ಟೆ ಕಾರ್ಮೆಲ್ ಗುಡ್ಡದಿಂದ ಪವಿತ್ರ ಬೆಟ್ಟದವರೆಗೆ: ಒಂದು ಭವ್ಯ ಆಧ್ಯಾತ್ಮಿಕ ಪಯಣ*

ಮಂಗಳೂರು:ಕ್ರೈಸ್ತ ಧರ್ಮದ ಅತ್ಯಂತ ಪವಿತ್ರವಾದ ‘ಪವಿತ್ರ ವಾರ’ಕ್ಕೆ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರವು ಅತ್ಯಂತ ಭಕ್ತಿಪೂರ್ವಕವಾಗಿ ಚಾಲನೆ ನೀಡಿತು. ಸಾವಿರಾರು ಭಕ್ತಾದಿಗಳ ಸಹಭಾಗಿತ್ವದಲ್ಲಿ ಕಾರ್ಮೆಲ್ ಗುಡ್ಡದಿಂದ ಮರೋಳಿಯ ಪವಿತ್ರ ಬೆಟ್ಟದವರೆಗೆ (Holy Hill) ನಡೆದ ಭವ್ಯ ಆಧ್ಯಾತ್ಮಿಕ ಪಾದಯಾತ್ರೆಯು ವಿಶ್ವಶಾಂತಿಯ ಸಂದೇಶವನ್ನು ಸಾರಿತು. ಪುಣ್ಯಕ್ಷೇತ್ರದ ಆವರಣದಿಂದ ಆರಂಭವಾದ ಈ ಯಾತ್ರೆಯಲ್ಲಿ ಸಾವಿರಾರು ಕ್ರೈಸ್ತ ಭಕ್ತಾದಿಗಳು ಪಾಲ್ಗೊಂಡು, ಸುಮಾರು ಎರಡು ಗಂಟೆಗಳ ಕಾಲ ಪ್ರಾರ್ಥನಾಪೂರ್ವಕವಾಗಿ ಸಾಗಿ ಮರೋಳಿಯ ಹೋಲಿ ಹಿಲ್ ತಲುಪಿದರು. ಈ ಭವ್ಯ ಮೆರವಣಿಗೆಯ ಉದ್ದಕ್ಕೂ […]

COMMUNITY NEWS

* ಮಂಗಳೂರಿನ ಕ್ಯಾಥೋಲಿಕ್ ಉದ್ಯಮಿಗಳಿಗೆ ಯಶಸ್ವಿ ‘ಎಐ’ ತರಬೇತಿ ಕಾರ್ಯಾಗಾರ*

ಮಂಗಳೂರು, ಮಾರ್ಚ್ 30: ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ‘ರಚನಾ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃತಕ ಬುದ್ಧಿಮತ್ತೆ (Artificial Intelligence) ಕುರಿತಾದ ಧರ್ಮಪ್ರಾಂತ್ಯ ಮಟ್ಟದ ತರಬೇತಿ ಕಾರ್ಯ ಕ್ರಮವು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಪ್ಯಾರಿಷ್ ಹಾಲ್‍ನಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕ್ಯಾಥೋಲಿಕ್ ಉದ್ಯಮಿ ಮತ್ತು ವೃತ್ತಿಪರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಇಂದಿನ ಡಿಜಿಟಲ್ ಆರ್ಥಿಕತೆಯಲ್ಲಿ ಎಐ ಚಾಲಿತ ರೂಪಾಂತರ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಉದ್ಯಮಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಸುಮಾರು […]

DAKSHINA KANNADA HOME

*ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2024-25ನೇ ಸಾಲಿನ ಗೌರವ ಮತ್ತು ಪುಸ್ತಕ ಪ್ರಶಸ್ತಿಗಳ ಘೋಷಣೆ*

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2024-25ನೇ ಸಾಲಿನ ಪ್ರತಿಷ್ಠಿತ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪ್ರಶಸ್ತಿ’ಗಳನ್ನು ಘೋಷಿಸಿದೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸ್ಟೇನಿ ಅಲ್ವಾರಿಸ್ ಅವರು ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಗೌರವ ಪ್ರಶಸ್ತಿ ವಿಜೇತರು : ಕೊಂಕಣಿ ಸಾಹಿತ್ಯ: ರೋನ್ ರೋಚ್ ಕಾಸಿಯಾ ಕೊಂಕಣಿ ಕಲೆ: ರಾಮದಾಸ್ ದತ್ತಾತ್ರೇಯ ಗುಲ್ವಾಡಿ ಕೊಂಕಣಿ ಜಾನಪದ: ಸೈರು (ಮುರಳೀಧರ್) ಪುಟ್ಟು ನಾಯ್ಕ್ ಪುಸ್ತಕ ಪ್ರಶಸ್ತಿ ವಿಜೇತರು : ಕವನ ಸಂಕಲನ: ಆಂಡ್ರ್ಯೂ ಎಲ್. ಡಿಕುನ್ಹಾ […]

DAKSHINA KANNADA HOME

*ಪರೀಕ್ಷೆ ಸಮಯದಲ್ಲೇ ರಾಜ್ಯ ಸರ್ಕಾರದ ಆತುರದ ನಿರ್ಧಾರ ಖಂಡನೀಯ: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ*

ಮಂಗಳೂರು ; ರಾಜ್ಯದಲ್ಲಿ ಏಕಾಏಕಿ ತೃತೀಯ ಭಾಷೆಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು ಗ್ರೇಡ್ ನೀಡುವುದನ್ನು ಆರಂಭಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ “ಆತುರಗಾರನಿಗೆ ಬುದ್ದಿ ಮಟ್ಟ” ಎನ್ನುವಂತಿದ್ದು, ರಾಜಕೀಯ ತೆವಲಿಗಾಗಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿಕ್ಷಣ ಸಚಿವರು ಇಂತಹ ನಿರ್ಧಾರ ಕೈಗೊಂಡು ಮಕ್ಕಳ ಮೇಲೆ ಎಂತಹ ಪರಿಣಾಮ ಬೀರಿದ್ದಾರೆ ಎಂಬುದು ಅರಿವಿದೆಯೇ? ಸರಕಾರದ ಈ ನಡೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು, […]

DAKSHINA KANNADA HOME

*ಕಬಕ – ಪುತ್ತೂರು ರೈಲು ನಿಲ್ದಾಣ ಸುಸಜ್ಜಿತ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರೂ. ಮಂಜೂರು: ಸಂಸದ ಕ್ಯಾ. ಚೌಟ*

ಮಂಗಳೂರು: ಕಬಕ – ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು 2.91 ಕೋಟಿ ರೂ. ಮೊತ್ತದ ಅಭಿವೃದ್ದಿ ಕಾಮಗಾರಿ ಯೋಜನೆಗೆ ಮಂಜೂರಾತಿ ದೊರೆತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಯೋಜನೆಯಡಿ ಕಬಕ ಪುತ್ತೂರು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 1ರಲ್ಲಿ 2.91ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಪ್ರಸ್ತುತ ಈ ನಿಲ್ದಾಣದಲ್ಲಿ ಪ್ರಯಾಣಿಕರ ತಂಗುದಾಣಕ್ಕೆ ಕೇವಲ 531 ಚ. ಮೀಟರ್ ಉದ್ದದ ಶೆಲ್ಟರ್ ಇದೆ. […]