Month: July 2026

LATEST NEWS

ಸಮಾಜದ ಧ್ವನಿಯಾಗಿ ‘ಅಮೃತ ಪ್ರಕಾಶ’ ನಿರಂತರ ಸೇವೆ ಸಲ್ಲಿಸಿದೆ: ಆನಂದ ಶೆಟ್ಟಿ ಅಡ್ಯಾರ್

ಮಂಗಳೂರು ಜುಲೈ 21: “ಯಾವುದೇ ಪತ್ರಿಕೆ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ. ಅದು ಸಮಾಜದ ಧ್ವನಿ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯಾಗಿದೆ,” ಎಂದು ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಆನಂದ ಶೆಟ್ಟಿ ಅಡ್ಯಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ‘ಅಮೃತ ಪ್ರಕಾಶ’ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ 13 ವರ್ಷಗಳಿಂದ ಅಮೃತ ಪ್ರಕಾಶ ಪತ್ರಿಕೆಯು ಸಮಾಜಮುಖಿ […]

LATEST NEWS

ಮುಲ್ಕಿಯಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ಸಭಾಭವನ ನಿರ್ಮಾಣ: ಡಿಸೆಂಬರ್‌ನಲ್ಲಿ ಲೋಕಾರ್ಪಣೆ:ಐಕಳ ಹರೀಶ್ ಶೆಟ್ಟಿ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಮೂಲ್ಕಿ ಇಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸಭಾಭವನದ ಕಾಮಗಾರಿಯ ಕುರಿತು ಹಾಗೂ ಡಿಸೆoಬರ್ ದಿನಾಂಕ 31 ರ ಒಳಗೆ ಸಭಾಭವನವನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಕುರಿತು ಸಮಾಲೋಚನಾ ಸಭೆಯು “ಬಂಟರ ಸಂಘ ಮುಂಬೈಯ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಸಭಾಂಗಣ, ಅನೆಕ್ಸ್ ಕಟ್ಟಡ, ಬಂಟರ ಭವನ, ಕುರ್ಲಾ ಮುಂಬೈ ಇಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು […]

LATEST NEWS

*ಸುರತ್ಕಲ್: ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ವಾರ್ಷಿಕ‌ಮಹಾಸಭೆ*

ಸುರತ್ಕಲ್: ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಐದನೇ ವಾರ್ಷಿಕ ಮಹಾಸಭೆ 2025-2026 ಸುಭಾಷಿತ ನಗರದಲ್ಲಿರುವ ಹೊಟೇಲ್ ರಚನಾ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.ವಾರ್ಷಿಕ‌ ಮಹಾಸಭೆಯ ಅಧ್ಯಕ್ಷತೆಯನ್ನು ಅಸೋಸಿಯೇಶನ್ ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಸುಭಾಷಿತನಗರ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಕಳೆದ ಐದು ವರ್ಷಗಳಲ್ಲಿ ಸುಭಾಷಿತನಗರ ಬಡಾವಣೆಯಲ್ಲಿ ಅಸೋಸಿಯೇಶನ್ ಕೈಗೊಂಡ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ತಿಳಿಸಿದರು. ಸುಭಾಷಿತನಗರದ ಯಾವುದೇ ಸಮಸ್ಯೆಗಳು ಎದುರಾದಾಗ ಅಸೋಸಿಯೇಶನ್ ನ ಅಧ್ಯಕ್ಷರಾದ […]

LATEST NEWS

ಚಂದ್ರಯಾನದ ಯಶಸ್ಸು ಭಾರತದ ವೈಜ್ಞಾನಿಕ ಪ್ರಗತಿಯ ಸಂಕೇತ: ಇಸ್ರೋ ಮಾಜಿ ವಿಜ್ಞಾನಿ ಡಾ. ಪಿ. ಜಿ. ದಿವಾಕರ್

ಮಂಗಳೂರು,ಜು.20 :- ಚಂದ್ರಯಾನದಲ್ಲಿ ಭಾರತವು, ಪ್ರಪಂಚದ ಯಾವುದೇ ದೇಶಗಳು ಮಾಡದಿರುವ ವಿಶಿಷ್ಟ ಮೈಲಿಗಲ್ಲನ್ನು ಸಾಧಿಸಿದೆ. ಇದು ದೇಶದ ವೈಜ್ಞಾನಿಕ ಪ್ರಗತಿಯ ಸಂಕೇತವಾಗಿದ್ದು, ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಆಸಕ್ತಿ ಹಾಗೂ ಸ್ಫೂರ್ತಿಯನ್ನು ಹೆಚ್ಚಿಸಿದೆ ಎಂದು ಇಸ್ರೋ ಮಾಜಿ ವಿಜ್ಞಾನಿ ಡಾ. ಪಿ. ಜಿ. ದಿವಾಕರ್ ಹೇಳಿದರು. ಅವರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಯುವ ವಿಜ್ಞಾನಿಗಳಾದ ನೀವೆಲ್ಲರೂ ಸ್ಪಷ್ಟವಾದ ಗುರಿ, ವೈಜ್ಞಾನಿಕ ಮನೋಭಾವ […]

HOME LATEST NEWS

*ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ*

ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸಬೇಕು ಹಾಗೂ ತೋಟಗಾರಿಕಾ ಮಿಷನ್ (MIDH) ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ನಿಯಮ 377ರಡಿ ಒತ್ತಾಯಿಸಿದ್ದಾರೆ. ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳು ಪುನರಾವರ್ತಿತವಾಗಿ ಬರುವ ವಿವಿಧ […]

LATEST NEWS

ಅಡಿಕೆಗೆ ಕಾಲ ಕಾಲಕ್ಕೆ ಗೊಬ್ಬರ, ಮದ್ದು ಸಿಂಪಡಣೆಯಿಂದ ಉತ್ತಮ ಇಳುವರಿ ಸಾಧ್ಯ: ಪ್ರದೀಪ್ ಡಿಸೋಜಾ

ವಿಟ್ಲ,ಪೆರುವಾಯಿ: ಜು.20: ರೈತರು ಅಡಿಕೆ ಬೆಳೆಯನ್ನು ಮಾತ್ರ ಅವಲಂಬಿತವಾಗದೆ ಮಿಶ್ರ ಕೃಷಿ ಪದ್ಧತಿ ಅನುಸರಿಸಿದಾಗ ಕೃಷಿಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಹೇಳಿದರು. ಪೆರುವಾಯಿ ಫಾಯಿಮಾ ಮಾತೆಯ ಚರ್ಚ್ ನಲ್ಲಿ ಕೆಥೋಲಿಕ್ ಸಭಾ ಆಯೋಜಿಸಿದ ಕೃಷಿ ಮಾಹಿತಿ ಮತ್ತು ಸಸಿ ವಿತರಣ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಡಿಕೆಯೊಂದಿಗೆ ಕೊಕ್ಕೊ, ಬಾಳೆ, ಕಾಳು ಮೆಣಸು ಬೆಳೆಯಬೇಕು. ಇದರಿಂದ ರೈತರ ಆದಾಯ ಹೆಚ್ಚಾಗುತ್ತದೆ. ಅಡಿಕೆ […]

DAKSHINA KANNADA HOME LATEST NEWS

ಬೆಳೆವಿಮೆ ಯೋಜನೆ: ರೈತರ ನೋಂದಣಿಗೆ ಜುಲೈ 31 ಕೊನೆಯ ದಿನ

ಮಂಗಳೂರು: ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2026-27 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಯೋಜನೆಯಡಿ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರು ನೋಂದಾವಣೆಗೊಳ್ಳಬಹುದು. ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್‍ನಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ […]

LATEST NEWS

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿರುಸಿನ S.I.R ಮನೆ-ಮನೆ ಸಂಪರ್ಕ ನಡೆಸಿದ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ಎಸ್.ಐ.ಆರ್ (S.I.R) ಮಹಾ ಅಭಿಯಾನ’ದ ಅಂಗವಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿವಿಧ ಬೂತ್‌ಗಳಿಗೆ ತೆರಳಿ ಬಿರುಸಿನ ಮನೆ-ಮನೆ ಸಂಪರ್ಕ ಹಾಗೂ ಪಕ್ಷದ ಪ್ರಮುಖರ ಭೇಟಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಪ್ರಮುಖರ ಮನೆಗೆ ಭೇಟಿ ಹಾಗೂ ಸಮಾಲೋಚನೆ: ಅಭಿಯಾನದ ಅಂಗವಾಗಿ ಅದ್ಯಪಾಡಿ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 174 ಹಾಗೂ 175 ರಲ್ಲಿ ಶಾಸಕರು ವ್ಯಾಪಕ […]

LATEST NEWS

*ಬೈಲೂರು: ಊರು ಬೋಡು ಪುದರ್ ಬೊಡ್ಚಿ ನಾಟಕದ ಶುಭಮುಹೂರ್ತ*

ಕಾರ್ಕಳ: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ತುಳು ಹಾಸ್ಯಮಯ ನಾಟಕ “ಊರು ಬೋಡು ಪುದರ್ ಬೊಡ್ಚಿ” ಇದರ ಶುಭ ಮುಹೂರ್ತ ಕಾರ್ಯಕ್ರಮ ಜುಲೈ 16ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು. ಅರ್ಚಕರಾದ ನಾರಾಯಣ ಭಟ್ ಕೌಡೂರು ನಾಟಕ ಮುಹೂರ್ತದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ನಾಟಕದ ಯಶಸ್ವಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ತಂಡದ ಸಾರಥಿ ನಾಟಕದ ಕರ್ತೃ ಪ್ರಸನ್ನ ಶೆಟ್ಟಿ ಬೈಲೂರು , ಪದ್ಮರಾಜ ಹೆಗ್ಡೆ, ಹರೀಶ್ ಶೆಟ್ಟಿ, ಹರಿಜೀವನ ಹೆಗ್ಡೆ, ಕುಟ್ಟಿ ಶೇರಿಗಾರ್, ಗುಣಕರ […]

COMMUNITY NEWS LATEST NEWS

ನಿಡ್ಡೋಡಿ ಚರ್ಚಿನಲ್ಲಿ ಕಥೊಲಿಕ್ ಸಭಾದಿಂದ ವನಮಹೋತ್ಸವ: ನೆಟ್ಟ ಗಿಡಗಳ ನಿರ್ವಹಣೆಗೆ ಶ್ರಮದಾನ

ಮೂಡಬಿದ್ರೆ : ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ ವನಮಹೋತ್ಸವ ಹಾಗೂ ನೆಟ್ಟ ಗಿಡಗಳ ನಿರ್ವಹಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಲಿಯೋ ವಿಲಿಯಂ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಕೇವಲ ಗಿಡಗಳನ್ನು ನೆಡುವುದಷ್ಟೇ ವನಮಹೋತ್ಸವದ ಉದ್ದೇಶವಾಗಬಾರದು, ಬದಲಿಗೆ ಅವುಗಳನ್ನು ನಿರಂತರವಾಗಿ ಪೋಷಿಸಿ, ಬೆಳೆಸಿ ಹೆಮ್ಮರವಾಗಿಸುವ […]