Month: April 2026

LATEST NEWS

ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ ಆಚರಣೆ

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರವು (ಎನ್‌ಎಂಪಿಎ) ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿಯನ್ನು ಏಪ್ರಿಲ್ 14 ಭಕ್ತಿಪೂರ್ವಕವಾಗಿ ಆಚರಿಸಿತು.ಕಾರ್ಯಕ್ರಮದ ಆರಂಭದಲ್ಲಿ ಬಂದರು ಪ್ರದೇಶದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಭರತ್ ಶೆಟ್ಟಿ, ಎನ್‌ಎಂಪಿಎ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಹಾಗೂ ಮುಖ್ಯ ಅತಿಥಿಗಳಾದ ಪ್ರೊ. ದಯಾನಂದ ನಾಯಕ್, ಮಾಜಿ […]

LATEST NEWS

ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿದ ಧೀಮಂತ ವ್ಯಕ್ತಿ ಅಂಬೇಡ್ಕರ್: ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ಬಾಲ್ಯದಿಂದಲೇ ಸಮಸ್ಯೆಗಳನ್ನು ಎದುರಿಸುತ್ತಾ ಬಂದು, ಅದನ್ನೇ ಸವಾಲಾಗಿ ಸ್ವೀಕರಿಸಿದ ಧೀಮಂತ ವ್ಯಕ್ತಿ ಡಾ. ಬಿ ಆರ್ ಅಂಬೇಡ್ಕರ್ ಆಗಿದ್ದಾರೆ ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಅವರು ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಆಡಳಿತದ ನೀತಿ ನಿರೂಪಣೆಯಲ್ಲಿ ಮಹಿಳೆಯರು, ದುರ್ಬಲರು ಭಾಗವಹಿಸಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು. ಇದನ್ನು ಈಡೇರಿಸಲು […]

HOME LATEST NEWS

ಬಿಜೆಪಿ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ: ಗಣ್ಯರಿಂದ ಪುಷ್ಪನಮನ

ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ, ಎಸ್‌ಸಿ/ಎಸ್‌ಟಿ ಮೋರ್ಚಾದ ಸಹಯೋಗದೊಂದಿಗೆ ಭಾರತ ರತ್ನ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ದೇಶದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾದ ಅಂಬೇಡ್ಕರ್ ಅವರ ಆದರ್ಶಗಳು ಇಂದಿಗೂ ದಾರಿದೀಪ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ […]

LATEST NEWS

ಟೆಂಪಲ್ ಸ್ಕೇರ್ ಪುತ್ತೂರು ಮಡಿಲಿಗೆ ಜಿಪಿಎಲ್ ಟ್ರೋಫಿ

ಮೂಲ್ಕಿ : ಹೆಜಮಾಡಿಯ ಶ್ಯಾನುಭೋಗ್ ಕುದ್ರುವಿನಲ್ಲಿ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಅಮ್ಗಿಲೆ ದಿ ಒರಿಜಿನಲ್ ಆಭರಣ್ ಜಿಪಿಎಲ್ ಉತ್ಸವದ ಕ್ರಿಕೆಟ್ ಪಂದ್ಯಾವಳಿಯ ವಿನ್ನರ್ ಪ್ರಶಸ್ತಿಯನ್ನು ಟೆಂಪಲ್ ಸ್ಕೇರ್ ಪುತ್ತೂರು ಮುಡಿಗೇರಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ಸ್ ಮಂಗಳೂರು ಮೊದಲು ಬಿಗುವಾದ ಬೌಲಿಂಗ್ ಸಂಘಟಿಸಿ ಏಳು ಓವರ್ ಗಳಲ್ಲಿ ಟೆಂಪಲ್ ಸ್ಕೇರ್ ಪುತ್ತೂರನ್ನು 50 ರನ್ನಿಗೆ ಸೀಮಿತಗೊಳಿಸಿತು. ಆದರೆ ಟೆಂಪಲ್ ಸ್ಕೇರ್ ಪುತ್ತೂರು ತಂಡದ ಕರಾರುವಕ್ಕಾದ ಬೌಲಿಂಗ್ ನಿಂದ 6.5 […]

LATEST NEWS

ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ ಕೊಳಂಬೆ ನೇಮಕ

ಮಂಗಳೂರು: ಏಪ್ರಿಲ್ 14: ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳದ (ಜೆಡಿಎಸ್) ನೂತನ ಕಾರ್ಯಾಧ್ಯಕ್ಷರಾಗಿ ಶ್ರೀ ಶಶಿರಾಜ್ ಶೆಟ್ಟಿ ಕೊಳಂಬೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಈ ನೇಮಕಾತಿಯನ್ನು ಪ್ರಕಟಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯ ಘಟಕವು ಪ್ರಕಟಿಸಿದ ನೂತನ ಪದಾಧಿಕಾರಿಗಳ ಪಟ್ಟಿಯ ಕುರಿತು […]

HOME LATEST NEWS

ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ: ಮಾಜಿ ಸಚಿವ ಬಿ. ರಮಾನಾಥ ರೈ ಭಾಗಿ

ಮಂಗಳೂರು: ಏಪ್ರಿಲ್ 14: ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಅಡುಗೆ ಅನಿಲ (ಗ್ಯಾಸ್) ಬೆಲೆ ಏರಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಮಂಗಳೂರಿನ ಮಲ್ಲಿಕಟ್ಟೆ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು, “ಕೇಂದ್ರ ಸರ್ಕಾರವು ಗ್ಯಾಸ್ ಬೆಲೆಯನ್ನು ಮನಬಂದಂತೆ ಏರಿಸುವ ಮೂಲಕ ಕೋಟ್ಯಂತರ ಭಾರತೀಯರನ್ನು ಸಂಕಷ್ಟಕ್ಕೆ ತಳ್ಳಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ […]

HOME LATEST NEWS

ಅಮೀಬಾ ಸೋಂಕಿನಿಂದ ಸಾವು ಸಂಭವಿಸಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ

ಮಂಗಳೂರು: ಏಪ್ರಿಲ್ 14 : ಇತ್ತೀಚಿನ ದಿನಗಳಲ್ಲಿ ವಿವಿಧ ಮಾದರಿಯ ಮೆದುಳು ಜ್ವರದ ಪ್ರಕರಣಗಳು ವರದಿಯಾಗುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ. ಇದು _Naegleria fowleri_ ಅಂದರೆ “ಮೆದುಳು ತಿನ್ನುವ ಅಮೀಬಾ”ದಿಂದ ಉಂಟಾಗುವ ಅಪರೂಪದ, ಆದರೆ ಅತ್ಯಂತ ಗಂಭೀರವಾದ ಮೆದುಳಿನ ಸೋಂಕು. ಈ ಅಮೀಬಾ ಸಾಮಾನ್ಯವಾಗಿ ಬೆಚ್ಚಗಿನ ಸಿಹಿನೀರಿನ ಮೂಲಗಳಾದ ಕೊಳ, ಕೆರೆ, ಕಾಲುವೆ, ನಿಂತ ನೀರು ಮತ್ತು ಸರಿಯಾಗಿ ನಿರ್ವಹಿಸದ ಈಜುಕೊಳಗಳಲ್ಲಿ ಕಂಡುಬರುತ್ತದೆ. […]

COMMUNITY NEWS LATEST NEWS

ಪೋಪ್ 14 ನೇ ಲಿಯೊ ಇವರ ಬಗ್ಗೆ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮಂಗಳೂರು ಧರ್ಮಪ್ರಾಂತ್ಯ ಖಂಡನೆ

ಮಂಗಳೂರು :ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರೈಸ್ತ ಜಗದ್ಗುರು ಪರಮ ಪೂಜ್ಯ ಪೋಪ್ 14ನೇ ಲಿಯೋ ರವರ ವಿರುದ್ಧ ಇತ್ತೀಚೆಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಮಂಗಳೂರು ಧರ್ಮಪ್ರಾಂತ್ಯವು ತೀವ್ರವಾಗಿ ಖಂಡಿಸುತ್ತದೆ. ಪರಮೋಚ್ಛ ಗುರುಗಳ ವಿರುದ್ಧದ ಇಂತಹ ಮಾತುಗಳು ಮಂಗಳೂರಿನ, ಭಾರತದ ಮತ್ತು ವಿಶ್ವದಾ ದ್ಯಂತದ ಕ್ಯಾಥೊಲಿಕರಿಗೆ ಅತೀವ ನೋವುಂಟು ಮಾಡಿವೆ. ಏಕೆಂದರೆ ಅವರು ಪೋಪರನ್ನು ಸಂತ ಪೇತ್ರರ ಉತ್ತರಾಧಿಕಾರಿ ಮತ್ತು ಕ್ರೈಸ್ತ ಧರ್ಮಸಭೆಯ ಮುಖ್ಯಸ್ಥರೆಂದು ಗೌರವಿಸುತ್ತಾರೆ. ಪೋಪ್ ರವರನ್ನು ಅವಮಾನಿಸುವ ಮೂಲಕ ಕೋಟ್ಯಂತರ ಕ್ರೈಸ್ತ ವಿಶ್ವಾಸಿಗಳ […]

HOME LATEST NEWS

ಗೋವಾ: ಪಾರ್ಲಿಮೆಂಟರಿ ಅಸೋಸಿಯೇಶನ್ ಸಮ್ಮೇಳನದಲ್ಲಿ ಸ್ಪೀಕರ್  ಯು.ಟಿ ಖಾದರ್ ಭಾಗಿ

ಮಂಗಳೂರು.ಎ.13:ಗೋವಾದ ಪಣಜಿಯಲ್ಲಿ ನಡೆದ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA)ಭಾರತ ವಲಯ-lX ಪ್ರಥಮ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು ಮಾತನಾಡಿದರು. ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, “ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಯುವ- ನಾಯಕತ್ವ ಎಂಬ ಪದ ಹೆಚ್ಚು ಬಳಸಲಾಗುತ್ತದೆ. ಆದರೆ ಯುವ ಶಾಸಕರನ್ನು ಕೇವಲ ವಯಸ್ಸಿನ ಆಧಾರದ ಮೇಲೆ ವ್ಯಾಖ್ಯಾನಿಸುವುದು ಸರಿಯಲ್ಲ. ಅವರನ್ನು ಮನಸ್ಥಿತಿಯಿಂದ ವ್ಯಾಖ್ಯಾನಿಸಲಾಗುತ್ತದೆ. ಹಳೆಯ ಮನೋಭಾವ, ದೃಷ್ಟಿಕೋನ, ನಾವಿನ್ಯತೆಗೆ ಒಗ್ಗಿಕೊಳ್ಳಲಾರದ ಮನಸ್ಥಿತಿಯನ್ನು ಹೊಂದಿರುವವರು ಯುವಕರಲ್ಲ, ಬದಲಾಗಿ ಹೊಸ ಆಲೋಚನೆಗಳು, ನವೀನ ದೃಷ್ಟಿಕೋನ […]

COMMUNITY NEWS LATEST NEWS

ಎಸ್‌ಎಸ್‌ವಿಪಿ ಮಂಗಳೂರು ಸೆಂಟ್ರಲ್ ಕೌನ್ಸಿಲ್‌ನ ನೂತನ ಅಧ್ಯಕ್ಷೆಯಾಗಿ ಪ್ರೀತಾ ಲೋಬೊ ಅಧಿಕಾರ ಸ್ವೀಕಾರ: 66 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಸಾರಥ್ಯ

ಮಂಗಳೂರು: ಸೇಂಟ್ ವಿನ್ಸೆಂಟ್ ಡಿ ಪೌಲ್ ಸೊಸೈಟಿ (SSVP) ಮಂಗಳೂರು ಸೆಂಟ್ರಲ್ ಕೌನ್ಸಿಲ್ ತನ್ನ 66 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಬೆಂದೂರು ಕಾನ್ಫರೆನ್ಸ್‌ನ ಪ್ರೀತಾ ಲೋಬೊ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ಅಧ್ಯಕ್ಷರಿಗೆ ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫ್ಲೇವಿಯನ್ ಲೋಬೊ ಅವರು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಬೆಂದೂರು ಚರ್ಚ್‌ನ ಧರ್ಮಗುರುಗಳಾದ ವಂದನೀಯ ವಾಲ್ಟರ್ ಡಿಸೋಜಾ ಮತ್ತು ಮಾಜಿ ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫ್ರಾನ್ಸಿಸ್ ಡಿಸೋಜಾ […]