• Home  
  • ಟೆಂಪಲ್ ಸ್ಕೇರ್ ಪುತ್ತೂರು ಮಡಿಲಿಗೆ ಜಿಪಿಎಲ್ ಟ್ರೋಫಿ
- LATEST NEWS

ಟೆಂಪಲ್ ಸ್ಕೇರ್ ಪುತ್ತೂರು ಮಡಿಲಿಗೆ ಜಿಪಿಎಲ್ ಟ್ರೋಫಿ

ಮೂಲ್ಕಿ : ಹೆಜಮಾಡಿಯ ಶ್ಯಾನುಭೋಗ್ ಕುದ್ರುವಿನಲ್ಲಿ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಅಮ್ಗಿಲೆ ದಿ ಒರಿಜಿನಲ್ ಆಭರಣ್ ಜಿಪಿಎಲ್ ಉತ್ಸವದ ಕ್ರಿಕೆಟ್ ಪಂದ್ಯಾವಳಿಯ ವಿನ್ನರ್ ಪ್ರಶಸ್ತಿಯನ್ನು ಟೆಂಪಲ್ ಸ್ಕೇರ್ ಪುತ್ತೂರು ಮುಡಿಗೇರಿಸಿಕೊಂಡಿತು. ಅಂತಿಮ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ಸ್ ಮಂಗಳೂರು ಮೊದಲು ಬಿಗುವಾದ ಬೌಲಿಂಗ್ ಸಂಘಟಿಸಿ ಏಳು ಓವರ್ ಗಳಲ್ಲಿ ಟೆಂಪಲ್ ಸ್ಕೇರ್ ಪುತ್ತೂರನ್ನು 50 ರನ್ನಿಗೆ ಸೀಮಿತಗೊಳಿಸಿತು. ಆದರೆ ಟೆಂಪಲ್ ಸ್ಕೇರ್ ಪುತ್ತೂರು ತಂಡದ ಕರಾರುವಕ್ಕಾದ ಬೌಲಿಂಗ್ ನಿಂದ 6.5 […]

Share News

ಮೂಲ್ಕಿ : ಹೆಜಮಾಡಿಯ ಶ್ಯಾನುಭೋಗ್ ಕುದ್ರುವಿನಲ್ಲಿ ಮೂರು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಅಮ್ಗಿಲೆ ದಿ ಒರಿಜಿನಲ್ ಆಭರಣ್ ಜಿಪಿಎಲ್ ಉತ್ಸವದ ಕ್ರಿಕೆಟ್ ಪಂದ್ಯಾವಳಿಯ ವಿನ್ನರ್ ಪ್ರಶಸ್ತಿಯನ್ನು ಟೆಂಪಲ್ ಸ್ಕೇರ್ ಪುತ್ತೂರು ಮುಡಿಗೇರಿಸಿಕೊಂಡಿತು.


ಅಂತಿಮ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ಸ್ ಮಂಗಳೂರು ಮೊದಲು ಬಿಗುವಾದ ಬೌಲಿಂಗ್ ಸಂಘಟಿಸಿ ಏಳು ಓವರ್ ಗಳಲ್ಲಿ ಟೆಂಪಲ್ ಸ್ಕೇರ್ ಪುತ್ತೂರನ್ನು 50 ರನ್ನಿಗೆ ಸೀಮಿತಗೊಳಿಸಿತು. ಆದರೆ ಟೆಂಪಲ್ ಸ್ಕೇರ್ ಪುತ್ತೂರು ತಂಡದ ಕರಾರುವಕ್ಕಾದ ಬೌಲಿಂಗ್ ನಿಂದ 6.5 ಒವರ್ ಗಳಲ್ಲಿ 38 ರನ್ನಿಗೆ ಅಲೌಟ್ ಆದ ರೈಸಿಂಗ್ ಸ್ಟಾರ್ ಮಂಗಳೂರು ಸೋಲಿಗೆ ಶರಣಾಯಿತು. ರೈಸಿಂಗ್ ಸ್ಟಾರ್ ತಂಡದ ಪ್ರಜ್ವಲ್ ಶೆಣೈ ಸರಣಿ ಶ್ರೇಷ್ಟ ಆಟಗಾರರಾಗಿ ಪೈ ಸೇಲ್ಸ್ ಪ್ರಾಯೋಜಿತ ಸುಝುಕಿ ಅವನಿಸ್ ಹೊಸ ಬ್ರಾಂಡ್ ನ ಬೈಕನ್ನು ತಮ್ಮದಾಗಿಸಿಕೊಂಡರು. ಫೈನಲ್ ಪಂದ್ಯದ ಪಂದ್ಯಶ್ರೇಷ್ಟರಾಗಿ ಟೆಂಪಲ್ ಸ್ಕೇರ್ ಪುತ್ತೂರು ತಂಡದ ಅಶ್ವಥ್ ಪೈ, ಉದಯೋನ್ಮುಖ ಆಟಗಾರರಾಗಿ ಅದೇ ತಂಡದ ಕಿರಣ್ ಎಎಸ್, ಅತ್ಯುತ್ತಮ ದಾಂಡಿಗರಾಗಿ ಕೋಡಿಯಲ್ ಸೂಪರ್ ಕಿಂಗ್ಸ್ ನ ದುರ್ಗೇಶ್, ಅತ್ಯುತ್ತಮ ಬೌಲರ್ ಆಗಿ ಅದೇ ತಂಡದ ಗಣೇಶ್ ಪೈ ಪ್ರಶಸ್ತಿ ಸ್ವೀಕರಿಸಿದರು.


ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಉದ್ಯಮಿಗಳಾದ ಗಣಪತಿ ಪೈ, ರತ್ನಾಕರ್ ಪೈ, ರಾಘವೇಂದ್ರ ಕುಡ್ವ, ಸಂತೋಷ್ ಗಡಿಯಾರ್, ನರೇಂದ್ರ ನಾಯಕ್, ಸತ್ಯನ್ ನಾರ್ವೇಕರ್, ಪ್ರಮುಖರಾದ ಸಿಎ ಗೌತಮ್ ಪೈ, ಹನುಮಂತ ಕಾಮತ್, ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಹಾಗೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಕಿರಣ್ ಶೆಣೈ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Share News