Month: April 2026

COMMUNITY NEWS DAKSHINA KANNADA HOME LATEST NEWS

ಪವಿತ್ರ ಗುರುವಾರ: ಪಾದ ತೊಳೆದು ಕ್ರಿಸ್ತನ ಸಂದೇಶ ಸಾರಿದ ಮಂಗಳೂರು ಬಿಷಪ್‌

ಮಂಗಳೂರು: ಯೇಸು ಸ್ವಾಮಿಯು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನ ಹಾಗೂ ಕ್ರೆಸ್ತ ಧರ್ಮ ಸಭೆಯ ನೆನಪನ್ನು ಸಾರುವ ಪವಿತ್ರ ಗುರುವಾರ (ಮೊಂಡಿ ಥರ್ಸ್‌ಡೆ)ಯಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತರು ಭಕ್ತಿಭಾವದಿಂದ ಆಚರಿಸಿದರು. ನಗರ ಹೊರವಲಯದ ಮುಕ್ಕ ಪವಿತ್ರಾತ್ಮರ ಚರ್ಚ್‌ನಲ್ಲಿ ಮಹಿಳೆ ಹಾಗೂ ಪುರುಷ ಪ್ರೇಷಿತರ ಪಾದಗಳನ್ನು ತೊಳೆದು ಯೇಸು ಸ್ವಾಮಿಯ ದೀನತೆಯ ಹಾಗೂ ಪರಸ್ಪರ ಪ್ರೀತಿಯ ಸಂದೇಶ ನೀಡಿದರು. ಬಲಿಪೂಜೆಯಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದ್ದ ಫಾದರ್‌ ಮುಲ್ಲರ್‌ ಸಂಸ್ಥೆಯ ಆಡಳಿತ ಮಂಡಳಿಯ ಸಹಾಯಕ […]

HOME LATEST NEWS

*ಏಪ್ರಿಲ್ 8 ರಿಂದ ಕುವೈತ್-ಮಂಗಳೂರು ನಡುವೆ ವಿಮಾನಯಾನ ಆರಂಭ*

ಮಂಗಳೂರು,ಏ 2: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಜಜೀರಾ ಏರ್‌ವೇಸ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 8ರಿಂದ ಸೌದಿ ಅರೇಬಿಯಾದ ದಮ್ಮಮ್ ಮೂಲಕ ಕುವೈತ್ ಮತ್ತು ಮಂಗಳೂರು ನಡುವೆ ವಾರಕ್ಕೆ ಎರಡು ಬಾರಿ ವಿಶೇಷ ವಿಮಾನಯಾನ ಸೇವೆ ಆರಂಭವಾಗಲಿದೆ. ಭಾರತದ ನಾಲ್ಕು ನಗರಗಳಿಗೂ ಹೊಸ ವಿಮಾನಯಾನ ಸಂಪರ್ಕ: ಜಜೀರಾ ಏರ್‌ವೇಸ್ ಭಾರತದ ನಾಲ್ಕು ಪ್ರಮುಖ ನಗರಗಳಾದ ಮಂಗಳೂರು, ಕೋಝಿಕ್ಕೋಡ್ (ಕ್ಯಾಲಿಕಟ್), ತಿರುಚಿರಾಪಳ್ಳಿ ಮತ್ತು ಕಣ್ಣೂರಿಗೆ ದಮ್ಮಮ್ […]

LATEST NEWS

*ಬೆಂಗಳೂರು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ*

ಬೆಂಗಳೂರು, ಏಪ್ರಿಲ್ 2: ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಬಕೆಟ್ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದೆ. ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದು, ಕೆಲಸ ಮುಗಿಸಿ ಮನೆಗೆ ಬಂದ ಆಕೆಯ ಪತಿಗೆ ಆಘಾತ ಕಾದಿತ್ತು. ಈ ದಾರುಣ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿದೆ. ಘಟನೆಯ ವಿವರ ಮೃತರನ್ನು ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (29) ಮತ್ತು ಅವರ 11 ತಿಂಗಳ ಗಂಡು ಮಗು ಅಗಸ್ತ್ಯ […]

HOME INETRNATIONAL LATEST NEWS

ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆ..!

ಇಟೆಲಿ: ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆಯಾಗಿದೆ ಎಂದು ಇಟಲಿಯ ವಿಜ್ಞಾನಿಗಳು ಈಗ ಜಗತ್ತಿನ ಮುಂದೆ ಇಟ್ಟಿದ್ದಾರೆ. ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆ ಎನ್ನಲಾದ ‘ಶ್ರೌಡ್ ಆಫ್ ಟುರಿನ್’ ಕುರಿತು ಈಗ ಮತ್ತೊಂದು ಅತ್ಯಂತ ರೋಚಕ ಸಂಗತಿ ಹೊರಬಿದ್ದಿದೆ. ಹೌದು, ಈ ಪವಿತ್ರ ವಸ್ತ್ರಕ್ಕೂ ಮತ್ತು ಭಾರತಕ್ಕೂ ನೇರ ನಂಟಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ. ಕ್ರೈಸ್ತ ಧರ್ಮೀಯರು ಅತ್ಯಂತ ಪವಿತ್ರವೆಂದು ಭಾವಿಸುವ ೪.೪ ಮೀಟರ್ ಉದ್ದ ಮತ್ತು ೧.೧ ಮೀಟರ್ ಅಗಲವಿರುವ ಈ ಲಿನಿನ್ […]

DAKSHINA KANNADA HOME LATEST NEWS

ಜನಗಣತಿಗೆ ಸಹಕರಿಸಲು ಜಿಲ್ಲಾಧಿಕಾರಿ ಕರೆ

ಮಂಗಳೂರು:- ಕರ್ನಾಟಕದಲ್ಲಿ ಜನಗಣತಿಯ ಭಾಗವಾಗಿ ಮನೆಗಳ ಗಣತಿಯು ಎಪ್ರಿಲ್ 16 ರಿಂದ ಮೇ 15 ರವರೆಗೆ 30 ದಿನಗಳ ಕಾಲ ನಡೆಸಲಾಗುತ್ತದೆ. ಇದರಲ್ಲಿ “ಸ್ವಯಂ – ಎಣಿಕೆ” ಆಯ್ಕೆಯು ಎಪ್ರಿಲ್ 1 ರಿಂದ ಎಪ್ರಿಲ್ 15 ರವರೆಗೆ ಇರುತ್ತದೆ. ಮನೆ ಪಟ್ಟಿ ಮತ್ತು ಮನೆ ಗಣತಿ (ಊಐಔ) ಸಮಯದಲ್ಲಿ ವಸತಿ ಸ್ಥಿತಿ, ಲಭ್ಯವಿರುವ ಸೌಲಭ್ಯಗಳು, ಹೊಂದಿರುವ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜನಗಣತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಆನ್ ಲೈನ್ ಪೊೀರ್ಟಲ್ https://censusindia.gov.in  ಅನ್ನು ಅನುಷ್ಠಾನಗೊಳಿಸಲಾಗಿದೆ. ಈ […]

HOME

*ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಕ್ಯಾ. ಬ್ರಿಜೇಶ್‌ ಚೌಟ ಒತ್ತಾಯ*

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು(ಎಫ್‌ಎಸ್‌ಎಸ್‌ಎಐ) ಅಡಿಕೆಗೆ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಸಡಿಲಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್‌ ಪಾಸ್ವಾನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಎಫ್‌ಎಸ್‌ಎಸ್‌ಎಐ ಸಂಸ್ಥೆಯು ಅಡಿಕೆಗೆ ನಿಗದಿಪಡಿಸಿರುವ ಈ ತೇವಾಂಶ ಮಿತಿಯನ್ನು ಗಂಭೀರ ಸಮಸ್ಯೆಯಾಗಿ ಪರಿಗಣಿಸಿರುವ ಸಂಸದರು, ಹೊಸದಿಲ್ಲಿಯಲ್ಲಿ ಸಚಿವರನ್ನು ಖುದ್ದು ಭೇಟಿಯಾಗಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಅಡಿಕೆ ಬೆಳಗಾರರರಿಗೆ ಆಹಾರ ಸುರಕ್ಷತಾ […]

LATEST NEWS

*ನವ ಮಂಗಳೂರು ಬಂದರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬೃಹತ್ ಯೋಜನೆ: ₹438.29 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ*

ಮಂಗಳೂರು: ಕರಾವಳಿ ಕರ್ನಾಟಕದ ಆರ್ಥಿಕ ಜೀವನಾಡಿ ಎನಿಸಿರುವ ನವ ಮಂಗಳೂರು ಬಂದರಿನ (NMPA) ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು (MoPSW) ₹438.29 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ. ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಲಿಕ್ವಿಡ್ ಕಾರ್ಗೋ ನಿರ್ವಹಣಾ ಸಾಮರ್ಥ್ಯ ಹೆಚ್ಚಳ:ಈ ಯೋಜನೆಯಡಿ ನವ ಮಂಗಳೂರು ಬಂದರಿನ ಬರ್ತ್ ಸಂಖ್ಯೆ 9ರ ಪುನರ್ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಪ್ರಮುಖ ಅಭಿವೃದ್ಧಿಯಿಂದಾಗಿ ಬಂದರಿನ ಲಿಕ್ವಿಡ್ ಕಾರ್ಗೋ […]

DAKSHINA KANNADA HOME LATEST NEWS

ಕೇರಳ ಚುನಾವಣೆ: ದಕ್ಷಿಣ ಕನ್ನಡದ ಗಡಿ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧ- ಜಿಲ್ಲಾಧಿಕಾರಿ

ಮಂಗಳೂರು: ಕೇರಳ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ಮತದಾನದ ನಿಮಿತ್ತ ಎ.7 ಸಂಜೆ 5ಗಂಟೆಯಿಂದ ಎಪ್ರಿಲ್ 9 ರಂದು ಮಧ್ಯರಾತ್ರಿ 12 ಗಂಟೆಯ ತನಕ ಮತ್ತು ಮತ ಎಣಿಕೆಯ ನಿಮಿತ್ತ ಮೇ 3 ರ ಮಧ್ಯರಾತ್ರಿ 12 ಗಂಟೆಯಿಂದ ಮೇ 4ರ ಮಧ್ಯರಾತ್ರಿ 12 ಗಂಟೆಯ ತನಕ ‘‘ಒಣ ದಿನ’’ ಎಂದು ಘೋಷಿಸಿ ಈ ದಿನಗಳಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಬಂಟ್ವಾಳ, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಗಡಿಭಾಗದ […]