Month: January 2026

HOME STATE

*ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಶುಭಾಶಯ ಸಲ್ಲಿಸಿದ ಯು.ಟಿ..ಖಾದರ್*

ಬೆಂಗಳೂರು. ಜನವರಿ .6: ದೇವರಾಜ್ ಅರಸ್ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ನನ್ನ ತಂದೆ ಯು.ಟಿ.ಫರೀದ್ ಶಾಸಕರಾಗಿ ಜೊತೆಗಿದ್ದರು,ಈಗ ಸಿದ್ದರಾಮಯ್ಯರವರು ದೀರ್ಘಕಾಲ ಮುಖ್ಯ ಮಂತ್ರಿಯಾಗಿರುವಾಗ ಅವರ ಜೊತೆ ನಾನು ಉನ್ನತ ಹುದ್ದೆಯಲ್ಲಿರುವುದು ಸಂತೋಷದ ವಿಚಾರ : ಯು.ಟಿ..ಖಾದರ್ ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಶುಭಾಶಯಗಳು ರಾಜ್ಯದ ರಾಜಕೀಯದಲ್ಲಿ ಕಾಲಘಟ್ಟವನ್ನ ಸ್ಥಾಪಿಸಿದವರು ನೀವು. ಸಿದ್ದರಾಮಯ್ಯನವರ ಕಾಲ ಎಂದು ಜನ ಗರ್ವದಿಂದ ಹೇಳಿಕೊಳ್ಳುವ ಅವಧಿ ಕೊಟ್ಟಿದ್ದೀರಿ.ನಿಮ್ಮ ಅವಧಿಯಲ್ಲಿ ನಾವು ಜೊತೆಗಿದ್ದೆವು ಎಂಬುದು ನಮಗೂ ಹೆಮ್ಮಯ […]

DAKSHINA KANNADA HOME

*ಸಂಚಾರ ನಿಯಮಗಳ ಪಾಲನೆಯಿಂದ ಜೀವ ರಕ್ಷಣೆ – ಜೈಬುನ್ನೀಸಾ*

ಮಂಗಳೂರು,ಜ.06 : ಸಂಚಾರ ನಿಯಮಗಳನ್ನು ಉಲ್ಲಂಘಿಸದೆ ಕಟ್ಟುನಿಟ್ಟಾಗಿ ಪಾಲಿಸಿದರೆ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ರಸ್ತೆ ಅಪಘಾತಗಳನ್ನು ತಡೆಯಲು ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರಿಗೆ ಇಲಾಖೆ, ಪೆÇಲೀಸ್ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ಮಂಗಳೂರು ಪ್ರಾದೇಶಿಕ […]

DAKSHINA KANNADA HOME LATEST NEWS

ಮಂಗಳೂರು: ಬಾಲ ಯೇಸುವಿನ ವಾರ್ಷಿಕ ಮಹೋತ್ಸವ- ಹೊರೆ ಕಾಣಿಕೆ ಮೆರವಣಿಗೆ

ಮಂಗಳೂರು: ಬಾಲ ಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆಯಾಗಿ ಜ 3 ರಂದು , ಕೊರ್ಡೆಲ್ ಚರ್ಚ್ ನಿಂದ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದ ವರೆಗೆ ಭಕ್ತಿಭಾವಪೂರ್ಣ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಅನೇಕ ಭಕ್ತರು ಕೃತಜ್ಞತೆ, ನಂಬಿಕೆ ಮತ್ತು ಆಶಯದೊಂದಿಗೆ ಕಾಣಿಕೆಗಳನ್ನು ಸಮರ್ಪಿಸಿದರು. ವಂ. ವಿಜಯ್ ಮೊಂತೆರೋ, (ಸಹಾಯಕ ಧರ್ಮಗುರು , ಕೊರ್ಡೆಲ್ ಚರ್ಚ್) ಆಶೀರ್ವಾದ ನೀಡಿ, ಶ್ರೀಮತಿ ರೂತ್ ಕ್ಯಾಸ್ಟೆಲಿನೊ, (ಉಪಾಧ್ಯಕ್ಷೆ, ಕೊರ್ಡೆಲ್ ಚರ್ಚ್) ಮೆರವಣಿಗೆಗೆ ಧ್ವಜ ಹಾರಿಸಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಸಾಮಾಜಿಕ […]

HOME LATEST NEWS

ರಸ್ತೆಗಳೆಲ್ಲವೂ ಕಪ್ಪು ಬಣ್ಣದ್ದೇ ಆಗಿರುತ್ತದೆ ಏಕೆ..? ಏನಿದರ ವಿಶೇಷತೆ….!

ನಾವು ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣವೇ ಸಾಮಾನ್ಯವಾಗಿ ಮೊದಲು ಕಾಣಿಸುವುದೇ ಡಾಂಬಾರು ರಸ್ತೆಗಳು. ನಮ್ಮ ಊರಿನಿಂದ ಬೇರೆ ಎಲ್ಲಾದರೂ ಪ್ರಯಾಣಿಸುವುದಾದರೂ ನಾವು ಹೋಗುವುದು ರಸ್ತೆಗಳಲ್ಲೇ, ಆದರೆ ಆ ಹೆಚ್ಚಿನ ರಸ್ತೆಗಳೆಲ್ಲವೂ ಕಪ್ಪು ಬಣ್ಣದ್ದೇ ಆಗಿರುತ್ತದೆ ಏಕೆ ಎಂದು ಕುತೂಹಲ ಹುಟ್ಟಿದುವುಂಟು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಪ್ರಪಂಚದ ಹೆಚ್ಚಿನ ರಸ್ತೆಗಳು ಬಿಟುಮೆನ್ ಎಂಬ ವಸ್ತುವಿನಿಂದ ನಿರ್ಮಿಸಲ್ಪಟ್ಟಿವೆ. ಬಿಟುಮೆನ್ ಎನ್ನುವುದು ಕಚ್ಚಾ ತೈಲದಿಂದ ದೊರೆಯುವ ಒಂದು ದಪ್ಪ ದ್ರವ ಪದಾರ್ಥವಾಗಿದ್ದು, ಇದು ನೈಸರ್ಗಿಕವಾಗಿ ಕಪ್ಪು ಅಥವಾ ಗಾಢ ಕಂದು […]

DAKSHINA KANNADA HOME LATEST NEWS

ಸುಳ್ಯದಲ್ಲಿ ತಾಯಿ & 3 ವರ್ಷದ ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆ-ಆತ್ಮಹತ್ಯೆ ಶಂಕೆ

ಸುಳ್ಯ: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಹರೀಶ್ ಅವರು ತನ್ನ ತಂದೆ, ತಾಯಿ, ಪತ್ನಿ, ಮಗುವಿನೊಂದಿಗ ಆರ್ವಾರ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ರವಿವಾರ ಬೆಳಗ್ಗೆ ಕಾಣದೇ […]

HOME

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ: ಕಾಂಗ್ರೆಸ್ಸಿಗರ ಮೇಲೆ ಶಾಸಕ ಸುನೀಲ್‌ ಗರಂ

ಮಂಗಳೂರು: ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ ನಡೆದಿದೆ ಎಂಬ ಬಗ್ಗೆ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅವರು ಆರೋಪಿಸಿದ್ದು, ಇದಕ್ಕೆಲ್ಲಾ ಸ್ಥಳೀಯ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ಕಾರಣ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ ಅವರು, ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಳ್ಳಿ ಇಟ್ಟ ಕಾಂಗ್ರೆಸ್ ನಾಯಕರನ್ನು ಇತಿಹಾಸ ಕ್ಷಮಿಸದು ಎಂದೂ ಆರೋಪಿಸಿದ್ದಾರೆ. ಏನಿದೆ ಅವರ ಪೋಸ್ಟ್‌ನಲ್ಲಿ ಥೀಂ ಪಾರ್ಕ್ ನ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು […]

HOME INETRNATIONAL LATEST NEWS

ವೆನೆಝುವೆಲಾದಲ್ಲಿ ಅಮೆರಿಕದ ಮಿಲಿಟರಿ ದಾಳಿ: ಪೋಪ್ ಲಿಯೋ XIV ತೀವ್ರ ಕಳವಳ

ವ್ಯಾಟಿಕನ್: ವೆನೆಝುವೆಲಾದಲ್ಲಿ ಅಮೆರಿಕದ ಮಿಲಿಟರಿ ದಾಳಿಗಳ ಬಳಿಕ ಉಂಟಾಗಿರುವ ಬೆಳವಣಿಗೆಗಳ ಕುರಿತು ಪೋಪ್ ಲಿಯೋ XIV ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವೆನೆಝುವೆಲಾದ ಜನರ ಒಳಿತೇ ಎಲ್ಲದಕ್ಕಿಂತ ಮೇಲುಗೈ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ಪೋಪ್, “ವೆನೆಝುವೆಲಾದ ಪರಿಸ್ಥಿತಿಯನ್ನು ತಾವು ನಿರಂತರವಾಗಿ ಗಮನಿಸುತ್ತಿದ್ವೆದೇನೆ. ವೆನೆಝುವೆಲಾದ ಬೆಳವಣಿಗೆಗಳನ್ನು ನಾನು ಆಳವಾದ ಕಳವಳದಿಂದ ನೋಡುತ್ತಿದ್ದೇನೆ. ಪ್ರೀತಿಯ ವೆನೆಝುವೆಲಾದ ಜನರ ಒಳಿತೇ ಇತರ ಎಲ್ಲ ಅಂಶಗಳಿಗಿಂತ ಮುಖ್ಯವಾಗಬೇಕು. ಇದು ಹಿಂಸಾಚಾರವನ್ನು ಮೀರಿಸಿ ನ್ಯಾಯ ಮತ್ತು […]

DAKSHINA KANNADA HOME LATEST NEWS

ಅಕ್ರಮ ದನದ ಮಾಂಸ ಸಾಗಾಟ: ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ- ಪ್ರತ್ಯೇಕ FIR

ಮಂಗಳೂರು:  ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಹಾಗೂ ಅದನ್ನು ತಡೆದು ನಿಲ್ಲಿಸಿದ ಪ್ರಕರಣದ ಬಗ್ಗೆ ಜೊತೆಗೆ ಇದೇ ಹಿನ್ನೆಲೆ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಘಟನೆ ವಿವರ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಡಿ.27 ರಂದು  ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತನು ತನ್ನ ಮಗಳನ್ನು ಸ್ಕೂಟರ್ ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ […]

DAKSHINA KANNADA HISTORY HOME LATEST NEWS

ನಿಮ್ಮ ಪರ ಪ್ರಚಾರಕ್ಕೆ ರೆಡಿ: ಶಾಸಕ ಅಶೋಕ್ ರೈಗೆ ಪೆರುವಾಯಿ BJP ಕಾರ್ಯಕರ್ತರ ಭರವಸೆ..!

ಪುತ್ತೂರು: ನಾವು ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ ಆದರೆ ನಮ್ಮ ರಸ್ತೆಯನ್ನು ಇದುವರೆಗೂ ಯಾರೂ ಅಭಿವೃದ್ದಿ ಮಾಡಿಲ್ಲ, ನೀವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೀರಿ, ಪಕ್ಷ ಬೇಧವಿಲ್ಲದೆ ಅನುದಾನವನ್ನು ನೀಡುತ್ತಿದ್ದೀರಿ, ನಮ್ಮ ಬೇಡಿಕೆಯನ್ನು ಈಡೇರಿಸಿದ್ದಲ್ಲಿ ನಾವು ನಿಮ್ಮ ಪರ ಬಹಿರಂಗ ಪ್ರಚಾರ ಮಾಡಿಯೇ ಮಾಡುತ್ತೇವೆ ಎಂದು ಪೆರುವಾಯಿ ಗ್ರಾಮದ ಬಿಜೆಪಿ ಕಾರ್ಯಕರ್ತರ ನಿಯೋಗವೊಂದು ಪುತ್ತೂರು ಶಾಸಕ ಅಶೋಕ್ ರೈ ನಿವಾಸಕ್ಕೆ ಬಂದು ಭರವಸೆ ನೀಡಿದ್ದಾರೆ. ಪೆರುವಾಯಿ ಗ್ರಾಮದ ಬದಿಮಾರ್ ಪ್ರದೇಶದಲ್ಲಿ ಅನೇಕ […]

COMMUNITY NEWS DAKSHINA KANNADA HOME LATEST NEWS

ಮಂಗಳೂರು ಧರ್ಮಕ್ಷೇತ್ರದ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆ: ಮಕ್ಕಳ ವರ್ಷ ಘೋಷಣೆ

ಮಂಗಳೂರು: ಯೇಸು ಕ್ರಿಸ್ತರ ದೈವದರ್ಶನ ಮಹೋತ್ಸವದ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಭಾನುವಾರ ವಾರ್ಷಿಕ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಿಲಾಗ್ರಿಸ್ ಚರ್ಚ್‌ನಿಂದ ಆರಂಭಗೊಂಡು ರೊಸಾರಿಯೊ ಕೆಥೆಡ್ರಲ್ ವರೆಗೆ ಮೆರವಣಿಗೆಯು ನಡೆಯಿತು.     ಕಾರ್ಯಕ್ರಮವು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಅಧ್ಯಕ್ಷತೆಯಲ್ಲಿ ಮಿಲಾಗ್ರಿಸ್ ಚರ್ಚ್‌ನಲ್ಲಿ ನಡೆದ ಸಾಮೂಹಿಕ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಈ ಹಬ್ಬವು ಜ್ಯೋತಿಷಿಗಳ ಭೇಟಿಯ ಮೂಲಕ ಯೇಸು ಕ್ರಿಸ್ತರು […]