Month: January 2026

HOME

2026ನೇ ಸಾಲಿನ ‘ಸಂದೇಶ ಪ್ರಶಸ್ತಿ’: ಸಾಹಿತಿ ಡಾ.ನಾ.ಮೊಗಸಾಲೆ ಸೇರಿ 7 ಮಂದಿಗೆ ಗೌರವ

ಮಂಗಳೂರು: ಸಾಹಿತಿ ಡಾ.ನಾ.ಮೊಗಸಾಲೆ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಹಾಗೂ ಒಂದು ಸಂಸ್ಥೆಗೆ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ ಘೋಷಿಸಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯ್ಕೆಸಮಿತಿ ಸದಸ್ಯೆ ಕನ್ಸೆಪ್ಟಾ ಫರ್ನಾಂಡಿಸ್, ‘ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ನೀಡುವ ಪ್ರಶಸ್ತಿ ತಲಾ ₹25 ಸಾವಿರ ನಗದು ಒಳಗೊಂಡಿದೆ’ ಎಂದರು. ಪ್ರಶಸ್ತಿ ಪುರಸ್ಕೃತರು: ಡಾ.ನಾ.ಮೊಗಸಾಲೆ (ಕನ್ನಡ ಸಾಹಿತ್ಯ) ಪ್ಯಾಟ್ರಿಕ್ ಕಾಮಿಲ್‌ ಮೋರಸ್ (ಕೊಂಕಣಿ ಸಾಹಿತ್ಯ), ಇಂದಿರಾ ಹೆಗ್ಗಡೆ (ತುಳು ಸಾಹಿತ್ಯ) […]

DAKSHINA KANNADA HOME STATE

*ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ*

ಮಂಗಳೂರು, ಜನವರಿ 11: ದ್ವೇಷ ಭಾಷಣ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರವಾಗಿದ್ದು ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ . ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. *ಬಿಜೆಪಿ ಪಾದಯಾತ್ರೆ ಏಕೆ ಕೈಗೊಳ್ಳಬೇಕು* ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ನಾವು ಹಿಂದೆ ಪಾದಯಾತ್ರೆ ಮಾಡಿದ್ದು, ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ […]

DAKSHINA KANNADA HOME

*ಕೇರಳ, ಗೋವಾ ಮಾದರಿಯಲ್ಲಿ ಸಿಆರ್ ಜಡ್ ಕಾನೂನು ಸರಳೀಕರಣ; ಕೇಂದ್ರ ‌ಪ್ರವಾಸೋದ್ಯಮ, ಪರಿಸರ ಸಚಿವರ ಭೇಟಿಗೆ ನಿಯೋಗ: ಡಿಸಿಎಂ ಡಿ.ಕೆ. ಶಿವಕುಮಾರ್*

ಮಂಗಳೂರು, ಜ.11: ಕೇರಳ ಹಾಗೂ ಗೋವಾ ಮಾದರಿಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್ ಜೆಡ್) ಕಾನೂನು ಸರಳೀಕರಣ ಮಾಡಲಾಗುವುದು. ಇದರ ಬಗ್ಗೆ ಕೇಂದ್ರ ಪ್ರವಾಸೋದ್ಯಮ, ಪರಿಸರ ಸಚಿವರ ಬಳಿ ನಿಯೋಗ ತೆರಳಿ ಚರ್ಚೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಮಂಗಳೂರಿನಲ್ಲಿ ನಡೆದ ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026’ ರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. “ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಇತರೇ ಸಂಬಂಧಪಟ್ಟವರ ಜೊತೆ ಸಿಆರ್ ಜಡ್ ವಿಚಾರ […]

DAKSHINA KANNADA HOME LATEST NEWS

ಇಂದು ಮಂಗಳೂರಿಗೆ CM & DCM: ಸಂಚಾರ ವ್ಯತ್ಯಯ ಸಾಧ್ಯತೆ

ಮಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ, ಪಿಲಿಕುಲ ಮತ್ತು ನರಿಂಗಾನ ಹಾಗೂ ಅಂಬ್ಲಮೊಗರುವಿನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇವರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು. ಹಾಗಾಗಿ ಸುಗಮ ಸಂಚಾರದ ದೃಷ್ಟಿಯಿಂದ ತುರ್ತು ಸಂದರ್ಭ ಹೊರತುಪಡಿಸಿ ಈ ಮಾರ್ಗಗಳಲ್ಲಿ ಸಂಚರಿಸದೆ ಬದಲಿ ಮಾರ್ಗ ಉಪಯೋಗಿಸು ವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಸಂಚಾರ ದಟ್ಟಣೆಯಾಗುವ ಮಾರ್ಗಗಳು: ಕೆಂಜಾರು ಜಂಕ್ಷನ್, ಮರವೂರು, ಕಾವೂರು, ಬೋಂದೆಲ್, ಪದವಿನಂಗಡಿ, […]

COMMUNITY NEWS DAKSHINA KANNADA HOME LATEST NEWS

ಮಂಗಳೂರು: ನಾಳೆ ಕವಿತಾ ಟ್ರಸ್ಟ್‌ನ ಇಪ್ಪತ್ತನೇ ಕವಿತಾ ಫೆಸ್ತ್ ಸಂಭ್ರಮ

ಮಂಗಳೂರು: ಕೊಂಕಣಿ ಕಾವ್ಯದ ಸ್ಥಾನಮಾನವನ್ನು ಗಣನೀಯವಾಗಿ ಹೆಚ್ಚಿಸಿರುವ ಕವಿತಾ ಟ್ರಸ್ಟ್, ಈ ವರ್ಷ ತನ್ನ ಇಪ್ಪತ್ತನೇ ಕವಿತಾ ಫೆಸ್ತ್ ಹಬ್ಬವನ್ನು ಆಚರಿಸುತ್ತಿದೆ. ಈ ಉತ್ಸವವು ಜ. 11 ರಂದು ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯಲಿದೆ. ಕೊಂಕಣಿ ಭಾಷೆಯ ಬಗ್ಗೆ ಉತ್ಸಾಹ ಹೊಂದಿರುವ ಯಾರಾದರೂ ಈ ಉತ್ಸವದಲ್ಲಿ ಭಾಗವಹಿಸಬಹುದು. ಬೆಳಿಗ್ಗೆ, ಮೆರವಣಿಗೆಯು ಟಾಗೋರ್ ಪಾರ್ಕ್‌ನಿಂದ ಪ್ರಾರಂಭವಾಗಿ ಮದರ್ ತೆರೇಸಾ ಪೀಸ್ ಪಾರ್ಕ್‌ಗೆ ಮುಂದುವರಿಯುತ್ತದೆ. […]

DAKSHINA KANNADA HOME LATEST NEWS

ಬಾಲ ಯೇಸುವಿನ ನೊವೇನಾದ ನಾಲ್ಕನೇ ದಿನ: ಆಧ್ಯಾತ್ಮಿಕ ಚಿಂತನೆ, ಕಲೆ ಮತ್ತು ಸಮುದಾಯದ ಸಹಭಾಗಿತ್ವದ ಸಂಗಮ

ಮಂಗಳೂರು: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೊವೇನಾದ ನಾಲ್ಕನೇ ದಿನವನ್ನು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಈ ದಿನದ ಮುಖ್ಯ ಚಿಂತನೆಯ ವಿಷಯ “ನಿಮ್ಮ ಕರೆಯನ್ನು ದೃಢಪಡಿಸಿಕೊಳ್ಳಲು ಸಕಲ ಪ್ರಯತ್ನ ಮಾಡಿ” ಎಂಬುದಾಗಿತ್ತು. ಸಂತ ಶಿಲುಬೆಯ ಯೋವಾನರ ಆಧ್ಯಾತ್ಮಿಕ ಬರಹಗಳ ಬೆಳಕಿನಲ್ಲಿ, ಕ್ರೈಸ್ತ ಕರೆಯ ಬಗ್ಗೆ ನಿಷ್ಠೆ, ಶಿಸ್ತು ಮತ್ತು ಬದ್ಧತೆಯನ್ನು ಉಳಿಸಿಕೊಳ್ಳುವ ಕುರಿತು ಈ ದಿನದಂದು ವಿಶೇಷ ಪ್ರಬೋಧನೆ ನೀಡಲಾಯಿತು. ಸಂತ ಶಿಲುಬೆಯ ಯೋವಾನರ ಪುಣ್ಯಪಟ್ಟದ 300ನೇ ವರ್ಷಾಚರಣೆ ಮತ್ತು […]

DAKSHINA KANNADA HOME

*ದಲಿತ ಸಮುದಾಯದ ಅಭಿವೃದ್ದಿ ಕಾಂಗ್ರೆಸ್ ಸರಕಾರ ಕಟಿಬದ್ದವಾಗಿದೆ: ಶಾಸಕ ಅಶೋಕ್ ರೈ*

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಹೆಚ್ಚು ಅನುದಾನವನ್ನು ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು, ಕಾಂಗ್ರೆಸ್ ಸರಕಾರ ದಲಿತರ ಅಭಿವೃದ್ದಿಗೆ ಕಟಿಬದ್ದವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ವಿಟ್ಲದಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದ ಅಂಬೇಡ್ಕರ್ ಭವನಕ್ಕೆ ಸಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈಗಾಗಲೇ ೭೫ ಲಕ್ಷ ಅನುದಾನ ಮಂಜೂರಾಗಿದೆ, ಮುಂದಿನ ದಿನಗಳಲ್ಲಿ ಬಾಕಿ ಅನುದಾನ ಬಿಡುಗಡೆಯಾಗಲಿದೆ. ಈ ಭಾಗದ ದಲಿತ […]

DAKSHINA KANNADA HOME

*ದುರ್ಗಮ ಪ್ರದೇಶಗಳಿಗೆ ಸಂಚಾರಿ ಅರೋಗ್ಯ ವಾಹನ: ಸಚಿವ ದಿನೇಶ್ ಗುಂಡೂರಾವ್ ಚಾಲನೆ*

ಮಂಗಳೂರು: ದುರ್ಗಮ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಮನೆಬಾಗಿಲಲ್ಲೇ ಅರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಂಚಾರಿ ಅರೋಗ್ಯ ಘಟಕಗಳಿಗೆ ಅರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ 5 ಹಾಗೂ ಉಡುಪಿ ಜಿಲ್ಲೆಯ 4 ಸಂಚಾರಿ ಅರೋಗ್ಯ ಘಟಕ ವಾಹನಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯoತ ಒಟ್ಟು 81 […]

DAKSHINA KANNADA HOME

*ವಿನಯ ಹೆಗ್ಡೆಯವರ ಜೀವನ ಶೈಲಿ ಎಲ್ಲರಿಗೂ ಆದರ್ಶ: ಕೆ ಅಜಿತ್ ಕುಮಾರ್ ರೈ ಮಾಲಾಡಿ*

ಮಂಗಳೂರು: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಟ್ಟೆ ವಿನಯ ಹೆಗ್ಡೆ ಅವರ ಜೀವನ ಶೈಲಿ ಎಲ್ಲರಿಗೂ ಆದರ್ಶ, ಅವರ ಕೊಡುಗೆ ಸಮಾಜಕ್ಕೆ ದೊಡ್ಡದು. ಅವರ ನೆನಪು ಶಾಶ್ವತ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿನಯ ಹೆಗ್ಡೆ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಶ್ರೀ‌ರಾಮಕೃಷ್ಣ ಕಾಲೇಜ್ ಬಳಿ ಇರುವ ಶ್ರೀಮತಿ ಗೀತಾ ಎಸ್ […]

DAKSHINA KANNADA HOME LATEST NEWS

“ಕಕ್ಕೆಪದವುಗು ಪೋಪಿನ ಸಾದಿ ಓವು” ಎಂದು ಕೇಳಿ ಬಂಟ್ವಾಳದಲ್ಲಿ ವೃದ್ಧೆಯ ಕರಿಮಣಿ ಕಳ್ಳತನ

ಬಂಟ್ವಾಳ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ದಾರಿಯ ನೆಪವೊಡ್ಡಿ ಚಿನ್ನದ ಕರಿಮಣಿ ಎಗರಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವಗ್ಗ ಜಂಕ್ಷನ್ ಬಳಿ ನಡೆದಿದೆ. ಘಟನೆ ವಿವರ 55 ವರ್ಷದ ಪದ್ಮಾವತಿ ಎಂಬುವವರು ಜ.8 ರಂದು ಮಂಗಳೂರಿಗೆ ಹೋಗಿ ವಾಪಾಸು ಬರುತ್ತಾ ವಗ್ಗ ಜಂಕ್ಷನ್ ನಲ್ಲಿ ಬಸ್ಸಿನಿಂದ ಇಳಿದು ತನ್ನ ಮನೆಯಾದ ಕಂಗಿತ್ತಿಲು ಕಡೆಗೆ ಸಂಜೆ 4 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅದೇ ರಸ್ತೆಯ ವಗ್ಗ ಕಡೆಯಿಂದ […]