Month: January 2026

HOME

ಕೋಟಿ ಚೆನ್ನಯ್ಯರ ಕಟಕಟೆ ತಲುಪಿದ ಕೋಳಿ ಅಂಕ ವಿವಾದ: ದೈವ ಕೊಟ್ಟ ಅಭಯವೇನು?

ಮಂಗಳೂರು, ಜ 04: ಕಾನೂನಿನ ನೆಪವೊಡ್ಡಿ ಪ್ರಸಿದ್ಧ ಕಂಕನಾಡಿ ಗರೋಡಿ ದೈವಸ್ಥಾನದ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಖಾಕಿ ತಡೆ ವಿಚಾರವೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದೆ. ಜೂಜು, ಪ್ರಾಣಿ ಹಿಂಸೆ ಕಾರಣ ನೀಡಿ ಕೋಳಿ ಅಂಕಕ್ಕೆ ಮಂಗಳೂರು ಪೊಲೀಸರು ಅನುಮತಿ ನಿರಾಕರಣೆ ಬೆನ್ನಲ್ಲೇ ಗರೋಡಿ ಆಡಳಿತ ಸಮಿತಿ ದೈವಗಳ ಮೊರೆ ಹೋಗಿದೆ. ಈ ವೇಳೆ ಅಭಯ ನೀಡಿರುವ ದೈವ, ‘ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ’ ಎಂದು ತಿಳಿಸಿದೆ. ವಿಟ್ಲ ಕೇಪು ಉಳ್ಳಾಲ್ತಿ ಬಳಿಕ […]

HOME STATE

ವಿಶೇಷಚೇತನ ಮಗನಿಗೇ ವಿಷ ಹಾಕಿದ ತಂದೆ;ಕಾರಣ ಕೇಳಿದರೆ ಶಾಕ್ ಆಗ್ತೀರಾ!

ಬೆಂಗಳೂರು, ಜ 04: ಹೆತ್ತ ಮಕ್ಕಳನ್ನು ಸಾಕಲು ತಂದೆ-ತಾಯಿ ಕಷ್ಟ ಪಟ್ಟು ದುಡಿಯುತ್ತಾರೆ. ತಮಗೆಷ್ಟೇ ತೊಂದರೆಗಳಿದ್ದರೂ ಮಕ್ಕಳ ಮುಖ ನೋಡಿಕೊಂಡು ನೋವು ನುಂಗಿಕೊಂಡಿರುತ್ತಾರೆ. ಆದರೆ ಇಲ್ಲೋರ್ವ ಪಾಪಿ ತಂದೆ, ಚಿಕಿತ್ಸೆಗೆ ಹಣವಿಲ್ಲದ ಕಾರಣ ಮಗನಿಗೇ ವಿಷ ಹಾಕಿರುವ ಅಮಾನವೀಯ ಘಟನೆ ಬೆಂಗಳೂರು ನಡೆದಿದೆ. ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅಲೆದು ಬೇಸತ್ತಿದ್ದ ತಂದೆ, ಈ ಕುಕೃತ್ಯವೆಸಗಿದ್ದು, ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ ಮಗುವಿನ ಸ್ಥಿತಿ ಗಂಭೀರ ಬಾಗಲೂರು ನಿವಾಸಿಗಳಾದ ಸತ್ಯ ಮತ್ತು ಮುನಿಕೃಷ್ಣ ದಂಪತಿಯ ಮಗ ಜೋಯಲ್ […]

DAKSHINA KANNADA HOME

*ಈ ನೆಲದ ಕಲೆ ಮತ್ರು ಸಂಸ್ಜೃತಿಯನ್ನು ಉಳಿಸುವ ಕೆಲಸ ಯಕ್ಷಗಾನ‌ ಮಾಡಿದೆ: ಕ್ಯಾಪ್ಟನ್ ಬ್ರಿಜೇಶ್ ಚೌಟ*

ಮಂಗಳೂರು: ಜ:4 ಈ ನೆಲದ ಅಸ್ಮಿತೆ ಸನಾತನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರು ಕರಾವಳಿಗರು. ಇಲ್ಲಿ ಕಲೆ ಮತ್ತು ಸಂಸ್ಕೃತಿ ದೊಡ್ಡ ಪಾತ್ರವನ್ನು ವಹಿಸಿಕೊಂಡಿದೆ. ಈ ನೆಲದ ಕಲೆ ಮತ್ತು ಸಂಸ್ಜೃತಿಯನ್ನು ಉಳಿಸುವ ಕೆಲಸ ಯಕ್ಷಗಾನ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು. ಅಡ್ಯಾರ್ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕಗಳ ಸಹಯೋಗದೊಂದಿಗೆ ನಡೆದ ಯಕ್ಷಧ್ರುವ-ಯಕ್ಷ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26 ವನ್ನು […]

DAKSHINA KANNADA HOME

*ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಕೃತಿ ಬಿಡುಗಡೆ. ಅನುಭವದ ರಚನೆಗಳು ಓದುಗರ ಗಮನ ಸೆಳೆಯುತ್ತವೆ- ಪ್ರದೀಪ್ ಕುಮಾರ್ ಕಲ್ಕೂರ*

ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು,ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ಕವಿತೆಗಳು ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ಜನವರಿ 3ರಂದು ಎಸ್ ಡಿ ಎಂ ಲಾ ಕಾಲೇಜ್ ಸಭಾಗೃಹದಲ್ಲಿ ಬಿಡುಗಡೆಗೊಂಡಿತು. ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ್ ಮಾತನಾಡುತ್ತಾ ಅನುಭವದ ಮೂಸೆಯಿಂದ ಮೂಡಿಬಂದಂತಹ ಕವಿತಾ […]

DAKSHINA KANNADA HOME LATEST NEWS

ಕಾರಿನ ಟೈಯರ್ ಬ್ಲಾಸ್ಟ್: ಅದೃಷ್ಟವಶಾತ್ ಪಾರಾದ ಬೋಂದೆಲ್ ಚರ್ಚ್ ಪಾದ್ರಿ

ಮಂಗಳೂರು: ಕಾರಿನ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಎಸೆಯಲ್ಪಟ್ಟ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಕಾವೂರು ಬಳಿಯ ಮರಕಡದಲ್ಲಿ ಜನವರಿ 1 ರಂದು ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಬೋಂದೆಲ್ ಚರ್ಚ್ ಪಾದ್ರಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಬೋಂದೆಲ್ ಸೈಂಟ್ ಲಾರೆನ್ಸ್ ಚರ್ಚ್ ನಲ್ಲಿ ಪಾದ್ರಿಯಾಗಿರುವ ಫಾದರ್ ಆಂಡ್ರ್ಯೂ ಲಿಯೋ ಡಿಸೋಜ ಅಪಾಯದಿಂದ ಪಾರಾದವರು.‌ ಜನವರಿ 1ರಂದು ಕಿನ್ನಿಗೋಳಿಯ ನೀರುಡೆಯಲ್ಲಿರುವ ತಮ್ಮ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ಮಧ್ಯಾಹ್ನ […]

DAKSHINA KANNADA HOME LATEST NEWS

ಯಾರೂ ಹಸಿವಿನಿಂದ ಮಲಗಬಾರದು, ಮಲಗಿದರೆ ಅದು ಉಳ್ಳವರಿಗೆ ಅವಮಾನ: ರೊನಾಲ್ಡ್ ಮಾರ್ಟಿಸ್

ಮಂಗಳೂರು: ನಾಡಿನಲ್ಲಿ ಯಾರೂ ಹಸಿವಿನಿಂದ ಮಲಗುವ ಪರಿಸ್ಥಿತಿ ಇರಬಾರದು. ಒಂದು ವೇಳೆ ಹಸಿವಿನಿಂದ ಬಳಲುತ್ತಿದ್ದರೆ, ಅದು ಉಳ್ಳವರಿಗೆ ಅವಮಾನ ಎಂದು ದುಬೈಯ ʼಬ್ಲೂ ರೋಯಲ್ ಗ್ರೂಪ್ ಆಫ್ ಕಂಪನೀಸ್‌ʼನ ಆಡಳಿತ ನಿರ್ದೇಶಕ ರೊನಾಲ್ಡ್ ಮಾರ್ಟಿಸ್ ಹೇಳಿದರು. ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ಸೆಂಟರ್ ಬಳಿ ಶನಿವಾರ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ರಾತ್ರಿಯ ಊಟ ನೀಡುವ ಕಾರುಣ್ಯ ಯೋಜನೆಗೆ ಒಂದು ತಿಂಗಳ ಪ್ರಾಯೋಕತ್ವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. […]

DAKSHINA KANNADA HOME LATEST NEWS

*ಬಿಹಾರದಲ್ಲಿ 50ಲಕ್ಷ ವೋಟು ಡಿಲಿಟ್ ಮಾಡಿದ್ದಾರೆ. ಎಸ್‌ಐಆರ್  ಬಳಿಕ ವೋಟು  ಖಾತ್ರಿಪಡಿಸಿ:ಶಾಸಕ ಅಶೋಕ್ ರೈ*

ಪುತ್ತೂರು: ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ, ಆದರೂ ಕೆಲವು ಕಡೆಗಳಲ್ಲಿ ಬಿಎಲ್‌ಒಗಳು ಮತದಾರ ಪಟ್ಟಿ ಮ್ಯಾಪಿಂಗ್ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮ್ಯಾಪಿಂಗ್ ಬಳಿಕ ನಿಮ್ಮ ನಿಮ್ಮ ವೋಟರ್ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಇದೆಯೇ ಎಂದು ಖಾತ್ರಿಪಡಿಸಿ ಇಲ್ಲದಿದ್ದರೆ ನೀವು ಮತದಾನದಿಂದ ವಂಚತರಾಗುವ ಸಾಧ್ಯತೆ ಇದೆ ಈಗಾಗಲೇ ಬಿಹಾರದಲ್ಲಿ ೫೦ ಲಕ್ಷ ವೋಟು ಡಿಲಿಟ್ ಮಾಡಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. […]

DAKSHINA KANNADA HOME LATEST NEWS

ದೇಶವ್ಯಾಪ್ತಿ ಕ್ರೈಸ್ತರ ಮೇಲೆ ನಡೆದ ದಾಳಿ ಖಂಡಿಸಿ ಮಂಗಳೂರಿನಲ್ಲಿ ಮೌನ ಪ್ರತಿಭಟನೆ

ಮಂಗಳೂರು: ಕ್ರಿಸ್‌ಮಸ್ ಹಬ್ಬದ ವೇಳೆ ದೇಶವ್ಯಾಪ್ತಿ ಕ್ರೈಸ್ತರ ಮೇಲೆ ನಡೆದ ದಾಳಿಗಳನ್ನು ಖಂಡಿಸಿ, ಸಂತ ಸೆಬಾಸ್ಟಿಯನ್ ಚರ್ಚ್, ಬೆಂದೂರು, ಮಂಗಳೂರು ವತಿಯಿಂದ ಜ.3ರಂದು ಸಂಜೆ 6 ಗಂಟೆಗೆ ಚರ್ಚಿನ ಮುಂಭಾಗದಲ್ಲಿ ಮೌನ ಪ್ರತಿಭಟನೆ ಆಯೋಜಿಸಲಾಯಿತು. ಈ ಮೌನ ಪ್ರತಿಭಟನೆಯಲ್ಲಿ ಚರ್ಚಿನ ಧರ್ಮಗುರುಗಳಾದ ವಂ. ವಾಲ್ಟರ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ವಂ. ವಿವೇಕ್ ಪಿಂಟೋ ಹಾಗೂ ವಂ. ಓಜ್ಮೊಂಡ್ ಡಿಸೋಜಾ, ವಂ. ಅರುಣ್ ಲೋಬೊ (ಪ್ರಾಂಶುಪಾಲರು), ಉಪಾಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ವಂ. ವಾಲ್ಟರ್ ಡಿಸೋಜಾ […]

DAKSHINA KANNADA HOME LATEST NEWS

ಗುಣಪಾಲ ಕಡಂಬರನ್ನು ತೇಜೋವಧೆಗೈದ ಲೋಕೇಶ್ ಶೆಟ್ಟಿ ಜಿಲ್ಲಾ ಕಂಬಳ ಸಮಿತಿಯಿಂದ ಉಚ್ಛಾಟನೆ: ನಿರ್ಣಯ

ಮೂಡುಬಿದಿರೆ: ‘ಕಂಬಳ ಕ್ಷೇತ್ರಕ್ಕೆ ಕೊಡುಗೆ ನೀಡಿದ ಗುಣಪಾಲ ಕಡಂಬ ಅವರನ್ನು ತೇಜೋವಧೆ ಮಾಡಿದ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ಅವರನ್ನು ಸಮಿತಿಯಿಂದ ಉಚ್ಚಾಟಿಸಬೇಕು’ ಎಂದು ಕಂಬಳ ಅಭಿಮಾನಿಗಳ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಕಂಬಳ ಕೋಣಗಳ ಯಜಮಾನ ಹರ್ಷವರ್ಧನ ಪಡಿವಾಳ್ ಅಧ್ಯಕ್ಷತೆ ವಹಿಸಿದ್ದರು. ‘ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಂಬಳ ಸೇರಿದಂತೆ ಜಿಲ್ಲೆಯ ಕೆಲವು ಕಂಬಳಗಳಲ್ಲಿ ಲೋಕೇಶ್ ಶೆಟ್ಟಿ ಅವರು ಗುಣಪಾಲ ಕಡಂಬ ಅವರನ್ನು ಟೀಕಿಸಿ ತೇಜೋವಧೆ ಮಾಡಿದ್ದಾರೆ. ಕಂಬಳದ ಹಿರಿಯ ವ್ಯಕ್ತಿ ಜತೆ […]

DAKSHINA KANNADA HOME

*ಮನಪಾ ವ್ಯಾಪ್ತಿಯಲ್ಲಿ ಶೀಘ್ರವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ : ಶಾಸಕ ಕಾಮತ್ *

ಮನಪಾ ವ್ಯಾಪ್ತಿಯಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಒಂದು ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಅಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ರವರು ಸೂಚನೆ ನೀಡಿದರು. ಪಾಲಿಕೆಯ ವಾರ್ಡ್ ಸಂಖ್ಯೆ 25, 26, 27, 41 ಹಾಗೂ 53 ರಲ್ಲಿ ಕುಡಿಯುವ ನೀರಿನ ಅಭಾವವುಂಟಾಗಿದ್ದು ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಕುಡಿಯುವ ನೀರಿನ ಸಮಸ್ಯೆ ಎದುರಾದ ತಕ್ಷಣ ಜನರ ಸಮಸ್ಯೆಗೆ ತುರ್ತಾಗಿ […]