Month: January 2026

DAKSHINA KANNADA HOME LATEST NEWS

ಡ್ಯೂಟಿಯಲ್ಲಿದ್ದ ಮಂಗಳೂರು ಟ್ರಾಫಿಕ್‌ ಪೊಲೀಸರ ಬೈಕ್‌ ಕಳ್ಳತನ: ಅರ್ಧ ಗಂಟೆಯ ಕೈಚಳಕ

ಮಂಗಳೂರು: ಕರ್ತವ್ಯದಲ್ಲಿದ್ದ ಟ್ರಾಫಿಕ್‌ ಪೊಲೀಸರೊಬ್ಬರು ಪಾರ್ಕ್‌ ಮಾಡಿದ ಅರ್ಧಗಂಟೆಯೊಳಗೆ ಬೈಕು ಕಳವು ನಡೆಸಿದ ಬಗ್ಗೆ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ ಪುನೀತ್‌ ಬಿ.ವೈ ಎಂಬುವವರು ಮಂಗಳೂರು ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಜ.5 ರಂದು ಮಂಗಳೂರು ಕೆ.ಬಿ.ಕಟ್ಟೆಯಲ್ಲಿ ಸಂಚಾರ ನಿಯಂತ್ರಣ  ಕರ್ತವ್ಯಕ್ಕೆ ನೇಮಿಸಿದಂತೆ ಸಂಜೆ 5:30 ಗಂಟೆಗೆ ತನ್ನ ತಂದೆಯ ಹೆಸರಿನಲ್ಲಿರುವ KA-13-EG 3008  ನೋಂದಣಿಯ ಹೋಂಡಾ ಶೈನ್‌ […]

DAKSHINA KANNADA HOME LATEST NEWS

ವಿಟ್ಲ: ಕ್ರಿಮಿನಲ್ ಹಿನ್ನೆಲೆಯುಳ್ಳ ಅಬ್ದುಲ್ ಖಾದರ್ ಮೂಡಿಗೆರೆಗೆ ಗಡಿಪಾರು

ವಿಟ್ಲ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಿಮಿನಲ್ ಹಿನ್ನೆಲೆಯುಳ್ಳ ಅಬ್ದುಲ್ ಖಾದರ್ ಯಾನೆ ಶೌಕತ್ ಎಂಬಾತನನ್ನು ಗಡಿಪಾರು ಮಾಡಲಾಗಿದೆ. ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮ ನಿವಾಸಿ ಅಬ್ದುಲ್ ಖಾದರ್ ವಿರುದ್ಧ ಹಲ್ಲೆ, ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ, ಏನ್ ಡಿ ಪಿ ಎಸ್ ಕಾಯ್ದೆಯಂತೆ 3 ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳ ದಾಖಲಾತಿ ಮೇಲೆ ಈತನನ್ನು ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿಯಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗಿಯ ದಂಡಾಧಿಕಾರಿ ಮಂಗಳೂರು ರವರು ದಕ್ಷಿಣ […]

DAKSHINA KANNADA HOME LATEST NEWS

ವಿಟ್ಲ: ಪೆರುವಾಯಿ ದನ ಕಳ್ಳನತದ ಆರೋಪಿ ಬಂಧನ- ಉಳಿದವರಿಗಾಗಿ ಶೋಧ

ವಿಟ್ಲ: ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ದನ ಕಳ್ಳತನ ಮಾಡಿದ ಆರೋಪದಲ್ಲಿ ಉಳ್ಳಾಲದ ಓರ್ವ ಆರೋಪಿಯನ್ನು ತಿಂಗಳ ಬಳಿಕ ವಿಟ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಝುಲ್ಫಾನ್ ಮಾಲಿಕ್ (30) ಬಂಧಿತ ಆರೋಪಿ. ಘಟನೆ ವಿವರ 18-11-2025 ರಂದು ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಲ್ಲಿ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಅವರ 4 ದನಗಳು ಮೇಯುತ್ತಿದ್ದವು. ರಾತ್ರಿ ವೇಳೆ ಅಲ್ಲಿಯೇ ಮಲಗಿದ್ದ […]

COMMUNITY NEWS

*ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನಾಚರಣೆ*

ಮಂಗಳೂರು. ಜನವರಿ. 07: ಬಾಲ ಯೇಸುವಿನ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೋವೆನಾದ ಮೂರನೇ ದಿನದಂದು, ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ದಿನವನ್ನು ಭಕ್ತಿ ಮತ್ತು ಆಧ್ಯಾತ್ಮಿಕ ಉತ್ಸಾಹದೊಂದಿಗೆ ಆಚರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಪ್ರಾರ್ಥನೆ ಮತ್ತು ಚಿಂತನೆಯಲ್ಲಿ ಪಾಲ್ಗೊಂಡಿದ್ದರು. “ನಿನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಅನುಸರಿಸು” ಎಂಬುದು ಈ ದಿನದ ಶೀರ್ಷಿಕೆಯಾಗಿದ್ದು, ಭಕ್ತಾದಿಗಳು ಕ್ರಿಸ್ತನನ್ನು ಅನುಸರಿಸುವಲ್ಲಿ ಎದುರಾಗುವ ಸವಾಲುಗಳು ಮತ್ತು ಅಡೆತಡೆಗಳನ್ನು ನಂಬಿಕೆ ಹಾಗೂ ತಾಳ್ಮೆಯಿಂದ ಸ್ವೀಕರಿಸುವ […]

DAKSHINA KANNADA HOME

*ಜ 11 ರಂದು ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಮಾನೋತ್ಸವ ಮಂಗಳೋತ್ಸವ*

ಮಂಗಳೂರು. ಜನವರಿ 08 : ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಮಂಗಳೋತ್ಸವ ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ ಹರಿದ್ವಾರದಲ್ಲಿ ವೃಂದಾವನಸ್ಥರಾಗಿರುವ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಕಾಶೀಮಠದ 20ನೇ ಪೀಠಾಧೀಪತಿಗಳಾಗಿ ನಿರಂತರ 70 ವರ್ಷಗಳ ಕಾಲ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದೊಂದಿಗೆ ಎಲ್ಲಾ ಸಮುದಾಯದ ಏಳಿಗೆಗಾಗಿ […]

HOME LATEST NEWS STATE

*ಮಲಯಾಳಂ ಕಡ್ಡಾಯ ಮಸೂದೆ ೨೦೨೫ ನ್ನು ಮರು ಪರಿಶೀಲಿಸುವುದಾಗಿ ಕರ್ನಾಟಕ ಗಡಿ ಪ್ರಾಧಿಕಾರಕ್ಕೆ ಕೇರಳ ರಾಜ್ಯಪಾಲರ ಆಶ್ವಾಸನೆ.*

ಕಾಸರಗೋಡು. ಜ:07: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು ಕರ್ನಾಟಕ ಸರ್ಕಾರದ ಪ್ರಾಧಿಕಾರವಾಗಿದ್ದು, ರಾಜ್ಯದ ಹೊರಗಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರದ ಹಿತಾಸಕ್ತಿಯಿಂದ, ಗಮನಿಸುವುದಾದರೆ ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ “ಮಲಯಾಳಂ ಭಾಷಾ ಬಿಲ್-2025” ಎಂಬ ಬಿಲ್ಲನ್ನು ಅಂಗೀಕರಿಸಿದೆ. ಈಗಾಗಲೇ ಇಂತಹ ಬಿಲ್ಲನ್ನು 2017 ರಲ್ಲಿ ಭಾರತದ ಮಾನ್ಯ ರಾಜ್ಯಪತಿಗಳು ಈಗಾಗಲೇ ತಿರಸ್ಕರಿಸಿದ್ದಾರೆ.ಕೇರಳ ಸರ್ಕಾರದಿಂದ ಪ್ರಸ್ತಾಪಿತ ಬಿಲ್ಲು ಸಂಪೂರ್ಣ ಅಸಂವಿಧಾನಿಕವಾಗಿದೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹಳ ಹೆಚ್ಚು ಸಂಖ್ಯೆಯಲ್ಲಿ […]

COMMUNITY NEWS DAKSHINA KANNADA HOME

*ಯೇಸು ಕ್ರಿಸ್ತರು ತ್ಯಾಗದಿಂದ ಇಂದು ಪವಿತ್ರಸಭೆ ಜೀವಂತವಾಗಿದೆ. ಬರೇಲಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ। ವಂ। ಇನ್ನೇಶಿಯಸ್ ಡಿ’ಸೋಜಾ*

ಮಂಗಳೂರು ಜ. 5: ದೇವರು ಮನುಕುಲವನ್ನು ಅತೀವವಾಗಿ ಪ್ರೀತಿಸುತ್ತಾರೆ. ದೇವರು ಹಾಗೂ ಮನುಜನ ನಡುವಿನ ಸಂಬಂಧ ಪವಿತ್ರವಾಗಿದೆ. ದೇವರು ಆರಂಭದಿಂದಲೂ ಮನುಕುಲದಲ್ಲಿ ತಮ್ಮ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಅವರ ಪುತ್ರ ಯೇಸು ಕ್ರಿಸ್ತರನ್ನು ಜಗತ್ತಿಗೆ ಸಮರ್ಪಿಸಿದರು. ಅವರ ಮೂಲಕ ನಮ್ಮನ್ನು ದೇವರೆಡೆಗೆ ಕೊಂಡೊಯ್ಯಲು ಮಾರ್ಗವನ್ನು ಸಿದ್ದಗೊಳಿಸಿದ್ದಾರೆ ಎಂದು ಬರೇಲಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ। ವಂ। ಇನ್ನೇಶಿಯಸ್ ಡಿ’ಸೋಜಾ ಹೇಳಿದರು. ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಸೋಮವಾರ ಆರಂಭಗೊಂಡ ಮೊದಲ ದಿನದ ನೊವೆನಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿ […]

DAKSHINA KANNADA HOME

ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ದೇಗುಲದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಮಂಗಳೂರು,ಜನವರಿ 7: ಇನ್ಫೆಂಟ್ ಜೀಸಸ್‌ನ ವಾರ್ಷಿಕ ಹಬ್ಬದ ಆಚರಣೆಯ ಅಂಗವಾಗಿ, ಜನವರಿ 7 ಬುಧವಾರದಂದು ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ದೇಗುಲದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ನೇತ್ರಶಾಸ್ತ್ರಜ್ಞರಾದ ಡಾ. ಕ್ರಿಸ್ಮಾ, ಡಾ. ವಿಜಿತಾ ಮತ್ತು ಡಾ. ಮಹೇಶ್ ಸೇರಿದಂತೆ ಮಂಗಳೂರಿನ ಡಾ. ಅಗರ್ವಾಲ್ ಐ ಕ್ಲಿನಿಕ್‌ನ ವೈದ್ಯರ ತಂಡವು ತಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ಸಮಗ್ರ ನೇತ್ರ ತಪಾಸಣೆ ನಡೆಸಿ ಫಲಾನುಭವಿಗಳಿಗೆ ಸೂಕ್ತ […]

HOME STATE

*ಪ್ರಿಯಕರನ ಕರ್ಮಕಾಂಡ ಕಂಡು ಶಾಕ್: ಪೊಲೀಸ್ ಠಾಣೆಯಲ್ಲೇ ತಾಳಿ ಕಿತ್ತೆಸೆದ ಯುವತಿ*

ಚಿಕ್ಕಬಳ್ಳಾಪುರ.ಜನವರಿ 06: ಪೊಲೀಸ್ ಠಾಣೆಯಲ್ಲಿ ಪ್ರಿಯಕರನ ಬಂಡವಾಳ ಬಯಲಾಗುತ್ತಿದ್ದಂತೆ ಆತ ಕಟ್ಟಿದ್ದ ತಾಳಿಯನ್ನೇ ಕಿತ್ತೆಸೆದು ಯುವತಿಯೋರ್ವಳು ಪೋಷಕರ ಜೊತೆಗೆ ಮರಳಿ ತೆರಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಕಾರು ಅಡ್ಡಗಟಿದ್ದ ಪೋಷಕರು ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಪ್ರೇಮಿಯ ನವರಂಗಿ ಆಟಗಳೆಲ್ಲ ಆರಕ್ಷಕರ ಮುಂದೆಯೇ ಬಯಲಾಗಿದ್ದು, ಪ್ರಿಯಕರನ ನಡೆ ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ. ಇವನ ಸಹವಾಸವೇ ಸಾಕು ಎಂದು ಕೈಮುಗಿದಿದ್ದಾಳೆ. ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ, ಪೇಂಟ್ ಕೆಲಸಗಾರ ಸಂದೀಪ್ […]

HOME STATE

*ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಸಮಾಜದಲ್ಲಿ ಅಸಮಾನತೆ ನೀಗಿಸುವವರೆಗೂ ಹೋರಾಟ, ಜನರ ಕೆಲಸ ಮಾಡುತ್ತೇನೆ*: ಮುಖ್ಯಮಂತ್ರಿ ಸಿದ್ದರಾಮಯ್ಯ.

ಮೈಸೂರು : ಜನವರಿ – 06: ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದ್ದು, ಅಸಮಾನತೆ ಹೋಗುವವರೆಗೂ, ಎಲ್ಲರಿಗೂ ನ್ಯಾಯ ಸಿಗುವವರೆಗೂ ಹೋರಾಟ ಹಾಗೂ ಜನರ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಆಗಿದೆ. ದೇವರಾಜ ಅರಸು ಅವರು ಎಷ್ಟು […]