Month: January 2026

DAKSHINA KANNADA HOME

*ಕೋಳಿ ಅಂಕ ವಿಚಾರದಲ್ಲಿ ಬಿಜೆಪಿ ರಾಜಕೀಯ: ಹರೀಶ್ ಕುಮಾರ್*

ಮಂಗಳೂರು: ತುಳುನಾಡಿನಲ್ಲಿ ದೈವ-ದೇವಸಸ್ಥಾನ ಜಾತ್ರೋತ್ಸವ ಸಂದರ್ಭ ನಡೆಯುತ್ತಿರುವ ಕೋಳಿ ಅಂಕ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ. ಈ ನೆಲದ ಬಗ್ಗೆ ನಿಜವಾಗಿಯೂ ಬಿಜೆಪಿ ನಾಯಕರಿಗೆ ಆಸಕ್ತಿ, ಕಾಳಜಿ ಇದ್ದಿದ್ದರೆ ಅಧಿವೇಶನ ಸಂದರ್ಭ ಯಾಕೆ ಚರ್ಚೆ ಮಾಡದೆ ಮೌನವಾಗಿದ್ದರು? ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಬಹುದಿತ್ತಲ್ವೇ? ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ. ತುಳುನಾಡಿನ ದೈವರಾಧನೆ, ಈ ನೆಲದ ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕ […]

DAKSHINA KANNADA

*ಅಮೃತ ಪ್ರಕಾಶ 116ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ*

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಹಾಗೂ ಬಲ್ಮಠ ಕಾಲೇಜ್ ಸಹಯೋಗದಲ್ಲಿ 116ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜ್ ಬಲ್ಮಠ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವನಿತಾ ದೇವಾಡಿಗ ವಹಿಸಿದರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳ ಶೆಟ್ಟಿ ಉಪಸ್ಥಿತರಿದ್ದರು […]

DAKSHINA KANNADA HOME

ಬೆಂಗಳೂರು ಕುಲಾಲ ಸಂಘದ ೪೦ ವರ್ಷಗಳ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ

ಪುತ್ತೂರು; ಕಳೆದ ೪೦ ವರ್ಷಗಳಿಂದ ತಮ್ಮ ಸಂಘಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳಬೇಕು ಎಂದು ದೃಡ ಸಂಕಲ್ಪ ಮಾಡಿದ್ದ ಬೆಂಗಳೂರಿನ ಕುಲಾಲ್ ಸಂಘದ ಸಂಕಲ್ಪ ಕೊನೆಗೂ ನೆರವೇರಿದೆ, ಪುತ್ತೂರು ಶಾಸಕ ಅಶೋಕ್ ರೈ ಮೂಲಕ ಬೆಂಗಳೂರು ಕುಲಾಲ ಸಂಘದವರು ಬಿಎಡಿಎ ಲೇಔಟ್‌ನಲ್ಲಿ ಜಾಗ ಮಂಜೂರಾತಿಯನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಕುಲಾಲ ಸಂಘದ ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ ಚೆಂಡ್ಲ ರವರು ನಮ್ಮ ಸಂಘಕ್ಕೆ ೫೩ ನೇ ವರ್ಷದ ಸಂಭ್ರಮದಲ್ಲಿದೆ ಈ ವೇಳೆ ನಮಗೆ ಪುತ್ತೂರು ಶಾಸಕ […]

COMMUNITY NEWS HOME

ವಲ್ಲಿ ವಗ್ಗ ಅವರಿಗೆ ಕವಿತಾ ಟ್ರಸ್ಟ್‌ನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ

ಮಂಗಳೂರು:  ಕವಿತಾ ಟ್ರಸ್ಟ್ ನೀಡುವ 2025ನೇ ಸಾಲಿನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ, ವಲ್ಲಿ ವಗ್ಗ ಎಂಬ ಕಾವ್ಯನಾಮದಲ್ಲಿ ಬರೆಯುವ ವಲೇರಿಯನ್ ಡಿ’ಸೋಜಾ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯ ಮೌಲ್ಯ ರೂ. 25,000, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಜನವರಿ 11, 2026 ರಂದು ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ನಲ್ಲಿರುವ ಮದರ್ ತೆರೇಸಾ ಪೀಸ್ ಪಾರ್ಕ್‌ನಲ್ಲಿ ನಡೆಯುವ 20 ನೇ ಕವಿತಾ ಫೆಸ್ತ್ ಉತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕೊಂಕಣಿ ಬರಹಗಾರ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ […]

DAKSHINA KANNADA HOME

ತಣ್ಣೀರುಬಾವಿ ಬೀಚ್‌ನಲ್ಲಿ ಇಂದು-ನಾಳೆ ಮ್ಯೂಸಿಕ್ ಫೆಸ್ಟಿವಲ್: ಪೊಲೀಸರಿಂದ ಸಂಚಾರಿ ಸಲಹೆ

 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬೀಚ್‌ನಲ್ಲಿ  ಜ.3 ಹಾಗೂ 4 ರಂದು ಸಂಜೆ ಮ್ಯೂಸಿಕ್ ಫೆಸ್ಟಿವಲ್, ಕೈಲಾಶ್ ಖೇರ್ ನೈಟ್, ವಿಜಯ ಪ್ರಕಾಶ್ ನೈಟ್ ಕಾರ್ಯಕ್ರಮಗಳು ನಡೆಯಲಿರುತ್ತದೆ. ಸದರಿ ಕಾರ್ಯಕ್ರಮಗಳಿಗೆ  ಗಣ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವವರಿದ್ದು, ಈ ಸಮಯ ಕೊಟ್ಟಾರಚೌಕಿ – ಪಣಂಬೂರು ರಾಷ್ಟ್ರೀಯ ಹೆದ್ದಾರಿ ಮತ್ತು ತಣ್ಣೀರುಬಾವಿ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಮೇಲಿನ ಕಾರ್ಯಕ್ರಮಗಳು ನಡೆಯುವ […]

COMMUNITY NEWS DAKSHINA KANNADA HOME

ಮೊಗರ್ನಾಡು ದೇವ ಮಾತಾ ದೇವಾಲಯದ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆ

ವಿಟ್ಲ: ಬಂಟ್ವಾಳ ತಾಲೂಕಿನ ಅಮ್ಟೂರು ಕರಿಂಗಾಣ ದೇವ ಮಾತಾ ದೇವಾಲಯ ಮೊಗರ್ನಾಡು ಇದರ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ ಸಮಾರೋಪ ಸಮಾರಂಭ ನಡೆಯಿತು.‌ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ ಅಂಗವಾಗಿ ‘ತ್ರಿದುಮ್’ ಸಂಭ್ರಮಾಚರಣೆಯನ್ನು ವಿಜ್ರಂಭಣೆಯನ್ನು ಆಚರಿಸಲಾಯಿತು. ಡಿಸೆಂಬರ್ 29ರಂದು ಜ್ಯುಬಿಲಿ ವರ್ಷಾಚರಣೆಯ ಕಾರ್ಯಕ್ರಮಗಳಿಗೆ ದಾನವನ್ನು ನೀಡಿದ ದಾನಿಗಳಿಗೆ ಮತ್ತು ದೇವಾಲಯದ ಭಕ್ತಾಭಿಮಾನಿಗಳಿಗೆ ವಿಶೇಷ ಬಲಿ ಪೂಜೆಯನ್ನು ಏರ್ಪಡಿಸಲಾಗಿತ್ತು. ನಂತೂರು ಮಂಗಳ ಜ್ಯೋತಿಯ ನಿರ್ದೇಶಕರರಾದ ವಂದನೀಯ ಫಾದರ್ ರೋಹಿತ್ ಡಿಕೊಸ್ತ ದಿವ್ಯ ಬಲಿಪೂಜೆಯನ್ನು ನೇರವೇರಿಸಿದರು. ಡಿಸೆಂಬರ್ 30ರಂದು ಪೂರ್ವಜರ […]

DAKSHINA KANNADA HOME LATEST NEWS

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಸಲಹಾ ಸಮಿತಿಗಳನ್ನು ರಚಿಸಲು ಆದೇಶ

ಮಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಧೀನದಲ್ಲಿ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸಲಹಾ ಸಮಿತಿಗಳನ್ನು ರಚಿಸಲು ಸರಕಾರ ಗುರುವಾರ ಮಂಜೂರಾತಿ ನೀಡಿ ಆದೇಶ ನೀಡಿದೆ. ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಎಜಾಸ್ ಪಾಷಾ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ರಾಜ್ಯಾ ದ್ಯಂತ ಕ್ರಿಶ್ಚಿಯನ್ ಸಮದಾಯ ಅಭಿವೃದ್ಧಿಯ ಆನೇಕ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಚಟುವಟಿಕೆ ಗಳನ್ನು ಜಾರಿಗೆ ತರಲಾಗುತ್ತದೆ. […]

DAKSHINA KANNADA HOME LATEST NEWS STATE

ಆದಾಯದಲ್ಲಿ ಕರಾವಳಿ ದೇಗುಲಗಳೇ ಮೇಲುಗೈ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 155.95 ಕೋಟಿ ರೂ.

ಮಂಗಳೂರು: ರಾಜ್ಯ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕರಾವಳಿಯ ದೇವಾಲಯಗಳೇ ಅಗ್ರಸ್ಥಾನಗಳಲ್ಲಿವೆ. ಅದರಲ್ಲೂ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ 155.95 ಕೋಟಿ ರೂ. ಆದಾಯ ಮೂಲಕ ಮೊದಲನೇ ಸ್ಥಾನದಲ್ಲಿದೆ. ಜೊತೆಗೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ದೇವಾಲಯಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಶೇ.10ರಿಂದ 15 ಏರಿಕೆ ಕಂಡಿದೆ. ವರ್ಷಾಂತ್ಯ ಆಗಮಿಸುತ್ತಿದ್ದಂತೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಮಂದಾರ್ತಿ, ಕಟೀಲು, ಕದ್ರಿ, ಮಂಗಳಾದೇವಿ, ಕಮಲಶಿಲೆ ದೇವಸ್ಥಾನಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಜೊತೆ […]

HOME LATEST NEWS STATE

ನಿಶ್ಛಿತಾರ್ಥವಾಗಿದ್ದಾತೆಗೆ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್‌ ಮಾಡಿದವನ ಬರ್ಬರ ಹತ್ಯೆ

ಚಿಕ್ಕಮಗಳೂರು: ಬೇರೊಬ್ಬನೊಂದಿಗೆ ನಿಶ್ಛಿತಾರ್ಥವಾಗಿದ್ದ ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ನಿರಂತರವಾಗಿ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿದ್ದ ಯುವಕನನ್ನು ಯುವತಿಯ ಭಾವಿ ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ. ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಯಾಗಿದ್ದು, ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇಪದೇ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಗೆ ಈಗಾಗಲೇ ವೇಣು ಎಂಬ […]

DAKSHINA KANNADA HOME LATEST NEWS STATE

ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ ನಿಧನ

ಮಂಗಳೂರು: ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ (86) ಇಂದು(ಜ.1) ಬೆಳಗ್ಗೆ ನಿಧನರಾಗಿದ್ದಾರೆ. ಶಿಕ್ಷಣ ತಜ್ಞ, ಉದ್ಯಮಿ, ಸಮಾಜ ಸೇವಕರಾಗಿದ್ದ ವಿನಯ ಹೆಗ್ಡೆ ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರರಾಗಿದ್ದ ವಿನಯ‌ ಹೆಗ್ಡೆ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದವರು. […]