Month: February 2026

LATEST NEWS

ಸೇಂಟ್ ಅಲೋಶಿಯಸ್ ಎಐಎಂಐಟಿ ಕ್ಯಾಂಪಸ್‌ನಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (EDP) – 2026

ಮಂಗಳೂರು: ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸ್ಕೂಲ್ ಆಫ್ ಬಿಸಿನೆಸ್ ಆಂಡ್ ಮ್ಯಾನೇಜ್‌ಮೆಂಟ್‌ನ ಎಂಬಿಎ ವಿಭಾಗವು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (EDP) – 2026 ಅನ್ನು ಫೆಬ್ರವರಿ 10 ರಂದು ಕೊಟೇಕಾರಿನ ಎಐಎಂಐಟಿ (AIMIT) ಕ್ಯಾಂಪಸ್‌ನ ಆರ್ಥರ್ ಶೆನಾಯ್ ಸ್ಮಾರಕ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಬೆಳಿಗ್ಗೆ 9:00 ರಿಂದ ಸಂಜೆ 4:15 ರವರೆಗೆ ನಡೆದ ಈ ದಿನಪೂರ್ತಿ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮ ಮುಖಂಡರು, ಅಧ್ಯಾಪಕರು ಹಾಗೂ ಉದ್ಯಮಿಯಾಗಬಯಸುವ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು. […]

DAKSHINA KANNADA HOME LATEST NEWS

ವಿಟ್ಲ: ಐಟಿಐ ವಿದ್ಯಾರ್ಥಿಗಳ ನಡುವೆ ಹೊಡೆದಾಟ: ಇಬ್ಬರಿಗೆ ಗಾಯ

ವಿಟ್ಲ: ಇಬ್ಬರು ಐಟಿಐ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಚೂರಿ ಇರಿತಗೊಂಡ ಘಟನೆ ವಿಟ್ಲದ ಐಟಿಐ ತರಗತಿ ಒಳಗಡೆ ಸಂಭವಿಸಿದೆ. ಚೂರಿ ಇರಿತದಿಂದ ಇಬ್ಬರು ಅಪ್ರಾಪ್ತರು ಗಾಯೊಂಡಿದ್ದಾರೆ, ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಥಮ ವರ್ಷದ ಎಲೆಕ್ಟಿಷಿಯನ್ ಐಟಿಐ ಕಲಿಯುತ್ತಿರುವ ಅಪ್ರಾಪ್ತ ಮತ್ತು ವಿಟ್ಲ ನಿವಾಸಿ ಹೇಮಂತ್ ಎಂಬವರ ನಡುವೆ ಜಗಳ ಉಂಟಾಗಿತ್ತು. ಬಳಿಕ ಹೇಮಂತ್ ಚೂರಿ ತಂದಿದ್ದು, ಅದರಿಂದ ಅಪ್ರಾಪ್ತನಿಗೆ ಇರಿದಿದ್ದಾನೆ. ಅದನ್ನು ತಡೆಯಲು ಬಂದ ಮತ್ತೋರ್ವ ವಿದ್ಯಾರ್ಥಿಗೂ ಗಾಯವಾಗಿದೆ. […]

DAKSHINA KANNADA

*ಕುದ್ರೋಳಿ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ*

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಧ್ವಜಾರೋಹಣ ನೆರವೇರುವ ಮೂಲಕ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಬೆಳಗ್ಗೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ಧ್ವಜಪೂಜೆ ಬಳಿಕ ಧ್ವಜಾರೋಹಣ ನೆರವೇರಿತು. ಬಳಿಕ ತೈಲಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ ನೆರವೇರಿತು. ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕಾರ್ಯದರ್ಶಿ ಮಾಧವ ಸುವರ್ಣ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿಗಳಾದ ಎಚ್.ಎಸ್.ಸಾಯಿರಾಂ, ಕೃತೀನ್ ಅಮೀನ್, […]

DAKSHINA KANNADA HOME LATEST NEWS

9 ಯುವತಿಯರಿಗೆ ವಂಚನೆ: ಇಬ್ಬರ ಜೊತೆ ಮದುವೆಯಾದ ‘ಮ್ಯಾಟ್ರಿಮೋನಿ’ ಮಾವ-ಅಳಿಯನ ಬಂಧನ

ಮಂಗಳೂರು: ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ (Matrimony) ವರ ಹುಡುಕುತ್ತಿದ್ದ ಯುವತಿಯರನ್ನು ಗುರಿಯಾಗಿಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನ ವಂಚನೆಗೆ ಸಾಥ್ ನೀಡಿದ್ದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಸುಶಾಂತ್ ತನ್ನ ಅಳಿಯ ಎಂದು ಹೇಳಿ ಸಂತ್ರಸ್ತೆಯ ಕುಟುಂಬದವರಿಗೆ ನಂಬಿಕೆ ಮೂಡಿಸಲು ಭಾಸ್ಕರ್ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದಾನೆ […]

DAKSHINA KANNADA HOME LATEST NEWS

ಮಂಗಳೂರು-ಮೂಡಬಿದ್ರೆ ಹೆದ್ದಾರಿ ದುರಸ್ತಿ: 30 ದಿನ ಬದಲಿ ರಸ್ತೆ ಉಪಯೋಗಿಸಲು ಸಲಹೆ

ಮಂಗಳೂರು: ತಾಲೂಕಿನ ಬಜ್ಪೆ ಎಡಪದವಿನ ಮಚ್ಚೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಇದೀಗ ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಹಾಗೂ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ವಾಹನಗಳ ಓಡಾಟಕ್ಕೆ ಇದ್ದ ಹಳೆ ರಸ್ತೆಯು ಘನ ವಾಹನಗಳ ಓಡಾಟದಿಂದಾಗಿ ಬಿರುಕು ಬಿಟ್ಟು ಅಲ್ಲಲ್ಲಿ ಕುಸಿಯಲು ಪ್ರಾರಂಭಿಸಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಫೆ. 12ರಿಂದ ಮಾ.13ರವರೆಗೆ 30 ದಿನಗಳ ಕಾಲ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ರಸ್ತೆ ದುರಸ್ತಿ ಕಾಮಗಾರಿ ನಡೆಯುವ ಸಮಯ ಸಾರ್ವಜನಿಕ ಹಿತದೃಷ್ಠಿಯಿಂದ […]

DAKSHINA KANNADA HOME STATE

*ಪೀಠಾಸೀನಾಧಿಕಾರಿಗಳ ಅಧಿಕಾರ ಪರಿಶೀಲನೆ ಸಮಿತಿ: ಯು.ಟಿ.ಖಾದರ್ ನೇಮಕ*

ಮಂಗಳೂರು, ಫೆ.10 :ಸಂವಿಧಾನದ 10ನೇ ಅನುಸೂಚಿ ಹಾಗೂ ಅದಕ್ಕೆ ಅನುಸಾರವಾಗಿ ರಚಿಸಲಾದ ನಿಯಮಾವಳಿಗಳಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರಗಳನ್ನು ಪರಿಶೀಲಿಸುವ ಉದ್ದೇಶದಿಂದ ಲೋಕ ಸಭಾಧ್ಯಕ್ಷ ಓಂ ಬಿರ್ಲಾರವರು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಫರೀದ್ ಅವರನ್ನು ಸಮಿತಿ ಸದಸ್ಯರಾಗಿ ನೇಮಿಸುವ ಮೂಲಕ ಪೀಠಾಸೀನಾಧಿಕಾರಿಗಳ ಸಮಿತಿಯನ್ನು ರಚಿಸಿರುತ್ತಾರೆ. ಸಮಿತಿಯ ಸಭೆಯು ಮಹಾರಾಷ್ಟ್ರ ವಿಧಾನಸಭೆ ಮುಂಬೈಯಲ್ಲಿ ನಡೆಯಿತು. ಈ ಸಮಿತಿಯಲ್ಲಿ ಮಹಾರಾಷ್ಟ್ರ ವಿಧಾನಸಭೆ ಸಭಾಧ್ಯಕ್ಷ ರಾಹುಲ್ ನಾರ್ವೇಕರ್ (ಅಧ್ಯಕ್ಷರು),ಒಡಿಶಾ ವಿಧಾನ ಸಭೆ ಸಭಾಧ್ಯಕ್ಷೆ ಸುರಮ ಪಾದಿ (ಸದಸ್ಯರು), ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್ […]

DAKSHINA KANNADA HOME LATEST NEWS STATE

ಬೆಳ್ತಂಗಡಿ: ವಿದ್ಯಾರ್ಥಿನಿ ಕಿಡ್ನ್ಯಾಪ್​​ ಕೇಸ್​​ಗೆ ಬಿಗ್​​ ಟ್ವಿಸ್ಟ್- ಹೆತ್ತವರ ಮೇಲೆಯೇ ಕೇಸ್‌….!

ಬೆಳ್ತಂಗಡಿ: ಫೆ.9 ರಂದು ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಅಪ್ರಾಪ್ತೆಯ ಕಿಡ್ನಾಪ್‌ ಪ್ರಕರಣವೊಂದು ಒಂದೇ ದಿನದಲ್ಲಿ ಟ್ವಿಸ್ಟ್‌ ನೀಡಿದ್ದು, ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ. ಜೊತೆಗೆ ಅಪ್ರಾಪ್ತೆಗೆ ವಾಹನ ಚಲಾಯಿಸಲು ಕೊಟ್ಟಿದ್ದಕ್ಕೆ ಹೆತ್ತವರ ಮೇಲೆಯೇ ಕೇಸ್‌ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಫೆ.9 ರಂದು ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಸ್ಕೂಟರ್ ನಲ್ಲಿ ಪ್ರಯಾಣ ಮಾಡುವಾಗ ಮೂವರು ಮುಸುಕುಧಾರಿಗಳು ಓಮಿನಿ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಲು ಯತ್ನಿಸಿ ವಿಫಲವಾದಾಗ ಆಕೆಯ ಕೈಗೆ  ಚೂರಿ ಇರಿದು ಪರಾರಿಯಾಗಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ಘಟನೆಯಲ್ಲಿ ಗಾಯಗೊಂಡಿದ್ದರಿಂದ […]

COMMUNITY NEWS DAKSHINA KANNADA

ಪೆರುವಾಯಿ ಚರ್ಚ್‌ನ ಸಂತ ಅಂತೋನಿ ವಾಳೆಯ ‘ವಾಡ್ಯಾ ಫೆಸ್ತ್’ ಆಚರಣೆ

ವಿಟ್ಲ: ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಸಂತ ಅಂತೋನ್ ವಾಳೆಯ ಹಬ್ಬವು ವಿಜೃಂಭಣೆಯಿಂದ ನಡೆಯಿತು. ವಾಳೆಯ ಪ್ರೇರಕ ಸಂತ ಅಂತೋನಿಗೆ ಹೂ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೆರುವಾಯಿ ಫಾತಿಮಾ ಮಾತೆಯ ಧರ್ಮಗುರು ವಂ. ಸೈಮನ್ ಡಿಸೋಜ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ವಾಳೆ ಹಬ್ಬ ಎನ್ನುವುದು ಸಂಬಂಧಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಕುಟುಂಬ ಹಾಗೂ ವ್ಯಕ್ತಿ ವ್ಯಕ್ತಿಗಳ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ. ಸಂತ ಅಂತೋನಿ ವಾಳೆಯಲ್ಲಿ ವಿವಿಧ […]

DAKSHINA KANNADA HOME LATEST NEWS

ಹಿಂದೂ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು: ವಿಚಾರಣೆಗೆ ಹಾಜರಾಗುವಂತೆ ಆದೇಶ

ಪುತ್ತೂರು: ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಅವರ ವಿರುದ್ಧ ಗಡಿಪಾರು ಆದೇಶ ಹೊರಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಪುತ್ತೂರು ತಾಲೂಕು ಒಳಮೊಗ್ರು ಗ್ರಾಮ ಹೊಸಮನೆ ನಿವಾಸಿ ಅಜಿತ್ ರೈ ವಿರುದ್ಧ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಪೊಲೀಸ್‌ ಕಾಯ್ದೆ 1963ರ ಕಲಂ 55ರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆದೇಶ ಹೊರಡಿಸುವ ಕುರಿತು ಸಲ್ಲಿಸಿರುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ವಿಚಾರಣೆ ಸಹಾಯಕ ಆಯುಕ್ತರ ನ್ಯಾಯಾಲಯದ ಸಭಾಂಗಣದಲ್ಲಿ ಫೆಬ್ರವರಿ […]

HOME LATEST NEWS STATE

ವೃದ್ಧ ತಂದೆಯನ್ನು ನೋಡಿಕೊಳ್ಳದ ಮಕ್ಕಳು: ಆಸ್ತಿ ಮತ್ತೆ ತಂದೆಗೆ ವರ್ಗಾಯಿಸಿದ ಹೈಕೋರ್ಟ್‌

ಬೆಂಗಳೂರು: ಆಸ್ತಿ ಭಾಗವಾದ ಮೇಲೆ ವೃದ್ಧ ತಂದೆಯೋರ್ವರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ಹೆಸರಿಗೆ ವರ್ಗಾವಣೆಯಾದ ಗಿಫ್ಟ್‌ ಡೀಡ್‌ ಅನ್ನು ಮತ್ತೆ ತಂದೆಯ ಹೆಸರಿಗೆ ವರ್ಗಾವಣೆ ಮಾಡಿ ಹೈಕೋರ್ಟ್‌ ಆದೇಶ ನೀಡಿದೆ. ತುಮಕೂರಿನ ಹೆಬ್ಬೂರು ಹೋಬಳಿಯ ದೊಡ್ಡ ಗೊಲ್ಲಹಳ್ಳಿಯ ವೆಂಕಟಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. 2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಮತ್ತು ಕಲ್ಯಾಣ ಕಾಯಿದೆ ಅನ್ವಯ ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ […]