Month: February 2026

DAKSHINA KANNADA HOME

*ಮಂಗಳೂರಿನ ಶಿಖಾ ಸುಶೀಲ್ ಮುಡಿಗೆ ‘ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026’ ಕಿರೀಟ*

ಮಂಗಳೂರು: ನಗರದ ಮಿಲಾಗ್ರಿಸ್ ಸಭಾಭವನದಲ್ಲಿ ಶನಿವಾರ ರಾತ್ರಿ ಅತ್ಯಂತ ವೈಭವದಿಂದ ನಡೆದ ‘ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026’ ಸೌಂದರ್ಯ ಸ್ಪರ್ಧೆಯ ಮಹೋನ್ನತ ಅಂತಿಮ ಸುತ್ತಿನಲ್ಲಿ ಮಂಗಳೂರಿನ ಪ್ರತಿಭೆ ಶಿಖಾ ಸುಶೀಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ದೇಶ-ವಿದೇಶಗಳ ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ, ಕಠಿಣ ಹಂತಗಳನ್ನು ದಾಟಿ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದ್ದ ಶಿಖಾ ಸುಶೀಲ್ ಅವರು ತಮ್ಮ ಆತ್ಮಸ್ಥೈರ್ಯ, ರೇಂಪ್ ವಾಕ್ ಹಾಗೂ ಪ್ರಶ್ನೋತ್ತರ ವಿಭಾಗಗಳಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದ ತೀರ್ಪುಗಾರರ ಮನಗೆದ್ದು ಸೌಂದರ್ಯ ಕಿರೀಟವನ್ನು […]

DAKSHINA KANNADA HOME

*ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರ ಆರೋಗ್ಯ ವಿಚಾರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ*

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ ಅವರನ್ನು ಇಂದು ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ತಮ್ಮ ಪತ್ನಿಯವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಶ್ರೀ ಖರ್ಗೆ ಅವರು, ಭಂಡಾರಿ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಚಿಕಿತ್ಸೆ ನೀಡುತ್ತಿರುವ ಖ್ಯಾತ ಹೃದ್ರೋಗ ತಜ್ಞರಾದ ಡಾ. ದೇವಿಪ್ರಸಾದ್ ಶೆಟ್ಟಿ ಅವರೊಂದಿಗೆ […]

DAKSHINA KANNADA

*ಕುಂಜತ್ತಬೈಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ವೀಕ್ಷಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ*

ಮಂಗಳೂರು: ಸುಮಾರು 800 ವರ್ಷಗಳ ಸುದೀರ್ಘ ಇತಿಹಾಸವಿರುವ ಕುಂಜತ್ತಬೈಲ್ ಕೊಂರ್ಗಿಬೈಲ್‌ನ ಅರ್ತಿವೊಡಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಪ್ರಿಲ್ 7 ರಿಂದ 12 ರವರೆಗೆ ಜರುಗಲಿರುವ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಿದ್ಧತೆಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭೇಟಿ ನೀಡಿ ವೀಕ್ಷಿಸಿದರು. ದೇವಸ್ಥಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಜೀರ್ಣೋದ್ದಾರ ಕಾಮಗಾರಿಗಳು, ನೂತನವಾಗಿ ನಿರ್ಮಿಸಲಾಗುತ್ತಿರುವ ಭವ್ಯ ಸಭಾ ಭವನ ಹಾಗೂ ಅನ್ನ ಛತ್ರ ಸಂಕೀರ್ಣದ ಅಭಿವೃದ್ಧಿ ಕೆಲಸಗಳ ಬಗ್ಗೆ ಅವರು ಮಾಹಿತಿ […]

DAKSHINA KANNADA

*ಅರ್ಕುಳದಲ್ಲಿ ಇನಾಯತ್ ಅಲಿ ನೇತೃತ್ವದ ಬೃಹತ್ ‘ಜನಸ್ಪಂದನಾ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ*

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅರ್ಕುಳ ವಳಚ್ಚಿಲ್‌ನ ಯಶಸ್ವಿ ಹಾಲ್‌ನಲ್ಲಿ ಅರ್ಕುಳ ಗ್ರಾಮ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ‘ಜನಸ್ಪಂದನಾ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಸಾವಿರಾರು ಜನರು ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, “ಜನಸಾಮಾನ್ಯರ ಮನೆಬಾಗಿಲಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು ಮತ್ತು ಅವರ ಆರೋಗ್ಯದ […]

DAKSHINA KANNADA HOME LATEST NEWS

ಮಹಾಲಿಂಗೇಶ್ವರ ದೇವಳಕ್ಕೆ ₹ 7ಲಕ್ಷ ಮೌಲ್ಯದ ಬೆಳ್ಳಿ ಛತ್ರಿ ಸಮರ್ಪಣೆ

ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಳದ ಪವಿತ್ರಪಾಣಿ ಕೇಶವ ಭಟ್ ಕೆ.ಕೂವೆತೋಟ ಮತ್ತು ಕೆ.ಶಾಂತಕುಮಾರಿ ದಂಪತಿ ಇಲ್ಲಿನ ಮಹಾಲಿಂಗೇಶ್ವರ ದೇವಳಕ್ಕೆ 2.640 ಕೆ.ಜಿ.ಯ, ₹ 7ಲಕ್ಷ ಮೌಲ್ಯದ ಬೆಳ್ಳಿ ಛತ್ರಿ (ಕೊಡೆ) ಯನ್ನು ಕೊಡುಗೆಯಾಗಿ ಶನಿವಾರ ನೀಡಿದರು. ದೇವಳದ ಒಂದು ಕಟ್ಟೆಯ ಪುನರ್ ನಿರ್ಮಾಣಕ್ಕೆ ₹ 25 ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು. ಪ್ರಸ್ತುತ ವಿಟ್ಲ ಧನ್ವಂತರಿ ನಿಲಯ ನಿವಾಸಿಯಾಗಿರುವ ಕೂವೆತೋಟ ಮನೆತನದ ಕೇಶವ ಭಟ್ ಕೆ.ಕೂವೆತೋಟ ಮತ್ತು ಕೆ.ಶಾಂತಕುಮಾರಿ ದಂಪತಿ […]

COMMUNITY NEWS HOME LATEST NEWS

ಮಂಜೇಶ್ವರ: ವರ್ಕಾಡಿಯಲ್ಲಿ 35ನೇ ವರ್ಷದ ವೆಲಂಕಣಿ ಮಾತೆಯ ವಾರ್ಷಿಕ ಮಹೋತ್ಸವ

ಮಂಜೇಶ್ವರ: ಮಂಜೇಶ್ವರದ ವರ್ಕಾಡಿಯ ಯೇಸುಕ್ರಿಸ್ತರ ತಿರು ಹೃದಯದ ದೇವಾಲಯದಲ್ಲಿ ನಡೆದ ವೆಲಂಕಣಿ ಮಾತೆಯ 35ನೇ ವಾರ್ಷಿಕ ಮಹೋತ್ಸವ ಸಂಭ್ರಮ ನಡೆಯಿತು. ಈ ಬಲಿಪೂಜೆಯಲ್ಲಿ ಬೆಂಗಳೂರಿನ ನಿವೃತ್ತ ಆರ್ಚ್‌ ಬಿಷಪ್‌ ಅ.ವಂ. ಡಾ. ಬರ್ನಾಡ್‌ ಮೊರಾಸ್‌ ಅವರು ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದರು. ನಂತರ ನಡೆದ ಪ್ರಬೋಧನೆಯಲ್ಲಿ “ವೆಲಂಕಣಿ ಮಾತೆ ಯೇಸುಕ್ರಿಸ್ತರ ಮಾತೆ ಹೇಗೋ ನಮ್ಮ ಮಾತೆಯೂ ಹೌದು”. ತಮಿಳುನಾಡಿನ ವೆಲಂಕಣಿಯಲ್ಲಿ ಕ್ರಿ.ಶ 1570 ಇಸವಿಯಲ್ಲಿ ಬಾಲಕನೊಬ್ಬನಿಗೆ ಕಾಣಿಸಿಕೊಂಡು ಪವಾಡಗಳನ್ನು ಸೃಷ್ಟಿಸಿ ಪ್ರಸಿದ್ಧಿ ಹೊಂದಿದರು. ಇದರಿಂದ ಆಕೆಗೆ ವೆಲಂಕಣಿ ಮಾತೆ […]

DAKSHINA KANNADA

*ಪಂಪ್ ವೆಲ್ ಮೂಲಕ ಮಂಗಳೂರಿಗೆ ತೆರಳುವವರೇ ಹುಷಾರ್*

ಮಂಗಳೂರು, ಫೆ.15: ಪಂಪ್ ವೆಲ್ ನಿಂದ ಕಂಕನಾಡಿಗೆ ತೆರಳುವ ಮುಖ್ಯ ರಸ್ತೆಯ ಅಭಿವೃದ್ಧಿ ಯ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂದಿಸಿ ನಾಳೆಯಿಂದ ಕಾಮಗಾರಿ ಆರಂಭಗೊಳ್ಳಲಿದೆ. ಆ ಸಮಯದಲ್ಲಿ ನಗರಕ್ಕೆ ತೆರಳುವ ವಾಹನಗಳಿಗೆ ಸಮಸ್ಯೆಯಾಗಲಿದ್ದು, ವಾಹನ ಸಂಚಾರಕ್ಕೆ ಪೊಲೀಸ್ ಇಲಾಖೆ ಪರ್ಯಾಯ ಮಾರ್ಗಗಳನ್ನು ಗೊತ್ತುಪಡಿಸಿದೆ. ಪಂಪ್‌ವೆಲ್ ಜಂಕ್ಷನ್ ನಿಂದ ಕರಾವಳಿ ಜಂಕ್ಷನ್‌ಗೆ ಹೋಗುವ ವಾಹನಗಳನ್ನು ನಿರ್ಬಂದಿಸಿ, ಕಂಕನಾಡಿ ಹಳೆ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ತಲಪಾಡಿ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳು ಪರ್ಯಾಯ […]

DAKSHINA KANNADA HOME LATEST NEWS

ಪುಲ್ವಾಮಾ ದಾಳಿಗೆ 7 ವರ್ಷ: ಹುತಾತ್ಮರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ

ನವದೆಹಲಿ: ಪುಲ್ವಾಮಾ ದಾಳಿ ನಡೆದು 7 ವರ್ಷದ ಹಿನ್ನೆಲೆ ಘಟನೆಯಲ್ಲಿ ಮೃತಪಟ್ಟ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮ ಯೋಧರನ್ನು ವೀರ ಸೇನಾನಿಗಳು ಎಂದು ಶ್ಲಾಘಿಸಿದ್ದಾರೆ. 2019ರ ಈ ದಿನ ಪುಲ್ವಾಮಾ ದಾಳಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಗಳನ್ನು ಸ್ಮರಿಸುತ್ತಿದ್ದೇವೆ. ಅವರ ದೇಶಭಕ್ತಿ ಮತ್ತು ಸೇವೆ ಸದಾ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಅವರ ಧೈರ್ಯವು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಲೋಕಸಭಾ […]

HOME

ರಾಷ್ಟ್ರ ಮಟ್ಟದ ವಿಶೇಷ ಮಕ್ಕಳ ಅಥ್ಲೆಟಿಕ್ ಸ್ಪರ್ಧೆಗೆ ಮಂಗಳೂರು ಸೆಂಟ್ ಲಾರೆನ್ಸ್ ಶಾಲೆಯ ವಿದ್ಯಾರ್ಥಿ ಆಯ್ಕೆ

ಮಂಗಳೂರು: ನಗರದ ಸೆಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಬೊಂದೇಲ್‌ನ ವಿದ್ಯಾರ್ಥಿ ಶ್ರೇಯಸ್ ಕುಮಾರ್ ಕೆ ರಾಜ್ಯ ಮಟ್ಟದ ವಿಶೇಷ ಮಕ್ಕಳ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಶಾಲೆ ಹಾಗೂ ಕುಟುಂಬಕ್ಕೆ ಹೆಮ್ಮೆ ತಂದಿದ್ದಾನೆ. ಬೆಂಗಳೂರಿನ ರಾಮನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಶ್ರೇಯಸ್ ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತ ಸ್ಪರ್ಧೆಗಳಲ್ಲಿ ಭಾಗವಹಿಸಿ, ಶಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಶ್ರೇಯಸ್ ಅವರು ಶ್ರೀ ಪ್ರವೀಣ್ ಕುಮಾರ್ ಹಾಗೂ ಶ್ರೀಮತಿ ಕವಿತಾ ಜೆಕೆ ಅವರ […]

LATEST NEWS

AICCಯ “ಸಂಘಟನ್ ಸೃಜನ್ ಅಭಿಯಾನ್” ಗೆ MLC ಐವನ್ ಡಿ’ಸೋಜಾ ಆಯ್ಕೆ

ಮಂಗಳೂರು: ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿಯ ಆದೇಶದಂತೆ, ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೆಣುಗೋಪಾಲ್ ರವರ ನೇತೃತ್ವದಲ್ಲಿ ಆಯೋಜಿಸಲಾದ ನಾಗಾಲ್ಯಾಂಡ್ ರಾಜ್ಯದ ಕಿಫಿರ್ ಜಿಲ್ಲೆ ಮತ್ತು ನೋಕ್ಲಾಕ್ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಎ.ಐ.ಸಿ.ಸಿ ಯ ಮಹತ್ವಾಕಾಂಕ್ಷಿ “ಸಂಘಟನ್ ಸೃಜನ್ ಅಭಿಯಾನ್” ಕಾರ್ಯಕ್ರಮದ ಅನುಷ್ಠಾನ ಪ್ರಕ್ರಿಯೆ, ಸಂಘಟನಾ ಸ್ಥಿತಿ ಹಾಗೂ ನೆಲಮಟ್ಟದ ಬಲವರ್ಧನೆ ಕಾರ್ಯಗಳನ್ನು ಸಮಗ್ರವಾಗಿ ವೀಕ್ಷಿಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಕೆ.ಪಿ.ಸಿ.ಸಿ ಉಪಾಧ್ಯಕ್ಷ […]