COMMUNITY NEWSDAKSHINA KANNADA

ಪೆರುವಾಯಿ ಚರ್ಚ್‌ನ ಸಂತ ಅಂತೋನಿ ವಾಳೆಯ ‘ವಾಡ್ಯಾ ಫೆಸ್ತ್’ ಆಚರಣೆ

ವಿಟ್ಲ: ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಸಂತ ಅಂತೋನ್ ವಾಳೆಯ ಹಬ್ಬವು ವಿಜೃಂಭಣೆಯಿಂದ ನಡೆಯಿತು. ವಾಳೆಯ ಪ್ರೇರಕ ಸಂತ ಅಂತೋನಿಗೆ ಹೂ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೆರುವಾಯಿ ಫಾತಿಮಾ ಮಾತೆಯ ಧರ್ಮಗುರು ವಂ. ಸೈಮನ್ ಡಿಸೋಜ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ವಾಳೆ ಹಬ್ಬ ಎನ್ನುವುದು ಸಂಬಂಧಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಕುಟುಂಬ ಹಾಗೂ ವ್ಯಕ್ತಿ ವ್ಯಕ್ತಿಗಳ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ. ಸಂತ ಅಂತೋನಿ ವಾಳೆಯಲ್ಲಿ ವಿವಿಧ ಉತ್ತಮ ಮನಸ್ಸಿನ ವ್ಯಕ್ತಿಗಳಿಂದ ವಾಳೆ ಹಾಗೂ ಚರ್ಚ್ ಗೆ ಪೂರಕ ಕೆಲಸಗಳಾಗುತ್ತಿವೆ. ಅವರ ಉತ್ತಮ ಮನಸ್ಸು ಚರ್ಚ್ ಪ್ರಗತಿಯ ಪಥದಲ್ಲಿ ಮುಂದುವರೆಯಲು ಸಹಕಾರಿಯಾಗುತ್ತಿದೆ.ಉತ್ತಮ ಕೆಲಸಗಳು ಮುಂದುವರೆಯಲಿ ಎಂದರು.

ಸಭಾ ಕಾರ್ಯಕ್ರಮದಲ್ಲಿ ವಂ. ಸೈಮನ್ ಡಿಸೋಜ ರವನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂತ ಅಂತೋನಿ ವಾಳೆಯ ಹಿರಿಯರಾದ (75 ವರ್ಷ ಗಳಿಗಿಂತ ಮೇಲ್ಪಟ್ಟರನ್ನು) ಆಲ್ಪರ್ಟ್ ಮೊಂತೇರೊ, ಫ್ಲೋರಿನ್ ಮೊಂತೇರೊ, ಕ್ರೀಸ್ತಿನ್ ಡಿಸೋಜ ಹಾಗೂ ಅಲೆಕ್ಸ್ ಮೊಂತೇರೊ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಹಿಂದೆ ಸೇವೆ ಸಲ್ಲಿಸಿದ ವಾಳೆಯ ಪ್ರತಿನಿಧಿ ಗಳಾದ ಗ್ರೇಸಿ ಡಿಸೋಜ, ವೈಲೆಟ್ ಕುವೆಲ್ಲೊ ಮತ್ತು ನವೀನ್ ಡಿಸೋಜ ಅವರೊಂದಿಗೆ ಕಥೋಲಿಕ ಸಭೆಯು ಏರ್ಪಡಿಸಿದ ಭಾಷಣ ಸ್ಪರ್ದೆಯಲ್ಲಿ ವಿಟ್ಲ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಜೆನ್ವೀಶಾ ಸಾನ್ವಿ ಡಿಸೋಜ ಳನ್ನು ಗೌರವಿಸಲಾಯಿತು. ಉಷಾ ಅವರು ವಾರ್ಷಿಕ ವರದಿಯನ್ನು ವಾಚಿಸಿದರು.

ಈ ಸಂಭ್ರಮದಲ್ಲಿ ವಾಳೆಯ ಮಕ್ಕಳು ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು ಹಾಗೂ ವಯಸ್ಕರು ಕಿರು ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ, ಸರ್ವ ಆಯೋಗದ ಸಂಯೋಜಕ ರಾಲ್ಫ್ ಡಿಸೋಜ, ಗುರಿಕಾರರಾದ ಗ್ರೆಟ್ಟಾ ಡಿಸೋಜ, ವಿಕ್ಟರ್ ಡಿಸೋಜ ಹಾಜರಿದ್ದರು. ಎಡ್ವರ್ಡ್ ಡಿಸೋಜ ಸ್ವಾಗತಿಸಿದರು. ಸಂತೋಷ್ ಮೊಂತೇರೊ ನಿರೂಪಿಸಿದರು.

Share News