Month: February 2026

COMMUNITY NEWS DAKSHINA KANNADA HOME LATEST NEWS

ಕಯ್ಯಾರು ಹಳೆ ಚರ್ಚ್‌ ಕೆಡವಿದ್ದು ನಮಗೆ ನೋವುಂಟು ಮಾಡಿದೆ: ವಿಲ್ಸನ್ ಕಯ್ಯಾರ್‌

ಮಂಗಳೂರು: ಕಾಸರಗೋಡಿನ ಕಯ್ಯಾರು ಗ್ರಾಮದಲ್ಲಿರುವ 73 ವರ್ಷ ಹಳೆಯದಾದ ಕ್ರಿಸ್ತರಾಜ ದೇವಾಲಯವು  ಕೆಡವಿದ್ದು ನೋವುಂಟು ಮಾಡಿದೆ ಎಂದು ವಿಲ್ಸನ್ ಕಯ್ಯಾರ್‌ ಆರೋಪಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1953ರಲ್ಲಿ ಫಾ. ಲಾರೆನ್ಸ್ ಎಸ್. ಪಾಯ್ಸ್ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿತ್ತು. 1956ರ ಏಪ್ರಿಲ್ 25ರಂದು ಮಂಗಳೂರು ಧರ್ಮಪ್ರಾಂತ್ಯದ ಆಗಿನ ಬಿಷಪ್ ಅ.ವಂ. ಬೇಸಿಲ್ ಎಫ್. ಡಿ’ಸೋಜಾ ಅವರಿಂದ ಉದ್ಘಾಟಿಸಲ್ಪಟ್ಟಿತ್ತು.   ಕಯ್ಯಾರ್ ಹಳೆ ಚರ್ಚ್ ಕೆಡವಲು ಚರ್ಚ್ ಮಹಾಸಭೆಯಲ್ಲೇ ಒಪ್ಪಿಗೆ: ಆಡಳಿತ ಮಂಡಳಿ ಸ್ಪಷ್ಟನೆ     […]

COMMUNITY NEWS DAKSHINA KANNADA HOME LATEST NEWS

ಕಯ್ಯಾರ್ ಹಳೆ ಚರ್ಚ್ ಕೆಡವಲು ಚರ್ಚ್ ಮಹಾಸಭೆಯಲ್ಲೇ ಒಪ್ಪಿಗೆ: ಆಡಳಿತ ಮಂಡಳಿ ಸ್ಪಷ್ಟನೆ

ಚರ್ಚ್ ಉಳಿಸಲು, ಹಣಕಾಸಿನ ನೆರವಿಗೆ 5 ತಿಂಗಳ ಕಾಲಾವಕಾಶ ಹೊಸ ಚರ್ಚ್ ಪೂರ್ಣಗೊಳಿಸಲು ಹಳೆ ಚರ್ಚ್ ಪರಿಕರಗಳ ಬಳಕೆ ಮಂಗಳೂರು: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಹಳೆ ಕಟ್ಟಡ ತೆರವುಗೊಳಿಸುವ ಬಗ್ಗೆ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣ ನೀಡಿದ್ದು, ಈ ಬಗ್ಗೆ ಚರ್ಚ್ ಆಡಳಿತ ಮಂಡಳಿ ಉಪಾಧ್ಯಕ್ಷ ಹಾಗೂ ಕಾರ್‍ಯದರ್ಶಿ ಸೇರಿದಂತೆ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಅದರ ವಿವರ ಇಂತಿದೆ. ಕಯ್ಯಾರ್ ಕ್ರಿಸ್ತರಾಜ ದೇವಾಲಯ ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಹಳೆ ಕಟ್ಟಡ ತೆರವುಗೊಳಿಸುವ ಬಗ್ಗೆ ಸಾಮಾಜಿಕ […]

DAKSHINA KANNADA HOME

*ಕೇಂದ್ರದ ‘ವಿಬಿ ಜಿ ರಾಮ್ ಜಿ’ ಕಾಯ್ದೆ ಪರ ಬಿಜೆಪಿ ಬೃಹತ್ ಕಾಲ್ನಡಿಗೆ ಜಾಥಾ – ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಆಗ್ರಹ*

ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ವಿಬಿ ಜಿ ರಾಮ್ ಜಿ’ (VB-G RAM-G) ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಜಿಲ್ಲಾ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಭ್ರಷ್ಟಾಚಾರಕ್ಕೆ ಇಲ್ಲಿ ಆಸ್ಪದವಿಲ್ಲ – ಸತೀಶ್ ಕುಂಪಲ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು, “ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಕೇಂದ್ರದಿಂದ ಕಳುಹಿಸಿದ […]

DAKSHINA KANNADA HOME LATEST NEWS

ಶ್ರೀನಿವಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸ್ಥಾಪಕ ಡಾ. ಸಿಎ ಎ. ರಾಘವೇಂದ್ರ ರಾವ್ ನಿಧನ

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸ್ಥಾಪಕ ಡಾ. ಸಿಎ ಎ. ರಾಘವೇಂದ್ರ ರಾವ್ (89) ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ ಪುತ್ರ ಸಿಎ ಶ್ರೀನಿವಾಸ ರಾವ್ ಮತ್ತು ಪುತ್ರಿ ಪದ್ಮಿನಿ ರಾವ್ ಇದ್ದಾರೆ. ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ‌ ದರ್ಶನಕ್ಕಾಗಿ ಬೆಳಗ್ಗೆ 11 ಗಂಟೆಗೆ ಮುಕ್ಕ ಶ್ರೀನಿವಾಸ ಕಾಲೇಜುಗಳ ಕ್ಯಾಂಪಸ್‌ನಲ್ಲಿ ಇರಿಸಲಾಗುತ್ತದೆ. ಮಧ್ಯಾಹ್ನದ ನಂತರ ಅಂತಿಮ ಸಂಸ್ಕಾರ ನಡೆಯಲಿದೆ. ನಗರದ ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್, ಶಿಕ್ಷಣ ತಜ್ಞ ಮತ್ತು ಉದ್ಯಮಿಯಾಗಿದ್ದು, 1988ರಲ್ಲಿ […]

DAKSHINA KANNADA HOME LATEST NEWS

ಶಬರಿಮಲೆ ಯಾತ್ರೆ ವೇಳೆ ಉಪ್ಪಿನಂಗಡಿ ಬಜರಂಗದಳ ಮುಖಂಡ ಹೃದಯಾಘಾತದಿಂದ ಸಾವು

ಉಪ್ಪಿನಂಗಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳದ ಉಪ್ಪಿನಂಗಡಿ ಪ್ರಖಂಡ ಸುರಕ್ಷಾ ಪ್ರಮುಖ್ ಆಗಿದ್ದ ಬೆಳ್ತಂಗಡಿ ತಾಲ್ಲೂಕು ತೆಕ್ಕಾರು ಗ್ರಾಮದ ನಿವಾಸಿ ಸುಧೀರ್ ತೆಕ್ಕಾರ್ (26) ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ಶಬರಿಮಲೆಯಲ್ಲಿ ಹೃದಯಾಘಾತ ಸಂಭವಿಸಿದ್ದು, ಮೃತದೇಹವನ್ನು ಮಂಗಳವಾರ ತೆಕ್ಕಾರು ಮನೆಗೆ ತಂದು ಮೆರವಣಿಗೆಯಲ್ಲಿ ಉಪ್ಪಿನಂಗಡಿಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ಬಾರಿ ಶಬರಿಮಲೆ ಯಾತ್ರೆ ಸಂದರ್ಭ ಹಲವರಿಗೆ ಹೃದಯಾಘಾತ ಆಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ತನಿಖಾ ತಂಡಗಳು ನಿಗಾ ವಹಿಸಬೇಕಿದೆ […]

COMMUNITY NEWS DAKSHINA KANNADA HOME LATEST NEWS

ಕರಾವಳಿಯಲ್ಲಿ ಇಂದು ಕ್ರೈಸ್ತರ ಬೂದಿ ಬುಧವಾರ- “ಪ್ರಾರ್ಥನೆ, ತ್ಯಾಗ, ದಾನಧರ್ಮ ಮಾಡಿ”

ಮಂಗಳೂರು: ಇಂದಿನಿಂದ ವಿಶ್ವ ಕಥೋಲಿಕ ಕ್ರೈಸ್ತ ಸಮುದಾಯ ಬೂದಿ ಬುಧವಾರ (ಆ್ಯಶ್‌ ವೆಡ್ನಸ್‌ ಡೇ), ವಿಭೂತಿ ಬುಧವಾರ ಆಚರಿಸುತ್ತಾರೆ. ಅದರ ಭಾಗವಾಗಿ ಕರಾವಳಿಯ ಕಥೋಲಿಕ ಕ್ರೈಸ್ತ ಸಮುದಾಯ ಇಂದು ಬೆಳಗ್ಗೆಯಿಂದ ಬೂದಿ ಬುಧವಾರ ಆಚರಿಸಿದರು. ಈ ಮೂಲಕ ಕ್ರೈಸ್ತರು ಇಂದಿನಿಂದ ತಪಸ್ಸು ಕಾಲ ಆರಂಭಿಸುತ್ತಿದ್ದಾರೆ. ಈ ಬೂದಿ ಬುಧವಾರದ ವಿಶೇಷತೆ ಎಂದರೆ ಎಲ್ಲ ಚರ್ಚ್‌ಗಳಲ್ಲಿ ಬುಧವಾರ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆಯ ಜತೆಗೆ ಬೂದಿಯಲ್ಲಿ ಶಿಲುಬೆಯ ಚಿಹ್ನೆಯನ್ನು ಭಕ್ತರಿಗೆ ಹಾಕುವ ಮೂಲಕ ಕಪ್ಪು ದಿನದ ಆಚರಣೆಗೆ […]

DAKSHINA KANNADA HOME LATEST NEWS

ನಾಳೆಯಿಂದ ದ.ಕ- ಉಡುಪಿ ಜಿಲ್ಲೆಗಳಲ್ಲಿ ಪವಿತ್ರ ರಮಝಾನ್ ಉಪವಾಸ ಆರಂಭ

ಮಂಗಳೂರು: ಪವಿತ್ರ ರಮಝಾನ್‌ನ ಪ್ರಥಮ ಚಂದ್ರದರ್ಶನವು ಮಂಗಳವಾರ ಆಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಗುರುವಾರದಿಂದ ರಮಝಾನ್ ಉಪವಾಸ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ನಿರ್ದೇಶನದಂತೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ ತಿಳಿಸಿದ್ದಾರೆ. ಗುರುವಾರದಿಂದ ರಮಝಾನ್ ಪ್ರಾರಂಭ ಎಂದು ಉಳ್ಳಾಲ ಖಾಝಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ತಿಳಿಸಿರುತ್ತಾರೆಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಅವರು […]

STATE

*ಸೆಂಟ್ ಜೋಸೆಫ್ ವಿವಿಯಲ್ಲಿ ‘ಜನರೇಟಿವ್ ಎಐ ಮತ್ತು ಫ್ಯೂಚರ್ ಕಂಪ್ಯೂಟಿಂಗ್’ ಕುರಿತು ವಿಶೇಷ ಉಪನ್ಯಾಸ*

ಬೆಂಗಳೂರು: ನಗರದ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ವತಿಯಿಂದ ಫೆಬ್ರವರಿ 13 ರಂದು ಎಐಸಿಟಿಇ (AICTE) ಪ್ರತಿಷ್ಠಿತ ವೃತ್ತಿಪರ ಯೋಜನೆಯಡಿ (DPS – 2ನೇ ಹಂತ) ಉದ್ಘಾಟನಾ ಉಪನ್ಯಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಹಾಗೂ ಐಇಇಇ (IEEE) ಫೆಲೋ ಆದ ಖ್ಯಾತ ಶಿಕ್ಷಣತಜ್ಞ ಡಾ. ವೇಣುಗೋಪಾಲ್ ಕೆ. ಆರ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ “ಜನರೇಟಿವ್ ಎಐ ಮತ್ತು ಫ್ಯೂಚರ್ ಕಂಪ್ಯೂಟಿಂಗ್” ಎಂಬ ವಿಷಯದ ಕುರಿತು ವಿಶೇಷ […]

DAKSHINA KANNADA

*ಕಂಕನಾಡಿ ರಸ್ತೆ ಅಗಲೀಕರಣಕ್ಕೆ ಫಾದರ್ ಮುಲ್ಲರ್ ಆಡಳಿತ ಮಂಡಳಿ ಸಹಮತಿ – ಶಾಸಕ ವೇದವ್ಯಾಸ ಕಾಮತ್*

ಮಂಗಳೂರು: ನಗರದ ಪಂಪ್‌ವೆಲ್‌ನಿಂದ ಹಳೆಯ ಪೋಸ್ಟ್ ಆಫೀಸ್‌ವರೆಗಿನ ರಸ್ತೆ ಅಗಲೀಕರಣದ ದಶಕಗಳ ಬೇಡಿಕೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಕಂಕನಾಡಿಯ ಫಾದರ್ ಮುಲ್ಲರ್ ಆಡಳಿತ ಮಂಡಳಿಯು ಜಾಗ ಬಿಟ್ಟುಕೊಡಲು ಸಮ್ಮತಿಸಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ರಸ್ತೆ ಅಗಲೀಕರಣದ ಕುರಿತು ಫಾದರ್ ಮುಲ್ಲರ್ ಸಂಸ್ಥೆಯ ಪ್ರಮುಖರೊಂದಿಗೆ ನಡೆಸಿದ ಸಭೆಯು ಯಶಸ್ವಿಯಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕರು ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆಯ ಆವರಣದ ಸುಮಾರು 20 […]

DAKSHINA KANNADA HOME

*ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ ಕುರಿತು ವಿಚಾರ ಸಂಕಿರಣ*

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (Special Intensive Revision – SIR) ಕುರಿತು ಮಹತ್ವದ ವಿಚಾರ ಸಂಕಿರಣ ಕಾರ್ಯಕ್ರಮವು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಶ್ರೀ ಸುಧೀರ್ ಕುಮಾರ್ ಮುರೊಳ್ಳಿ ಹಾಗೂ ಜಾಗೃತ ಕರ್ನಾಟಕದ ಸಂಚಾಲಕರಾದ ಡಾ. ವಾಸು ಎಚ್.ವಿ. ಅವರು, […]