Month: February 2026

DAKSHINA KANNADA HOME LATEST NEWS

ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ- ಪೆರುವಾಯಿಯಲ್ಲಿ 2 ಲಾರಿ ವಶಕ್ಕೆ

ವಿಟ್ಲ: ಕೇರಳದಿಂದ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕ್ಕೆ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಎರಡು ಲಾರಿಗಳನ್ನು ವಶಕ್ಕೆ ಪಡೆದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಂಧರ್ಭಿಕ ಚಿತ್ರ ಫೆ.25ರಂದು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣ ಅವರಿಗೆ ಕೇರಳ ಕಡೆಯಿಂದ ಪೆರುವಾಯಿ ಮಾರ್ಗವಾಗಿ ಲಾರಿಗಳಲ್ಲಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಕರ್ನಾಟಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ವೇಳೆ ತಮ್ಮ ಸಿಬ್ಬಂದಿಯೊಂದಿಗೆ ಬಂಟ್ವಾಳ ಪೆರುವಾಯಿ ಗ್ರಾಮದ ಬೆರಿಪದವು ಎಂಬಲ್ಲಿ […]

HOME

ಸುಮಾರು ಹತ್ತು ವರ್ಷಗಳ ಹಿಂದೆ ಪೆರುವಾಯಿ ಚರ್ಚ್ ಗೆ ಧರ್ಮಗುರುಗಳಾಗಿ ನೇಮಕವಾಗಿ ಬಂದ Fr.Vishal monis ಅವರದು ವಿಶಿಷ್ಟ ವ್ಯಕ್ತಿತ್ವ. ಎಲ್ಲರನ್ನೂ ಸಮಾನವಾಗಿ ಕಾಣುವ, ಸಮುದಾಯದ ಬಡ ಕುಟುಂಬಗಳ ಉನ್ನತಿಗಾಗಿ ಅವಿರತ ಶ್ರಮಿಸುವ, ದೂರದರ್ಶಿತ್ವದ ಹಾಗೂ ಊಹೆಗೂ ನಿಲುಕದ ಸಾಮಾರ್ಥ್ಯ. ಒಡೆದು ಚೂರಾಗಿದ್ದ ಸಮುದಾಯದ ಜನರನ್ನು ಒಟ್ಟುಗೂಡಿಸಿ ಅವರಿಂದಲೇ ಬಡಕುಟುಂಬಗಳ ಮನೆ ರಿಪೇರಿ, ಚರ್ಚ್ ನ ಪುನರ್ನಿರ್ಮಾಣ ಮಾಡಿಸಿ ಹಾಗೂ ಜನ ಸಾಮಾನ್ಯರಿಗೂ ಉತ್ತಮ ವ್ಯವಸ್ಥೆ ಹೊಂದಿದ ಸಮುದಾಯದ ಭವನ ಸಿಗುವಂತೆ ಮಾಡುವ ದೊಡ್ಡ ಕನಸನ್ನು ಎಲ್ಲರ […]

DAKSHINA KANNADA HOME LATEST NEWS

ರೈಲ್ವೆ ಹಳಿಯಲ್ಲಿ ಕುಳಿತಿದ್ದ ಅಪ್ರಾಪ್ತರ ಮೇಲೆ ನೈತಿಕ ಪೊಲೀಸ್‌ಗಿರಿ: ಇಬ್ಬರ ಬಂಧನ

ಮಂಗಳೂರು: ನೈತಿಕ ಪೊಲೀಸ್‌ಗಿರಿಯಲ್ಲಿ ಸೈಲೆಂಟ್‌ ಆಗಿದ್ದ ಮಂಗಳೂರಿನಲ್ಲಿ ಇದೀಗ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ರೈಲ್ವೆ ಹಳಿಯಲ್ಲಿ ಕುಳಿತಿದ್ದ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಆರೋಪದ ಮೇಲೆ ತಂದೆ ಮತ್ತು ಮಗನನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ಟೀವನ್ ಮೊಂತೇರೋ ಮತ್ತು ಆತನ ಪುತ್ರ ಅವಿಲ್ ಎಂದು ಗುರುತಿಸಲಾಗಿದೆ. ಮಂಗಳೂರು ಹೊರವಲಯದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕ ಮತ್ತು […]

DAKSHINA KANNADA HOME LATEST NEWS

ಅಂಬುಲೆನ್ಸ್‌ನಲ್ಲೇ ಹೆರಿಗೆಯಾದ ಬೆಳ್ತಂಗಡಿಯ ಬಾಣಂತಿ: ತಾಯಿ-ಮಗು ಸುರಕ್ಷಿತ

ಬೆಳ್ತಂಗಡಿ: ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವ ವೇಳೆ ಮಹಿಳೆಯೊಬ್ಬರಿಗೆ ಹೆರಿಗೆ ನೋವು ತೀವ್ರಗೊಂಡಿದ್ದು, ಶುಶ್ರೂಷಕಿಯರಿಬ್ಬರು ಸೇರಿ ಆಕೆಗೆ ದಾರಿ ಮಧ್ಯೆಯೇ ಆ ವಾಹನದಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸುದೆಮುಗೇರುವಿನ ಲೀಲಾವತಿ ಅವರು ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸೋಮವಾರ ಮುಂಜಾನೆ ಹೆರಿಗೆಗೆಂದು ಬಂದಿದ್ದರು. ಅವರಿಗೆ ಇದು ಎರಡನೇ ಹೆರಿಗೆಯಾಗಿದ್ದು, ಮೊದಲ ಹೆರಿಗೆಯಲ್ಲಿ ಸಿಜೇರಿಯನ್‌ ಮೂಲಕ ಮಗುವನ್ನು ಹೊರತೆಗೆಯಲಾಗಿತ್ತು. ಹಾಗಾಗಿ ಮಂಗಳೂರಿನ […]

DAKSHINA KANNADA HOME LATEST NEWS

ಮಹಾರಾಷ್ಟ್ರದಲ್ಲಿ ಅಪಘಾತ: ಮಂಗಳೂರಿನ ಯುವಕ ಸಾವು

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಮುಡಿಪು ಸಮೀಪದ ಬೋಳಿಯಾರ್ ನಿವಾಸಿ ವಿವಾಹಿತ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಬೋಳಿಯಾರ್ ನಿವಾಸಿ ಬಿಎಚ್ ಕರೀಂ ಎಂಬವರ ಪುತ್ರ ಮುಹಮ್ಮದ್ ರಿಝ್ವಾನ್ (28) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ‌ ಹಲವಾರು ವರ್ಷಗಳಿಂದ ಕಂಪೆನಿಯೊಂದರ ಮೂಲಕ ಮೀನಿನ ಲಾರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ರಿಝ್ವಾನ್ ಅವರು ಮಹಾರಾಷ್ಟ್ರಕ್ಕೆ ಮೀನಿನ ಲಾರಿ ಚಲಾಯಿಸುತ್ತಿದ್ದು, ಮಹಾರಾಷ್ಟ್ರದ ರತ್ನಗಿರಿ ಎಂಬಲ್ಲಿ ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಝ್ವಾನ್ ಮೃತಪಟ್ಟಿದ್ದಾರೆ. […]

COMMUNITY NEWS DAKSHINA KANNADA HOME

*ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗಾಗಿ ಇನ್ಫಂಟ್ ಜೀಸಸ್ ಶ್ರೈನ್‌ನಲ್ಲಿ ವಿಶೇಷ ಪ್ರಾರ್ಥನೆ*

ಮಂಗಳೂರು, ಫೆಬ್ರವರಿ 24 : ನಗರದ ಬಿಕರ್ನಕಟ್ಟೆಯಲ್ಲಿರುವ ಇನ್ಫಂಟ್ ಜೀಸಸ್ ಶ್ರೈನ್‌ನಲ್ಲಿ ಮುಂಬರುವ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಲಿರುವ ವಿದ್ಯಾರ್ಥಿಗಳ ಯಶಸ್ಸಿಗಾಗಿ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಪ್ರಾರ್ಥನಾ ವಿಧಿಯನ್ನು ಶನಿವಾರ ಆಯೋಜಿಸಲಾಗಿತ್ತು.ಮಾರ್ಗದರ್ಶನ ಮತ್ತು ಬಲಿಪೂಜೆ ಕಾರ್ಯಕ್ರಮದ ಪವಿತ್ರ ಬಲಿಪೂಜೆಯನ್ನು ವಂ. ಸ್ವಾಮಿ ಜಾನ್ ಪಿಂಟೋ, OCD ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪರೀಕ್ಷಾ ಸಮಯವು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಪೋಷಕರಿಗೂ ಸವಾಲಿನ ಸಮಯ. ವಿದ್ಯಾರ್ಥಿಗಳು ವ್ಯವಸ್ಥಿತ ಅಧ್ಯಯನ ವೇಳಾಪಟ್ಟಿಯನ್ನು ರೂಪಿಸಿಕೊಂಡು, ಶಿಸ್ತಿನಿಂದ ಓದಬೇಕು. […]

DAKSHINA KANNADA

*ಮಂಗಳೂರು ಓಂ ಶ್ರೀ ಮಠದಲ್ಲಿ ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಪೂರ್ಣಾಹುತಿ: ಮಾತಾಶ್ರೀ ಅವರಿಗೆ ‘ಶಿವಜ್ಞಾನ ಯಜ್ಞ ಮಹೇಶ್ವರಿ’ ಬಿರುದು ಪ್ರದಾನ*

ಮಂಗಳೂರು ಓಂ ಶ್ರೀಮಠದಲ್ಲಿ ಫೆಬ್ರವರಿ 22ರಂದು ಆದಿತ್ಯವಾರ ಓಂ ಶ್ರೀ ಮಠ ಮಠಾಧಿಪತಿ ಮಾತಾಶ್ರೀ ಓಂ ಶ್ರೀ ಶಿವ ಜ್ಞಾನಮಹಿ ಸರಸ್ವತಿ ಅವರಿಂದ ಒಂದು ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಹಾಗೂ ಪಂಚಲಕ್ಷ ಶಿವಪಂಚಾಕ್ಷರಿ ಹವನ ಎಂಬ ಅತ್ಯಪೂರ್ವ ಅನುಷ್ಠಾನ ಸಾಧನಾ ತಪಸ್ಸು ಸಮರ್ಪಣ ಮಾಡಲಾಗಿದೆ. 2025 ಮಹಾಶಿವರಾತ್ರಿಯಂದು 1 ಕೋಟಿ ಶಿವಪಂಚಾಕ್ಷರಿ ಜಪ ಯಜ್ಞ ಗುರುಗಳಿಂದ ಉಪದೇಶವನ್ನು ಸ್ವೀಕರಿಸಿ 2026 ಫೆಬ್ರವರಿ ಶಿವರಾತ್ರಿಯಂದು ಜಪವನ್ನಾ ಸಂಪೂರ್ಣಗೊಳಿಸಿ ಫೆಬ್ರವರಿ 18 ರಿಂದ ಗುರು ಉಪದೇಶದಂತೆ ಪಂಚ ದಿನ […]

DAKSHINA KANNADA

*ಬಜಾಲ್ ಅಂಚೆ ಕಚೇರಿಯ ಡಾಕ್ ಸೇವಕ್ ಉಮೇಶ ಅವರಿಗೆ ವಿದಾಯ ಸಮಾರಂಭ*

ಮಂಗಳೂರು: ಬಜಾಲ್ ಅಂಚೆ ಕಚೇರಿಯಲ್ಲಿ ಸುಮಾರು 27 ವರ್ಷಗಳ ಕಾಲ ಡಾಕ್ ಸೇವಕ್ (ಪೋಸ್ಟ್‌ಮ್ಯಾನ್) ಆಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಉಮೇಶ ಅವರ ನಿವೃತ್ತಿ ಅಂಗವಾಗಿ ಬಜಾಲ್ ಚರ್ಚ್ ಹಾಲ್‌ನಲ್ಲಿ ವಿಶೇಷ ಗೌರವ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಉಮೇಶ ಅವರನ್ನು ಶಾಲು ಹೊದಿಸಿ, ಸನ್ಮಾನಿಸಿ, ಸ್ಮರಣಿಕೆ ಹಾಗೂ ಗೌರವಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಅಂಚೆ ಅಧೀಕ್ಷಕರಾದ ದಿನೇಶ್ ಪಿ. ಅವರು, ಉಮೇಶ್ ಅವರು ತಮ್ಮ ಸೇವಾ ಅವಧಿಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ […]

UDUPI

*ಪಳ್ಳಿ “ಫಿಶ್ ಮೀಲ್“ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ, ತಹಶೀಲ್ದಾರ್ ರಿಂದ ಬೀಗ ಜಡಿಯುವ ಭರವಸೆ*

ಕಾರ್ಕಳ: ಪಡುಬಿದ್ರಿಯಿಂದ ಸ್ಥಳಾಂತರಗೊಂಡು ಕಾರ್ಕಳದ ಪಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ‘ಫಿಷ್ ಮೀಲ್’ ಘಟಕವನ್ನು ವಿರೋಧಿಸಿ ಗ್ರಾಮಸ್ಥರು ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಪಳ್ಳಿ ಪಂಚಾಯತ್‌ ಮುಂಭಾಗ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಒಂದು ವೇಳೆ ಫಿಷ್ ಮೀಲ್ ಘಟಕವನ್ನು ಸಂಪೂರ್ಣವಾಗಿ ಬಂದ್ ಮಾಡದೇ ಇದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಮಲೆ ಪರಿಸರದ ಕಂದಾಯ ಸ.ನಂ 229/1ರ 3.60 ಎಕರೆ ಜಾಗದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು ಯಾವುದೇ […]

COMMUNITY NEWS DAKSHINA KANNADA HOME

ಫೆ. 26ರಿಂದ ಮಂಗಳೂರಿನಲ್ಲಿ ಬೃಹತ್ ಬೈಬಲ್ ಸಮ್ಮೇಳನ

ಮಂಗಳೂರು,ಫೆ.23: ಮಂಗಳೂರು ಧರ್ಮಪ್ರಾಂತ್ಯದ ಕ್ಯಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಸಹಯೋಗದೊಂದಿಗೆ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್‌ ಮೈದಾನದಲ್ಲಿ ಫೆ. 26ರಿಂದ ಮಾ.1ರ ವರೆಗೆ ಬೃಹತ್ ಬೈಬಲ್ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡಾ| ಜೆ.ಬಿ. ಸಲ್ಡಾನ್ಹಾ ಹೇಳಿದರು. ಸೋಮವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲೆಸಿದೆ” ಎಂಬ ಧ್ಯೇಯದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ. ಪ್ರತೀ ದಿನ ಸಂಜೆ 4ರಿಂದ 8:30ರವರೆಗೆ ಸಮ್ಮೇಳನ […]