Month: January 2026

DAKSHINA KANNADA

*ಅಡೆತಡೆಗಳ ಮೆಟ್ಟಿ ನಿಂತು ಸಮಾನತೆಯ ಸಂದೇಶ: ‘ಅಲೋಯ್ ಕ್ವಿಜ್-ವಿಜ್ 2026’ ಯಶಸ್ವಿ ಆಯೋಜನೆ*

ಮಂಗಳೂರು:ಜನವರಿ 19 : ತಂಡದ ಕೆಲಸ ಮತ್ತು ಸಾಮಾಜಿಕ ಏಕೀಕರಣವನ್ನು ಪ್ರದರ್ಶಿಸುವ ವಿಶಿಷ್ಟ ಕಾರ್ಯಕ್ರಮವೊಂದರಲ್ಲಿ, ಸೈಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲಾ ಹಳೆಯ ವಿದ್ಯಾರ್ಥಿ ಸಂಘವು, ಸೈಂಟ್ ಅಲೋಶಿಯಸ್ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ (SACAA) ಸಹಯೋಗದೊಂದಿಗೆ ಭಾನುವಾರ ರಂದು ‘ಅಲೋಯ್ ಕ್ವಿಜ್-ವಿಜ್ 2026’ ಅನ್ನು ಯಶಸ್ವಿಯಾಗಿ ಆಯೋಜಿಸಿತು. ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮವು, ವಿವಿಧ ಹಿನ್ನೆಲೆಯ ಮತ್ತು ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ರಸಪ್ರಶ್ನೆ […]

DAKSHINA KANNADA HOME

ಶಕ್ತಿ ಇರುವ ತನಕ ಬಡವರ ಸೇವೆ ಮಾಡುವೆ- ಚುನಾವಣಾ ಸಮಯದಲ್ಲಿ ಆಶೀರ್ವಾದ ಮಾಡಿ: ಅಶೋಕ್ ರೈ

ಪುತ್ತೂರು: ನನ್ನಲ್ಲಿ ಶಕ್ತಿ ಇರುವ ತನಕ ನಾನು ಬಡವರ ಸೇವೆಯನ್ನು ಮಾಡುತ್ತಲೇ ಇರುವೆ, ನಾನು ಬಡವರಿಗೆ ಸಹಾಯ ಮಾಡುವಾಗ, ಉಡುಗೋರೆ ನೀಡುವಾಗ ಅನೇಕರು ಗೇಲಿ ಮಾಡುತ್ತಾರೆ ಅವರು ಗೇಲಿ ಮಾಡುವುದು ನನ್ನಲ್ಲ ಬಡವರನ್ನು , ಯಾರೇ ಏನೇ ಗೇಲಿ ಮಾಡಲಿ ನಾನು ಬಡವರ ಸೇವೆಯನ್ನು ನಿಲ್ಲಿಸುವುದೇ ಇಲ್ಲ, ಬಡವರ ಆಶೀರ್ವಾದದಿಂದ ನಾನು ಶಾಸಕನಾಗಿದ್ದು ಚುನಾವಣೆಯ ವೇಳೆ ನನ್ನನ್ನು ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ನಂಬಿಕೆ ನನ್ನಲ್ಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು […]

DAKSHINA KANNADA HOME LATEST NEWS

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ: ಓರ್ವನ ಬಂಧನ

ಮಂಗಳೂರು: ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಕದ್ರಿ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೇರಳದ ಎರ್ನಾಕುಂ ಜಿಲ್ಲೆಯ ಮುತೊಲಪುರಂ ನಿವಾಸಿ ಜೂಡ್ ಮಾಥ್ಯೂ (20) ಬಂಧಿತ ಆರೋಪಿ. ಆತನಿಂದ 5.20 ಗ್ರಾಂ ತೂಕದ MDMA ಮಾದಕ ವಸ್ತು, ಕೃತ್ಯಕ್ಕೆ ಬಳಸಿದ ಬೈಕ್ ಸಮೇತ ಒಟ್ಟು 70,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪದವು ಗ್ರಾಮದ ಕೈಲಾಸ ಕಾಲನಿ ಹತ್ತಿರ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಬಳಿ […]

DAKSHINA KANNADA HOME LATEST NEWS

ಮೂಡಬಿದ್ರೆಯಲ್ಲಿ ಜ. 30 ರಿಂದ ಅಗ್ನಿವೀರ್ ನೇಮಕಾತಿ ರ್ಯಾಲಿ

ಮಂಗಳೂರು: ಮಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಜನವರಿ 30 ರಿಂದ ಫೆಬ್ರವರಿ 10 ರವರೆಗೆ ಮೂಡಬಿದ್ರಿ ಸ್ವರಾಜ್ ಮೈದಾನದಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿ ನಡೆಯಲಿದೆ. ರಾಜ್ಯದ 11 ಜಿಲ್ಲೆಗಳಿಂದ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಸೇರಿದಂತೆ ಕಿರುಪಟ್ಟಿ ಮಾಡಿದ ಅಭ್ಯರ್ಥಿಗಳಿಗಾಗಿ 1 ಅಗ್ನಿವೀರ್ ನೇಮಕಾತಿ ರ್ಯಾಲಿಯನ್ನು ಜನವರಿ 30 ರಿಂದ ಫೆಬ್ರವರಿ 10 ರವರೆಗೆ ಮೂಡಬಿದ್ರಿಯ ಸ್ವರಾಜ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ. 30 […]

LATEST NEWS

ಸೇಂಟ್ ಅಲೋಶಿಯಸ್ ಶಾಲೆಯಿಂದ ನಾಳೆ ಅಂತರ್ಗತ “ಅಲೋಯ್ ಕ್ವಿಜ್-ವಿಜ್ 2026”

ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅದರ ಹಳೆಯ ವಿದ್ಯಾರ್ಥಿ ಸಂಘವು (SACAA ನ ಒಂದು ಭಾಗ), ವಿದ್ಯಾರ್ಥಿಗಳಿಗಾಗಿ ನವೀನ ಮತ್ತು ಅಂತರ್ಗತ ರಸಪ್ರಶ್ನೆ ಕಾರ್ಯಕ್ರಮವಾದ “ಅಲೋಯ್ ಕ್ವಿಜ್-ವಿಜ್ 2026” ಅನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಜನವರಿ 18, 2026 ರ ಭಾನುವಾರದಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾಲಾ ಆವರಣದಲ್ಲಿ ನಡೆಯಲಿದ್ದು, ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸಭಾಪತಿಗಳಾದ ಶ್ರೀ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಗಳಾಗಿ […]

DAKSHINA KANNADA HOME

*ನರೇಗ ಬಜಾವ್ ಸಂಗ್ರಾಮ್’ ದ.ಕ. ಜಿಲ್ಲೆಯಾದ್ಯಂತ ಆಂದೋಲನ :ಕೆ.ಹರೀಶ್ ಕುಮಾರ್*

ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬಚಾವ್ ಸಂಗ್ರಾಮ್ ಪೂರ್ವಭಾವಿ ಸಭೆ ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಕಾರ್ಮಿಕರು ಹಾಗೂ ಪಂಚಾಯಿತಿಗಳ ಅಭಿವೃದ್ಧಿಗೆ ಪೂರಕವಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ ಮತ್ತು ಕಾಯ್ದೆ ಮರುಜಾರಿಗೆ ಆಗ್ರಹಿಸಿ ಎಐಸಿಸಿ ಯ ಸೂಚನೆ […]

DAKSHINA KANNADA HOME

*ಇ-ಖಾತಾ ಸಮಸ್ಯೆ ಕಾಂಗ್ರೆಸ್ ಕೃಪಾಪೋಷಿತ ಗ್ಯಾರಂಟಿ :ಶಾಸಕ ಕಾಮತ್ *

ಮಂಗಳೂರು .ಜನವರಿ 17: ಮ.ನ.ಪಾ. ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಇನ್ನೂ ಸಹ ಜನರು ಹರಸಾಹಸ ಪಡುವಂತಾಗಿದ್ದು ದಪ್ಪ ಚರ್ಮದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಬಗ್ಗೆ ಚಿಂತೆಯೇ ಇಲ್ಲವಾಗಿರುವುದು ದುರಂತವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದ ದಿನದಿಂದಲೂ ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆ ಉಂಟಾಗಿದೆ. ದೂರದ ಊರುಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಖರೀದಿದಾರರು, ಮಾರಾಟಗಾರರು ಇಲ್ಲಿಗೆ ಬಂದು ಹಲವು ದಿನಗಳ ನಂತರವೂ ತಮ್ಮ ಕೆಲಸವಾಗದೇ […]

DAKSHINA KANNADA

*126 ಮಕ್ಕಳಿಂದ ಒಂದೇ ವೇದಿಕೆಯಲ್ಲಿ ಶತಸ್ಮರಣ-ಶತನಮನ-ಚೆಲ್ಡುವಾಲೆ ಭಜನಾ ಸಂಪನ್ನ*

ಮಂಗಳೂರು ರಥಬೀದಿ ಗುರುವಾರ ಇಳಿಸಂಜೆ ಅಕ್ಷರಶ: ಜನಸಾಗರಕ್ಕೆ ಸಾಕ್ಷಿಯಾಗಿತ್ತು. ಕಾಶೀಮಠದ ಹಿರಿಯ ಯತಿವರೇಣ್ಯರಾದ, ವೃಂದಾವನಸ್ಥ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಪ್ರಯುಕ್ತ 126 ಮಕ್ಕಳು ಒಂದೇ ವೇದಿಕೆಯಲ್ಲಿ ಏಕಕಂಠದಲ್ಲಿ 11 ವಿವಿಧ ಭಜನಾ ಹಾಡುಗಳನ್ನು ಹಾಡುವ ಮೂಲಕ ಸ್ವಾಮೀಜಿಯವರಿಗೆ ಭಜನಾ ಸೇವೆಯನ್ನು ಸಮರ್ಪಿಸಿದರು.ಪುಟ್ಟ ಚಿಣ್ಣರಿಂದ ಹಿಡಿದು ಎಂಟನೇ ತರಗತಿಯ ತನಕ ಮಕ್ಕಳು ಶತಸ್ಮರಣ – ಶತನಮನ- ಚೆಲ್ಡುವಾಲೆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪರೂಪದ ವಿಶೇಷ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ […]

DAKSHINA KANNADA HOME LATEST NEWS

ಬಿಕರ್ನಕಟ್ಟೆ ಪುಣ್ಯಕ್ಷೇತ್ರ: ವಾರ್ಷಿಕ ಮಹೋತ್ಸವದ ಎರಡನೇ ದಿನ ಮಕ್ಕಳಿಗಾಗಿ ವಿಶೇಷ ಬಲಿಪೂಜೆ

ಬಿಕರ್ನಕಟ್ಟೆ: ಇಲ್ಲಿನ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇ ದಿನವು ಭಕ್ತಾದಿಗಳ ಅಭೂತಪೂರ್ವ ಸ್ಪಂದನೆಗೆ ಸಾಕ್ಷಿಯಾಯಿತು. ದಿನವಿಡೀ ಸುಮಾರು 40,000ಕ್ಕೂ ಹೆಚ್ಚು ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ, ಬಾಲ ಯೇಸುವಿನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.   ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗಾಗಿ ಕೊಂಕಣಿ ಮತ್ತು ಮಲಯಾಳಂ ಭಾಷೆಗಳಲ್ಲಿ ಒಟ್ಟು ಐದು ಪವಿತ್ರ ಬಲಿಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ದಿನದ ಪ್ರಮುಖ ಆಕರ್ಷಣೆಯಾಗಿ ಬೆಳಗ್ಗೆ 10:00 ಗಂಟೆಗೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಡಾ. ದುಮಿಂಗ್ ಡಾಯಸ್ […]

DAKSHINA KANNADA HOME LATEST NEWS

ಮೂಡುಬಿದಿರೆ: ಬಾಲಕನಿಗೆ ಲೈಂಗಿಕ ದೌರ್ಜನ್ಯ- ಶಿಕ್ಷಕನ ವಿರುದ್ಧ ಫೋಕ್ಸೊ ಕೇಸು ದಾಖಲು

ಮೂಡುಬಿದಿರೆ: ವಿದ್ಯಾರ್ಥಿಯೊಬ್ಬನಿಗೆ ವಿಶೇಷ ತರಗತಿಯ ನೆಪದಲ್ಲಿ ಕರೆದೊಯ್ದು ನಗ್ನ ವಿಡಿಯೊ ಚಿತ್ರೀಕರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಶಿಕ್ಷಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕ ಅಲ್ತಾಫ್ ಬಂಧಿತ ಆರೋಪಿ.ಗ್ರಾಮದ ಶಾಲೆಯೊಂದರಲ್ಲಿ ಸಂತ್ರಸ್ತ ಬಾಲಕ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಗಣಿತ ವಿಷಯದಲ್ಲಿ ಹೆಚ್ಚು ಅಂಕ ಕೊಡಿಸುವುದಾಗಿ ನಂಬಿಸಿದ ಶಿಕ್ಷಕ ಅಲ್ತಾಫ್, ಬಾಲಕನನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅಲ್ಲಿ ಬಾಲಕನಿಗೆ ಮಾದಕ ದ್ರವ್ಯ ಬೆರೆಸಿದ ಜ್ಯೂಸ್ ನೀಡಿ ಅರೆಪ್ರಜ್ಞಾವಸ್ಥೆಗೆ ತಲುಪಿಸಿ, ಆತನ ನಗ್ನ ವಿಡಿಯೊ ಚಿತ್ರೀಕರಿಸಿ ಲೈಂಗಿಕ […]