Tag: ಕೆನರಾಟಿವಿ

LATEST NEWS

ಧವಳ ಕೋ-ಆಪರೇಟಿವ್ ಸೊಸೈಟಿ ಮಂಗಳೂರು: 2025-26ನೇ ಸಾಲಿನಲ್ಲಿ ರೂ. 200 ಕೋಟಿ ವ್ಯವಹಾರ; ರೂ. 50.95 ಲಕ್ಷ ನಿವ್ವಳ ಲಾಭ

ಮಂಗಳೂರು: ನಗರದ ಹೃದಯ ಭಾಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಧವಳ ಕೋ-ಆಪರೇಟಿವ್ ಸೊಸೈಟಿ ನಿಯಮಿತವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಸುಮಾರು ರೂ. 200 ಕೋಟಿ ವ್ಯವಹಾರದೊಂದಿಗೆ ರೂ. 50.95 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಅವರು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ (ಜೂನ್ 2022) ರಾಜ್ಯಮಟ್ಟದ ಉದ್ದೇಶದೊಂದಿಗೆ ಆರಂಭಗೊಂಡ ಈ ಸಂಸ್ಥೆಯು ಅಲ್ಪಾವಧಿಯಲ್ಲಿಯೇ ಗಮನಾರ್ಹ ಸಾಧನೆ ಮಾಡಿದೆ. ದಿನಾಂಕ 31.03.2026ರ ಅಂತ್ಯಕ್ಕೆ ಸಂಸ್ಥೆಯು […]

LATEST NEWS

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ

ಮಂಗಳೂರು, ಏಪ್ರಿಲ್ 25: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಸಣ್ಣ ಸೇತುವೆ (ಕಾಲು ಸಂಕ) ಮುರಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ದೈವದ ಭಂಡಾರವನ್ನು ಹೊತ್ತು ಸಾಗುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಪುಚ್ಚೆಮೊಗರು ಬಾವದಬೈಲು ಎಂಬಲ್ಲಿಂದ ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ ಭಕ್ತಿ-ಸಂಭ್ರಮದಿಂದ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಹಳ್ಳವೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು […]

COMMUNITY NEWS LATEST NEWS

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಬೇಸಿಗೆ ಶಿಬಿರ

ವಿಟ್ಲ.ಎಪ್ರಿಲ್ 24: ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ವತಿಯಿಂದ 1ನೇ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಶಿಬಿರದಲ್ಲಿ ಒಟ್ಟು 56 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಫಾತಿಮಾ ಮಾತಾ ಸಮುದಾಯ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯದ ಧರ್ಮಗುರುಗಳಾದ ವಂ| ಫಾ| ಸೈಮನ್ ಡಿ ಸೋಜಾ ಅವರು ವಹಿಸಿ, ಶಿಬಿರಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನ್ನಿಸ್ […]

LATEST NEWS

ಪಿವಿಎಸ್ ಬಸ್ ತಂಗುದಾಣದಲ್ಲಿ ರೋಟರಿ ಸೆಂಟ್ರಲ್ ನಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

ಮಂಗಳೂರು, ಏಪ್ರಿಲ್. 24: ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸುವಲ್ಲಿ ಸೇವಾಮನೋಭಾವ ಹೊಂದಿರುವ ಜನರು ಮತ್ತು ಸಂಘ ಸಂಸ್ಥೆಗಳುಸಹಭಾಗಿತ್ವ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.ಅವರು ಗುರುವಾರ ನಗರದ ಪಿವಿಎಸ್ ವೃತ್ತದ ಬಸ್ ನಿಲ್ದಾಣದಲ್ಲಿ ಸಾರ್ವಜನಿ ಕರಿಗಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಅಳವಡಿಸಲಾದ ಶುದ್ದ ಕುಡಿಯು ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಸೇವಾ ಚಟುವಟಿಕೆಯನ್ನೇ ಧ್ಯೇಯವಾಗಿರಿ ಸಿಕೊಂಡಿರುವ ರೋಟರಿ ಸಂಸ್ಥೆ ನಗರದ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು […]

HOME LATEST NEWS

ರಿಕ್ಷಾ ಬಾಡಿಗೆ ದರ ಪರಿಷ್ಕರಣೆ ಹಾಗೂ LPG/CNG ಗ್ಯಾಸ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಿಕ್ಷಾ ಚಾಲಕರು ಹಾಗೂ ಮಾಲಕರು ಎದುರಿಸುತ್ತಿರುವ ಗಂಭೀರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಮೋಟಾರ್ ಮತ್ತು ಜನರಲ್ ಮಜ್ದೂರು ಸಂಘ (ಬಿಎಂಎಸ್) ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಮನವಿಯ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ ವಹಿಸಿದ್ದರು. ಇತ್ತೀಚಿನ ಜಾಗತಿಕ ಪರಿಸ್ಥಿತಿ ಹಿನ್ನೆಲೆ ಇಂಧನದ ಬೆಲೆ ಏರಿಕೆ ಹಾಗೂ LPG/CNG ಗ್ಯಾಸ್ ಅಭಾವವು ರಿಕ್ಷಾ ಕಾರ್ಮಿಕರ ಜೀವನದ ಮೇಲೆ […]

NATIONAL

ಬಿಸಿಲಿನ ತಾಪಕ್ಕೆ ಸ್ಪಂದಿಸಿದ ಶಾಸಕರು; ಅಶೋಕ್ ರೈ ಕಚೇರಿಯಲ್ಲಿ ‘ಚಿಕ್ಕಿ’ ಬದಲು ತಂಪು ‘ಮಜ್ಜಿಗೆ’ ವಿತರಣೆ

ಪುತ್ತೂರು: ಕರಾವಳಿಯಲ್ಲಿ ದಿನೇ ದಿನೇ ಏರುತ್ತಿರುವ ಬಿಸಿಲಿನ ಬೇಗೆಯಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ನಿರಾಳತೆ ನೀಡುವ ಉದ್ದೇಶದಿಂದ ಪುತ್ತೂರು ಶಾಸಕ ಅಶೋಕ್ ರೈ ಅವರು ತಮ್ಮ ಕಚೇರಿಯಲ್ಲಿ ಹೊಸ ಮಾದರಿಯ ಜನಪರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸೋಮವಾರ ಕಚೇರಿಗೆ ಭೇಟಿ ನೀಡಿದ ನೂರಾರು ಜನರಿಗೆ ಸಾಂಪ್ರದಾಯಿಕ ‘ಚಿಕ್ಕಿ’ಯ ಬದಲಾಗಿ ತಂಪು ‘ಮಜ್ಜಿಗೆ’ ನೀಡಿ ದಾಹ ನೀಗಿಸಲಾಯಿತು. ಶಾಸಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಶೋಕ್ ರೈ ಅವರು ಪ್ರತಿ ಸೋಮವಾರ ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಸಿಹಿ ತಿನಿಸಾದ ‘ಚಿಕ್ಕಿ’ […]

COMMUNITY NEWS LATEST NEWS

ಬಜ್ಜೋಡಿಯಲ್ಲಿ ‘ಮಾಣ್ಕಾಂ ಮೊತಿಯಾಂ-2’ ಮಕ್ಕಳ ಕೊಂಕಣಿ ರಜಾ ಶಿಬಿರಕ್ಕೆ ಚಾಲನೆ

ಮಂಗಳೂರು. ಎಪ್ರಿಲ್ 20: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿ ಇವರ ಸಹಯೋಗದೊಂದಿಗೆ ಮಾಂಡ್ ಸೊಭಾಣ್ ಸಂಸ್ಥೆಯ ಸಹಕಾರದೊಂದಿಗೆ ನಡೆಸುವ ಮಾಣ್ಕಾಂ ಮೊತಿಯಾಂ-2 ಮಕ್ಕಳ ರಜಾ ಶಿಬಿರದ ಉದ್ಘಾಟನಾ ಸಮಾರಂಭ ಇನ್ಫೆಂಟ್ ಮೇರಿ ಸಭಾಭವನ ಬಜ್ಜೋಡಿ ಇಲ್ಲಿ ನೆರವೇರಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿದ್ದರು.ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೊಂಕಣಿ ಮಕ್ಕಳು ಕೊಂಕಣಿ ಭಾಷೆಯನ್ನು ಕಲಿಯುವ ಅವಶ್ಯಕತೆ ಇದೆ. ಅಕಾಡೆಮಿಯು ಇಂತಹ ಶಿಬಿರಗಳಿಗೆ ಪ್ರೋತ್ಸಾಹವನ್ನು […]

LATEST NEWS

ಕ್ಯಾನ್ಸ್ ಚಲನಚಿತ್ರೋತ್ಸವದ ‘ಮಾರ್ಶೆ ಡು ಫಿಲ್ಮ್’ ವಿಭಾಗಕ್ಕೆ ಮಂಗಳೂರು ಮೂಲದ ನಿರ್ದೇಶಕಿಯ ‘ಸೆಪ್ಟೆಂಬರ್ 21’ ಸಿನಿಮಾ ಆಯ್ಕೆ

ಮಂಗಳೂರು: ಕ್ಯಾನ್ಸ್ ಚಲನಚಿತ್ರೋತ್ಸವದ ಮಾರ್ಶೆ ಡು ಫಿಲ್ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಆಲ್ಝೈಮರ್ ಮತ್ತು ಆರೈಕೆದಾರರ ಕುರಿತಾದ ಹಿಂದಿ-ಕನ್ನಡ ಚಿತ್ರ ಕ್ಯಾನ್ಸ್ 2026ರ ಮಾರ್ಶೆ ಡು ಫಿಲ್ಮ್ ವಿಭಾಗದಲ್ಲಿ ಪ್ರೀಮಿಯರ್ ಕಾಣಲಿದ್ದು, ಭಾರತದ ತುರ್ತು ಸಾಮಾಜಿಕ ನಿರೂಪಣೆಗಳನ್ನು ಜಾಗತಿಕವಾಗಿ ಎತ್ತಿ ತೋರಿಸಲಿದೆ. ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್, ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಯೆ, ಮತ್ತು ಅಮಿತ್ ಬೆಹ್ಲ್ ಅಭಿನಯದ ಸೆಪ್ಟಂಬರ್ 21_ ಚಿತ್ರತಂಡವು, ಮೇ 12 ರಿಂದ ಮೇ 23 ರವರೆಗೆ ನಡೆಯಲಿರುವ 79ನೇ […]

LATEST NEWS

ಪಾದುವಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಸಂಭ್ರಮದ ವಾರ್ಷಿಕೋತ್ಸವ ಆಚರಣೆ

ಮಂಗಳೂರು : ನಗರದ ಪಾದುವಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ ಮೆಂಟ್‌ನ ವಾರ್ಷಿಕೋತ್ಸವವು ಎಪ್ರಿಲ್ 17ರಂದು ಕಾಲೇಜು ಆವರಣದಲ್ಲಿ ಅತ್ಯಂತ ಸಡಗರದಿಂದ ಜರುಗಿತು. ಪಾದುವಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಗುರುಗಳಾದ ವಾಲ್ಟರ್ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಸ್ಮಾರ್ಟ್ ಸಿಟಿಯ ಪ್ರಧಾನ ವ್ಯವಸ್ಥಾಪಕ ಶ್ರೀ ಅರುಣ್ ಪ್ರಭ ಕೆ.ಎಸ್. ಮಾತನಾಡಿ, “ನಾನು ಪಾದುವಾ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಇಲ್ಲಿ ಪಡೆದ ಜ್ಞಾನ ಮತ್ತು ಶಿಸ್ತು ನನ್ನ […]

LATEST NEWS

ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ಘೋಷಣೆ

ಪುತ್ತೂರು: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಮತ್ತು ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕಡಿಕೆ ಚಾವಡಿಯಲ್ಲಿ ನಡೆಯಲಿರುವ ಜೀರ್ಣೋದ್ದಾರ ಕಾರ್ಯಗಳಿಗಾಗಿ ರಚಿಸಲಾಗಿರುವ ನೂತನ ಜೀರ್ಣೋದ್ದಾರ ಸಮಿತಿಯ ಘೋಷಣೆ ಹಾಗೂ ಸಾಮೂಹಿಕ ಹಾಲು ಪಾಯಸ ಸೇವೆ ಮತ್ತು ಸಾರ್ವಜನಿಕ ರಂಗಪೂಜೆ ಸೇವೆಗಳು ಎ.18ರಂದು ನಡೆಯಿತು. ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಶಾಸಕ ಅಶೋಕ್ ಕುಮಾ‌ರ್ ರೈಯವರು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಜೀರ್ಣೋದ್ದಾರಕ್ಕೆ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ 1.50 ಕೋಟಿ ಅಧಿಕ ವಾಗ್ದಾನ […]