COMMUNITY NEWS

ಕ್ರಿಶ್ಚಿಯನ್ ಸಮುದಾಯದ ಚರ್ಚ್, ಸಮುದಾಯ ಭವನ, ಆಶ್ರಮಗಳ ಅಭಿವೃದ್ಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಆಗಸ್ಟ್ 19:ರಾಜ್ಯ ಸರ್ಕಾರದ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಯೋಜನೆಯಡಿ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಹಾಯಧನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಹಾಯಧನ ಸಿಗುವ ಪ್ರಮುಖ ಯೋಜನೆಗಳು:

ಚರ್ಚ್‌ಗಳ ಅಭಿವೃದ್ಧಿ: ಚರ್ಚ್‌ಗಳ ದುರಸ್ತಿ, ನವೀಕರಣ, ಪುನರ್ ನಿರ್ಮಾಣ, ಪುನಃಸ್ಥಾಪನೆ, ಉನ್ನತೀಕರಣ ಹಾಗೂ ಚರ್ಚ್ ಆವರಣಗೋಡೆ ನಿರ್ಮಾಣ. . ಸ್ಮಶಾನಗಳ ಅಭಿವೃದ್ಧಿ: ಕ್ರಿಶ್ಚಿಯನ್ ಸಮುದಾಯದ ಸಮಾಧಿ/ಸ್ಮಶಾನ ಸ್ಥಳಗಳಲ್ಲಿ ಕಾಂಪೌಂಡ್ ಗೋಡೆ ಮತ್ತು ಅಗತ್ಯ ಮೂಲಭೂತ ಸೌಲಭ್ಯಗಳ ನಿರ್ಮಾಣ.

ಸಮುದಾಯ ಭವನ: ಸಮುದಾಯದ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಹೊಸ ಸಮುದಾಯ ಭವನಗಳ ನಿರ್ಮಾಣ.

ಆಶ್ರಮಗಳಿಗೆ ನೆರವು: ಕ್ರಿಶ್ಚಿಯನ್ ಸಮುದಾಯದ ವತಿಯಿಂದ ನಡೆಸಲ್ಪಡುವ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಧನಸಹಾಯ.

ವಿಶೇಷ ಆರೈಕೆ ಕೇಂದ್ರಗಳು: ಹೆಚ್.ಐ.ವಿ/ಏಡ್ಸ್ ಪೀಡಿತರು ಹಾಗೂ ದೈಹಿಕ/ಮಾನಸಿಕ ವಿಕಲಚೇತನರಿಗಾಗಿ ಕ್ರಿಶ್ಚಿಯನ್ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಆಶ್ರಯ ಮತ್ತು ಆರೈಕೆ ಕೇಂದ್ರಗಳಿಗೆ ಸಹಾಯಧನ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಸಂಸ್ಥೆಗಳು ಇಲಾಖೆಯ ಅಧಿಕೃತ ಆನ್‌ಲೈನ್ ಪೋರ್ಟಲ್ karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಪ್ರಸ್ತಾವನೆಯ ಮೂಲ ದಾಖಲೆಗಳು (Original Documents) ಹಾಗೂ ಹೆಚ್ಚುವರಿ ಒಂದು ನಕಲು ಪ್ರತಿಯನ್ನು (One Xerox Copy) ಮಂಗಳೂರಿನ ಪಾಂಡೇಶ್ವರದ ಓಲ್ಡ್‍ ಕೆಂಟ್ ರೋಡ್‌ನಲ್ಲಿರುವ **”ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಯವರ ಕಛೇರಿ”**ಗೆ ಖುದ್ದಾಗಿ ಸಲ್ಲಿಸಬೇಕಾಗಿ ಕೋರಲಾಗಿದೆ.

Share News