Tag: ಕೆನರಾಟಿವಿ

HOME LATEST NEWS STATE

*ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್*

ಬೆಂಗಳೂರು, ಜು.15:”ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳ ಮುಕ್ತಿಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಏಕಪಕ್ಷೀಯ ನಿರ್ಧಾರ ನಮ್ಮ ಧೋರಣೆಯಲ್ಲ. ಆಸ್ತಿಯನ್ನು ನೀವು ಕೊಂಡುಕೊಂಡ ಮೇಲೆ ನೀವೇ ಅದರ ಮಾಲೀಕರು. ಈ ವಿಚಾರದಲ್ಲಿ ಅನುಮಾನವಿಲ್ಲ‌” ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಹೇಳಿದರು. ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) 2026 ಕುರಿತು ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನೆಹರು ತಾರಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. […]

COMMUNITY NEWS LATEST NEWS

ಒಳ್ಳೆಯ ಗಾಯಕರಾಗುವ ಮುನ್ನ ಒಳ್ಳೆಯ ಕೇಳುಗರಾಗಿ: ಸಂಗೀತ ನಿರ್ದೇಶಕ ಸಂಜಯ್ ಜಾನ್ ರೊಡ್ರಿಗಸ್ ಕಿವಿಮಾತು

ಮಂಗಳೂರು: “ಒಳ್ಳೆಯ ಗಾಯಕರಾಗುವ ಮುನ್ನ ಒಳ್ಳೆಯ ಕೇಳುಗರಾಗಿ. ನೀವು ಎಷ್ಟು ಆಲಿಸುತ್ತೀರೋ, ಅಷ್ಟು ಕಲಿಯುತ್ತೀರಿ. ಕೇವಲ ಹಾಡುವುದಷ್ಟೇ ಅಲ್ಲ; ನೋಡಿ, ಆಲಿಸಿ, ಅರ್ಥಮಾಡಿಕೊಳ್ಳಿ ಮತ್ತು ಅಧ್ಯಯನ ಮಾಡಿ. ಹಾಡನ್ನು ಕೇಳಿ, ಬರೆಯಿರಿ, ರಿಪ್ಲೇ ಮಾಡಿ, ಮತ್ತೆ ಬರೆಯಿರಿ. ಹಿರಿಯರಿಂದ ಮಾರ್ಗದರ್ಶನ ಪಡೆಯಿರಿ. ಎಲ್ಲಕ್ಕಿಂತ ಮಿಗಿಲಾಗಿ ವಿನಯಶೀಲರಾಗಿರಿ. ನಿರಂತರ ಅಭ್ಯಾಸ ನಿಮ್ಮನ್ನು ಎತ್ತರಕ್ಕೆ ಬೆಳೆಸಿದರೆ, ವಿನಯಶೀಲತೆಯು ನಿಮಗೆ ಹೆಚ್ಚಿನ ಅವಕಾಶಗಳನ್ನು ತಂದು ಕೊಡುತ್ತದೆ” ಎಂದು ಖ್ಯಾತ ಸಂಗೀತ ನಿರ್ದೇಶಕ ಸಂಜಯ್ ಜಾನ್ ರೊಡ್ರಿಗಸ್ ಕಿವಿಮಾತು ಹೇಳಿದರು. ಕಲಾಂಗಣದಲ್ಲಿ ನಡೆದ […]

LATEST NEWS

ಪಾನೀರು ಚರ್ಚ್‌ನಲ್ಲಿ ಆಧಾರ್ ಸೇವೆ ಹಾಗೂ ಆರೋಗ್ಯ ವಿಮೆ ಜನಜಾಗೃತಿ ಅಭಿಯಾನ:

ಮಂಗಳೂರು: ಮೆರ್ಸಿನ್ ಮಾತೆಯ ಇಗರ್ಜಿ, ಪಾನೀರು ಇದರ ಮುಂದಾಳತ್ವದಲ್ಲಿ, ಭಾರತೀಯ ಅಂಚೆ ಇಲಾಖೆ, ಮಂಗಳೂರು ಇವರ ಸಹಯೋಗದಲ್ಲಿ ಹಾಗೂ ಕಥೊಲಿಕ್ ಸಭಾ ಪಾನೀರು ಘಟಕ, ಆರೋಗ್ಯ ಆಯೋಗ, ಕುಟುಂಬ ಆಯೋಗ, ಕಾರ್ಮಿಕ ಆಯೋಗ, ಸಾಮಾಜಿಕ ಅಭಿವೃದ್ಧಿ ಆಯೋಗ, ಐ.ಸಿ.ವೈ.ಎಂ. ಪಾನೀರು ಘಟಕ, ಎಸ್.ವಿ.ಪಿ. ಹಾಗೂ ಸ್ತ್ರೀ ಸಂಘಟನೆ ಇವರ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆ ಜನಜಾಗೃತಿ ಅಭಿಯಾನವು ಪಾನೀರು ಚರ್ಚ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಮೆರ್ಸಿನ್ ಮಾತೆಯ […]

DAKSHINA KANNADA HOME LATEST NEWS

ಮಾಣಿಲ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶಾಸಕ ಅಶೋಕ್ ಕುಮಾರ್ ರೈ ಅವರಿಂದ ₹30 ಕೋಟಿ ಬಂಪರ್ ಕೊಡುಗೆ: ₹2.39 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ

ಮಾಣಿಲ: ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಆಯಾಮ ದೊರೆತಿದ್ದು, ವಿವಿಧ ಪ್ರಮುಖ ಕಾಮಗಾರಿಗಳಿಗಾಗಿ ಒಟ್ಟು ರೂ. 2 ಕೋಟಿ 39 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ. ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಅವರ ವಿಶೇಷ ಮುತುವರ್ಜಿಯಿಂದಾಗಿ ಈ ಬೃಹತ್ ಅನುದಾನ ಮಂಜೂರಾಗಿದ್ದು, ಗ್ರಾಮದ ಹಲವು ರಸ್ತೆಗಳು, ತಡೆಗೋಡೆಗಳು ಹಾಗೂ ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ […]

LATEST NEWS

*ರಾಜ್ಯ ದತ್ತಾಂಶದ ಸುರಕ್ಷತೆ, ಸೈಬರ್ ಭದ್ರತಾ ಚೌಕಟ್ಟು ಬಲಪಡಿಸುವುದು ವಿಷಯದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ*

ಬೆಂಗಳೂರು, ಜುಲೈ 13 : ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಇ-ಆಡಳಿತ ಕೇಂದ್ರ (CeG), ಕರ್ನಾಟಕದ ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರ (CySecK) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗದ ಸಹಯೋಗದೊಂದಿಗೆ ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ *ರಾಜ್ಯ ದತ್ತಾಂಶಕ್ಕಾಗಿ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸುವುದು* ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಮಹತ್ವದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ಡಿಜಿಟಲ್ ಆಡಳಿತ ವ್ಯವಸ್ಥೆಯಲ್ಲಿ ಸೈಬ‌ರ್ ಭದ್ರತೆಯನ್ನು ಬಲಪಡಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು […]

LATEST NEWS

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಮತ್ತು ಹಿರಿಯ ವೈದ್ಯರಿಗೆ ಸನ್ಮಾನ

ಮಂಗಳೂರು, ಜು.13:-ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸರಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆ.ಎಂ.ಸಿ.) ಪರಸ್ಪರ ಒಡಂಬಡಿಕೆಯೊಂದಿಗೆ ಕಳೆದ 70 ವರ್ಷಗಳಿಂದ ಸಾರ್ವಜನಿಕ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬಂದಿವೆ. ಈ ಸುದೀರ್ಘ ಸೇವೆಯ ನೆನಪಿನಲ್ಲಿ ಎರಡೂ ಸಂಸ್ಥೆಗಳ ವೈದ್ಯರ ನಿಸ್ವಾರ್ಥ ಸೇವಾ ಕೈಂಕರ್ಯವನ್ನು ಸ್ಮರಿಸುವ ವಿಶೇಷ ಕ್ಷಣಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಹಿರಿಯ ವೈದ್ಯರಿಗೆ ಗೌರವ ಸನ್ಮಾನ:ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದ ಹಿರಿಯ ತಜ್ಞರುಗಳಾದ […]

HOME LATEST NEWS

ನಾಗರಿಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ “Mangalore IAS – A School for Civil Services” ಸಂಸ್ಥೆಯ ಉದ್ಘಾಟನೆ

ಮಂಗಳೂರು: ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಜು.11ರಂದು ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷ ಅತೀ ವಂದನೀಯ ಧರ್ಮಧ್ಯಕ್ಷ ರಾದ ಡಾ.ಹೆನ್ರಿ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಆಶೀರ್ವಾದಿಸಿದರು. ರಾಮಕೃಷ್ಣ ಮಠದ ಸ್ವಾಮೀಜಿ ಯುಗಾನಂದ ಅವರು ದೀಪ ಪ್ರಜ್ವಲನೆ, ಆಶೀರ್ವಚನ ನೀಡಿದರು. ನಂತರ […]

DAKSHINA KANNADA HOME LATEST NEWS

ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ: ಎರಡೂ ಮನೆಗೆ ಭೇಟಿ ನೀಡಿದ ಶಾಸಕ- ವಾಸ್ತವ ಪರಿಸ್ಥಿತಿ ಅವಲೋಕನ

ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಆಶೋಕ್‌ ರೈ ಎರಡೂ ಕಡೆಯವರ ಮನೆಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ತಿಳಿದಿದ್ದಾರೆ. ಜೊತೆಗೆ ಪ್ರಕರಣ ನಡೆದ ಸ್ಥಳದಲ್ಲಿದ್ದ ಅಂಗಡಿ ವ್ಯಾಪಾರಿಯನ್ನು ಭೇಟಿಯಾಗಿದ್ದಾರೆ. ಯುವಕ ಹೇಳಿದ್ದೇನು? ಆರೋಪಿತ ಯುವಕನ ಮನೆಗೆ ಭೇಟಿ ನೀಡಿದ ಅವರು ಸ್ವತಃ ಅವರಿಂದಲೇ ವಾಸ್ತವ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಘಟನೆ ವಿವರಿಸಿದ ಯುವಕ, ತಾನು ತನ್ನ ಕೆಲ ಸ್ನೇಹಿತರ ಜತೆ ಬೆಳಗ್ಗೆ ಪ್ರತಿನಿತ್ಯ […]

HOME LATEST NEWS STATE

ಡೈವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಲೇರಿದ್ದ 15 ಜೋಡಿ ಮತ್ತೆ ಹಾರ ಬದಲಿಸಿ ಒಂದಾದ ಕ್ಷಣ…!

ಧಾರವಾಡ: ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ಕಾರಣದಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ 15 ದಂಪತಿ  ನ್ಯಾಯಾಧೀಶರ ಮನವೊಲಿಕೆ ಮತ್ತು ಸಮಾಲೋಚನೆಯ ಬಳಿಕ ಮತ್ತೆ ಒಂದಾದರು. ಎಲ್ಲವನ್ನೂ ಮರೆತು ಮತ್ತೊಮ್ಮೆ ಹೊಸ ಜೀವನಕ್ಕೆ ಜೋಡಿಗಳು ಕಾಲಿಟ್ಟಿದ್ದು, ಈ ಅಪರೂಪದ ಘಟನೆಗೆ ಧಾರವಾಡ ಜಿಲ್ಲಾ ನ್ಯಾಯಾಲಯ ಇಂದು ಸಾಕ್ಷಿಯಾಯಿತು. ಕೈಯಲ್ಲಿ ಹೂವಿನ ಮಾಲೆ ಹಿಡಿದು ನಿಂತಿರುವ ಜೋಡಿಗಳು, ಅವರಿಗೆ ಬುದ್ಧಿ ಮಾತು ಹೇಳುತ್ತಿರುವ ನ್ಯಾಯಾಧೀಶರು, ಈ ಎಲ್ಲ ದೃಶ್ಯಗಳಿಗೆ ಇಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಗಿತ್ತು. […]

DAKSHINA KANNADA HOME LATEST NEWS

ದ.ಕ.ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್

ಮಂಗಳೂರು: ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ನಿಧನದಿಂದಾಗಿ ತೆರವಾದ ದ.ಕ.ಜಿಲ್ಲಾ ಖಾಝಿ ಸ್ಥಾನಕ್ಕೆ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಬಾ-ಅಲವಿ ಅವರನ್ನು ಆಯ್ಕೆ ಮಾಡಿರುವುದಾಗಿ ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಶನಿವಾರ ಅಧಿಕೃತವಾಗಿ ಘೋಷಿಸಿದರು. ಕೇರಳದ ಹಿರಿಯ ಧಾರ್ಮಿಕ ವಿದ್ವಾಂಸರಾಗಿರುವ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂ ಙಳ್ ಕೆಲವು ದಿನಗಳ ಹಿಂದೆಯೇ ದ.ಕ.ಜಿಲ್ಲಾ […]