Month: April 2026

COMMUNITY NEWS DAKSHINA KANNADA HOME LATEST NEWS

ಮಂಗಳೂರು ಬಿಷಪ್ ಈಸ್ಟರ್ ಸಂದೇಶ: ಶಾಂತಿ ಮತ್ತು ಸಂಧಾನಕ್ಕೆ ಕರೆ

ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು 2026ರ ಈಸ್ಟರ್ ಹಬ್ಬದ ಸಂದರ್ಭದಲ್ಲಿ ನಾಡಿನ ಜನತೆಗೆ ಹಾಗೂ ಕ್ರೈಸ್ತ ಬಾಂಧವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಯೇಸು ಕ್ರಿಸ್ತರ ಪುನರುತ್ಥಾನವು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ ಅದು ಜಗತ್ತಿಗೆ ಭರವಸೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಸಂಘರ್ಷ ಮತ್ತು ಹಿಂಸಾಚಾರಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಷಪ್ ಅವರು, ಇಂದಿನ ಅಶಾಂತಿಯ ವಾತಾವರಣಕ್ಕೆ ಕ್ರಿಸ್ತರ ಪುನರುತ್ಥಾನದ […]

LATEST NEWS

*ಯಕ್ಷಧ್ರುವ ಪಟ್ಲ ಫೌಂಡೇಶನ್: ಮಂಗಳೂರು ಘಟಕದ ಅಷ್ಟಮ ಸಂಭ್ರಮ*

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ಅವರು ಮಾತನಾಡಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗೆ ಗಣನೀಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ […]

LATEST NEWS

* ಮಿಲಾಗ್ರಿಸ್ ಚರ್ಚ್‌ನಲ್ಲಿ ಕ್ರಿಸ್ತನ ಪವಿತ್ರ ಶರೀರದೊಂದಿಗೆ ಮೌನ ಮೆರವಣಿಗೆ ‘ಶುಭ ಶುಕ್ರವಾರ’ಆಚರಣೆ*

ಮಂಗಳೂರು:ಮಾನವಕುಲದ ರಕ್ಷಣೆಗಾಗಿ ಪ್ರಭು ಯೇಸು ಕ್ರಿಸ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದ ಸಂಕೇತವಾಗಿ ‘ಶುಭ ಶುಕ್ರವಾರ’ವನ್ನು (Good Friday) ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ದೇವರ ಅಪಾರ ಪ್ರೀತಿಯನ್ನು ಧ್ಯಾನಿಸುವ ಈ ದಿನದಂದು ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ವಿಶೇಷ ಪ್ರಾರ್ಥನಾ ವಿಧಿಗಳು: ದಿನದ ಧರ್ಮವಿಧಿಗಳ ಭಾಗವಾಗಿ ದೇವರ ವಾಕ್ಯದ ಪಠಣ ಮತ್ತು ಧ್ಯಾನ ನಡೆಯಿತು. ಜಗತ್ತಿನ ವಿವಿಧ ಅಗತ್ಯಗಳಿಗಾಗಿ ಹತ್ತು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಸಿಲುಬೆಯ ಅನಾವರಣದ ಮೂಲಕ ಕ್ರಿಸ್ತನ ತ್ಯಾಗವನ್ನು ಸ್ಮರಿಸಲಾಯಿತು. […]

LATEST NEWS

ಅಲ್ಲಿಪಾದೆ ಚರ್ಚ್‌ನಲ್ಲಿ ಭಕ್ತಿಪೂರ್ವಕ ‘ಶುಭ ಶುಕ್ರವಾರ’ ಆಚರಣೆ

ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನಲ್ಲಿ ‘ಶುಭ ಶುಕ್ರವಾರ’ವನ್ನು (Good Friday) ಅತ್ಯಂತ ಭಕ್ತಿ ಮತ್ತು ಶ್ರದ್ಧಾ ಪೂರಕವಾಗಿ ಆಚರಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಶಿಲುಬೆ ಮರಣವನ್ನು ಸ್ಮರಿಸಿದರು.       ಧರ್ಮಕೇಂದ್ರದ ಪಾಲನಾ ಗುರುಗಳಾದ ವಂದನೀಯ ಫಾದರ್ ರಾಬರ್ಟ್ ಡಿಸೋಜಾ ಅವರ ನೇತೃತ್ವದಲ್ಲಿ ಈ ಪವಿತ್ರ ವಿಧಿವಿಧಾನಗಳು ನಡೆದವು. ವಂದನೀಯ ಫಾದರ್ ಅನುಷ್ ಡಿಕುನ್ಹಾ SJ ಮತ್ತು ವಂದನೀಯ ಫಾದರ್ ಲೆಸ್ಟನ್ ಲೋಬೋ SJ ಅವರು ಪ್ರಾರ್ಥನೆ […]

COMMUNITY NEWS DAKSHINA KANNADA HOME LATEST NEWS

ಕರಾವಳಿಯಲ್ಲಿ ಕ್ರೈಸ್ತರಿಂದ ಧ್ಯಾನ, ಪ್ರಾರ್ಥನೆಯೊಂದಿಗೆ ಗುಡ್‌ ಫ್ರೈಡೇ ಆಚರಣೆ

ಮಂಗಳೂರು: ಇಂದು ಗುಡ್ ಫ್ರೈಡೇ. ಕ್ರೈಸ್ತರಿಗೆ ಅತ್ಯಂತ ಪವಿತ್ರ ದಿನ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮತ್ತು ಮಾನವ ಪಾಪ ವಿಮೋಚನೆಗಾಗಿ ಶಿಲುಬೆಯ ಕ್ರೂರ ಮರಣವನ್ನಪ್ಪಿದ ದೇವ ಪುತ್ರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಈ ಪವಿತ್ರ ದಿನವನ್ನು ವಿಶ್ವದಾದ್ಯಂತ ಭಕ್ತಿಯಿಂದ ಆಚರಿಚಲಾಗುತ್ತಿದೆ. ಅದರಂತೆ ಕರಾವಳಿ ನಗರಿ ಮಂಗಳೂರಿನಲ್ಲೂ ಕ್ರೈಸ್ತ ಭಾಂಧವರು ಈ ಪವಿತ್ರ ಶುಕ್ರವಾರವನ್ನು ಭಕ್ತಿ ಮತ್ತು ಶೃಧ್ದೆಯಿಂದ ಆಚರಿಸಿದರು. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ಚರ್ಚುಗಳಿಗೆ ತೆರಳಿ ವಿಶೇಷ ಪಾರ್ಥನೆಯಲ್ಲಿ […]

HOME LATEST NEWS

ಕೆಎಸ್‌ಆರ್‌ಟಿಸಿ – ಖಾಸಗಿ ಬಸ್ ನಡುವೆ ಭೀಕರ ಅಪಘಾತ: 40ಕ್ಕೂ ಹೆಚ್ಚು ಮಂದಿಗೆ ಗಾಯ

ಶಿರಸಿ: ಇಲ್ಲಿನ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ ಕೊಳಗಿಬೀಸ್ ಬಳಿ ಶುಕ್ರವಾರ ಸಂಜೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಭಟ್ಕಳದಿಂದ ಶಿರಸಿ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ನಡೆದಿದೆ. ಕೊಳಗಿಬೀಸ್ ಬಳಿಯ ತಿರುವಿನಲ್ಲಿ ಚಾಲಕರ ಅಜಾಗರೂಕತೆಯ ಚಾಲನೆಯಿಂದಾಗಿ ವಾಹನಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ […]

DAKSHINA KANNADA HOME LATEST NEWS

ಕುಸಿದು ಬಿದ್ದ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ- ಆಸ್ಪತ್ರೆಗೆ ದಾಖಲು

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅವರ ಅಭಿನಂದನಾ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದೆ. ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಸಂತೋಷ್ ಹೆಗ್ಡೆ ಅವರಿಗೆ ತೀವ್ರ ಸುಸ್ತು ಕಾಣಿಸಿಕೊಂಡು ವೇದಿಕೆಯ ಮೇಲೆಯೇ ಕುಸಿದು […]

COMMUNITY NEWS DAKSHINA KANNADA HOME LATEST NEWS

ಶಿಲುಬೆ ಸೋಲಿನ ಸಂಕೇತವಲ್ಲ, ಬದಲಾಗಿ ಭರವಸೆಯ ದಾರಿದೀಪ: ಬಿಷಪ್‌ ಗುಡ್‌ಫ್ರೈಡೆ ಸಂದೇಶ

ಮಂಗಳೂರು : ಜೆಜು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ಪಂಜದ ಸಂತ ರೀಟಾ ಚರ್ಚ್‌ನಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಸಂಜೆಯ ಆರಾಧನಾ ವಿಧಿಯ ನೇತೃತ್ವ ವಹಿಸಿದ್ದರು. ​ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಜೆಜು ಕ್ರಿಸ್ತರ ಕಷ್ಟಾನುಭವದ ವಾಚನ, ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ, ಪವಿತ್ರ ಶಿಲುಬೆಯ ಆರಾಧನೆ ಹಾಗೂ ಪರಮ ಪ್ರಸಾದ ಸ್ವೀಕಾರದ ವಿಧಿಗಳನ್ನು […]

COMMUNITY NEWS HOME INETRNATIONAL

ಹಳೆಯ ಸಂಪ್ರದಾಯಕ್ಕೆ ಮರುಜೀವ ನೀಡಿದ ಪೋಪ್‌ ಲಿಯೋ

ರೋಮ್‌: ವ್ಯಾಟಿಕನ್‌ನಲ್ಲಿ ಹೊಸ ಪರ್ವವೊಂದು ಆರಂಭವಾಗಿದೆ. ಪೋಪ್ ಲಿಯೋ XIV ಅವರು ಹಳೆಯ ಸಂಪ್ರದಾಯಕ್ಕೆ ಮರುಜೀವ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಕ್ರಿಶ್ಚಿಯನ್ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಹೋಲಿ ಥರ್ಸ್ ಡೇ’ ಅಥವಾ ಪವಿತ್ರ ಗುರುವಾರದಂದು ರೋಮ್‌ನ ಸೇಂಟ್ ಜಾನ್ ಲ್ಯಾಟರ್ನ್ ಬೆಸಿಲಿಕಾದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಪೋಪ್ ಲಿಯೋ XIV ಅವರು 12 ಮಂದಿ ಪಾದ್ರಿಗಳ ಪಾದಗಳನ್ನು ತೊಳೆಯುವ ಮೂಲಕ ‘ಪಾದಕ್ಷಾಲನೆ’ ಸಂಪ್ರದಾಯವನ್ನು ಪುನರಾರಂಭಿಸಿದರು.  ಕಳೆದ ಹಲವು ವರ್ಷಗಳಿಂದ ಪೋಪ್ ಫ್ರಾನ್ಸಿಸ್ ಅವರು […]

LATEST NEWS

ಕರಾವಳಿಯ ಚರ್ಚ್‌ಗಳಲ್ಲಿ ಪಾದ ತೊಳೆದು ಪವಿತ್ರ ಗುರುವಾರ ಆಚರಣೆ

ಮಂಗಳೂರು: ನಗರದ ಮಿಲಾಗ್ರೆಸ್‌ನ ಲೇಡಿ ಆಫ್ ಮಿರಾಕಲ್ಸ್ ಚರ್ಚ್‌ನಲ್ಲಿ ಯೇಸುವಿನ ಕೊನೆಯ ಭೋಜನದ ಸ್ಮರಣೆಯನ್ನು ಆಚರಿಸಲಾಯಿತು. ವಂದನೀಯ ಧರ್ಮ ಗುರು ಉದಯ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು ವಂದನೀಯ ಧರ್ಮ ಗುರು ಅವಿತ್ ಪಾಯ್ಸ್ ಪ್ರಬೋಧನೆ ನೀಡಿ ಪವಿತ್ರ ಪ್ರಸಾದ ಸ್ಥಾಪನೆ, ಪೌರೋಹಿತ್ಯದ ಸಂಸ್ಕಾರ ಮತ್ತು ಸೇವೆಯಲ್ಲಿರಲು ಪ್ರೀತಿಯ ಆಜ್ಞೆಯೊಂದಿಗೆ ದಿನದ ಮಹತ್ವವನ್ನು ಎತ್ತಿ ತೋರಿಸಿದರು. ಮಿಲಾಗ್ರಿಸ್‌ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ ವಂದನೀಯ ಧರ್ಮ ಗುರು ಬೋನವೆಂಚೆರ್ ನಝರೆತ್ ಆಯ್ಕೆಯಾದ ಪ್ರತಿನಿಧಿಗಳ ಪಾದಗಳನ್ನು ತೊಳೆದು, ವಿಶೇಷವಾಗಿ ಮಕ್ಕಳಿಗೆ […]