Month: March 2026

DAKSHINA KANNADA HOME LATEST NEWS

ಪ್ರತಿ ತಾಲೂಕಿನಲ್ಲಿ ಬೀದಿನಾಯಿಗಳ ಆಶ್ರಯ ಕೇಂದ್ರ: ಜಿಲ್ಲಾಧಿಕಾರಿ

ಮಂಗಳೂರು:- ಬೀದಿ ನಾಯಿಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೀದಿನಾಯಿಗಳ ಆಶ್ರಯ ತಾಣವನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಮಂಗಳೂರು ತಾಲೂಕಿನಲ್ಲಿ ಇಂತಹ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಅವುಗಳ ಜನನ ನಿಯಂತ್ರಣ […]

DAKSHINA KANNADA

*ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಅಗತ್ಯ*

ಮಂಗಳೂರು, ಮಾ.27 : ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣವನ್ನು ಕಲ್ಪಿಸುವುದರಿಂದ ಅವರು ಸಮರ್ಥವಾಗಿ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲರು. ಕೆಲಸದ ಸ್ಥಳಗಳಲ್ಲಿ ಅನೇಕ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದು, ಸಮಸ್ಯೆಯನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಾಗದೆ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸಿದರೆ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕು ಎಂದು ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಲ್ಲವಿ ಟಿ. ಎಸ್ ಹೇಳಿದರು. ಅವರು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ […]

DAKSHINA KANNADA HOME

*ಶಿಕ್ಷಣ ಸಂಸ್ಥೆಗಳ ಬಳಿ ಮಾದಕ ವಸ್ತು ಮಾರಾಟ: ಅಂಗಡಿಗಳ ಲೈಸನ್ಸ್ ರದ್ದು ಗೊಳಿಸಲು ಎಸ್‌ಪಿ ಡಾ. ಅರುಣ್ ಕೆ. ಸೂಚನೆ*

ಮಂಗಳೂರು, ಮಾ.27 : ಜಿಲ್ಲೆಯಲ್ಲಿ ಶಾಲಾ – ಕಾಲೇಜುಗಳ ಸನಿಹದಲ್ಲಿರುವ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಸಿಗರೇಟ್, ತಂಬಾಕು ಸೇರಿದಂತೆ ಧೂಮಪಾನ ಮತ್ತು ಮಾದಕ ವಸ್ತುಗಳನ್ನು ಮಾರಾಟ ಕಂಡುಬಂದಲ್ಲಿ ಅಂತಹ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಸೂಚಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಕೇಂದ್ರ ಸಮಿತಿ ಸಭೆಯಲ್ಲಿ ಮಾತನಾಡಿದರು. ಶಾಲಾ ಪರಿಸರದಲ್ಲಿ ಯಾವುದೇ ಧೂಮಪಾನ ಅಥವಾ ಮಾದಕ ವಸ್ತುಗಳ ಚಟುವಟಿಕೆ ನಡೆಯದಿರುವ ಬಗ್ಗೆ […]

DAKSHINA KANNADA

*ಪೆಟ್ರೋಲ್, ಡೀಸೆಲ್ ಅಬಕಾರಿ ಶುಲ್ಕ ಇಳಿಕೆ, ಕೇಂದ್ರ ಸರ್ಕಾರದ ಜನಹಿತ ನಡೆ*ಸತೀಶ್ ಕುಂಪಲ.

ಮಂಗಳೂರು: ಇರಾನ್ ಮತ್ತು ಅಮೇರಿಕಾ, ಇಸ್ರೇಲ್ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಏರುಪೇರಾಗುತ್ತಿರುವ ಸಂಧರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಶುಲ್ಕ ವನ್ನು 10 ರೂಪಾಯಿ ಮತ್ತು ಡೀಸೆಲ್ ಶುಲ್ಕವನ್ನು ಶೂನ್ಯಕ್ಕೆ ಇಳಿಕೆ ಮಾಡಿರುವುದು ಜನಹಿತದ ನಡೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಸತೀಶ್ ಕುಂಪಲ ಅಭಿಪ್ರಾಯ ವ್ಯಕ್ತಪಡಿಸಿದರು. ದೇಶದ ಆರ್ಥಿಕ ಶಕ್ತಿಗೆ ಕುಂದು ಬಾರದಂತೆ ಮತ್ತು ಜನರ ಹಿತವನ್ನು ಸದಾ ಚಿಂತನೆಯನ್ನು ನಡೆಸುವ […]

DAKSHINA KANNADA HOME

*ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದರೆ ಹಕ್ಕುಚ್ಯುತಿ ಮಂಡಿಸುವುದು ಸಂಕುಚಿತ ಮನೋಭಾವ: ಬಿ. ರಮಾನಾಥ ರೈ ಅಸಮಾಧಾನ*

ಮಂಗಳೂರು: ಕ್ಷೇತ್ರದ ಅಭಿವೃದ್ಧಿಗಾಗಿ ಮಾಜಿ ಸಚಿವನಾಗಿ ಉಸ್ತುವಾರಿ ಸಚಿವರ ಮೂಲಕ ಅನುದಾನ ತಂದಿರುವುದಕ್ಕೆ ವಿಧಾನಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಹಕ್ಕುಚ್ಯುತಿ ಮಂಡಿಸಿರುವುದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಮಾಜಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದು ಹೊಸತೇನಲ್ಲ. “ನಾನು ತರುವ ಯಾವುದೇ ಅನುದಾನ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿಯೇ ಹೊರತು ನನ್ನ ವೈಯಕ್ತಿಕಕ್ಕಲ್ಲ. ಜನರ […]

DAKSHINA KANNADA

ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಮಾ. 31ಕ್ಕೆ 242ನೇ ಚಾರಿತ್ರಿಕ ‘ಪವಿತ್ರ ಶಿಲುಬೆಯ ಹಾದಿ’

ಮಂಗಳೂರು: ಪೆಜಾರ್ ವಲಯದ ಕಳವಾರು ಸಂತ ಜೋಸೆಫರ ದೇವಾಲಯದಲ್ಲಿ ಸುಮಾರು ಎರಡುವರೆ ಶತಮಾನಗಳ ಇತಿಹಾಸವಿರುವ ಪವಿತ್ರ ಶಿಲುಬೆಯ ಹಾದಿ ಕಾರ್ಯಕ್ರಮವು ಮಾರ್ಚ್ 31ರ ಮಂಗಳವಾರದಂದು ಅತ್ಯಂತ ಭಕ್ತಿಭಾವದಿಂದ ಜರುಗಲಿದೆ. ಇದು ಈ ಪವಿತ್ರ ಯಾತ್ರೆಯ 242ನೇ ವರ್ಷದ ಕಾರ್ಯಕ್ರಮವಾಗಿದ್ದು, ಈ ಬಾರಿ “ಯಾತನೆ ಪಡುವ ಪ್ರಭು ಕ್ರಿಸ್ತರ ಶರೀರವನ್ನು ಸ್ಪರ್ಶಿಸಲು ಯಾತ್ರಿಕ ಪಯಣ” ಎಂಬ ವಿಷಯದಡಿಯಲ್ಲಿ ನಡೆಯಲಿದೆ. ಎಂದು ಸಂತ ಜೋಸೆಫರ ಚರ್ಚ್ ಧರ್ಮಗುರು ವಂದನೀಯ ಡಾ. ರೊನಾಲ್ಡ್ ಡಿ ಸೋಜಾ, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಾರ್ಚ್ 31 […]

DAKSHINA KANNADA HOME LATEST NEWS STATE

ಕೊನೆಗೂ ಹಾಜಬ್ಬರಿಗೆ ಗೌರವ ಡಾಕ್ಟರೇಟ್‌ ಕೊಡಲು ಮನಸ್ಸು ಮಾಡಿದ ಮಂಗಳೂರು ವಿವಿ

ಮಂಗಳೂರು: ವಿವಿಯ ಕೂಗಳತೆ ದೂರದಲ್ಲಿದ್ದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಕೊನೆಗೂ ಮಂಗಳೂರು ವಿಶ್ವವಿದ್ಯಾಲಯ ಈ ಬಾರಿಯ ಮಂಗಳೂರು ವಿವಿಯ ಗೌರವ ಡಾಕ್ಟರೇಟ್‌ ನೀಡಲು ನಿರ್ಧರಿಸಿದೆ. ತನ್ನ ಒಡಲಲ್ಲೇ ಇದ್ದ ಒಬ್ಬ ಸಾಧಕನನ್ನು ಬಿಟ್ಟು ಊರ-ಪರವೂರ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್‌ ನೀಡುತ್ತಿದ್ದ ಮಂಗಳೂರು ವಿವಿ ಕೊನೆಗೂ ಹರೇಕಳ ಹಾಜಬ್ಬರಿಗೆ ಈ ಬಾರಿ ಡಾಕ್ಟರೇಟ್‌ ಪ್ರದಾನ ಮಾಡಲು ಮನಸ್ಸು ಮಾಡಿದೆ. ಹರೇಕಳ ಹಾಜಬ್ಬ ಮೂರು ದಶಕಗಳ ಹಿಂದೆಯೇ ತನ್ನೂರಿಗೆ ಶಾಲೆ ಬೇಕೆಂದು ಕನಸು ಕಂಡಿದ್ದವರು.  ಅದರಕ್ಕಾಗಿ ರಾಜಕೀಯ ನೇತರಾರು, […]

DAKSHINA KANNADA

ಪುತ್ತೂರಿನ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ 20 ಎಕ್ರೆ ನಿವೇಶನ ಮಂಜೂರು ಕ್ಯಾಂಪ್ಕೋ ಗೆ ಶಾಸಕ ಅಶೋಕ್ ರೈ ವಾಗ್ದಾನ

ಪುತ್ತೂರು: ಕ್ಯಾಂಪ್ಕೋಬಹುದೊಡ್ಡ ಸಂಸ್ಥೆಯಾಗಿ ಇಂದು ಬೆಳೆದು ನಿಂತಿದೆ, ಜಿಲ್ಲೆಯ ನೂರಾರು ಜನರಿಗೆ ಇದು ಉದ್ಯೋಗ ಕಲ್ಪಿಸುವುದರ ಜೊತೆಗೆ ಜಿಲ್ಲೆಯ ಕೀರ್ತಿಯನ್ನು ದೇಶ ವಿದೇಶಗಳಿಗೂ ಪಸರಿಸಿದೆ, ಕ್ಯಾಂಸ್ಕೋ ಇನ್ನೂ ಬೆಳೆಯಬೆಕಿದೆ, ಜಿಲ್ಲೆಯ ಕೃಷಿಕರ ಪರವಾಗಿ ಗಟ್ಟಿನಿಲ್ಲಬೇಕಿದೆ, ಕ್ಯಾಂಪ್ಕೋ ಸಂಸ್ಥೆಯಲ್ಲಿ ಪುತ್ತೂರಿನ ಮಂದಿಗೆ ಉದ್ಯೋಗ ನೀಡುವುದರ ಜೊತೆಗೆ ಜಿಲ್ಲೆಯ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ ಸಂಸ್ಥೆಗೆ 20 ಎಕ್ರೆ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಅಶೋಕ್‌ ರೈ ಹೇಳಿದರು. ಅವರು ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ […]

DAKSHINA KANNADA HOME LATEST NEWS

ತೊಕ್ಕೊಟ್ಟು: ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಓರ್ವನ ಮರ್ಡರ್‌

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಭಾಗದಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದೆ. ಈತ ಓರ್ವ ರೌಡಿಶೀಟರ್‌ ಆಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್‌ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ತಕ್ಷಣವೇ, […]

DAKSHINA KANNADA HOME LATEST NEWS

1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಬೆಂಗಳೂರು: ಒಂದನೇ ತರಗತಿಯ ಮಕ್ಕಳಿಗೆ ಶಾಲೆ ಸೇರ್ಪಡೆಗೆ ನಿಗದಿಪಡಿಸಿದ್ದ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ಮಾಡಿದೆ. 1 ನೇ ತರಗತಿಗೆ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ 60 ದಿನ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಯುಕೆಜಿ ಮುಗಿಸಿದರೂ 6 ವರ್ಷ ಪೂರ್ಣಗೊಂಡಿಲ್ಲವೆಂದು ಚಿಂತೆಯಲ್ಲಿದ್ದ  ಪೋಷಕರು ನಿರಾಳರಾಗಿದ್ದಾರೆ. ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಪ್ರಸಕ್ತ ವರ್ಷಕ್ಕೆ ಅನ್ವಯವಾಗುವಂತೆ ಮಕ್ಕಳ ಶಾಲಾ ಪ್ರವೇಶಕ್ಕೆ […]