Month: March 2026

COMMUNITY NEWS

*ಮಂಗಳೂರು ಮಿಲಾಗ್ರೆಸ್ ಚರ್ಚ್‌ನಲ್ಲಿ ಭಕ್ತಿಭಾವದ ‘ಪಾಮ್ ಸಂಡೆ’ ಆಚರಣೆ*

ಮಂಗಳೂರು: ನಗರದ ಐತಿಹಾಸಿಕ ಮಿಲಾಗ್ರೆಸ್ ಚರ್ಚ್‌ನಲ್ಲಿ ಪಾಮ್ ಸಂಡೆ ದಿವಸ ವಿಶೇಷ ಕಾರ್ಯ ಕ್ರಮ ಪಾಮ್ ಸಂಡೇಯನ್ನು ಮಿಲಾಗ್ರೆಸ್‌ನ ನಮ್ಮ ಅದ್ಭುತಗಳ ತಾಯಿ (Our Lady of Miracles) ಚರ್ಚ್‌ನಲ್ಲಿ ಸಂಜೆ ಭಕ್ತಿಭಾವದಿಂದ ಆಚರಿಸಲಾಯಿತು. ಪವಿತ್ರ ಬಲಿಯನ್ನು ಫಾ. ಜೆರಾಲ್ಡ್ ಪಿಂಟೋ ಅವರು ಆಚರಿಸಿದರು. ಭಕ್ತರು ಒಟ್ಟಾಗಿ ಸೇರಿ ನಮ್ಮ ಕರ್ತನನ್ನೂ ಆಶೀರ್ವಾದಿತ ತಾಯಿಯನ್ನೂ ಗೌರವಿಸಲು ಚರ್ಚ್ ಸುತ್ತ ಮೆರವಣಿಗೆ ನಡೆಸಿ, ಪವಿತ್ರ ವಾರಕ್ಕೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ರಕ್ಷಣಾ ಘಟನೆಗಳಲ್ಲಿ ಯೇಸು ಮತ್ತು […]

HOME INETRNATIONAL LATEST NEWS

ಯುದ್ಧ ಮಾಡುವರ ಪ್ರಾರ್ಥನೆಯನ್ನು ದೇವರು ಆಲಿಸುವುದಿಲ್ಲ: ಪೋಪ್‌ ಲೀಯೋ ಸಂದೇಶ

ರೋಮ್‌: ‘ಜೀಸಸ್‌ ಶಾಂತಿಯ ಸಂಕೇತ. ಅವರು ಯಾವ ಯುದ್ಧವನ್ನೂ ಬೆಂಬಲಿಸುವುದಿಲ್ಲ. ಯೇಸು ಬೆಂಬಲದ ಹೆಸರಿನಲ್ಲಿ ಯಾರೂ ಯುದ್ಧವನ್ನು ಸಮರ್ಥಿಸಲಾಗದು’. “ಮಾನವೀಯತೆಯು ಇಂದು ಶಿಲುಬೆಗೇರಿಸಲ್ಪಟ್ಟಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮಾತುಕತೆಯ ಮೂಲಕ ಶಾಂತಿ ಕಂಡುಕೊಳ್ಳಿ” ಎಂದು ಪಶ್ಚಿಮ ಏಷ್ಯಾದ ದೇಶಗಳಿಗೆ ಪೋಪ್‌ 14ನೇ ಲಿಯೊ ಕರೆ ನೀಡಿದ್ದಾರೆ.  ‘ಗರಿಗಳ ಭಾನುವಾರ’ ಆಚರಣೆಯ ಅಂಗವಾಗಿ ವ್ಯಾಟಿಕನ್‌ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನರನ್ನು ಉದ್ದೇಶಿಸಿ ಸಂದೇಶ ನೀಡಿದ ಅವರು, ‘ದೇವರು ಹಿಂಸೆಯನ್ನು ಒಪ್ಪುವುದಿಲ್ಲ, ಯುದ್ಧ ಮಾಡುವರ ಪ್ರಾರ್ಥನೆಯನ್ನೂ ಅವರು […]

DAKSHINA KANNADA HOME LATEST NEWS

ರಸ್ತೆ ಡಿವೈಡರ್‌ಗೆ ಬೈಕ್ ಢಿಕ್ಕಿ: 19ರ ಯುವಕ ಸಾವು-ಮತ್ತೋರ್ವ ಗಂಭೀರ

ಬೆಳ್ತಂಗಡಿ: ಸವಾರನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉಜಿರೆ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮಾರ್ಚ್ 28ರ ತಡರಾತ್ರಿ ಸಂಭವಿಸಿದೆ. ಲಾಯಿಲ ಗ್ರಾಮದ ಅಮ್ಮಣ್ಣಂಗಡಿ ನಿವಾಸಿ ಚಂದ್ರಶೇಖರ್ ಅವರ ಪುತ್ರ ನಿತೇಶ್ (19) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಬೈಕ್ ಚಲಾಯಿಸುತ್ತಿದ್ದ ಪುತ್ತೂರು ನಿವಾಸಿ ಲಿಖಿತ್ (20) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರೂ ಉಜಿರೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳು ಎಂದು […]

COMMUNITY NEWS

ವಿಟ್ಲ ಶೋಕ ಮಾತಾ ಚರ್ಚ್ ಆವರಣದಲ್ಲಿ ಗರಿಗಳ ಭಾನುವಾರ ಆಚರಣೆ

ವಿಟ್ಲ: ಪ್ರಸಿದ್ಧ ಶೋಕ ಮಾತಾ ಇಗರ್ಜಿಯಲ್ಲಿ ಇಂದು ‘ಗರಿಗಳ ಭಾನುವಾರ’ವನ್ನು (Palm Sunday) ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಚರ್ಚ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 17 ಅಡಿ ಎತ್ತರದ ಬೃಹತ್ ಪವಿತ್ರ ಶಿಲುಬೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ. ಐವನ್ ಮೈಕಲ್ ರೋಡ್ರಿಗಸ್ ಅವರು ನೂತನ ಶಿಲುಬೆಯನ್ನು ಆಶೀರ್ವದಿಸಿ, ಪ್ರತಿಷ್ಠಾಪನಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಗರಿಗಳ ಭಾನುವಾರದ ಪ್ರಯುಕ್ತ ವಿಶೇಷ ಬಲಿಪೂಜೆಯನ್ನು ನೆರವೇರಿಸಿ, ಯೇಸು ಕ್ರಿಸ್ತರು ಜೆರುಸಲೇಂ ಪ್ರವೇಶಿಸಿದ ಸ್ಮರಣಾರ್ಥ ಸಂದೇಶ ನೀಡಿದರು. ಈ […]

COMMUNITY NEWS

*ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಭಕ್ತಿಭಾವದ ‘ಗರಿಗಳ ರವಿವಾರ’ ಆಚರಣೆ*

ವಿಟ್ಲ :ಪೆರುವಾಯಿ. ಫಾತಿಮಾ ಮಾತೆಯ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಇಂದು ‘ಗರಿಗಳ ರವಿವಾರ’ವನ್ನು (Palm Sunday) ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಈ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹಕ್ಕೆ (Holy Week) ಚಾಲನೆ ನೀಡಲಾಯಿತು. ಚರ್ಚ್ ಸಭಾಂಗಣದ ಬಳಿ ನಡೆದ ಧಾರ್ಮಿಕ ವಿಧಿಯ ನೇತೃತ್ವವನ್ನು ಧರ್ಮಗುರು ವಂದನೀಯ ಸೈಮನ್ ಡಿಸೋಜಾ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಗರಿಗಳ ಆಶೀರ್ವಚನ ಮತ್ತು ಪವಿತ್ರ ಬೈಬಲ್ ವಾಚನ ನಡೆಯಿತು. ಬಳಿಕ ಭಕ್ತಾದಿಗಳು ಕೈಯಲ್ಲಿ ಗರಿಗಳನ್ನು ಹಿಡಿದು ‘ಹೊಸ್ಸಾನ್ಹಾ’ ಜಯಘೋಷದೊಂದಿಗೆ ಚರ್ಚ್‌ಗೆ ಭವ್ಯ […]

COMMUNITY NEWS DAKSHINA KANNADA HOME

*ಮಂಗಳೂರು ಧರ್ಮಪ್ರಾಂತ್ಯದಲ್ಲಿ ಭಕ್ತಿಭಾವದ ಗರಿಗಳ ಭಾನುವಾರ ಆಚರಣೆ: ಪವಿತ್ರ ವಾರಕ್ಕೆ ಚಾಲನೆ*

ಮಂಗಳೂರು: ಯೇಸು ಕ್ರಿಸ್ತರು ಜೆರುಸಲೇಮ್ ನಗರವನ್ನು ವಿಜಯೋತ್ಸವದೊಂದಿಗೆ ಪ್ರವೇಶಿಸಿದ ಸವಿನೆನಪಿಗಾಗಿ ಆಚರಿಸಲಾಗುವ ‘ಗರಿಗಳ ಭಾನುವಾರ’ವನ್ನು (Palm Sunday) ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಮಾರ್ಚ್ 29ರ ಭಾನುವಾರ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಇದರೊಂದಿಗೆ ಕ್ರೈಸ್ತರ ಅತ್ಯಂತ ಪವಿತ್ರ ವಾರಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ. ಸುರತ್ಕಲ್ ವಲಯದ ಮುಕ್ಕ ಪವಿತ್ರಾತ್ಮರ ದೇವಾಲಯದಲ್ಲಿ (Holy Spirit Church, Mukka) ನಡೆದ ಪ್ರಧಾನ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ನೆರವೇರಿಸಿದರು. ಕ್ರಿಸ್ತನ ರಾಯಭಾರತ್ವ ಹಾಗೂ […]

COMMUNITY NEWS

*ಮಿಲಾಗ್ರಿಸ್ ದೇವಾಲಯದಲ್ಲಿ ಭಕ್ತಿಭಾವದ ‘ಗರಿಗಳ ಭಾನುವಾರ’ ಆಚರಣೆ*

ಮಂಗಳೂರು: ಮಿಲಾಗ್ರಿಸ್ (Our Lady of Miracles) ದೇವಾಲಯದಲ್ಲಿ ಇಂದು ಕ್ರೈಸ್ತ ಬಾಂಧವರು ‘ಗರಿಗಳ ಭಾನುವಾರ’ವನ್ನು (Palm Sunday) ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ನಗರದ ಸಿಲ್ವರ್ ಜೂಬಿಲಿ ಹಾಲ್‌ನ ವಠಾರದಲ್ಲಿ ಸಮಾವೇಶಗೊಂಡ ನೂರಾರು ಭಕ್ತರು ತಾಳೆ ಎಲೆಗಳನ್ನು ಹಿಡಿದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಂದನೀಯ ಫಾ. ಅವಿತ್ ಫಾಯ್ಸ್ ಅವರು ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿ, ಭಕ್ತರ ಕೈಯಲ್ಲಿದ್ದ ತಾಳೆ ಎಲೆಗಳನ್ನು ಆಶೀರ್ವದಿಸಿದರು. ನಂತರ ನಡೆದ ಭವ್ಯ ಮೆರವಣಿಗೆಯಲ್ಲಿ ವಂದನೀಯ ಫಾ. ಬೊನವೆಂಚರ್ ನಜರೇತ್, ವಂದನೀಯ ಫಾ. […]

DAKSHINA KANNADA HOME

*ಕರ್ನಾಟಕ-ಕೇರಳ ಗಡಿ ಭಾಗದ ಶಿರಿಯಾ ನದಿಗೆ ಸೇತುವೆ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಸ್ಥಳ ಪರಿಶೀಲನೆ*

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಲ ಗ್ರಾಮದ ಶಿರಿಯಾ ನದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಬೇಕೆಂಬ ದಶಕಗಳ ಕಾಲದ ಬೇಡಿಕೆಗೆ ಸಂಬಂಧಿಸಿದಂತೆ ಲೋಕೋಪ ಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು. ಮಾಣಿಲ ಭಾಗದ ಜನರು ಕೇರಳದ ಪ್ರದೇಶಗಳಿಗೆ ತೆರಳಲು ಮತ್ತು ಗಡಿ ಭಾಗದ ಸಂಪರ್ಕ ಸುಗಮ ಗೊಳಿಸಲು ಈ ಸೇತುವೆಯ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ. ಪ್ರಸ್ತುತ ಮಳೆಗಾಲದಲ್ಲಿ ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ […]

COMMUNITY NEWS HOME

*ಖ್ಯಾತ ಬಹುಭಾಷಾ ನಟ, ಉದ್ಯಮಿ ಲೊರೆಟ್ಟೊ ನಿವಾಸಿ ರೋನ್ ರೋಡ್ರಿಗಸ್ ನಿಧನ*

ಮಂಗಳೂರು, ಮಾ.27: ಕೊಂಕಣಿ ಹಾಗೂ ತುಳು ಸಿನೆಮಾ ನಟ, ನಿರ್ಮಾಪಕ ಬಂಟ್ವಾಳದ ಲೊರೆಟ್ಟೊ ನಿವಾಸಿ ರೋನ್ ರೋಡ್ರಿಗಸ್(67) ಅವರು ಮಾ.26 ರಂದು ಲಂಡನ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಕಳೆದ ಹಲವು ವರ್ಷಗಳಿಂದ ಲಂಡನ್ ನಲ್ಲಿ ನೆಲೆಸಿರುವ ಅವರು, ಆಗಿಂದಾಗೆ ಊರಿಗೆ ಬಂದು ಹೋಗುತ್ತಿದ್ದರು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಲಂಡನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ರೋನ್ ರೋಡ್ರಿಗಸ್ ಕೊಂಕಣಿ-ತುಳು ಅಲ್ಲದೇ ಬಾಲಿವುಡ್ಡಿನಲ್ಲೂ ನಟಿಸುವ ಅವಕಾಶಗಳನ್ನು ಪಡೆದಿದ್ದಾರೆ. ’ಬಾಪಾಚೆ ಪುತಾಚೆ […]

DAKSHINA KANNADA

*ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭವ್ಯ ಬ್ರಹ್ಮಕಲಶೋತ್ಸವ*

ಮಂಗಳೂರು: ಪ್ರಕೃತಿಯ ಸಿರಿಯ ಮಧ್ಯೆ ನೆಲೆಸಿರುವ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ಅತ್ಯಂತ ವೈಭವದಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ ಶ್ಯಾಮ್ ಅವರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ವಿವರಗಳ ನ್ನು ಹಂಚಿಕೊಂಡರು: ಪುಣ್ಯ ತೀರ್ಥಗಳ ಮೆರವಣಿಗೆ: ಮಾರ್ಚ್ 30ರಂದು ಏಕಾದಶ ನದಿಗಳ ಪುಣ್ಯ ತೀರ್ಥಗಳ ಭವ್ಯ […]