Month: January 2026

HOME LATEST NEWS STATE

ಎಟಿಎಂಗಳಿಗೆ ನಗದು ಡೆಪಾಸಿಟ್ ಮಾಡಬೇಕಿದ್ದ ಒಂದು ಕೋಟಿ ಗಾಯಬ್‌…!

ಬೆಂಗಳೂರು: ಎಟಿಎಂಗಳಿಗೆ ನಗದು ಡೆಪಾಸಿಟ್ ಮಾಡಬೇಕಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ದೋಚಿ ಸಿಬ್ಬಂದಿಯೇ ಪರಾರಿಯಾದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 400 ಕೋಟಿ ರೂ. ಹಣ ದರೋಡೆ ಪ್ರಕರಣದ ಸಮಯದಲ್ಲೇ ಮತ್ತೊಂದು ದೊಡ್ಡ ನಗದು ಕಳವು ಪ್ರಕರಣ ಬಹಿರಂಗವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ […]

DAKSHINA KANNADA

*ಡಾ. ಮಾಲತಿ ಶೆಟ್ಟಿ ಮಾಣೂರು ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ*

ಮಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್‌ ರಿಜಿಸ್ಟ್ರಾ‌ರ್ ವಿರಾಜಪೇಟೆ ಕೊಡಗು ಜಂಟಿ ಆಶ್ರಯದಲ್ಲಿ ಜನವರಿ 18ರಂದು ಯುವಶಕ್ತಿಯ ಸಕಾರ ಮೂರ್ತಿ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಪ್ರಯುಕ್ತ ನಡೆದ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಅವರಿಗೆ ಹಾಸನದ ಡಾ. ಬಿ.ಆರ್ ಅಂಬೇಡ್ಕ‌ರ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ […]

HISTORY HOME

ಕ್ರೀಡೆಯಿಂದ ಒತ್ತಡ ನಿವಾರಣೆ ಸಾಧ್ಯ: ಸುಧೀ‌ರ್ ರೆಡ್ಡಿ

ಮಂಗಳೂರು, ಜ.26: ಪೊಲೀಸರು ಹಾಗೂ ಪತ್ರಕರ್ತರು ಸದಾ ಒತ್ತಡದ ಮಧ್ಯೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಕ್ರೀಡಾ ಚಟುವಟಿಕೆಗಳಿಗೆ ಸಮಯ ಮೀಸಲಿಡುವುದರಿಂದ ಒತ್ತಡ ನಿವಾರಣೆ ಸಾಧ್ಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕದ್ರಿಯ ಕೆ.ಪಿ.ಟಿ. ಮೈದಾನದಲ್ಲಿ ರವಿವಾರ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪ ರಾಜ್.ಬಿ.ಎನ್. ಅಧ್ಯಕ್ಷತೆ […]

DAKSHINA KANNADA

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 77ನೇ ಗಣರಾಜ್ಯೋತ್ಸವ ಪ್ರಯುಕ್ತ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ

ಮಂಗಳೂರು: ಸಂವಿಧಾನ ಆಶಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎತ್ತಿಹಿಡಿಯುವ ಕೆಲಸ ಸರ್ಕಾರಗಳು ಮಾಡಬೇಕು. ಸರ್ಕಾರ ಸಂವಿಧಾನ ವಿರೋಧಿ ನೀತಿ ಜಾರಿಗೆ ತಂದರೆ ಸಂವಿಧಾನದ ಮೂಲ ಆಶಯಗಳು ನಾಶವಾಗುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 77ನೇ ಗಣರಾಜ್ಯೋತ್ಸವ ಪ್ರಯುಕ್ತ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರವಲ್ಲ, ಅದು ಮಾನವೀಯ ಮೌಲ್ಯಗಳನ್ನು ಒಳಗೊಂಡ ಜೀವನ […]

STATE

*ಮೀಡಿಯಾಕಾನ್ 2026ರಲ್ಲಿ ಜನಪ್ರಿಯತೆ, ಅಧಿಕಾರ ಮತ್ತು ಮಾಧ್ಯಮಗಳ ಕುರಿತು ಚರ್ಚೆ*

ಬೆಂಗಳೂರು: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆಯ (SCMS) ಆಶ್ರಯದಲ್ಲಿ ಹತ್ತನೇ ಆವೃತ್ತಿಯ ‘ಮೀಡಿಯಾಕಾನ್’ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ಸಂಘದ ಉತ್ಸವಗಳಿಗೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು, ಅಧಿಕಾರ ಮತ್ತು ಪ್ರಬಲ ನಿರೂಪಣೆಗಳ (dominant narratives) ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಕಿವಿಮಾತು ಹೇಳಿದರು. ಜನಪ್ರಿಯತೆ (populism) ಮತ್ತು ಸರ್ವಾಧಿಕಾರತ್ವದಂತಹ ಶಕ್ತಿಗಳು ಇನ್ನು […]

DAKSHINA KANNADA

*ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಎಕ್ಯುಮೆನಿಕಲ್ ಕನ್ನಡ ಪ್ರಾರ್ಥನಾ ಸೇವೆ*

ಮಂಗಳೂರು: ಬೋಳಾರದ ರೊಸಾರಿಯೊ ಕ್ಯಾಥೆಡ್ರಲ್, ಜೆಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್ ಹಾಗೂ ಮಂಗಳೂರಿನ ಸಿಎಸ್‌ಐ ಸೇಂಟ್ ಪೌಲ್ಸ್ ಚರ್ಚ್ ಜಂಟಿಯಾಗಿ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಎಕ್ಯುಮೆನಿಕಲ್ ಕನ್ನಡ ಪ್ರಾರ್ಥನಾ ಸೇವೆಯನ್ನು ಆಯೋಜಿಸಿತು. ರೊಜಾರಿಯೊ ಕ್ಯಾಥೆಡ್ರಲ್ ನ ಧರ್ಮಗುರುಗಳಾದ ಫಾ. ವಲೇರಿಯನ್ ಡಿಸೋಜಾ ಸಭೆಯನ್ನು ಸ್ವಾಗತಿಸಿ, ಜೆಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್‌ನ ಪಾಸ್ಟರ್ ಗೇಬ್ರಿಯಲ್ ರೋನಿತ್, ಸಿಎಸ್‌ಐ ಸೇಂಟ್ ಪೌಲ್ಸ್ ಚರ್ಚ್‌ನ ವಂ| ಬಿನು ಸಿ. ಜಾನ್ ಹಾಗೂ ರೊಸಾರಿಯೊ ಕ್ಯಾಥೆಡ್ರಲ್‌ನ ಫಾ. ವಲೇರಿಯನ್ ಫೆರ್ನಾಂಡಿಸ್ ಅವರೊಂದಿಗೆ ಪ್ರಾರ್ಥನಾ ಸೇವೆಯನ್ನು […]

DAKSHINA KANNADA HOME

*ಮಹಾಕಾಳಿಪಡ್ಪು ಅಂಡರ್ ಪಾಸ್ ಜ 25 ಉದ್ಘಾಟನೆ*

ಮಂಗಳೂರು: ನಗರದ ಬಹುನಿರೀಕ್ಷಿತ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ಕೆಲ ಸೇತುವೆ ಭಾನುವಾರ ಉದ್ಘಾಟನೆಯಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಈ ಅಂಡರ್ ಪಾಸ್ ಕೆಲ ಸೇತುವೆ ಮತ್ತು ಸಂಪರ್ಕ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಿಂದ ಮೋರ್ಗನ್ಸ್ ಗೇಟ್ ವರೆಗೆ ನಿರ್ಮಾಣಗೊಂಡಿದೆ. ನಗರದ ಹೃದಯ ಭಾಗದಿಂದ ಉಳ್ಳಾಲ ಮತ್ತು ಕೇರಳ ಕಡೆಗೆ ಸಮೀಪದ ಸಂಪರ್ಕ ರಸ್ತೆಯಾಗಿದೆ. ಹಿಂದೆ ಕಿರಿದಾಗಿದ್ದ ಈ ಅಂಡರ್ ಪಾಸ್ ರೈಲ್ವೇ ಗೇಟ್ ನಿಂದಾಗಿ ಸದಾ ಸಂಚಾರ ದಟ್ಟನೆಯಿಂದ […]

DAKSHINA KANNADA HOME

ಕಾಂಗ್ರೆಸ್ ಸರ್ಕಾರದ “ಶವಯಾತ್ರೆಯನ್ನು” ಮಾಡಲು ರಾಜ್ಯದ ಜನತೆಯೇ ನಿರ್ಧರಿಸಿದ್ದಾರೆ. ಶಾಸಕ ವೇದವ್ಯಾಸ ಕಾಮತ್

ಮಂಗಳೂರಿನ ಕಾಂಗ್ರೆಸ್ ನಾಯಕರು ಬೆಟ್ಟದಷ್ಟು ಸಮಸ್ಯೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡು, ಕೇಂದ್ರ ಸರ್ಕಾರದ ವಿಬಿ-ಜಿ ರಾಮ್ ಜಿ ವಿರುದ್ಧ ಸ್ವಾರ್ಥದ “ಪಾದಯಾತ್ರೆ” ಮಾಡಲು ಹೊರಟಿದ್ದಾರೆ. ವಾಸ್ತವದಲ್ಲಿ ರಾಜ್ಯದ ಜನರಿಗೆ ಸರಿಯಾಗಿ ಸವಲತ್ತು ನೀಡಲಾಗದ ಈ ಕಾಂಗ್ರೆಸ್ ಸರ್ಕಾರದ “ಶವಯಾತ್ರೆಯನ್ನು” ಮಾಡಲು ರಾಜ್ಯದ ಜನತೆಯೇ ನಿರ್ಧರಿಸಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಯಿಂದಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇ-ಖಾತಾ ಸಮಸ್ಯೆ ತಾರಕಕ್ಕೇರಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆದಾಯವೂ ಕಡಿಮೆಯಾಗುತ್ತಿದೆ. ನಗರದ ಜೈಲ್ ಜಾಮರ್ […]

DAKSHINA KANNADA

*ತುಳು ಬರಹಗಳ ಗುಚ್ಚ “ಕಡ್ಲೆ ಬಜಿಲ್” ಪುಸ್ತಕ ಬಿಡುಗಡೆ*

ಮಂಗಳೂರು: ಕದ್ರಿ ಶ್ರೀ ಮಂಜುನಾಥನ ಜಾತ್ರಾ ಮಹೋತ್ಸವದ ಶುಭಾವಸರದಲ್ಲಿ ರಥೋತ್ಸವದ ಪುಣ್ಯ ದಿನ 21 ರಂದು ಪ್ರಖ್ಯಾತ ಹರಿದಾಸರು, ಸಂಘಟಕರು, ಭಜನಾ ಕೀರ್ತನಕಾರರು , ನಿರೂಪಕರು ಮತ್ತು ಅಂಕಣ ಬರಹಗಾರರಾದ ಶರತ್ ಶೆಟ್ಟಿ ಪಡುಪಳ್ಳಿ ಯವರ ತುಳು ಬರಹಗಳ ಗುಚ್ಚ “ ಕಡ್ಲೆ ಬಜಿಲ್” ಎಂಬ ಪುಸ್ತಕವು ಕದ್ರಿ ದೇವಳದ ರಜಾoಗಣದಲ್ಲಿ ಬಿಡುಗಡೆ ಗೊಂಡಿತು. ಮಲ್ಲಿಕಾ ಕಲಾ ವೃಂದದ ಸಂಚಾಲಕರಾದ ಸುಧಾಕರ್ ರಾವ್ ಪೇಜಾವರ, ಹಿರಿಯ ಲೇಖಕಿ, ಲೇಖಕಿಯರ ವಾಚಕಿಯರ ಸಂಘದ ರೂಪಕಲಾ ಆಳ್ವ, ಪ್ರಸಿದ್ಧ ತುಳು […]

DAKSHINA KANNADA HOME

*9’ವರ್ಷಗಳ ಬಳಿಕ ನವೀಕೃತ ಮಹಾವೀರ ವೃತ್ತದ ಲೋಕಾರ್ಪಣೆ. ಮಹಾವೀರ ವೃತ್ತ’ಕ್ಕೆ ಕರಾವಳಿಯ ಸಾಂಸ್ಕೃತಿಕ ವೈಭವ*

ಮಂಗಳೂರು: ಜ 23 :ಮಂಗಳೂರಿನ ಮುಕುಟದಂತಿರುವ ಪಂಪ್‌ವೆಲ್‌ನ ಮಹಾವೀರ ವೃತ್ತಇಂದು ಹೊಸ ಕಾಂತಿಯೊಂದಿಗೆ ಕಂಗೊಳಿಸುತ್ತಿದೆ. ಬರೋಬ್ಬರಿ 9 ವರ್ಷಗಳ ದೀರ್ಘ ನಿರೀಕ್ಷೆಗೆ ತೆರೆ ಎಳೆದಂತೆ, ವೃತ್ತದಲ್ಲಿ ಪುನಃ ಕಲಶ ಪುನರ್ನಿಮರ್ಾಣಗೊಂಡಿದ್ದು, ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ನವ ಚೈತನ್ಯವನ್ನು ತುಂಬಿದೆ. ಬಹುನಿರೀಕ್ಷಿತ ನವೀಕೃತ ಮಹಾವೀರ ವೃತ್ತದ ಲೋಕಾರ್ಪಣೆ ಜ. 24ರಂದು ನೆರವೇರಲಿದೆ. ಎಂದು ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ ಮಂಗಳೂರು ಜೈನ ಸೊಸೈಟಿ (ರಿ) ಅವರ ಮುಂದಾಳತ್ವದಲ್ಲಿ ರೂಪುಗೊಂಡ ಈ ಅಭಿವೃದ್ಧಿ ಕಾರ್ಯಕ್ಕೆ […]