Month: January 2026

DAKSHINA KANNADA HOME

* ಫೆ. 02 ರಿಂದ ನೀರುಮಾರ್ಗ ಗ್ರಾಮದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ*

ಮಂಗಳೂರು: ನೀರುಮಾರ್ಗ ಗ್ರಾಮದ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.2ರಿಂದ ಫೆ.11ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಾಣೂರು ಕ್ಷೇತ್ರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಫೆ.2ರಂದು ಬೆಳಗ್ಗೆ 8.00ಕ್ಕೆ ಆಚಾರ್ಯರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮ. ರಾತ್ರಿ 7.00ರಿಂದ : ಸ್ಥಳಿಯ ಪ್ರತಿಭೆಗಳಿಂದ ಹಾಗೂ ನಾನಾ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ […]

DAKSHINA KANNADA HOME

* ಫೆಬ್ರವರಿ 01 ಮತ್ತು 02 ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ *

ಮಂಗಳೂರು: ಸರಕಾರವು ಮಹಿಳೆಯರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಅವುಗಳ ಫಲಾನುಭವಿಗಳನ್ನಾಗಿಸುವಲ್ಲಿ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು ಮಹತ್ತರ ಪಾತ್ರ ವಹಿಸಿದೆ. ನಾಲ್ಕು ದಶಕಗಳ ಸಾಧಕ ಕಾರ್ಯಕ್ರಮಗಳ ಮೂಲಕ ಯಶಸ್ಸಿನ ಪಥದತ್ತ ಸಾಗುತ್ತಿರುವ ಮಹಿಳಾ ಒಕ್ಕೂಟವು ಇದೀಗ ಮುಂದಿನ ಹೆಜ್ಜೆಯಾಗಿ ಮಹಿಳಾ ಸಶಕ್ತಿಕರಣಕ್ಕಾಗಿ ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿ ಫೆಬ್ರವರಿ 01 ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಒಕ್ಕೂಟದ ಅಧ್ಯಕ್ಷೆ […]

DAKSHINA KANNADA HOME LATEST NEWS NATIONAL STATE

ಮಹಾರಾಷ್ಟ್ರದಲ್ಲಿ ವಿಮಾನ ಪತನ: DCM ಅಜಿತ್‌ ಪವಾರ್‌ ದುರ್ಮರಣ

ಮುಂಬೈ: ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಾವನ್ನಪ್ಪಿದ್ದಾರೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಚರಣೆಗಳು ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ತುರ್ತು ಭೂಸ್ಪರ್ಶ ಆಗುವ ಸಂದರ್ಭದಲ್ಲಿ ವಿಮಾನ ಪತನವಾಗಿದೆ. ಅಜಿತ್​ ಪವಾರ್​ ಸೇರಿದಂತೆ ಎಲ್ಲಾ ಆರು ಮಂದಿ ಪ್ರಯಾಣಿಕರು ಈ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮೂಲಗಳು ದೃಢಪಡಿಸಿವೆ. ಅಜಿತ್ ಪವಾರ್ ಅವರು ಬಾರಾಮತಿಯಿಂದ ಮುಂಬೈಗೆ […]

HOME NATIONAL

ಮುಂಬೈ ; ಅಜೀತ್‌ ಪವರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ, ಡಿಸಿಎಂ ಅಜಿತ್ ಪವಾರ್ ಸೇರಿದಂತೆ 5′ ಜನ ದುರ್ಮರಣ

ಮುಂಬೈ ; ಮಹಾರಾಷ್ಟ್ರ ಉಪಮುಖ್ಯಮಂತ್ರಿ ಇದ್ದ ಖಾಸಗಿ ವಿಮಾನ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಬಾರಾಮತಿ ಬಳಿ ಖಾಸಗಿ ವಿಮಾನ ಪತನ ಪಕ್ಷದ ರ್ಯಾಲಿಗೆ ತೆರಳುವ ವೇಳೆ ಮಹಾರಾಷ್ಟ್ರದ ಬರಾಮತಿ ಬಳಿ ವಿಮಾನ ಲ್ಯಾಂಡಿಗ್ ವೇಳೆ ಬೆಟ್ಟ ಪ್ರದೇಶದ ಮೇಲೆ ವಿಮಾನ ಅಪಘಾತ ಸಂಭವಿಸಿದೆ. ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ ಡಿಸಿಎಂ ಅಜಿತ್ ಪವಾರ್ ಸೇರಿದಂತೆ 5′ ಜನ ದುರ್ಮರಣ

DAKSHINA KANNADA HOME LATEST NEWS

ಉಡುಪಿ: ಪ್ರವಾಸಿ ಬೋಟ್ ದುರಂತದ ಮೃತರ ಸಂಖ್ಯೆ ಮೂರಕ್ಕೇರಿಕೆ

ಉಡುಪಿ: ಪ್ರವಾಸಿ ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ  ಮತ್ತೋರ್ವ ಯುವತಿ ನಿನ್ನೆ ಸಾವನ್ನಪ್ಪಿದ್ದಾರೆ. ಮೈಸೂರಿನ ದಿಶಾ(23) ಮೃತ ಯುವತಿ. ಮೊನ್ನೆ ಸಿಂಧು ಮತ್ತು ಶಂಕರಪ್ಪ ಎಂಬುವವರು ಮೃತಪಟ್ಟಿದ್ದರು. ಸದ್ಯ ಧರ್ಮರಾಜ್ ಎಂಬ ಯುವಕ‌ನಿಗೆ ಚಿಕಿತ್ಸೆ ಮುಂದುವರೆದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಮಲ್ಪೆ ವ್ಯಾಪ್ತಿಗೆ ಬರುವ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್‌ಗೆ ಮೋಜು ಮಾಡಬೇಕೆಂದು ಬಂದ ಮೈಸೂರಿನ ಬಿಪಿಒ ಕಾಲ್ ಸೆಂಟರ್​ವೊಂದರ 28 ಮಂದಿ ಪ್ರವಾಸಿಗರ ತಂಡ, ಇದೀಗ ಕಣ್ಣೀರಿಡುತ್ತಾ ವಾಪಸಾಗುವಂತಾಗಿದೆ. ಇಲ್ಲಿನ ಡೆಲ್ಟಾ ಬೀಚ್ […]

DAKSHINA KANNADA HOME LATEST NEWS

ಕದ್ರಿ ಪಾರ್ಕ್‍ನಲ್ಲಿ ಜ.30 ರಿಂದ ಫೆ.1 ರವರೆಗೆ ಸ್ಟ್ರೀಟ್ ಫುಡ್ ಫೆಸ್ಟಿವಲ್

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಆಹಾರ ಮೇಳವು ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಮಂಗಳೂರು ನಗರದ ಕದ್ರಿ ಪಾರ್ಕ್‍ನಲ್ಲಿ ನಡೆಯಲಿದೆ. ಈ ಆಹಾರ ಮೇಳದಲ್ಲಿ ಕರಾವಳಿ ಪ್ರದೇಶದ ವೈವಿಧ್ಯಮಯ ಹಾಗೂ ಸಮೃದ್ಧ ಪಾಕ ಪರಂಪರೆಯನ್ನು ಪೆÇ್ರೀತ್ಸಾಹಿಸುವ ಉದ್ದೇಶ ಹೊಂದಿದ್ದು, ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ. ಆಹಾರ ಪ್ರಿಯ ನಾಗರಿಕರಿಗೆ ವಿಶೇಷ ಅನುಭವವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಎಲ್ಲ ವರ್ಗದ ಜನರಿಗೆ ರುಚಿಕರ […]

DAKSHINA KANNADA HOME LATEST NEWS STATE

ಎಚ್ಚರಿಕೆ: ಇಂದಿನಿಂದ ಜ.31ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿ ಮುನ್ಸೂಚನೆ

ಮಂಗಳೂರು:- ಹವಾಮಾನ ಮುನ್ಸೂಚನೆಯಂತೆ ಜನವರಿ 27 ರಿಂದ 31 ರವರೆಗೆ ಅರಬ್ಬೀ ಸಮುದ್ರದಲ್ಲಿ ಭಾರೀ ಗಾಳಿ ಬೀಸುವುದರಿಂದ ಸಮುದ್ರವು ಪ್ರಕ್ಷುಬ್ದವಾಗಿರುತ್ತದೆ. ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಎಲ್ಲಾ ಮೀನುಗಾರರು ಜಾಗರೂಕತೆ ವಹಿಸುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

DAKSHINA KANNADA

*ಹವಾಮಾನ ಆಧಾರಿತ ಬೆಳೆವಿಮೆ: ತೋಟಗಾರಿಕಾ ಅಧಿಕಾರಿಗಳ ಜೊತೆಸಭೆ. ವಿಮಾಕಂತುಬಿಡುಗಡೆ ಶೀಘ್ರ ಕ್ರಮ: ಶಾಸಕ ಅಶೋಕ್ ರೈ*

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಬಾಕಿ ಇರುವ ಕೋಡಿಂಬಾಡಿ, ಕೊಡಿಪ್ಪಾಡಿಉ, ವಿಟ್ಲ ಹಾಗೂ ಬಲ್ನಾಡು ಗ್ರಾಮಗಳ ಪೈಕಿ ಕೋಡಿಂಬಾಡಿ ಹಾಗೂ ಕೊಡಿಪ್ಪಾಡಿ ಗ್ರಾಮದ ರೈತರಿಗೆ ಬೆಳೆವಿಮೆ ಮಂಜೂರಾಗಿದ್ದ, ವಿಟ್ಲ ಮತ್ತು ಬಲ್ನಾಡು ಗ್ರಾಮದ ರೈತರ ವಿಮೆ ಶೀಘ್ರ ಮಂಜೂರಾಗಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಮಂಗಳವಾರ ಬೆಂಗಳೂರಿನ ವಿಧಾನಸೌಧ ಕಚೇರಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಲೋಪವಾಗಿರುವ ಬಗ್ಗೆ ತೋಟಗಾರಿಕಾ ಇಲಾಳೆಯ ಜಂಟಿ ನಿರ್ದೇಶಕರಾದ ಶಕೀಲ್ ಅಹ್ಮದ್ ರವರ ಜೊತೆ […]

DAKSHINA KANNADA HOME LATEST NEWS STATE

ಪೌರಾಯುಕ್ತೆಗೆ ಧಮ್ಕಿ ಹಾಕಿದ ಕೈ ಮುಖಂಡನಿಗೆ ಆಶ್ರಯ ನೀಡಿದ ಮೈಕಲ್ ರೇಗೊಗೆ ಜಾಮೀನು

ಬೆಂಗಳೂರು:  ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡನನ್ನು ಬಂಧಿಸಲಾಗಿದೆ. ಕಳೆದ 14 ದಿನಗಳಿಂದ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿನ್ನೆ(ಜನವರಿ 26) ಕೇರಳದ ಗಡಿಭಾಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಪೊಲೀಸರು ಆರೋಪಿ ರಾಜೀವ್ ಗೌಡನನ್ನು ಶಿಡ್ಲಘಟ್ಟಕ್ಕೆ ಕರೆತಂದಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿ ಕೋರ್ಟ್​​​ ಮುಂದೆ ಹಾಜರುಪಡಿಸಿದರು. ಇದೀಗ ಕೋರ್ಟ್ ರಾಜಿವ್ ಗೌಡನನ್ನು ಜೈಲಿಗೆ ಕಳುಹಿಸಿದೆ. ಮಂಗಳೂರಿನಲ್ಲಿ ಪತ್ತೆಯಾದ ಕಾರು ಹಾಗೂ ಆರೋಪಿ ಕಾಂಗ್ರೆಸ್‌ ಮುಖಂಡ […]

COMMUNITY NEWS DAKSHINA KANNADA HOME

ಮಂಗಳೂರು: ಸಂತ ವಿನ್ಸೆಂಟ್ ಪೌಲ್ ಸಂಸ್ಥೆಯ ಸ್ಥಾಪನಾ ಶತಮಾನೋತ್ಸವ ಸಮಾರೋಪ

ಮಂಗಳೂರು: ನಮ್ಮ ಸ್ಥಾಪಕರಾದ ಫ್ರೆಡರಿಕ್ ಒಝನಾಮ್ ಅವರು – ದಾನ ಧರ್ಮ ಮಾಡುವುದೆಂದರೆ ಸಂಕಷ್ಟದಲ್ಲಿರುವವರನ್ನು ನಮ್ಮ ಸಮಾನರಂತೆ ಕಾಣುವುದು, ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ- ಎಂದು ಹೇಳಿದ್ದರು. ಅವರ ಆಶಯದಂತೆ ಕಳೆದ ಒಂದು ಶತಮಾನದಿಂದ ಮಂಗಳೂರು ಧರ್ಮಪ್ರಾಂತ್ಯದ ಎಸ್‌ಎಸ್‌ವಿಪಿ ಸದಸ್ಯರು ನಿಸ್ವಾರ್ಥತೆಯಿಂದ ಪರರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ ಎಂದು ಸಂತ ವಿನ್ಸೆಂಟ್ ದೆ ಪೌಲ್ ಸೊಸಾಯ್ಟಿಯ ಅಂತರಾಷ್ಟ್ರೀಯ ಅಧ್ಯಕ್ಷರಾದ ಜುವಾನ್ ಮ್ಯಾನುಯೆಲ್ ಬಿ. ಗೊಮೆಜ್ ಅಭಿಪ್ರಾಯಪಟ್ಟರು. ಅವರು ಜನವರಿ 25 ರಂದು ಮಂಗಳೂರು […]