Month: January 2026

DAKSHINA KANNADA HOME LATEST NEWS STATE

Big Breaking: ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕ ಡಾ ಸಿ.ಜೆ ರಾಯ್‌ ಆತ್ಮಹತ್ಯೆ

ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ,  ಕಾನ್ಫಿಡೆಂಟ್‌ ಗ್ರೂಫನ್‌ ಸಾಮ್ರಾಟ ಡಾ ಸಿ.ಜೆ ರಾಯ್‌ ದುರಂತ ಅಂತ್ಯ ಕಂಡಿದ್ದಾರೆ. ಐಟಿ ದಾಳಿ ವೇಳೆ ಅಧಿಕಾರಿಗಳ ಎದುರೇ ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ರಿಚ್ಮಂಡ್ ಸರ್ಕಲ್ ಬಳಿಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಈ ದುರಂತ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸಿ.ಜೆ. ರಾಯ್ ಅವರು ತಮ್ಮ ಕಚೇರಿಯ ಒಳಗೆ ಇದ್ದಕ್ಕಿದ್ದಂತೆ ತಮಗೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ. ಐಟಿ ದಾಳಿಯ ವೇಳೆ ಅಧಿಕಾರಿಗಳಿಗೆ […]

DAKSHINA KANNADA HOME LATEST NEWS

ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣ: JDS ನಾಯಕಿಯ ಮಗನ ಬಂಧನ

ಕಾರವಾರ: ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ JDS ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್​​ ಪುತ್ರ ಆರೋಪಿ ಚಿರಾಗ್​​ನನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡದ ಕಾರವಾರದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿ ಪುತ್ರ ಚಿರಾಗ್​ ಕಿರುಕುಳದಿಂದ ನೊಂದಿದ್ದ ರಿಶೇಲ್ ಡಿಸೋಜಾ ಜನವರಿ 9ರಂದು ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳನ್ನ ಪ್ರಿತಿಸುವಂತೆ ಚಿರಾಗ್ ಪೀಡಿಸುತ್ತಿದ್ದ ಎಂದು ಮೃತಳ ತಂದೆ ಕ್ರಿಸ್ತೋದ ಡಿಸೋಜಾ ಅವರು ಜನವರಿ 10 […]

HOME LATEST NEWS NATIONAL STATE

ಗಗನದತ್ತ ಚಿನ್ನದ ಬೆಲೆ..!: 17,000 ರೂ. ಗಡಿ  ದಾಟಿದ ಚಿನ್ನ- ಬೆಳ್ಳಿಯೂ ದುಬಾರಿ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ನಿನ್ನೆ ಅಕ್ಷರಶಃ ಗಗನ ಮುಟ್ಟಿದೆ. ಇತ್ತೀಚಿನ ವರ್ಷಗಳಲ್ಲೇ ಒಂದೇ ದಿನದಲ್ಲಿ ಚಿನ್ನ ಕಂಡ ಅತಿಹೆಚ್ಚು ಏರಿಕೆ ಇದು. ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 16,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆಯೂ 17,000 ರೂ  ದಾಟಿ 18,000 ರೂನತ್ತ ಸಾಗುತ್ತಿದೆ. ಬೆಳ್ಳಿ ಬೆಲೆ ಇನ್ನೂ ದೊಡ್ಡ ಜಿಗಿತ ಕಾಣುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,63,950 ರುಪಾಯಿ ಇದೆ. 24 ಕ್ಯಾರಟ್​ನ […]

DAKSHINA KANNADA

*ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 77ನೇ ಗಣರಾಜ್ಯೋತ್ಸವದಲ್ಲಿ ‘ಸಂತ ಆಗ್ನಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯರೂಪಕ ಪ್ರದರ್ಶನ*

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 77ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನದ ಗೌರವ ಸ್ವೀಕರಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ದಿನೇಶ್ ಗುಂಡೂರಾವ್ ರವರು ಮಾತನಾಡಿ, ಉನ್ನತ ಪ್ರಜಾಪ್ರಭುತ್ವದ ಆಶಯ ಹೊಂದಿರುವ ಸಂವಿಧಾನ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಏಕತೆಯ ಆಧಾರದ ಮೇಲೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು ಹಾಗೂ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಹಾಗೂ ನೃತ್ಯದಂತಹ ಸಾಂಸ್ಕೃತಿಕ ಕಾಠ್ಯಕ್ರಮ ನಡೆದವು. […]

DAKSHINA KANNADA HOME

*ಸಾಮಾಜಿಕ ಅರಣ್ಯ ಮರಕಠಾವಿಗೆ ಅರಣ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ*

ಪುತ್ತೂರು: ಮುಂಡೂರು ಗ್ರಾಮದಲ್ಲಿ ನೂತನವಾಗಿ ಆರಂಭವಾಗಲಿರುವ ಆರ್ ಟಿ ಒ ಟ್ರ್ಯಾಕ್ ಮತ್ತು ಬಜತ್ತೂರಿನಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ವಸತಿ ಶಾಲೆಗೆ ನಿಗಧಿ ಮಾಡಲಾದ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಮರಗಳು ಇದ್ದು ಅದನ್ನು ಕಠಾವಿಗೆ ಆದೇಶ ಮಾಡುವಂತೆ ಅರಣ್ಯ ಸಚಿವ ಈಶ್ವರಖಂಡ್ರೆ ಅವರಿಗೆ ಶಾಶಕ ಅಶೋಕ್ ರೈ ಮನವಿ ಮಾಡಿದ್ದಾರೆ. ಗುರುವಾರ ಸಚಿವರನ್ನು ವಿಧಾನಸೌಧ ಕಚೇರಿಯಲ್ಲಿ ಭೇಟಿಯಾದ ಶಾಸಕರು ಬಜತ್ತೂರಿನಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣವಾಗಲಿದೆ. ವಸತಿ ಶಾಲೆಗೆ ನಿಗಧಿಮಾಡಲಾದ ಸರಕಾರಿ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೊಳಪಟ್ಟ […]

DAKSHINA KANNADA HOME LATEST NEWS

ಸುರತ್ಕಲ್‌: ಮನೆಗೆ ನುಗ್ಗಿ ದೈವದ ಮೂರ್ತಿ & ಪರಿಕರ ಕಳವು- ಇಬ್ಬರ ಬಂಧನ

ಮಂಗಳೂರು: ಕುಳಾಯಿಯ ಮನೆಯೊಂದರಿಂದ ದೈವಗಳ ಮೂರ್ತಿಗಳು ಮತ್ತು ಟಿವಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಚೊಕ್ಕಬೆಟ್ಟು ನಿವಾಸಿ ವಾಜೀದ್ ಜೆ ಯಾನೆ ವಾಜಿ (27) ಮತ್ತು ಜೋಕಟ್ಟೆಯ ಸಯ್ಯದ್ ಆಲಿ (40) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ವಿವರ ಕುಳಾಯಿ ಗ್ರಾಮದ ಯಶೋಧ ಕ್ಲಿನಿಕ್ ಬಳಿಯ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧ ಪಟ್ಟ ಪೂಜಾ ಪರಿಕರಗಳು ಮತ್ತು ಟಿವಿ […]

HOME LATEST NEWS NATIONAL

ವಿಮಾನ ದುರಂತಕ್ಕೆ ಮೊದಲೇ ಅಜಿತ್‌ ಪವಾರ್ ಸಾವಿನ ಅಪ್‌ಡೇಟ್‌..! ಏನಿದೆ ಅಸಲಿ ಸತ್ಯ?

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕಕಾರಿ ಸಂಗತಿಯೊಂದು ಹರಿದಾಡುತ್ತಿದೆ. ‘ದುರಂತ ಸಂಭವಿಸುವ ಮೊದಲೇ  ‘ವಿಕಿಪಿಡಿಯಾ’ದಲ್ಲಿ ಅಜಿತ್‌ ಅವರ ಸಾವಿನ ಮಾಹಿತಿ ಅಪ್‌ಡೇಟ್‌ ಆಗಿತ್ತು. ಹಾಗಾಗಿ, ಅಪಘಾತ ಸಂಭವಿಸಲಿದೆ ಎಂಬುದು ಗೊತ್ತಾಗಿತ್ತು ಅಥವಾ ಇದೊಂದು ಪಿತೂರಿ ಇದ್ದಿರಬಹುದು’ ಎಂದು ಆರೋಪಿಸಲಾಗುತ್ತಿದೆ. ವಿಕಿಪಿಡಿಯಾದಲ್ಲಿರುವುದು ನಿಜವೇ? ಅಜಿತ್‌ ಸಾವಿನ ದಿನಾಂಕವನ್ನು, ದುರಂತಕ್ಕೂ ಮೊದಲೇ ವಿಕಿಪಿಡಿಯಾದಲ್ಲಿ ಅಪ್‌ಡೇಟ್‌ ಮಾಡಲಾಗಿತ್ತು ಎಂಬುದು ನಿಜವಲ್ಲ. ಸಾರ್ವತ್ರಿಕ ಸಂಯೋಜಿತ ಸಮಯದ […]

DAKSHINA KANNADA HOME

*ಬಜೆಟ್ ನಲ್ಲಿ ಮಂಗಳೂರು ದಸರಾಗೆ 5 ಕೋಟಿ :- ಮುಖ್ಯಮಂತ್ರಿಗಳಿಗೆ ಶಾಸಕ ಕಾಮತ್ ಮನವಿ*

ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ಪ್ರತೀ ವರ್ಷ ದೇಶ-ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದು ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರವು ಈ ಬಾರಿಯ 2026-27 ನೇ ಸಾಲಿನ ಬಜೆಟ್ ನಲ್ಲಿ ರೂ.5 ಕೋಟಿ ಅನುದಾನ ಘೋಷಣೆ ಮಾಡುವಂತೆ ಶಾಸಕ ಡಿ.ವೇದವ್ಯಾಸ ಕಾಮತ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಮನವಿ ಮಾಡಿದರು. ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಪ್ರಸಿದ್ಧ […]

DAKSHINA KANNADA HISTORY

*ತುಳು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಣೆ ಮಾಡುವ ವಿಚಾರ ಶಾಸಕ ಅಶೋಕ್ ರೈ ಸದನದಲ್ಲೇ ನೇರ ಪ್ರಶ್ನೆ*

ಪುತ್ತೂರು: ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಬೇಕು ಎಂದು ನಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ಸರಕಾರದ ಮುಂದೆ ಮನವಿ ಮಾಡಿದ್ದೆ, ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆದಿದೆ, ಹೊರ ರಾಜ್ಯಗಳಿಗೆ ಅಧ್ಯಯನ ಸಮಿತಿಯನ್ನು ಕಳುಹಿಸಲಾಗಿದೆ, ಘೋಷಣೆ ಮಾಡುವುದರಿಂದ ಸರಕಾರಕ್ಕೇನು ಆರ್ಥಿಕ ಹೊರೆಯಿಲ್ಲ . ಯಾಕೆ ಘೋಷಣೆಗೆ ಇಷ್ಟೊಂದು ತಡವಾಗುತ್ತಿದೆ? ಯಾವಾಗ ಘೋಷಣೆ ಮಾಡುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ನೇರ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕನ್ನಡ ಮತ್ತು […]

DAKSHINA KANNADA HOME

*ನಗರದ ಬಸ್ ನಿಲ್ದಾಣದಲ್ಲಿ ಮಾದಕ ವ್ಯಸನಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ*

ಮಂಗಳೂರು,ಜ.28;ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ,ಮಂಗಳೂರು ನಗರ ಪೊಲೀಸ್ ಮತ್ತು ರೋಶನಿ ನಿಲಯ ವಿದ್ಯಾ ಸಂಸ್ಥೆ ಗಳ ಸಹಯೋಗದೊಂದಿಗೆ ಸ್ಟೇಟ್ ಬ್ಯಾಂಕ್ ನ ಕೇಂದ್ರ ಬಸ್ ನಿಲ್ದಾಣದ ಬಳಿ ಬುಧವಾರ ಮಾದಕ ದ್ರವ್ಯ ವ್ಯಸನಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಪಿ.ಉಮೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಎಸಿಪಿ ರವೀಶ್ ನಾಯ್ಕ್ ಮಾತನಾಡುತ್ತಾ,ಮಾದಕ ದ್ರವ್ಯ ಬಳಕೆ ಯಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು‌. ಮಾಡಿ.ಮಾದಕ ದ್ರವ್ಯ ಸೇವನೆ […]