Month: December 2025

HOME UDUPI

*ಅಕ್ಷತಾ ಪೂಜಾರಿಗೆ ಕೂಡಲೇ ನ್ಯಾಯ ಒದಗಿಸಲಿ. ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಒತ್ತಾಯ*

ಉಡುಪಿ ಬ್ರಹ್ಮಾವರ : ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂಬೆಳಗ್ಗೆ ನುಗ್ಗಿ ಯುವತಿಗೆ ಹಲ್ಲೆ ನಡೆಸಿರುವುದನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಖಂಡಿಸುತ್ತದೆ. ತಪ್ಪಿಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಲ್ಲವರ ಮಹಾಮಂಡಲ (ರಿ) ಮೂಲ್ಕಿ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಒತ್ತಾಯಿಸಿದ್ದಾರೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೋಲಿಸರು ಇಲ್ಲದೇ, ಕೇವಲ ಪುರುಷ ಪೊಲೀಸರು ನುಗ್ಗಿ, ಯುವತಿ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ […]

DAKSHINA KANNADA HOME

*ಎಲ್ಲಾ ಸರ್ವ ಧರ್ಮದವರು ಖುಷಿಯನ್ನು ದೇಶದಲ್ಲಿ ಹಂಚಿದರೆ ಜಾತಿ ಬೇದ ಮರೆತು ಎಲ್ಲಾರೂ ಖುಷಿಯಲ್ಲಿ ಜೀವನ ನಡೆಸಲು ಸಾಧ್ಯ ಸೌಹಾರ್ದ ಕ್ರಿಸ್ಮಸ್ ಉತ್ಸವ ದಲ್ಲಿ ಜಿಲ್ಲಾ ಧಿಕಾರಿ ದರ್ಶನ್ ಎಚ್. ವಿ ಕರೆ*

ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಸಹಯೋಗದಲ್ಲಿ ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಕ್ರಿಸ್ಮಸ್ ಉತ್ಸವ ಅದ್ಧೂರಿಯಾಗಿ ನೆರವೇರಿತು. ಎರಡು ದಿನ ನಡೆದ ಸಂಭ್ರಮದಲ್ಲಿ ನಗರದ ಎಲ್ಲಾ ಜಾತಿ ಧರ್ಮದ ಜನರು ಉತ್ಸಾಹದಿಂದ ಭಾಗವಹಿಸಿ ಸೌಹಾರ್ದತೆ ಮೆರೆದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೌಹಾರ್ದ ಕ್ರಿಸ್ಮಸ್ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಶ್ಲಾಘಿಸಿದರು. ಎಲ್ಲರಿಗೂ ಖುಷಿಯನ್ನು ಹಂಚುವ ಕಾರ್ಯ ಪ್ರಶಂಸನೀಯವೆಂದರು. ಎಲ್ಲಾ ಸರ್ವ ಧರ್ಮ ದವರು ಖುಷಿ […]

DAKSHINA KANNADA HOME

*ಹೊಸ ವರುಷದ ಆಚರಣೆಯ ನೆಪದಲ್ಲಿ ಅಶ್ಲೀಲ ನೃತ್ಯ ಮತ್ತು ಡಿಜೆ ಪಾರ್ಟಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ*

ಮಂಗಳೂರು. ಡಿ 15: ಹೊಸ ವರುಷದ ಆಚರಣೆಯ ನೆಪದಲ್ಲಿ ಅಶ್ಲೀಲ ನೃತ್ಯ ಮತ್ತು ಡಿಜೆ ಪಾರ್ಟಿಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ ಮಾಡಿದೆ. ನಮ್ಮ ಜಿಲ್ಲೆಯನ್ನು ಡ್ರಗ್ಸ್ ಮುಕ್ತವಾಗಿಸಲು ಪೊಲೀಸ್ ಇಲಾಖೆಯು ನಡೆಸುತ್ತಿರುವ ಕಟ್ಟುನಿಟ್ಟಿನ ಕ್ರಮ ಅಭಿನಂದನಾರ್ಹ ಕಳೆದ ಕೆಲವು ತಿಂಗಳುಗಳಿಂದ ಡ್ರಗ್ಸ್ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಸಾಕಷ್ಟು ಕೆಡಿಮೆಯಾಗಿದೆ ಅಲ್ಲದೆ ಶಾಂತಿ ಕೂಡ ನೆಲೆಸಿದೆ. ಹೊಸವರುಷದ ಹೆಸರಿನಲ್ಲಿ ಪ್ರತೀವರ್ಷ ಡಿಸೆಂಬರ್ 31 ರಂದು ಹಲವು ಕಾರ್ಯಕ್ರಮಗಳು ನಡೆಯುತ್ತದೆ. ಕೆಲವೊಂದು ಕಾರ್ಯಕ್ರಮ ಪಾರ್ಟಿಗಳಲ್ಲಿ […]

DAKSHINA KANNADA HOME LATEST NEWS

*ಸಮುದಾಯಗಳ ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ಸರಕಾರಕ್ಕೆಇದೆ. ಸಂತೋಷ್ ಡಿಸೋಜಾ*

ಮಂಗಳೂರು: ಶ್ರೀ ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತ ಧರ್ಮದ ಪಾದ್ರಿಗಳು, ಪಾಸ್ಟರ್‌ಗಳು, ಸನ್ಯಾಸಿನಿಯರು (ಸಿಸ್ಟರ್‌ಗಳು) ಹಾಗೂ ನಮ್ಮ ಕರ್ತನಾದ ಯೇಸು ಕ್ರಿಸ್ತರ ವಿರುದ್ಧ ಅತ್ಯಂತ ಅವಮಾನಕಾರಿ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿರುವುದು ಇತ್ತೀಚೆಗೆ ಒಂದು ವೀಡಿಯೋವನ್ನು ನೋಡಿದೆ, ಇಂತಹ ದ್ವೇಷಪೂರಿತ ಮಾತುಗಳನ್ನು ಒಂದು ಧಾರ್ಮಿಕ ಸಮುದಾಯ ಹಾಗೂ ಅದರ ನಂಬಿಕೆಗೆ ವಿರುದ್ಧವಾಗಿ ಬಳಸಿರುವುದು ತುಂಬಾ ನೋವುಂಟು ಮಾಡಿದೆ. ಎಂದುಮಂಗಳೂರು ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜಾ ಪತ್ರಿಕ ಹೇಳಿಕೆಯಲ್ಲಿ ತಿಳಿಸಿದರು ಹಿಂದೆ ಅವರು ಶಾಲೆಗಳ ಕ್ರಿಸ್‌ಮಸ್ ರಜೆಯ […]

DAKSHINA KANNADA HOME

*ಮಣೇಲ್ ಗ್ರಾಮದಲ್ಲಿ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ’ಸಾಂಸ್ಕೃತಿಕ ಗ್ರಾಮೋತ್ಸವ ನಡೆಯಲಿ: ಡಾ.ಚಿನ್ನಪ್ಪ ಗೌಡ *

ಮಂಗಳೂರು: ರಾಣಿ ಅಬ್ಬಕ್ಕನ ಅರಮನೆ ಇದ್ದಂತಹ ಹಾಗೂ ವಿದೇಶಿ ಪ್ರವಾಸಿ ಅಬ್ಬಕ್ಕನನ್ನು ಭೇಟಿ ಮಾಡಿದ ಗಂಜೀಮಠ ಗ್ರಾಂ.ಪಂ ವ್ಯಾಪ್ತಿಯ ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು, ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ’ ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂದು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು. ಅವರು ಕರ್ನಾಟಕ […]

HISTORY HOME

*ಸಂತ ಮದರ್ ತೆರೆಸಾ ವೇದಿಕೆ ವತಿಯಿಂದ ಕದ್ರಿ ಪಾರ್ಕ್‌ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ ಉದ್ಘಾಟನೆ*

ಮಂಗಳೂರು ಡಿ.13: ಸಂತ ಮದರ್ ತೆರೆಸಾ ವೇದಿಕೆ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಜಂಟಿ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಸೌಹಾರ್ದ ಕ್ರಿಸ್ಮಸ್ ಉತ್ಸವ ಶನಿವಾರ ಸಂಜೆ ಉದ್ಘಾಟನೆಗೊಂಡಿತು. ರಾಷ್ಟ್ರೀಯ ಯುವ ಕ್ರೀಡಾಪಟು, ವಿದ್ಯಾರ್ಥಿ ಯುವರಾಜ್ ಕುಂದರ್ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ. ಸುದೀಪ್ ಕ್ರಿಸ್ಮಸ್ ಸಂದೇಶ ನೀಡಿದರು. ಮುಖ್ಯ ಅತಿಥಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಚಾರ್ಲ್ಸ್ ಫುಟ್ತಾದೊ ಶುಭನುಡಿಗಳನ್ನಾಡಿದರು. ಸಾಮಾಜಿಕ […]

DAKSHINA KANNADA HOME

ಹೆಚ್.ಐ.ವಿ ಸೋಂಕಿತರ ಬಗ್ಗೆ ಯಾವುದೇ ತಾರತಾಮ್ಯ, ಕಳಂಕ ಬೇಡ, ಅವರಿಗೂ ಸಮಾಜದಲ್ಲಿ ಎಲ್ಲರೊಂದಿಗೆ ಬಾಳಿ ಬದುಕುವ ಅವಕಾಶವನ್ನು ನೀಡೋಣ ಶ್ರೀಮತಿ ಜೈಬುನ್ನಿಸಾ

ಮಂಗಳೂರು : ವಿಶ್ವ ಏಡ್ಸ್ ದಿನ – 2025 ಇದರ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು, ಯೆನಪೋಯ ನರ್ಸಿಂಗ್ ಕಾಲೇಜು, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ಜಿಲ್ಲಾ ವಕೀಲರ ಸಂಘ ದ.ಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ದ.ಕ […]

DAKSHINA KANNADA HOME LATEST NEWS

“ಸೈಬರ್ ವಂಚನೆಯ ಬಗ್ಗೆ ಜಾಗೃತರಾಗಿರಬೇಕು” ಎಸಿಪಿ ನಜ್ಮಾ ಫಾರೂಕಿ

ಮಂಗಳೂರು: “ಇಂದು ಅಪರಾಧ ಕೃತ್ಯಗಳ ಸ್ವರೂಪ ಬದಲಾಗುತ್ತಿದೆ. ಇಂದಿನ ಯುವಜನತೆ ಮಾದಕ ವಸ್ತು ಸೇವನೆ, ಸೈಬರ್ ಕ್ರೈಂ, ಅತ್ಯಾಚಾರದಂತ ಕ್ರಿಮಿನಲ್ ಕೃತ್ಯಗಳಲ್ಲಿ‌ ಹೆಚ್ಚಾಗಿ ಶಾಮೀಲಾಗುತ್ತಿರುವುದು ಆತಂಕಕಾರಿ ವಿಚಾರ. ಅದೇ ರೀತಿ ಆನ್‌ಲೈನ್ ವಂಚನೆಗೊಳಗಾಗಿ ಅದೆಷ್ಟೂ ಮಂದಿ ಹಣ, ಬದುಕನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವುದಲ್ಲದೆ ಜನರೂ ಕೂಡ ಕಾನೂನು, ಮಾನವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಯುವ ಅಗತ್ಯ ಇದೆ“ ಎಂದು ಎಸಿಪಿ ನಜ್ಮಾ ಫಾರೂಕಿ ಹೇಳಿದ್ದಾರೆ. ಅವರು ಲಯನ್ಸ್‌ ಇಂಟರ್‌ನ್ಯಾಷನಲ್‌ ಜಿಲ್ಲೆ 317 ಡಿ […]

DAKSHINA KANNADA

*ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ವಾರ್ಷಿಕ ಮಹೋತ್ಸವ*

ವಿಟ್ಲ.: ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮುಚ್ಚಿರಪದವು ಇದರ ವಾರ್ಷಿಕ ಮಹೋತ್ಸವವು ಇತ್ತೀಚೆಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಮಹೋತ್ಸವಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿವೃತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜಾ ಇವರು ಪ್ರಧಾನ ಗುರುಗಳಾಗಿ ಆಗಮಿಸಿ ಬಲಿ ಪೂಜೆಯನ್ನು ನೆರವೇರಿಸಿದರು. ಏಸು ನಮ್ಮ ಭರವಸೆ, ಮತ್ತೆ ಮರಿಯಮ್ಮ ನಮ್ಮ ಆಶ್ರಯ ಎಂದು ವಂದನೀಯ ಅರುಣ್ ವಿಲ್ಸನ್ ಲೋಬೊ ಇವರು ಸಂದೇಶ ನೀಡಿದರು. ಈ ಸುಸಂದರ್ಭದಲ್ಲಿ ಪರಮಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ […]

DAKSHINA KANNADA HOME

ಸಂತ ಆಗ್ನೇಸ್ ಕಾಲೇಜು ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ, ಸುಶ್ರವ್ಯಾ ಸ್ಕೇಟಿಂಗ್ ನೃತ್ಯದ ಮೂಲಕ ವಿಶ್ವ ದಾಖಲೆ

ಮಂಗಳೂರು ಡಿಸೆಂಬರ್ 12: ಸಂತ ಆಗ್ನೇಸ್ ಕಾಲೇಜು ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ. ಸುಶ್ರವ್ಯಾ ಡಿಸೆಂಬರ್ 12ರಂದು ಬೆಳಿಗ್ಗೆ ೮.೦೦ ಗಂಟೆಯಿಂದ ಮದ್ಯಾಹ್ನ ೧೨ ಗಂಟೆಯವರೆಗೆ ನಿರಂತರ ೦೪ ಗಂಟೆಗಳ ಕಾಲ ಸ್ಕೇಟಿಂಗ್ ನಲ್ಲಿ ನೃತ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ಸೇರ್ಪಡಿಗೊಳಿಸಿದ್ದಾರೆ. ಮಂಗಳೂರು ಚಿಲಿಂಬಿಯ ಉದಯ್ ಕುಮಾರ್ ಮತ್ತು ಶಶಿರೇಖಾ ಎಸ್ ಅವರ ಪುತ್ರಿ ಸುಶ್ರಾವ್ಯ. ಪ್ರಸುತ್ತ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಮಂಗಳೂರಿನ ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ,ಅವರ […]