Month: October 2025

LATEST NEWS NATIONAL STATE

ಸತ್ತಾಗ ಎಷ್ಟು ಜನ ದುಃಖಿಸುತ್ತಾರೆ ಎಂದು ತಿಳಿಯಲು ಸಾವಿನ ನಟನೆ ಮಾಡಿದ ನಿವೃತ್ತ ಯೋಧ

ಪಾಟ್ನಾ : ಬಿಹಾರದಲ್ಲಿ ಮಾಜಿ ಸೈನಿಕನೋರ್ವ ತನ್ನ ಸಾವಿನ ನಂತರ ಯಾರು ದುಃಖಿಸುತ್ತಾರೆ ಮತ್ತು ಎಷ್ಟು ಪ್ರೀತಿ ಸಿಗುತ್ತದೆ ಎಂದು ತಿಳಿಯಲು ಶವಪೆಟ್ಟಿಗೆ ಮೇಲೆ ಮಲಗಿ ಸ್ಮಶಾನಕ್ಕೆ ಬಂದ ವಿಚಿತ್ರ ಘಟನೆ ನಡೆದಿದೆ. ಗಯಾ ಜಿಲ್ಲೆಯ ಗುರಾರು ಬ್ಲಾಕ್‌ನ ಕೊಂಚಿ ಗ್ರಾಮದಲ್ಲಿ ಘಟನೆ ನಡೆದಿದೆ. ವಾಯುಪಡೆಯ ಮಾಜಿ ಸೈನಿಕ ಮೋಹನ್ ಲಾಲ್(74), ಜೀವಂತವಾಗಿರುವಾಗ ತನ್ನದೇ ಅಣಕು ಅಂತ್ಯಕ್ರಿಯೆ ಏರ್ಪಡಿಸಿ ಎಲ್ಲರನ್ನೂ ಆಘಾತಗೊಳಿಸಿದರು. ಈ ಕುರಿತ ವೀಡಿಯೊ ವೈರಲ್ ಆಗಿದೆ. ಅಲಂಕರಿಸಿದ ಶವಪೆಟ್ಟಿಗೆಯಲ್ಲಿ ತನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವಂತೆ ಮೋಹನ್ […]

DAKSHINA KANNADA HOME

ವಿಟ್ಲ ಬಾಲಕನಿಗೆ ದ್ವಿಚಕ್ರ ವಾಹನ ನೀಡಿದ ವ್ಯಕ್ತಿಗೆ 32 ಸಾವಿರ ರೂ. ದಂಡ

ವಿಟ್ಲ: ಅ 16 : ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಕಾರಣಕ್ಕೆ ವಾಹನ ಮಾಲಕನಿಗೆ ಬಂಟ್ವಾಳ ನ್ಯಾಯಾಲಯವು 32 ಸಾವಿರ ರೂ. ದಂಡ ವಿಧಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಪುತ್ತೂರು ಕಡೆಯಿಂದ ವಿಟ್ಲದತ್ತ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕ ಚಲಾಯಿಸುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಬಂಟ್ವಾಳ ಎಸಿಜೆ […]

DAKSHINA KANNADA HOME

ಮೂರು ಸರಕಾರಿ ಶಾಲೆಗಳು ಕೆಪಿಎಸ್ ಸ್ಕೂಲ್‌ಗೆ ಆಯ್ಕೆ ಶಾಸಕ ಅಶೋಕ್ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಸರಕಾರಿ ಹಿ ಪ್ರಾ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಅಯ್ಕೆಯಾಗಿದ್ದು , ಪುತ್ತೂರು ಶಾಸಕ ಅಶೋಕ್ ರೈ ಮನವಿಗೆ ಶಿಕ್ಷಣ ಇಲಾಖೆ ಸ್ಪಂದನೆ ನೀಡಿದೆ.ಉಪ್ಪಿನಂಗಡಿಯ ಸರಕಾರಿ ಹಿ ಪ್ರಾ ಶಾಲೆ, ನೆಟ್ಟಣಿಗೆ ಮುಡ್ನೂರು ಸರಕಾರಿ ಹಿ ಪ್ರಾ ಶಾಲೆ ಹಾಗೂ ಬಜತ್ತೂರು ಸರಕಾರಿ ಹಿ ಪ್ರಾ ಶಾಲೆ ಇನ್ನು ಮುಂದೆ ಕೆಪಿಎಸ್ ಸ್ಕೂಲ್ ಆಗಿ ಪರಿವರ್ತನೆಯಾಗಲಿದೆ. ಒಟ್ಟು ಎಂಟು ಶಾಲೆಗಳನ್ನು ಅರ್ಹತಾ ಪಟ್ಟಿಗೆ ಕಳುಹಿಸಲಾಗಿದ್ದು ಮೊದಲ ಹಂತದಲ್ಲಿ […]

DAKSHINA KANNADA

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆ – “ವಾಗ್ವಿಲಾಸ 2025”

ಸುಳ್ಯ .ಅ.: 15 ರಂದು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆ – “ವಾಗ್ವಿಲಾಸ 2025” ನಡೆಸಲಾಯಿತು. ಈ ಸ್ಪರ್ಧೆಯ ಉದ್ಘಾಟನೆಯನ್ನು ಕಾಲೇಜಿನ ಪ್ರಾಶುಪಾಲರು ಡಾ. ಲೀಲಾಧರ್ ಡಿ ವಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸುತ್ತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ವಿಧ್ಯಾರ್ಥಿಗಳು ಉತ್ಸುಕತೆಯಿಂದ ವಿವಿಧ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ ವಿನಯ್ ಶಂಕರ್ ಭಾರಧ್ವಾಜ್, ಕಾರ್ಯಕ್ರಮದ ಸಂಯೋಜನಾಧಿಕರಾದ ಡಾ. ಹರ್ಷಿತಾ ಎಂ, ಸಾಹಿತ್ಯಿಕ […]

HOME STATE

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಶ್ರೀಮತಿ ಶಾಲೆಟ್ ಪಿಂಟೋ ಬೆಂಗಳೂರು ಕಚೇರಿಯಲ್ಲಿ ಅಧಿಕಾರ ಸ್ವೀಕಾರ

ಬೆಂಗಳೂರು .ಅಕ್ಟೋಬರ್.15: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ನೂತನವಾಗಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀಮತಿ ಶಾಲೆಟ್ ಪಿಂಟೋ ರವರು ಬೆಂಗಳೂರುನ ಮಂಡಳಿಯ ಕಛೇರಿಯಲ್ಲಿ ಇವತ್ತು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಮಾಜಿ ಸಚಿವರಾದ ರಮಾನಾಥ ರೈ,ಅಭಯಚಂದ್ರಜೈನ್,ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮೆಸ್ಕಾಂ ಅದ್ಯಕ್ಷರಾದ ಹರೀಶ್ ಕುಮಾರ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎ […]

HOME

ಕಾಸರಗೋಡು:ಯುವತಿ ಆತ್ಮಹತ್ಯೆಗೆ ಯತ್ನ: ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತ್ಯು

ಕಾಸರಗೋಡು : ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ವೈದ್ಯಕೀಯ ವಿದ್ಯಾರ್ಥಿನಿ ಮನೆಯವರಿಂದ ರಕ್ಷಿಸಲ್ಪಟ್ಟು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೇತೂರು ಪಾರ ಸಮೀಪ ಬುಧವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಬೇಡಡ್ಕ ಬೇತೂರುಪಾರ ತಚ್ಚಾರ್ ಕುಂಡುವಿನ ಬಾಬು ಎಂಬವರ ಪುತ್ರಿ ಮಹಿಮಾ (19) ಎಂದು ಗುರುತಿಸಲಾಗಿದೆ. ಇವರು ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದರು. ಬುಧವಾರ ಬೆಳಗ್ಗೆ ಮಹಿಮಾ ಮನೆಯ ಬೆಡ್ ರೂಮ್ ನಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಆಕೆಯ ಸಹೋದರ […]

HOME

ಬೊಲ್ಕಿನಡ್ಕದ ಶೇರ್ಲಿನ್ ಡಿಸೋಜ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಪೆರ್ಲ : ನೀಲೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಮೇಳದಲ್ಲಿ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಶೇಣಿ ಬೊಲ್ಕನಡ್ಕದ ಶೇರ್ಲಿನ್ ಡಿಸೋಜ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಗಲ್ಫ್ ಉದ್ಯೋಗಿ ಬೊಲ್ಕನಡ್ಕದ ಸುರೇಶ ಅಗೋಸ್ಟರ್ ಮತ್ತು ಮೋನಿಕಾ ಮಚಾದೋ ದಂಪತಿಯ ಪುತ್ರಿಯಾದ ಈಕೆ ಬೇಳಾದ ಸೈಂಟ್ ಬಾರ್ತಲೋಮಿಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ. ಈಕೆಯ ಸಾಧನೆಯನ್ನು ಶಾಲಾ ಅಡಳಿತ ಮಂಡಳಿ ಹಾಗೂ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ಕೆಥೋಲಿಕ್ ಸಭಾ ಘಟಕವು ಅಭಿನಂದಿಸಿದೆ.

DAKSHINA KANNADA HOME

ವಿಟ್ಲ‌ ಸಮುದಾಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ,ಸಿಬಂದಿ ಕೊರತೆ ಪರಿಹರಿಸಿ: ಆರೋಗ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬಂದಿ,ವೈದ್ಯರ ಕೊರತೆ ಇದ್ದು ಅದನ್ನು ತಕ್ಷಣ ಪರಿಹರಿಸುವಂತೆ ಆರೋಗ್ಯ‌ಸಚಿವ ದಿನೇಶ್ ಗುಂಡೂರಾವ್ ಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಶಾಸಕರು ವಿಟ್ಲ ಸಮುದಾಯ ಕೇಂದ್ರದಲ್ಲಿ ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದೆ. ಅಲ್ಲಿ ವೈದ್ಯರ ಕೊರತೆಯಿಂದ ಜನರಿಗೆ ಸಂಕಷ್ಟ ಉಂಟಾಗಿದೆ. ವಿಟ್ಲದಲ್ಲಿ ಬೇರೆ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ತುರ್ತು‌ಸಂಧರ್ಭದಲ್ಲಿ ತೀವ್ರ ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ,ಜೊತೆಗೆ ಸಿಬಂದಿಗಳ ಕೊರತೆಯೂ […]

DAKSHINA KANNADA

* ಪೇಸ್ ಸಿಲ್ವಿಯೋರಾ 2025 ರಜತ ಮಹೋತ್ಸವ ಆಚರಣೆ*

*ರಜತ ಮಹೋತ್ಸವ ಆಚರಣೆ: ಪೇಸ್ ಸಿಲ್ವಿಯೋರಾ 2025* ಪೇಸ್ ಗ್ರೂಪ್ ತನ್ನ ರಜತ ಮಹೋತ್ಸವದ ಅಂಗವಾಗಿ “ಸಿಲ್ವಿಯೋರಾ 2025” ಎಂಬ ಶೀರ್ಷಿಕೆಯಲ್ಲಿ ಅತ್ಯಂತ ಸ್ಮರಣೀಯ ಕ್ಷಣವನ್ನು ಅಕ್ಟೋಬರ್ 14ರಂದು ಪೇಸ್ ಜ್ಞಾನ ನಗರದಲ್ಲಿ ಅಧಿಕೃತ ಬ್ಯಾನರ್ ಅನಾವರಣದೊಂದಿಗೆ ಆಚರಿಸಿತು. ಈ ಕಾರ್ಯಕ್ರಮವು ಸಂಸ್ಥೆಯ 25 ವರ್ಷದ ಯಶಸ್ವಿ ಪ್ರಯಾಣದ ಮಹತ್ವದ ಮೈಲುಗಲ್ಲುಗಳನ್ನು ಗುರುತಿಸಿತು. ಪೇಸ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಅಬ್ದುಲ್ಲಾ ಇಬ್ರಾಹಿಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ತಮ್ಮ ಭಾಷಣದಲ್ಲಿ ಅವರು “ಸಿಲ್ವಿಯೋರಾ 2025” ಬ್ಯಾನರ್ […]

DAKSHINA KANNADA

ಹಿಂಸಾತ್ಮಕ ರಾಜಕೀಯ ಖಂಡನೀಯ: ಪ್ರೊಫ್‌ಕಾನ್

ಮಂಗಳೂರು : ವಿಸ್ಡಮ್ ಇಸ್ಲಾಮಿಕ್ ಸ್ಟುಡೆಂಟ್ಸ್ ಆರ್ಗನೈಸೇಶನ್ ರಾಜ್ಯ ಸಮಿತಿ ಮಂಗಳೂರಿನಲ್ಲಿ ಆಯೋಜಿಸಿದ 29ನೇ ‘ಪ್ರೊಫ್‌ಕಾನ್’ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನವು ದೇಶದಾದ್ಯಂತದ ವೃತ್ತಿಪರ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೇರೂರುತ್ತಿರುವ ಅಪ್ರಜಾಸತ್ತಾತ್ಮಕ ಪ್ರವೃತ್ತಿಗಳು ಮತ್ತು ಹಿಂಸಾತ್ಮಕ ರಾಜಕೀಯವನ್ನು ತೀವ್ರವಾಗಿ ಖಂಡಿಸಿ, ಇಂತಹ ಪ್ರವೃತ್ತಿಗಳ ವಿರುದ್ಧ ವಿದ್ಯಾರ್ಥಿ ಸಮುದಾಯ ಒಗ್ಗೂಡಿ ಪ್ರತಿರೋಧಿಸಬೇಕೆಂದು ಮನವಿ ಮಾಡಿತು. ಶೈಕ್ಷಣಿಕ ಸಂಸ್ಥೆಗಳು ಜ್ಞಾನ ಮತ್ತು ಸಾಮಾಜಿಕ ಪ್ರಜ್ಞೆಯ ಕೇಂದ್ರಗಳಾಗಬೇಕಾದರೂ, ದುರದೃಷ್ಟವಶಾತ್ ಹಿಂಸೆ ಮತ್ತು ವಿಭಜನೆಯ ವೇದಿಕೆಗಳಾಗುತ್ತಿವೆ ಎಂದು ಸಮ್ಮೇಳನ ವ್ಯಕ್ತಪಡಿಸಿತು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ […]