Month: October 2025

DAKSHINA KANNADA HOME

*ಜಾತಿ ಧರ್ಮ ಎಂದು ಜಗಳ ತರುವವರು ಅವರ ಮಕ್ಕಳನ್ನು ಗಲಭೆ ಹಚ್ಚಲು ಕಳಿಸುವುದಿಲ್ಲ. ಬಡವರ ಮಕ್ಕಳನ್ನು, ಅಮಾಯಕರನ್ನು ದಬ್ಬುತ್ತಾರೆ: ಸಿ.ಎಂ.ಸಿದ್ದರಾಮಯ್ಯ ಎಚ್ಚರಿಕೆ*

ಪುತ್ತೂರು, ಅಕ್ಟೋಬರ್ 20: ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ರೈ ಎಸ್ಟೇಟ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಶೋಕ ಜನ-ಮನ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಶೋಕ್ ಅವರು ಕಾಂಗ್ರೆಸ್ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಸ್ತ್ರದಾನ ಮಾಡುವ ಕಾರ್ಯವನ್ನು 13 ವರ್ಷಗಳಿಂದ ಮಾಡ್ತಾ ಬರುತ್ತಿದ್ದಾರೆ. ಒಂದು ಲಕ್ಷ ಜನರಿಗೆ ಇಂದು ವಸ್ತ್ರದಾನ […]

HOME STATE

*11 ತಿಂಗಳ ಮಗು ನೀರಿನ ಟಬ್ ಒಳಗೆ ಬಿದ್ದು ದುರಂತ ಅಂತ್ಯ*

ಬೆಂಗಳೂರು .ಅಕ್ಟೋಬರ್ 20: ನೀರಿನ ಟಬ್ ಒಳಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನಡೆದಿದೆ. ಶಂಷಾದ್ ಪಠಾಣ್ ಮತ್ತು ಮುಸ್ಕಾನ್ ದಂಪತಿಗಳ ನಾಲ್ಕನೇ ಪುತ್ರಿ ಖುಷಿ ಮೃತ ದುರ್ದೈವಿಯಾಗಿದ್ದು, ಪ್ರಪಂಚವನ್ನು ಸರಿಯಾಗಿ ನೋಡುವ ಮೊದಲೇ ಕಂದಮ್ಮ ಕಣ್ಮುಚ್ಚಿದೆ. ಮಗು ಆಟವಾಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದ ಪರಿಣಾಮ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮನೆ ಒರೆಸುವ ಸಲುವಾಗಿ ಟಬ್ಗೆ ನೀರನ್ನು ತುಂಬಿಸಿ ಇಡಲಾಗಿತ್ತು. […]

DAKSHINA KANNADA HOME

ನಮ್ಮಕುಡ್ಲ 25 ನೇ ವರ್ಷದ ಗೂಡುದೀಪ ಸ್ಪರ್ಧೆ

ಮಂಗಳೂರು: ಜಿಲ್ಲೆಯ ಪ್ರಪ್ರಥಮ ತುಳು ವಾರ್ತಾ ವಾಹಿನಿ ನಮ್ಮಕುಡ್ಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 25 ನೇ ವರ್ಷದ ‘ನಮ್ಮಕುಡ್ಲ ಗೂಡುದೀಪ ಸ್ಪರ್ಧೆ’ ಅಕ್ಟೋಬರ್ 19 ರಂದು ಭಾನುವಾರ ನಡೆಯಿತು.ಸ್ಪರ್ಧೆಯು ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ನಡೆದಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧಿಗಳು ತಮ್ಮ ಮನೆಗಳಲ್ಲಿ ತಯಾರಿಸಿ ತಂದು ಪ್ರದರ್ಶಿಸಿದ ವಿಭಿನ್ನ ವಿನ್ಯಾಸದ, […]

DAKSHINA KANNADA HOME

*ಕುಲಶೇಖರ. ಅತಿ ಮಳೆ ಗುಡುಗು ಸಿಡಿಲು ಬಡಿದು,10 ಮನೆಗಳಿಗೆ ಹಾನಿ ಸುಮಾರು 10 ಲಕ್ಷ ನಷ್ಟ ಸ್ಥಳಕ್ಕೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಭೇಟಿ ಮತ್ತು ಅಧಿಕಾರಿ ಗಳೊಂದಿಗೆ ಚರ್ಚೆ*

ಮಂಗಳೂರು 19.:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಳಪೆ ವಾರ್ಡ್ ನಂಬರ್ 51 ಸಿರ್ಲಾಪಡ್ಪು ನಲ್ಲಿ ನಿನ್ನೆ ಸಂಜೆ ಬಿದ್ದ ಅತಿಯಾದ ಮಳೆ, ಗುಡುಗು ಮತ್ತು ಸಿಡಿಲಿನಿಂದ ಸಿರ್ಲಾಪಡ್ಪು ನಲ್ಲಿ ಹೈಟೆನ್ಷನ್ ಲೈನ್ ಪ್ರಭಾವದಿಂದ ಸಿಡಿಲು ಬಡಿದು ಒಂದು ತೆಂಗಿನ ಮರ ಮತ್ತು ಮನೆಗಳಿಗೆ ಹಾನಿಯಾಗಿದ್ದು ಅನೇಕ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡು ಎಲ್ಲಾ ಮನೆಯ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗಿ ಮನೆ ಒಳಗೆ ಹಾನಿಯಾಗಿ ತುಂಬಲಾರದ ನಷ್ಟವಾಗಿದೆ, ಈ ಬಗ್ಗೆ ಈಗಾಗಲೇ ಸ್ಥಳಯ ಗ್ರಾಮ ಲೆಕ್ಕಾಧಿಕಾರಿಗಳಿಗೆ, ಮೆಸ್ಕಾಂ […]

COMMUNITY NEWS HOME

ವಿಟ್ಲ ವಲಯದ ವೈಸಿಎಸ್‌ ಸಂಘಟನೆಯ 2025 ನೇ ಸಾಲಿನ ದ್ವಿತೀಯ ಸಮಾವೇಶ

ವಿಟ್ಲ: ಮಂಗಳೂರು ಧರ್ಮ ಪ್ರಾಂತ್ಯ ವ್ಯಾಪ್ತಿಯ ಸಂತ ಜಾನ್‌ ಪಾವ್ಲ್ ದ್ವಿತೀಯ ವಿಟ್ಲ ವಲಯದ ವೈಸಿಎಸ್‌ ಸಂಘಟನೆಯ 2025 ನೇ ಸಾಲಿನ ದ್ವಿತೀಯ ಸಮಾವೇಶ ಭಾನುವಾರ ಅಕ್ಟೋಬರ್ 19 ರಂದು ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ನಡೆಯಿತು. ವಿಟ್ಲ ವಲಯದ ಮುಖ್ಯ ಗುರುಗಳು ಮತ್ತು ಎಲ್ಲಾ ಗುರುಗಳ ಸಹಭಾಗಿತ್ವದಲ್ಲಿ ನಡೆದ ಸಮಾವೇಶದಲ್ಲಿ ವಲಯ ವ್ಯಾಪ್ತಿಯ 8 ಚರ್ಚ್ ಗಳ 85 ಮಂದಿ ವೈಸಿಎಸ್‌ ಸದಸ್ಯರು ಭಾಗವಹಿಸಿದ್ದರು. ವಲಯದ ವೈಸಿಎಸ್‌ ನಿರ್ದೇಶಕ ವಂದನೀಯ ಫಾ. ನವೀನ್‌ ಪ್ರಕಾಶ್‌ […]

DAKSHINA KANNADA HOME

”ಆರೆಸ್ಸೆಸ್ ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್ ಟ್ರೈನಿಂಗ್ ಕೊಡ್ತಿಲ್ಲ?“ -ಶಾಸಕ ಮಂಜುನಾಥ ಭಂಡಾರಿ

ಮಂಗಳೂರು: “ಬಿಜೆಪಿಯವರಿಗೆ ಒಂದು ಪಾಕಿಸ್ತಾನ ಇನ್ನೊಂದು ಮುಸ್ಲಿಂ ಇವೆರಡು ಬಿಟ್ರೆ ಏನೂ ಗೊತ್ತಿಲ್ಲ. ಬಿಜೆಪಿ 10 ವರ್ಷಗಳಲ್ಲಿ ನಡೆಸಿರುವ ಆಡಳಿತದಲ್ಲಿ ಯಾವುದನ್ನು ಹಿಡ್ಕೊಂಡು ಮತ ಕೇಳಿದ್ರಿ? ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಬಗ್ಗೆ ಮಾತಾಡಿದ್ರೆ ದೇಶದ್ರೋಹಿ ಪಟ್ಟ ಕಟ್ಟುತ್ತೀರಿ. ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ರಲ್ಲಿ ಏನು ತಪ್ಪಿದೆ? ಆರೆಸ್ಸೆಸ್ ಹಿಂದುಳಿದ ವರ್ಗದ ಮಕ್ಕಳನ್ನು ಲಾಠಿ, ಗನ್ನು ಕೊಟ್ಟು ಕೊಡ್ತಾ ಇರೋ ತರಬೇತಿ ಏನು? ಸರಕಾರ ಹೇಳಿದ್ದು ಆರೆಸ್ಸೆಸ್ ಸಹಿತ ಖಾಸಗಿ ಸಂಘಟನೆಗಳಿಗೆ ಸರಕಾರಿ ಮೈದಾನ, ರಸ್ತೆ, […]

DAKSHINA KANNADA

*ಮಹಾನಗರ ಪಾಲಿಕೆ ಬಜಾಲ್ ವಾರ್ಡಿನಲ್ಲಿ ಸುಮಾರು 1 ಕೋಟಿ ರೂ ಕಾಮಗಾರಿಗಳ ಗುದ್ದಲಿ ಪೂಜೆ: ಶಾಸಕ ವೇದವ್ಯಾಸ ಕಾಮತ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡಿನಲ್ಲಿ ಸುಮಾರು 1 ಕೋಟಿ ರೂ ವೆಚ್ಚದಲ್ಲಿ ನಡೆಯಲಿರುವ ಹದಿನೈದಕ್ಕೂ ಹೆಚ್ಚು ಕಾಮಗಾರಿಗಳ ಗುದ್ದಲಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬಹುಕಾಲದ ಬೇಡಿಕೆಯಂತೆ ಅತೀ ಅಗತ್ಯವಿರುವ ರಸ್ತೆ ಕಾಂಕ್ರೀಟೀಕರಣ, ತಡೆಗೋಡೆ ನಿರ್ಮಾಣ, ಕಾಲುದಾರಿ, ಆರ್.ಸಿ.ಸಿ ಚರಂಡಿ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುದಾನವನ್ನು ಹೊಂದಿಸಿಕೊಂಡು ಸಕಲ ವ್ಯವಸ್ಥೆ […]

DAKSHINA KANNADA

ಬ್ಯಾಂಕ್ ಆಫ್ ಬರೋಡಾ ವಿಚಕ್ಷಣಾ ಜಾಗೃತಿ ಅಭಿಯಾನ

ಮಂಗಳೂರು, ಅಕ್ಟೋಬರ್ 15:ಬ್ಯಾಂಕ್ ಆಫ್ ಬರೋಡಾ ವಿಚಕ್ಷಣಾ ಜಾಗೃತಿ ಅಭಿಯಾನ ಇಂದು ಮಂಗಳೂರಿನ ವಲಯ ಕಚೇರಿಯ ಬ್ಯಾಂಕ್ ಆಫ್ ಬರೋಡಾ, ಮಂಗಳೂರಿನ ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ಶ್ರೀ ರಾಜೇಶ್ ಖನ್ನಾ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಆಲ್ಪೆ ಪಡಿಲ್ ಮತ್ತು ನೀರ್ಮಾರ್ಗ್ ದಲ್ಲಿ, ಬೀದಿ ನಾಟಕವನ್ನು ಆಯೋಜಿಸಲಾಗಿತ್ತು. ವಲಯ ಜಾಗೃತ ಮುಖ್ಯಸ್ಥ ಶ್ರೀ ಮನೀಶ್ ಜೈಸ್ವಾಲ್ ಅವರು ಭಾಗವಹಿಸಿದ ಎಲ್ಲರಿಗು ಮತ್ತು ಸಭೆಯಲ್ಲಿ ಉಪಸ್ತಿತರಾದ ಜನತೆಗೆ ವಿಚಕ್ಷಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸಿದರು. ನಮ್ಮ ಬ್ಯಾಂಕಿನ ಈ […]

HOME

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆ – “ವಾಗ್ವಿಲಾಸ 2025”

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆ – “ವಾಗ್ವಿಲಾಸ 2025” ನಡೆಸಲಾಯಿತು. ಈ ಸ್ಪರ್ಧೆಯ ಉದ್ಘಾಟನೆಯನ್ನು ಕಾಲೇಜಿನ ಪ್ರಾಶುಪಾಲರು ಡಾ. ಲೀಲಾಧರ್ ಡಿ. ವಿ. ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸುತ್ತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಉತ್ಸುಕತೆಯಿಂದ ವಿವಿಧ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ ವಿನಯ್ ಶಂಕರ್ ಭಾರಧ್ವಾಜ್, ಕಾರ್ಯಕ್ರಮದ ಸಂಯೋಜನಾಧಿಕರಾದ ಡಾ. ಹರ್ಷಿತಾ ಎಂ, ಸಾಹಿತ್ಯಿಕ ಸಮಿತಿಯ ಸದಸ್ಯರು, ಕಾಲೇಜಿನ ಬೋಧಕ […]

DAKSHINA KANNADA HOME

RSS ಚಟುವಟಿಕೆಗಳಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಿದೆ – ಮಾಜಿ ಸಚಿವ ಬಿ. ರಮಾನಾಥ ರೈ

ಮಂಗಳೂರು. ಅ.16: ರಾಜ್ಯದ ಸಚಿವರಾದ ಪ್ರಿಯಾಂಕ ಖರ್ಗೆ RSS ಚಟುವಟಿಕೆಗಳ ಕುರಿತು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಬಿ. ರಮಾನಾಥ ರೈಯವರು ಹೇಳಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ದೇಶದ ಜಾತ್ಯತೀತ ಮೌಲ್ಯಗಳನ್ನು ಕಾಪಾಡಲು ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಸಾರ್ವಜನಿಕ ಸ್ಥಳಗಳು ಮತ್ತು ಸರಕಾರಿ ಶಾಲೆಗಳಲ್ಲಿ RSS ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಶಾಖೆಗಳ ಮೂಲಕ ಸಣ್ಣ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ […]