Month: July 2025

DAKSHINA KANNADA HOME

ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಶಾಸಕ ಮಂಜುನಾಥ ಭಂಡಾರಿ ಮನವಿ

ಮಂಗಳೂರು: ಜುಲೈ 23 ರೈಲುಗಳ ಸಂಖ್ಯೆ ಹೆಚ್ಚಾದರೂ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಿದರೂ ರೈಲ್ವೇ ಪೊಲೀಸ್ ಮಾತ್ರ ತುಂಬಾ ಹಳೆಯ ವ್ಯವಸ್ಥೆಯನ್ನೇ ಹೊಂದಿದೆ. ಮಂಗಳೂರು ಕೇಂದ್ರ ರೈಲು ನಿಲ್ದಾಣದ ಬಳಿ ಠಾಣೆಯನ್ನು ಹೊಂದಿರುವ ಮಂಗಳೂರು ರೈಲ್ವೇ ಪೊಲೀಸ್ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಹಲವು ವರ್ಷಗಳಿಂದ ಇದ್ದು ಕೂಡಲೇ ಸಿಬ್ಬಂದಿಯ ನೇಮಕಕ್ಕೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ. ಮಂಗಳೂರು ರೈಲ್ವೇ ಪೊಲೀಸ್ […]

HOME STATE

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಅಧಿಕೃತ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಿ – ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

ಬೆಂಗಳೂರು ಜುಲೈ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನಿನ ಅನ್ವಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ಸ್ಪೀಕರ್ ಯು.ಟಿ ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಗಣಿಇಲಾಖೆಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಕುರಿತಂತೆ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದರು. ವಾಣಿಜ್ಯ ಉದ್ದೇಶವಲ್ಲದ ಕೆಂಪುಕಲ್ಲು ಕ್ವಾರಿಗಳಿಗೆಅಧಿಕೃತವಾಗಿ ಪರವಾನಿಗೆ ಕೊಡುವ […]

DAKSHINA KANNADA HOME

ಮಂಗಳೂರಿನಲ್ಲಿ ಮೆರಿಟೈಮ್‌ ವಿವಿ ಸ್ಥಾಪನೆ ಕೋರಿ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಭೇಟಿಯಾದ ಕ್ಯಾ.ಚೌಟ

ನವದೆಹಲಿ: ಜುಲೈ 23 : ಕರ್ನಾಟಕ ವಾಣಿಜ್ಯ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಕೇಂದ್ರೀಯ ಮೆರಿಟೈಮ್‌ ಯುನಿವರ್ಸಿಟಿ ಸ್ಥಾಪಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಮಂಗಳೂರಿನಲ್ಲಿ ಸುಸಜ್ಜಿತ ಮೆರಿಟೈಮ್‌ ವಿಶ್ವವಿದ್ಯಾಲಯ ಸ್ಥಾಪಿಸುವ ವಿಚಾರವಾಗಿ ನವದೆಹಲಿಯಲ್ಲಿ ನಿನ್ನೆಯಷ್ಟೇ ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗಗಳ ಸಚಿವಾಲಯದ ಕಾರ್ಯದರ್ಶಿ ಟಿ.ಕೆ. ರಾಮಚಂದ್ರನ್ ಅವರನ್ನು ಭೇಟಿ […]

DAKSHINA KANNADA HOME

ಹಿರಿಯ ಸಾಹಿತಿ ಗ್ಲ್ಯಾಡಿಸ್ ರೇಗೊಗೆ ಶೃದ್ಧಾಂಜಲಿ

ಮಂಗಳೂರು: ಕೊಂಕಣಿ ಭಾಷಾ ಕರ್ನಾಟಕ ಇದರ ಕಾರ್ಯಕಾರಿ ಸಭೆಯಲ್ಲಿ ಇತ್ತೀಚಿಗೆ ನಿಧನರಾದ ಕೊಂಕಣಿ ಭಾಷೆಗೆ 27 ಪುಸ್ತಕ ದೇಣಿಗೆ ನೀಡಿದ ಹಿರಿಯ ಸಾಹಿತಿ ಗ್ಲ್ಯಾಡಿಸ್ ರೇಗೊ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಈ ವೇಳೆ ಮಾತನಾಡಿದ ಕೆಬಿಎಂಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ, ಲೈಬ್ರೆರಿಗಳಲ್ಲಿ ಹುಡುಕಿ ಹಲವು ಸಾಹಿತ್ಯದ ವಿವಿಧ ದಾಖಲೆಗಳನ್ನು ತೆಗೆದು ತನ್ನ ಸ್ವಂತ ಖರ್ಚಿನಲ್ಲಿ ಪುಸ್ತಕ ಪ್ರಕಾಶನ ಮಾಡಿದ ಸಾಹಿತ್ಯದ ಶ್ರಮಜೀವಿ ಗ್ಲ್ಯಾಡಿಸ್ ರೇಗೊ ಆಗಿದ್ದರು ಎಂದು ಗುಣಗಾನ ಮಾಡಿದರು. ಕವಿ ಜೊಸ್ಸಿ ಪಿಂಟೊ ಮಾತನಾಡಿ,ಕೊಂಕಣಿ […]

DAKSHINA KANNADA HOME

ಮಂಗಳೂರಿನ ಮೈತ್ರಿ ಮಲ್ಲಿ ಅವರು ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ ರಾಜ್ಯಕ್ಕೆ ಪ್ರಶಸ್ತಿ ಗೆದ್ದು ಕೊಟ್ಟ ಏಕೈಕ ಸಾಧಕಿ*

ಮಂಗಳೂರು: ಹೊಸದಿಲ್ಲಿಯ ಲೀಲಾ ಪ್ಯಾಲೇಸ್‌ನಲ್ಲಿ ಜುಲೈ 12 ರಂದು ಗ್ಲಾಮರ್ ಗುರ್ಗಾಂವ್ ಆಯೋಜಿಸಿದ್ದ ಮಿಸ್ಸ್ ವಲ್ಡ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಮಂಗಳೂರಿನ ಮೈತ್ರಿ ಮಲ್ಲಿ ಅವರು ಮಿಸ್ಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ ಗೆಲ್ಲುವ ಮೂಲಕ ಕರಾವಳಿ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಇದು ಕರ್ನಾಟಕ ರಾಜ್ಯ ಗೆದ್ದ ಏಕೈಕ ಪ್ರಶಸ್ತಿಯಾಗಿದೆ. ದುಬೈ, ಆಸ್ಟ್ರೇಲಿಯಾ, ಲಂಡನ್, ಯುಎಸ್‌ಎ ಮುಂತಾದ ಅನೇಕ ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಮೈತ್ರಿ ಅವರ ವಿಭಾಗದಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರು. ಮೈತ್ರಿ ಮಲ್ಲಿ […]

DAKSHINA KANNADA HOME LATEST NEWS

ಮಂಗಳೂರು: ಜು.22 ರ ರಾತ್ರಿಯಿಂದ ಕೂಳೂರು ರಸ್ತೆ ದುರಸ್ಥಿ ಕಾಮಗಾರಿ

ಮಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್ ಜಂಕ್ಷನ್‌ನಿಂದ ಅಯ್ಯಪ್ಪ ಗುಡಿಯವರೆಗೆ ಜು.22 ರ ಮಂಗಳವಾರ ರಾತ್ರಿ 8-00 ಗಂಟೆಯಿಂದ ಜು.25ರ ಗುರುವಾರ ಬೆಳಿಗ್ಗೆ 8-00 ರವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ. ಹಾಗಾಗಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತದೆ. ಆದರಿಂದ ಕೋಡಿಕಲ್ ಕ್ರಾಸ್‌ನಿಂದ ಕೆ.ಐ.ಓ.ಸಿ.ಎಲ್ ಜಂಕ್ಷನ್‌ವರೆಗೆ ಅದೇ ರೀತಿ ಪಣಂಬೂರು ಜಂಕ್ಷನ್‌ನಿಂದ ಕೆ.ಐ.ಓ.ಸಿ.ಎಲ್ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಹೆಚ್ಚಾಗಬಹುದಾಗಿದೆ. ಆದ್ದರಿಂದ […]

DAKSHINA KANNADA HOME

ಮನೆ ಬಾಗಿಲಿಗೆ ಆರೋಗ್ಯ ಸೇವೆ-14 ರೋಗಗಳ ತಪಾಸಣೆ- ಕೈಪಿಡಿ ಬಿಡುಗಡೆ*

ಮಂಗಳೂರು, ಜು.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ ಇವರ ಸಹಯೋಗದೊಂದಿಗೆ ಗೃಹ ಆರೋಗ್ಯ ಯೋಜನೆ ಕಾರ್ಯಾಗಾರ ಹಾಗೂ ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮವು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಶಾಸಕ ಐವನ್ ಡಿ’ಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗೃಹ ಆರೋಗ್ಯ ಸೇವೆ ಮನೆಬಾಗಿಲಿಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಸಾಂಕ್ರಮಿಕ ರೋಗಗಳ ಆರೋಗ್ಯ ತಪಾಸಣೆ ಮತ್ತು […]

DAKSHINA KANNADA HOME

ಸ್ನೇಹಾಲಯದಲ್ಲಿ ತಂದೆ-ತಾಯಿಯೊಂದಿಗೆ ಮಗನ ಪುನರ್ಮಿಲನ

ಮಂಜೇಶ್ವರ: ಗಟ್ಟಲೆಯ ಅನಿಶ್ಚಿತತೆ ಮತ್ತು ಆತಂಕದ ನಂತರ ಕೊನೆಗೂ 31 ವರ್ಷದ ಶ್ರೀ ಪಾಂಡಿರಾಜ್‌ ಅವರು ತಮ್ಮ ತಂದೆ-ತಾಯಿಯೊಂದಿಗೆ ಪುನ ಒಂದಾದರು. ಈ ಭಾವನಾತ್ಮಕ ಪುನರ್ಮಿಲನವು ಕೇರಳದ ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ನಡೆಯಿತು. ತಮ್ಮ ಮಗನ ಸುರಕ್ಷಿತ ಮರಳುವಿಕೆಗಾಗಿ ಕಾಯುತ್ತಿದ್ದ ತಂದೆ-ತಾಯಿ ಆನಂದಭಾಷ್ಪಗಳೊಂದಿಗೆ ತಮ್ಮ ಮಗನನ್ನು ಅಪ್ಪಿಕೊಳ್ಳುವ ಕ್ಷಣವು ನಿಜವಾಗಿಯೂ ಮಾರ್ಮಿಕವಾಗಿತ್ತು. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪಾಂಡಿರಾಜ್‌ರನ್ನು, ಸ್ವಯಂ-ಮಾತುಕತೆ ಮತ್ತು ಅಲೆದಾಡುವ ವರ್ತನೆಯೊಂದಿಗೆ, ಕಣ್ಣೂರಿನ ನೆಡುಂಪೊಯಿಲ್‌ನ ಕೃಪಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿಯಾದಂತಹ […]

DAKSHINA KANNADA HOME

ದೈವಜ್ಞ ಬ್ರಾಹ್ಮಣರ ಚಿನ್ನ – ಬೆಳ್ಳಿ ಕೆಲಸಗಾರರ ಸಂಘ (ರಿ.) ದ ಮುಖಂಡರು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಭೇಟಿ

ಮಂಗಳೂರು ಜುಲೈ 22:ದೈವಜ್ಞ ಬ್ರಾಹ್ಮಣ ಸಮುದಾಯವನ್ನು ಕರ್ನಾಟಕ ಸರಕಾರದ ಶಿಕ್ಷಣದ‌ RTE, ಸ್ಕಾಲರ್ಶಿಪ್ ಇತ್ಯಾದಿಗೆ ಸಂಬಂಧಿಸಿದ SATS ವೆಬ್ ಸೈಟ್ ನಲ್ಲಿ, ಇತರೆ ಹಿಂದುಳಿದ ವರ್ಗ 2ಎ ದಿಂದ ಸಾಮಾನ್ಯ ವರ್ಗಕ್ಕೆ ಸೇರಿಸಿರುವುದು ಅನ್ಯಾಯವಾಗಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವಂತೆ ದೈವಜ್ಞ ಬ್ರಾಹ್ಮಣರ ಚಿನ್ನ – ಬೆಳ್ಳಿ ಕೆಲಸಗಾರರ ಸಂಘ (ರಿ.) ದ ಮುಖಂಡರು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸಮುದಾಯದ ಮುಖಂಡರ ಅಹವಾಲನ್ನು […]

DAKSHINA KANNADA HOME

ಪುತ್ತೂರು ಪರ್ಲಡ್ಕ ಸರಕಾರಿ ಹಿ ಪ್ರಾ ಶಾಲೆಗೆ ದಿಡೀರನೆ ಬೇಟಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಬಿಸಿಯೂಟವನ್ನು ಪರಿಶೀಲನೆ ಶಾಲೆಯಲ್ಲಿ ಬಿಸಿಯೂಟ ಸವಿದ ಶಾಸಕ ಅಶೋಕ್ ರೈ

ಪುತ್ತೂರು: ಮಂಗಳವಾರ ಮಧ್ಯಾಹ್ನ ದಿಡೀರನೆ ಪುತ್ತರು ನಗರದ ಹೊರವಲಯದ ಪರ್ಲಡ್ಕ ಸರಕಾರಿ ಹಿ ಪ್ರಾ ಶಾಲೆಗೆ ತೆರಳಿದ ಶಾಸಕರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಬಿಸಿಯೂಟವನ್ನು ಪರಿಶೀಲನೆ ನಡೆಸಿ ಮಕ್ಕಳ ಜೊತೆ ತನೂ ಬಿಸಿಯೂಟವನ್ನು ಸವಿದಿದ್ದಾರೆ. ಊಟದ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಶಾಸಕರು ದಿನಾಲೂ ಊಟ ಚೆನ್ನಾಗಿರುತ್ತದಾ? ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರ, ಮೊಟ್ಟೆ ಕೊಡ್ತಾರ ಎಂದು ಮಕ್ಕಳಲ್ಲಿ ಕೇಳಿ ಮಾಹಿತಿ ಪಡೆದುಕೊಂಡರು. ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿಗಳು ಊಟ ಚೆನ್ನಾಗಿರುತ್ತದೆ ಎಂದು ಹೇಳಿದರು. ಬಳಿಕ ಮಾಧ್ಯಮದ ಜೊತೆ […]