Month: July 2025

HOME STATE

ದ ಕ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವನ್ನು ತ್ವರಿತವಾಗಿ ಬಗೆಹರಿಸುವಂತೆ ಜಿಲ್ಲೆಯ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಬೆಂಗಳೂರು ಜುಲೈ 31 :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವನ್ನು ತ್ವರಿತವಾಗಿ ಬಗೆಹರಿಸುವಂತೆ ಮತ್ತು ಜನಪರ ನೀತಿಯನ್ನು ಜಾರಿಗೊಳಿಸುವಂತೆ ಇಂದು ಜಿಲ್ಲೆಯ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಆಗ್ರಹಿಸಲಾಯಿತು. ಕರ್ನಾಟಕದ ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಭೂಮಿಯ ಮೇಲ್ಪದರದಲ್ಲಿ ಗಟ್ಟಿ ಮುರ ಇದ್ದು ಕೃಷಿ ಕಾರ್ಯಗಳನ್ನು ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಬಹುಕಾಲದಿಂದಲೂ ಕಾರ್ಮಿಕರ ಸಹಾಯದಿಂದ ಅದನ್ನು ಜನಸಾಮಾನ್ಯರ ಉಪಯೋಗಕ್ಕೆ ಇಟ್ಟಿಗೆಯ ರೂಪದಲ್ಲಿ ಕತ್ತರಿಸಿ ತೆಗೆದು ಬಳಸುವುದು ಪ್ರತೀತಿ. ಕಾಲಕ್ರಮೇಣ ಕಾರ್ಮಿಕರ ಅಭಾವ […]

DAKSHINA KANNADA HOME

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಡೆನಿಸ್ ಡಿ’ಸಿಲ್ವಾ ನೇಮಕ

ಮಂಗಳೂರು ಜುಲೈ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡೆನಿಸ್ ಡಿ’ಸಿಲ್ವಾ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ವಿನಯಕುಮಾರ್ ಸೊರಕೆ ಅವರು ಈ ನೇಮಕಾತಿ ಮಾಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇದನ್ನು ಅನುಮೋದಿಸಿದ್ದಾರೆ. ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಜವಾಬ್ದಾರಿ ನಿರ್ವಹಣೆಯಲ್ಲಿ ತೊಡಗಲು ಡೆನಿಸ್ ಅವರಿಗೆ ಸೂಚಿಸಲಾಗಿದೆ. ಜಿಲ್ಲಾಮಟ್ಟ, ಕ್ಷೇತ್ರವಾರು, […]

HOME

ಮಂಗಳೂರು: 1300 ಕೋ.ರೂ ವ್ಯವಹಾರದ 113 ವರ್ಷಗಳ ಇತಿಹಾಸದ MCC ಬ್ಯಾಂಕಿನ 20ನೇ ಶಾಖೆ ಬೈಂದೂರಿನಲ್ಲಿ

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಹಕಾರ ರತ್ನ ಅನಿಲ್ ಲೋಬೊ ಅವರು ತಿಳಿಸಿದರು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ […]

DAKSHINA KANNADA HOME

ಪ್ರಯಾಣಿಕರ ಅನೂಕೂಲಕ್ಕಾಗಿ ಬೆಂಗಳೂರಿಗೆ ಅಂಬಾರಿ ಉತ್ಸವ್ ಬಸ್ ಸೇವೆಆರಂಭ ಶಾಸಕ ಅಶೋಕ್ ರೈ

ಪುತ್ತೂರು: ಪ್ರಯಾಣಿಕರ ಬಹುಕಾಲದ ಬೇಡಿಕೆಯೊಂದು ಈ ಬಾರಿ ಈಡೇರಿದೆ. ಪುತ್ತೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಸಾರಿಗೆ ಇಲಾಖೆಯ ವತಿಯಿಂದ ಅಂಬಾರಿ ಉತ್ಸವ್ ಬಸ್ ಜು.27 ರಿಂದ ಸಂಚಾರ ಆರಂಭ ಮಾಡಿದೆ. ಮಂಗಳೂರಿನಿಂದ ಹೊರಡುವ ಬಸ್ಸು ಪುತ್ತೂರಿಗೆ ಪ್ರತೀ ದಿನ ರಾತ್ರಿ 10.30 ಕ್ಕೆ ತಲುಪುತ್ತದೆ. ಪುತ್ತೂರು ,ಸುಳ್ಯ,ಮಡಿಕೇರಿ,ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತದೆ. ಪೂರ್ತಿ ಸ್ಲೀಪರ್ ಕೋಚ್ ಬಸ್ ಇದಾಗಿದ್ದು ಈ ಸೌಲಭ್ಯಧಿಂದ ಪುತ್ತೂರು‌ಭಾಗದ ಪ್ರಯಾಣಿಕರು ವಂಚಿತರಾಗಿದ್ದರು. ಅಂಬಾರಿ ಉತ್ಸವ್ ಬಸ್ ಆರಂಭ ಮಾಡುವಂತೆ ಶಾಸಕ […]

DAKSHINA KANNADA HOME

ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳ ತ್ವರಿತ ವಿಲೇವಾರಿ

ಮಂಗಳೂರು ಜು. 28: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಖಾಯಂ ಜನತಾ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳನ್ನು ಅತ್ಯಂತ ಸರಳ ಮತ್ತು ಸುಲಲಿತವಾಗಿ ಇತ್ಯರ್ಥಪಡಿಸಲಾಗುತ್ತದೆ ಎಂದು ಜನತಾ ನ್ಯಾಯಾಲಯದ ಅಧ್ಯಕ್ಷ ಹಾಗೂ ನ್ಯಾಯಾಧೀಶ ಜೈಶಂಕರ್ ಅವರು ತಿಳಿಸಿದರು. ಅವರು ಸೋಮವಾರ ಜನತಾ ನ್ಯಾಯಾಲಯ ಕಚೇರಿಯಲ್ಲಿ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಭೆ ನಡೆಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಖಾಯಂ ಜನತಾ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಇಬ್ಬರು ಸದಸ್ಯರಿದ್ದಾರೆ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇಲ್ಲಿ ಇತ್ಯರ್ಥಪಡಿಸಲಾಗುತ್ತಿದೆ. ಪ್ರಕರಣ ದಾಖಲು ಪ್ರಕ್ರಿಯೆ ಅತ್ಯಂತ […]

DAKSHINA KANNADA HOME

ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರುವವರನ್ನು ಜುಮಾದಿಯೇ ನೋಡಲಿ

ಮಂಗಳೂರು ಜುಲೈ 28: ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರುವವರನ್ನು ಜುಮಾದಿಯೆ ನೋಡಲಿ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸುರತ್ಕಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. “ಪಡ್ರೆ ಶ್ರೀ ಧೂಮಾವತಿ ದೈವಸ್ಥಾನಕ್ಕೆ ಸುಮಾರು 800 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದ್ದು ಇತ್ತೀಚೆಗೆ ಗ್ರಾಮದ ಪದ್ಮನಾಭ ಶೆಟ್ಟಿ ಎಂಬವರು ನ್ಯಾಯಾಲಯದಲ್ಲಿ ಸುಮಾರು 13 ಜನರ ಮೇಲೆ ಖಾಸಗಿ ದೂರು ನೀಡಿದ್ದು ಅದರ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಆಗಿರುತ್ತದೆ. ಆ ದೂರಿನಲ್ಲಿ ಜಾತ್ರೆಯ ಸಮಯ ಭಕ್ತಾದಿಗಳಿಂದ […]

DAKSHINA KANNADA HOME

ಸೇಂಟ್ ಅಗ್ನೆಸ್ ಕಾಲೇಜಿನ ಸೆಂಟಿನರಿ ಬ್ಲಾಕ್’ನಲ್ಲಿ, ಕಾಸ್ಕ್ ಸೆಂಟಿನರಿ ಟ್ರಸ್ಟ್ (CCT) ಸ್ಕಾಲರ್’ಶಿಪ್ 2025

ಮಂಗಳೂರು ಜುಲೈ 29: ಸೇಂಟ್ ಅಗ್ನೆಸ್ ಕಾಲೇಜಿನ ಸೆಂಟಿನರಿ ಬ್ಲಾಕ್’ನಲ್ಲಿ, CASK ಸೆಂಟಿನರಿ ಟ್ರಸ್ಟ್ 307 ಯೋಗ್ಯ ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೊತ್ತದ ಸ್ಕಾಲರ್’ಶಿಪ್ ನೀಡಿತು. ಈ ಕಾರ್ಯಕ್ರಮಕ್ಕೆ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷರಾಗಿದ್ದರು. NRI ದಾನಿಯಾದ ಮೈಕಲ್ ಡಿಸೋಜಾ ಮತ್ತು ಸೇಂಟ್ ಅಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ವೆನಿಸ್ಸಾ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ಕಾಲರ್’ಶಿಪ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು CASK ಸೆಂಟಿನರಿ ಟ್ರಸ್ಟಿನ ದಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. […]

DAKSHINA KANNADA HOME

ಸಿಒಡಿಪಿ ಎಡ್ಯುಕೇರ್ ಬಡ್ಡಿರಹಿತ ಸಾಲರೂಪದ ವಿದ್ಯಾರ್ಥಿವೇತನ ವಿತರಣೆ ಮೈಕಲ್ ಡಿ ಸೊಜಾ

ಮಂಗಳೂರು, ಜುಲೈ 28 : ಕೃತಜ್ಞತೆಗಿಂತ ಶ್ರೇಷ್ಠ ಗುಣಧರ್ಮವಿಲ್ಲ. ನಿಮ್ಮ ಪೋಷಕರ ತ್ಯಾಗ, ಶಿಕ್ಷಕರ ಬೆಂಬಲ ಮತ್ತು ಧರ್ಮಗುರುಗಳ ಮಾರ್ಗದರ್ಶನವನ್ನು ಎಂದಿಗೂ ಮರೆಯಬೇಡಿ. ಇಂದಿನ ವಿದ್ಯಾರ್ಥಿಗಳಾದ ನೀವು ಭವಿಷ್ಯದ ಸಮಾಜದ ಉಜ್ವಲ ಹೊಳೆಯುವ ನಕ್ಷತ್ರಗಳಾಗಿರುತ್ತೀರಿ.” ಎಂದು ಮಂಗಳೂರಿನ ಬಿಷಪ್ ವಂ| ಡಾ| ಪೀಟರ್ ಪೌಲ್ ಸಲ್ದಾನ್ಹಾ ಹೇಳಿದರು. ಥಾಮಸ್ ಆಲ್ವಾ ಎಡಿಸನ್‌ರ ಉದಾಹರಣೆಯನ್ನು ಉಲ್ಲೇಖಿಸಿ, ಶಿಕ್ಷಕರು “ಮಂದಬುದ್ಧಿ” ಎಂದು ಕರೆದರೂ ಅವರ ತಾಯಿಯ ಅಚಲ ಬೆಂಬಲವು ಅವರನ್ನು ಶ್ರೇಷ್ಠ ವಿಜ್ಞಾನಿಯನ್ನಾಗಿ ರೂಪಿಸಿತು ಎಂದು ಬಿಷಪ್ ಸಲ್ದಾನ್ಹಾ, ವಿದ್ಯಾರ್ಥಿಗಳಿಗೆ […]

HOME NATIONAL

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು .ಸಂಸದ ಕ್ಯಾ. ಚೌಟ

ನವದೆಹಲಿ: ಕ್ಯಾನ್ಸರ್‌ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ (DCCC) ಸ್ಥಾಪನೆಗೆ ಅನುಮೋದನೆ ನೀಡಿದ್ದು, ಇದಕ್ಕಾಗಿ 1.49 ಕೋಟಿ ರೂ. ವರೆಗೆ ಅನುದಾನ ಮೀಸಲಿಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ನಗರ- ಗ್ರಾಮೀಣ ಅಸಮಾನತೆ ಕಡಿಮೆ ಮಾಡಿ, ಪರಿಣಾಮಕಾರಿ ಸುಶ್ರೂಶೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ […]

DAKSHINA KANNADA HOME

*ಎಂಸಿಸಿ ಬ್ಯಾಂಕ್ ‘ಐಡಿಯಾ ಸಮ್ಮಿತ್ 2025’ ಆಯೋಜನೆ*

ಮಂಗಳೂರು ಜುಲೈ 26 : ಬ್ಯಾಂಕಿಂಗ್‌’ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಜುಲೈ 24, 2025 ರಂದು ಮಂಗಳೂರಿನ ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ‘ಐಡಿಯಾ ಸಮ್ಮಿತ್ 2025’ (Idea Summit 2025) ಅನ್ನು ಆಯೋಜಿಸಲಾಗಿತ್ತು. ಈ ಸಮ್ಮಿತ್‌’ನ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ಅವರು ವಹಿಸಿದ್ದರು. ಗಣ್ಯ ಭಾಷಣಕಾರರಲ್ಲಿ ಹೆಸರಾಂತ ಎನ್‌ಆರ್‌ಐ ಉದ್ಯಮಿ ಮತ್ತು ಉದಾರ […]