Month: July 2025

DAKSHINA KANNADA HOME

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿ, ಸಾಗಾಟಕ್ಕೆ ಡಿಕೆ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಮರಳು ಸಾಗಾಟ

ದಕ್ಷಿಣ ಜಿಲ್ಲೆಯಲ್ಲಿ ನಾನ್-ಸಿಆರ್ಝಡ್ ಪ್ರದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್‌ಗಳಲ್ಲಿನ ಮರಳು ದಾಸ್ತಾನನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ DK SAND BAZAAR APP ನ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ ಹಾಗೂ ಮಾನ್ಯ ಜಿಲ್ಲಾಧಿಕಾರಿಯವರು ಸೂಚಿಸಿರುವಂತೆ, ಸದರಿ ಮರಳನ್ನು ಸಾಗಾಟ ಮಾಡಲು ಇಚ್ಚಿಸುವವರು ತಮ್ಮ ವಾಹನವನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿರುವ DK SAND BAZAAR APP ನಲ್ಲಿ ನೋಂದಾಯಿಸಿಕೊಳ್ಳಲು ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಲಾಗಿರುತ್ತದೆ. ಅದರಂತೆ ದಿನಾಂಕ: 16-03-2025 ರಿಂದ DK […]

DAKSHINA KANNADA HOME

ದ.ಕ. ಜಿಲ್ಲಾ ಪತ್ರಕರ್ತರ ಸಂಘದಿಂದ ಜು.27ರಂದು ನೀರುಮಾರ್ಗ ಪಡು ಬದಿನಡಿ ಕೆಸರುಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ

ಮಂಗಳೂರು ಜುಲೈ 25 :ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮಂಗಳೂರು, ಪತ್ರಿಕಾಭವನ ಟ್ರಸ್ಟ್ ಹಾಗೂ ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಪಡು ಸಹಭಾಗಿತ್ವದಲ್ಲಿ ಪತ್ರಕರ್ತರ ತಾಲೂಕು ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಜು.27ರಂದು ನೀರುಮಾರ್ಗ ಪಡು ಬದಿನಡಿ ಸಮೀಪದ ಕೆಸರುಗದ್ದೆಯಲ್ಲಿ ಮಾನ್ಸೂನ್ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಹಿರಿಯ ವಿಡಿಯೋ ಜರ್ನಲಿಸ್ಟ್ ದಿ. ನಾಗೇಶ್ ಪಡು ವೇದಿಕೆಯಲ್ಲಿ ಬೆಳಗ್ಗೆ 9.45ಕ್ಕೆ ಕಾರ್ಯಕ್ರಮ […]

DAKSHINA KANNADA HOME

ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ಪಕ್ಷಭೇದವಿಲ್ಲದೆ ಸಮಾನವಾಗಿ ಯೋಜನೆಗಳನ್ನು ಅನುಷ್ಠಾನ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು ಜು.25 ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಯಾವುದೇ ಪಕ್ಷಭೇದವಿಲ್ಲದೆ ಸಮಾನವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರು ಶುಕ್ರವಾರ ಉರ್ವಸ್ಟೋರ್ ಡಿ ದೇವರಾಜ ಅರಸು ಭವನ ನೂತನ ಕಟ್ಟಡ ಮತ್ತು ಇಂದಿರಾ ಗಾಂಧಿ ಮಹಿಳಾ ನಸಿರ್‍ಂಗ್ ವಿದ್ಯಾರ್ಥಿ ನಿಲಯ ನೂತನ ಕಟ್ಟಡ ಉದ್ಘಾಟಿಸಿ, ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಶಿಲಾನ್ಯಾಸ, ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. […]

DAKSHINA KANNADA HOME

ವಿಪರೀತ ಮಳೆಗೆ ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದೆ ಅನುದಾನ ರೆಡೀ ಇದೆ- ಮಳೆ ಕಡಿಮೆಯಾದ ಕೂಡಲೇ ದುರಸ್ಥಿ ಕಾಮಗಾರಿ ಶಾಸಕ ಅಶೋಕ್ ರೈ

ಪುತ್ತೂರು ಜುಲೈ 25 : ಈ ಬಾರಿ ವಿಪರೀತ ಮಳೆಯಾಗುತ್ತಿದೆ. ಭಾರೀ ಮಳೆಗೆ ಕಳೆದ ಮೂರು ವರ್ಷದ ಹಿಂದೆ ಮಾಡಿದ ರಸ್ತೆಗಳ ಡಮರೂ ಎದ್ದು ಹೋಗಿದೆ, ಪುತ್ತೂರು ಉಪ್ಪಿ ವಂಗಡಿ ರಸ್ತೆ ಮತ್ರ ಹದಗೆಟ್ಟಿದ್ದಲ್ಲ ಕ್ಷೇತ್ರದ ಬಹುತೇಕ ರಸ್ತೆಗಳು ಮಳೆಯ ಕಾರಣಕ್ಕೆ ಹೊಂಡಗಳು ಬಿದ್ದಿದೆ. ಮಳೆಯ ಬಿಡುವಿನ ನಡುವೆ ದುರಸ್ಥಿ ಕಾರ್ಯವೂ ಅಲ್ಲಲ್ಲಿ ನಡೆಯುತ್ತಿದೆ, ಮಳೆ ಕಡಿಮೆಯಾದ ತಕ್ಷಣ ಎಲ್ಲಾ ರಸ್ತೆಗಳ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಮಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.’ ಕಳೆದ ಮೂರು […]

DAKSHINA KANNADA HOME

ಪುತ್ತೂರಿಗೆ ಕಾರ್ಮಿಕ ವಸತಿಶಾಲೆ ಮಂಜೂರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾರ್ಮಿಕ ಸಚಿವರಿಗೆ ಅಭಿನಂದನೆ. ಪುತ್ತೂರು ಶಾಸಕರು ಅಶೋಕ್ ರೈ

ದ‌ಕ‌ ಜಿಲ್ಲೆಯ ಕಾರ್ಮಿಕ ವಸತಿ ಶಾಲೆಯನ್ನು ಸರಕಾರ ಪುತ್ತೂರಿಗೆ ಮಂಜೂರು ಮಾಡಿದೆ.‌ ಕಾರ್ಮಿಕ ವಸತಿ ಶಾಲೆಯನ್ನು ಪುತ್ತೂರಿಗೆ ನೀಡುವಂತೆ ಕಾರ್ಮಿಕ ಸಚಿವರಿಗೆ ಮನವಿಯನ್ನು ಮಾಡಿದ್ದೆ ಮತ್ತು ವಸತಿ ಶಾಲೆ ನಿರ್ಮಾಣಕ್ಕೆ ಕುರಿಯ ಗ್ರಾಮದಲ್ಲಿ 15 ಎಕ್ರೆ ಜಾಗವನ್ನು ಮೀಸಲಿರಿಸಿದ್ದೆ. ಪುತ್ತೂರಿಗೆ ಮಂಜೂರಾದ ಕಾರ್ಮಿಕರ ವಸತಿ ಶಾಲೆಯಲ್ಲಿ ಒಂದರಿಂದ 12 ನೇ ತರಗತಿ ತನಕ ವ್ಯಾಸಂಗ ಮಾಡಲಾಗುತ್ತದೆ. ಕಾರ್ಮಿಕರ ಮಕ್ಕಳಿಗೆಂದೇ ಈ ವಸತಿ ಶಾಲೆ ನಿರ್ಮಾಣವಾಗಲಿದೆ . ಬಡ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕೆ ಕರ್ನಾಟಕದ ಕಾಂಗ್ರೆಸ್ ಸರಕಾರ ನೀಡಿದ […]

DAKSHINA KANNADA HOME

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಮಂಗಳೂರು ಜು 24: ಭಾರತೀಯ ಹವಾಮಾನ ಇಲಾಖೆ, ತಿರುವನಂತಪುರಂ ಅವರು ನೀಡಿದ ಹವಾಮಾನ ಮುನ್ಸೂಚನೆಯಂತೆ ಜುಲೈ 23 ರಿಂದ 26 ರವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಪ್ರಕ್ಷುಬ್ದವಾಗಿರುತ್ತದೆ. ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಈ ಮೂಲಕ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮೀನುಗಾರಿಕಾ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

DAKSHINA KANNADA HOME

ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ ಆಗಸ್ಟ್01 ರಂದು”ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ

ಮಂಗಳೂರು ಜುಲೈ 24: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ವತಿಯಿಂದ ಆಗಸ್ಟ್ 01-02 ರಂದು ಆಳ್ವಾಸ್ ಕಾಲೇಜ್ ಕ್ಯಾಂಪಸ್ ನಲ್ಲಿ “ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ” ನಡೆಯಲಿದ್ದು ಅದರ ಪೂರ್ವಭಾವಿಯಾಗಿ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆದ ಮಾಹಿತಿ ಶಿಬಿರದಲ್ಲಿ 500 ಕ್ಕೂ ಅಧಿಕ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಶಾಸಕರು, ನೀವು ಒಂದು ಉದ್ಯೋಗ ಪಡೆದು ಆರ್ಥಿಕವಾಗಿ ಸದೃಢರಾದರೆ ಮೊದಲು ಖುಷಿ ಪಡುವುದು ನಿಮ್ಮ ಹೆತ್ತವರು. ಆ ಕಾರಣಕ್ಕಾಗಿ […]

Breaking News DAKSHINA KANNADA LATEST NEWS

ಬಂಟ್ವಾಳ, ಪುತ್ತೂರು ತಾಲೂಕಿನಲ್ಲಿ ಇಂದು ಶಾಲೆಗಳಿಗೆ ರಜೆ

ಬಂಟ್ವಾಳ, ಪುತ್ತೂರು ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಗಳಿಗೆ ದಿನಾಂಕ 24.07.2025 ರಂದು ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.

Breaking News DAKSHINA KANNADA LATEST NEWS

ಜು.24: ಮಂಗಳೂರು, ಮೂಲ್ಕಿ, ಮೂಡುಬಿದಿರೆ ತಾಲೂಕಿನಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಮಂಗಳೂರು, ಜು.23: ಮಂಗಳೂರು, ಮೂಲ್ಕಿ, ಮೂಡುಬಿದಿರೆ ತಾಲೂಕಿನಲ್ಲಿ ಜು.24ರ ಗುರುವಾರ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.