Month: March 2026

HOME STATE

*ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ: ಪತ್ರಕರ್ತರಿಗೆ ಸಿಎಂ ಕರೆ*

ಬೆಂಗಳೂರು ಮಾ 13: ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಕರ್ನಾಟಕ ಮಾಧ್ಯಮ‌ ಅಕಾಡೆಮಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪತ್ರಕರ್ತರಿಗೆ “2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು” ವಿತರಿಸಿ, ಸನ್ಮಾನಿಸಿ ಮಾತನಾಡಿದರು. ಪತ್ರಕರ್ತರೂ ಆಗಿದ್ದ ಮಹಾತ್ಮಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ […]

HOME LATEST NEWS NATIONAL

ರೈತರ ಖಾತೆಗೆ ಇಂದು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’: 22ನೇ ಕಂತಿನ ಬಿಡುಗಡೆ

ಬೆಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಅಡಿಯಲ್ಲಿ 22ನೆ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಇಂದು (ಮಾ.13) ಸಂಜೆ 5 ಗಂಟೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾದ ಬೃಹತ್ ಸಮಾರಂಭದಲ್ಲಿ ದೇಶಾದ್ಯಂತದ ರೈತರಿಗೆ ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕದ ಒಟ್ಟು 41,40,106 ರೈತ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಕೇಂದ್ರ ಸರಕಾರವು ರಾಜ್ಯದ ರೈತರಿಗಾಗಿ ಒಟ್ಟು 828.02ಕೋಟಿ ರೂ.ಗಳ ಆರ್ಥಿಕ […]

HOME

ಅಂತರಾಷ್ಟ್ರೀಯ ಮಹಿಳಾ ದಿನದಂದು ‘ನಾಚೊಯಾಂ ಕುಂಪಾಸರ್’ ಚಿತ್ರದ ವಿಶೇಷ ಪ್ರದರ್ಶನ

ಮಂಗಳೂರು: ನಗರದ ಪಿವಿಆರ್ ನೆಕ್ಸಸ್‌ನಲ್ಲಿ ಮಾರ್ಚ್ 8ರ ಅಂತರಾಷ್ಟ್ರೀಯ ಮಹಿಳಾ ದಿನದಂದು ಬಾರ್ಡ್ರೋಯ್ ಬಾರೆಟ್ಟೊ ನಿರ್ದೇಶನದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ನಾಚೊಯಾಂ ಕುಂಪಾಸರ್’ ಚಲನಚಿತ್ರದ ವಿಶೇಷ ಪ್ರದರ್ಶನ ನಡೆಯಿತು. ಮಂಗಳೂರಿನ ಸ್ವಯಂಸೇವಕ ಹಿರಿಯ ನಾಗರಿಕರ ಆರೈಕೆ ಗುಂಪಾದ ‘ಸಿಲ್ವರ್ ಸರ್ಕಲ್’ ವತಿಯಿಂದ ಆಯೋಜಿಸಲಾಗಿದ್ದ ಈ ಪ್ರದರ್ಶನವು ‘ಸುಶೆಗ್ ಜಿವಿತ್ ಡಿಮೆನ್ಶಿಯಾ ಕೇರ್ ಸೆಂಟರ್’ಗಾಗಿ ನಿಧಿ ಸಂಗ್ರಹಿಸುವ ಉದಾತ್ತ ಉದ್ದೇಶವನ್ನು ಹೊಂದಿತ್ತು. ಈ ಚಿತ್ರವು 1960ರ ದಶಕದ ಬಾಂಬೆಯ ಜಾಝ್ ಕ್ಲಬ್‌ಗಳು ಮತ್ತು ಗೋವಾದ ಸಂಗೀತಗಾರರ ಹಿನ್ನೆಲೆಯಲ್ಲಿ ಒಬ್ಬ […]

DAKSHINA KANNADA HOME LATEST NEWS

ಗ್ಯಾರೇಜ್‌ನಿಂದ ಬಿಡಿಭಾಗ ಕಳವು: ಓರ್ವನ ಬಂಧನ

ಸುರತ್ಕಲ್ : ಗ್ಯಾರೇಜ್ ವೊಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕಳವು ಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಲತಃ ರಾಜಸ್ಥಾನದ ಜೋದ್ ಪುರ ನಿವಾಸಿ ಸದ್ಯ ಬೆಂಗಳೂರಿನ ಬನಶಂಕರಿ ಶ್ರೀನಿವಾಸ ನಗರ ನಿವಾಸಿ ಮುಖೇಶ್ ದಾಸ್ ( 46) ಬಂಧಿತ ಆರೋಪಿ. ಆರೋಪಿಯ ಬಳಿಯಿದ್ದ 96 ಸಾವಿರ ರೂ. ಮೌಲ್ಯದ ವಾಹನಗಳ ಬಿಡಿಭಾಗಗಳು, ಕೃತ್ಯಕ್ಕೆ ಬಳಸಿದ್ದ 15 ಲಕ್ಷ ರೂ.‌ಮೌಲ್ಯದ ಈಚರ್ ಲಾರಿ ಸೇರಿದಂತೆ 15.96 ಲಕ್ಷ ರೂ.‌ಮೌಲ್ಯದ ಸೊತ್ತುಗಳನ್ನು ಪೊಲೀಸರು […]

DAKSHINA KANNADA HOME

*ಗ್ರಾಮೀಣ ಭಾಗದ ಮನೆಗಳಿಗೆ ‘ಸ್ವಾಧೀನ ಪ್ರಮಾಣ ಪತ್ರ’ (OC) ವಿನಾಯಿತಿಗೆ ಸರ್ಕಾರವನ್ನು ಆಗ್ರಹಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು*

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳು ಹಾಗೂ 94ಸಿ ಹಕ್ಕುಪತ್ರದಡಿ ನಿರ್ಮಿಸಲಾದ ಮನೆಗಳಿಗೆ ಸ್ವಾಧೀನ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಸದನದ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು. ‘ವಿದ್ಯುತ್ ಸಂಪರ್ಕ ಪಡೆಯಲು ಒಸಿ ವಿನಾಯ್ತಿಗಾಗಿ ಪ್ರತಿಭಟನೆ’ ಎಂಬ ವರದಿಯನ್ನು ಆಧರಿಸಿ ವಿಷಯ ಪ್ರಸ್ತಾಪಿಸಿದ ಶಾಸಕರು, ಸರ್ಕಾರದ ಪ್ರಸ್ತುತ ಆದೇಶದಲ್ಲಿರುವ ಅಸ್ಪಷ್ಟತೆಯಿಂದ ಗ್ರಾಮೀಣ ಭಾಗದ ಜನರಿಗೆ […]

DAKSHINA KANNADA

*ಅತ್ತಾವರ 40 ಲಕ್ಷ ರೂ. ವೆಚ್ಚದ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ*

ಮಂಗಳೂರು: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡ್‌ನಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಿರುವ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, “ಈ ಭಾಗದ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣದ ಅನಿವಾರ್ಯತೆಯನ್ನು ಮನಗಂಡು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅನುದಾನ ಮಂಜೂರು ಮಾಡಲಾಗಿತ್ತು. ಆದರೆ, ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ […]

DAKSHINA KANNADA HOME

*ಬೆಳೆ ವಿಮಾ ಪರಿಹಾರ ಬಾಕಿ ಇರುವ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಿ ತೋಟಗಾರಿಕಾ ಸಚಿವರಿಗೆ ಶಾಸಕ ಅಶೋಕ್ ರೈ  ಮನವಿ*

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತ ಪಾವತಿಸಲು ಬಾಕಿ ಇರುವ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಸದ ಕೃಷಿಕರಿಗೆ ವಿಮಾ ಮೊತ್ತವನ್ನು ತಕ್ಷಣ ಪಾವತಿ ಮಾಡುವಂತೆ ರಾಜ್ಯ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ ಎಸ್ ಎಸ್ ರವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಗುರುವಾರ ಸಚಿವರನ್ನು ಭೇಟಿ ಮಾಡಿದ ಶಾಸಕರು ದ ಕ ಜಿಲ್ಲೆಯ ಹಲವು ಕಡೆಗಳಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ಬೆಳೆ ನಷ್ಟವನ್ನು ಅನುಭವಿಸಿದ್ದಾರೆ.ರೈತರಿಗೆ ಪರಿಹಾರವಾಗಿ ಹವಮಾನ ಆಧರಿತ ಬೆಳೆ ವಿಮೆ ಯೋಜನೆಯಡಿ […]

DAKSHINA KANNADA HOME

*ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತದ ಗಂಭೀರತೆ ಬಗ್ಗೆ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ*

ನವದೆಹಲಿ: ಉಳ್ಳಾಲ-ಸೋಮೇಶ್ವರ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತ ಸಮಸ್ಯೆಯನ್ನು ಗಂಭೀರವಾಗಿ ಕರಾವಳಿ ತೀರದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆ. ನಿಯಮ 377ರಡಿ ಇಂದು ಈ ಗಂಭೀರ ವಿಷಯ ಪ್ರಸ್ತಾಪಿಸಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 36.66 ಕಿ.ಮೀ ಕರಾವಳಿ ತೀರದ ಪೈಕಿ ಸುಮಾರು 17.74 ಕಿ.ಮೀ ಅಂದರೆ ಶೇ.48.40ರಷ್ಟು ಭಾಗವು ಕೊರೆತಕ್ಕೆ ಒಳಗಾಗುತ್ತಿದೆ. ಇದು ಕರ್ನಾಟಕ ರಾಜ್ಯದ ಸರಾಸರಿ ಶೇ. 24ರಷ್ಟು ಮತ್ತು ರಾಷ್ಟ್ರೀಯ […]

DAKSHINA KANNADA

*ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ‘ಸೈಂಟಾಕ್ಸಿಯಾ 2026’ ರಾಷ್ಟ್ರೀಯ ಮಟ್ಟದ ತಾಂತ್ರಿಕ ಹಬ್ಬದ ಯಶಸ್ವಿ ಸಮಾರೋಪ*

ಬೆಂಗಳೂರು: ನಗರದ ಪ್ರತಿಷ್ಠಿತ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಐಟಿ ವಿಭಾಗದ ಸೈಬರ್ನೆಟಿಕ್ಸ್ ಮತ್ತು ಟೆಕ್ನೋಫೈಟ್ ಸಂಘಗಳ ಆಶ್ರಯದಲ್ಲಿ ಮಾರ್ಚ್ 2 ಮತ್ತು 3 ರಂದು ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ ಹಬ್ಬ ‘ಸೈಂಟಾಕ್ಸಿಯಾ 2026’ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಇರಾ ಫೌಂಡೇಶನ್‌ನ ಸಿಇಒ ಶ್ರೀ ಮುರಳೀಧರ್ ಪೊನ್ನಲೂರಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ನವೀನ ಆಲೋಚನೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸ್ಫೂರ್ತಿ […]

DAKSHINA KANNADA HOME

*ಎಂಸಿಸಿ ಬ್ಯಾಂಕ್ ಬೈಂದೂರು ಶಾಖೆ: 10 ಕೋಟಿ ವ್ಯವಹಾರ ಗುರಿ ಸಾಧನೆಯ ಸಂಭ್ರಮ, ಮಹಿಳಾ ದಿನಾಚರಣೆ *

ಬೈಂದೂರು: ಎಂಸಿಸಿ ಬ್ಯಾಂಕ್‌ನ ಬೈಂದೂರು ಶಾಖೆಯು ಆರಂಭಗೊಂಡ ಕೇವಲ ಆರು ತಿಂಗಳ ಅಲ್ಪಾವಧಿಯಲ್ಲಿ 10 ಕೋಟಿ ರೂಪಾಯಿಗಳ ವ್ಯವಹಾರ ವಹಿವಾಟು ನಡೆಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಈ ಸಂಭ್ರಮಾಚರಣೆಯ ಅಂಗವಾಗಿ ಮಾರ್ಚ್ 8, 2026 ರಂದು ಶಾಖೆಯ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಬೈಂದೂರು […]