Month: March 2026

DAKSHINA KANNADA

*ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳಗಳ ಯಶಸ್ವಿ ಸಂತಾನೋತ್ಪತ್ತಿ: 7 ಮರಿಗಳಿಗೆ ಜನ್ಮ ನೀಡಿದ ‘ಗೀತಾ’

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ. ಉದ್ಯಾನವನದ ‘ಗೀತಾ’ ಹೆಸರಿನ ಭಾರತೀಯ ತೋಳವು (Indian Wolf) ಒಟ್ಟು ಏಳು ಮರಿಗಳಿಗೆ ಜನ್ಮ ನೀಡಿದ್ದು, ಇದು ಇಲ್ಲಿನ ಮೊದಲ ಯಶಸ್ವಿ ತೋಳಗಳ ಸಂತಾನೋತ್ಪತ್ತಿಯಾಗಿದೆ. ಜನವರಿ 2026ರಲ್ಲಿ ಜನ್ಮ ನೀಡಿದ ಈ ಏಳು ಮರಿಗಳಲ್ಲಿ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮರಿಗಳಿವೆ. ಕಳೆದ ಮೂರು ವರ್ಷಗಳಿಂದ ಪಿಲಿಕುಳದಲ್ಲಿ ಭಾರತೀಯ ತೋಳಗಳನ್ನು ಪೋಷಿಸಲಾಗುತ್ತಿದ್ದು, ಸೆರೆಹಿಡಿಯಲಾದ ಸಂತಾನೋತ್ಪತ್ತಿ ಪ್ರಯತ್ನದಲ್ಲಿ ಇದೇ ಮೊದಲ ಬಾರಿಗೆ ಈ […]

HOME

“ವಿಟ್ಲ ಮಾದರಿ ಶಾಲೆಯ ಅಭಿವೃದ್ಧಿಗೆ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ಧನಸಹಾಯ*

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.) ವಿಟ್ಲ ಇದರ ವತಿಯಿಂದ ಸಾಮಾಜಿಕ ಕಾಳಜಿಯ ಭಾಗವಾಗಿ, ವಿಟ್ಲದ ದ.ಕ.ಜಿ.ಪಂ. ಮಾದರಿ ಶಾಲೆಯ ಅಭಿವೃದ್ಧಿಗಾಗಿ ರೂ. 2,500/- ಧನಸಹಾಯವನ್ನು ಹಸ್ತಾಂತರಿಸಲಾಯಿತು. ಮಾ 18 ರಂದು ನಡೆದ ಈ ಕಾರ್ಯಕ್ರಮವು ಸಂಘಟನೆಯ ಸ್ಥಾಪಕಾಧ್ಯಕ್ಷರಾದ ಬಿ.ಕೆ. ಸೇಸಪ್ಪ ಬೇಡ್ರಕಾಡು ಮತ್ತು ಜಿಲ್ಲಾಧ್ಯಕ್ಷರಾದ ಗೋಪಾಲ್ ನೇರಳಕಟ್ಟೆ ಅವರ ನೇತೃತ್ವದಲ್ಲಿ ಜರುಗಿತು. ಶಾಲೆಯ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿ ಸಂಘದ ವತಿಯಿಂದ ನೀಡಲಾದ ಈ ಮೊತ್ತವನ್ನು ಶಾಲೆಯ ಶಿಕ್ಷಕಿಯವರಿಗೆ […]

HOME

*ಸ್ಟಾರ್ಟ್‌ಅಪ್ ಮೇಳ 5.0: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ನವೋದ್ಯಮಗಳ ಸಂಗಮ*

ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಎಂಟರ್‌ಪ್ರೆನರ್‌ಶಿಪ್ ಡೆವಲಪ್‌ಮೆಂಟ್ ಸೆಲ್ (EDC) ಮತ್ತು ಇನ್‌ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ (IIC) ವತಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ‘ಸ್ಟಾರ್ಟ್‌ಅಪ್ ಮೇಳ 5.0: ದಿ ನೆಕ್ಸಸ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೈಚಾರಿಕತೆ, ಸಮಸ್ಯೆ ಪರಿಹಾರ ಮತ್ತು ನವೋದ್ಯಮಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಿದ್ದ ಈ ಕಾರ್ಯಕ್ರಮವು ಪ್ರದರ್ಶನ ಮಳಿಗೆಗಳು, ಡೆಮೊ ಬೂತ್‌ಗಳು, ಸ್ಪರ್ಧೆಗಳು ಮತ್ತು ಪ್ಯಾನೆಲ್ ಚರ್ಚೆಗಳ ರೋಚಕ ಸಮ್ಮಿಲನವಾಗಿತ್ತು. ಈ ವೇದಿಕೆಯು ಭಾಗವಹಿಸುವವರಿಗೆ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಮತ್ತು ತಜ್ಞರಿಂದ ಪ್ರತಿಕ್ರಿಯೆ ಪಡೆಯಲು ಮಾತ್ರವಲ್ಲದೆ, […]

HOME

*ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ‘ಕಾವ್ಯಾಂ ವ್ಹಾಳೆ-12’ ಕವಿಗೋಷ್ಠಿ ಯಶಸ್ವಿ*

ಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ‘ಕಾವ್ಯಾಂ ವ್ಹಾಳೊ-12’ – ಕೊಂಕಣಿ ಕವಿಗೋಷ್ಠಿ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕಾವ್ಯಾಂ ವ್ಹಾಳೊ’ ಎಂಬ ಕಾರ್ಯಕ್ರಮವು 2025ರ ಮಾರ್ಚ್ 8 ರಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಸತತ ಹನ್ನೊಂದು ಮಾಸಿಕ ಕವಿಗೋಷ್ಠಿಗಳ ನಂತರ, ಕಾವ್ಯಾಂ ವ್ಹಾಳೊ ಇದರ 12ನೇ ಆವೃತ್ತಿಗೆ ತಲುಪಿದೆ ಎಂದು ವ್ಯಕ್ತಪಡಿಸಿದರು. ಮುಖ್ಯ ಅಥಿತಿಗಳಾದ ಕೊಂಕಣಿಯ ಖ್ಯಾತ ಹಿರಿಯ ನಟರಾದ […]

HOME

*ವಸತಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ಹೆಚ್ಚಿಸುವಂತೆ ಆಗ್ರಹಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು *

ಬೆಂಗಳೂರು : ರಾಜ್ಯ ಸರ್ಕಾರ ಮೀನುಗಾರಿಕೆ ವೃತ್ತಿ ನಡೆಸುವವರಿಗೆ ಮಸ್ಸ್ಯಾಶ್ರಯ ಯೋಜನೆ ಅಡಿ ಮನೆ ಮಂಜೂರು ಮಾಡುತ್ತಿದ್ದು ಸದರಿ ಫಲಾನುಭವಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಬಗ್ಗೆ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಇವರ ಚುಕ್ಕೆ ಗುರುತಿನ ಪ್ರಶ್ನೆಗೆ – 1699(176) ಸಚಿವರು ನೀಡಿದ ಉತ್ತರಕ್ಕೆ ಶಾಸಕರು ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು 1) ಫಲಾನುಭವಿಗಳಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡುವುದು ರಾಜ್ಯ ಸರ್ಕಾರವು ಈ ಯೋಜನೆಯಡಿ ಗ್ರಾಮೀಣ ಭಾಗದ ಫಲಾನುಭವಿಗಳಿಗೆ ರೂಪಾಯಿ […]

DAKSHINA KANNADA HOME

“ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ ಹಿಂದೂ!”

ಮಂಗಳೂರು: “ಕಳೆದ ಮಾರ್ಚ್ 13 ರಂದು ಸುದ್ದಿಗೋಷ್ಠಿ ನಡೆಸಿದ್ದ ಡಾ.ರತಿ ಅವರು ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸುಮಾರು 16 ಜಾತಿಗಳವರು ಮಾಡಬೇಕು ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅವರ ಈ ಆರೋಪಕ್ಕೆ ಬೇಕಾದ ಜಾತಿ ಪ್ರಮಾಣಪತ್ರ ನಮ್ಮಲ್ಲಿದ್ದು ನರ್ತನ ಸೇವೆ ಮಾಡಿರುವ ಸುಶಾಂತ್ ಬಂಗೇರ ಒಬ್ಬ ಹಿಂದೂ ಆಗಿದ್ದು ಪಂಬದ ಸಮಾಜಕ್ಕೆ ಸೇರಿದವನು“ ಎಂದು ದೈವನರ್ತಕ […]

HOME

*ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ *

ಮಂಗಳೂರು, ಮಾರ್ಚ್ 15: ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯ, ಉತ್ಕರ್ಷ ಚಾರಿಟೇಬಲ್ ಟ್ರಸ್ಟ್ ಮತ್ತು ವೆಲ್ಫೇರ್ (UCWT) ಹಾಗೂ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ‘ವಿಶ್ವ ಮಹಿಳಾ ದಿನಾಚರಣೆ’ಯ ಅಂಗವಾಗಿ ಪೌರ ಕಾರ್ಮಿಕರಿಗಾಗಿ ವಿಶೇಷ ಕಾರ್ಯಕ್ರಮ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುರತ್ಕಲ್ ವಲಯ ಆಯುಕ್ತರಾದ ಶ್ರೀ ಬಾಲಚಂದ್ರ ಅವರು, ಸಮಾಜದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ […]

HOME

*ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ‘ಇನ್ಸಿಗ್ನಿಯಾ 2026’ ಉದ್ಘಾಟನೆ*

ಮಂಗಳೂರಿನ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎಐಎಂಐಟಿ ಕೇಂದ್ರದ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್‌ನ ಎಂಬಿಎ ವಿಭಾಗವು, ಮಾರ್ಚ್ 16 ರಂದು ಬೀರಿಯಲ್ಲಿರುವ ಎಐಎಂಐಟಿ ಕೇಂದ್ರದ ಆರ್ಥರ್ ಶೆಣಯ್ ಸಭಾಂಗಣದಲ್ಲಿ ತನ್ನ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ‘ಇನ್ಸಿಗ್ನಿಯಾ 2026’ ಅನ್ನು ಆಯೋಜಿಸಿತ್ತು. ಮ್ಯಾನೇಜ್‌ಮೆಂಟ್‌ನ ಭವಿಷ್ಯವು ಕೇವಲ ಲಾಭವನ್ನು ಹೆಚ್ಚಿಸುವವರಿಗೆ ಮಾತ್ರ ಸೇರಿದ್ದಲ್ಲ, ಬದಲಾಗಿ ಮಹತ್ವಾಕಾಂಕ್ಷೆಯೊಂದಿಗೆ ಜವಾಬ್ದಾರಿ, ನಾವೀನ್ಯತೆಯೊಂದಿಗೆ ಸಹಾನುಭೂತಿ ಮತ್ತು ಬೆಳವಣಿಗೆಯೊಂದಿಗೆ ಸುಸ್ಥಿರತೆಯನ್ನು ಸಮತೋಲನಗೊಳಿಸುವವರಿಗೆ ಸೇರಿದ್ದಾಗಿದೆ. ಈ ಸಮತೋಲನ ಮತ್ತು ಉದ್ದೇಶದ ಸ್ಪೂರ್ತಿಯನ್ನು ಇನ್ಸಿಗ್ನಿಯಾ 2026 […]

HOME

*ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಮಾಸಿಕ ಸಭೆ ಹಾಗೂ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಿದ್ಧತೆ*

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.) ವಿಟ್ಲ ಘಟಕದ ಮಾಸಿಕ ಸಭೆಯು ಮಾರ್ಚ್ 15ರಂದು ವಿಟ್ಲದ ಅಧ್ಯಾಪಕರ ಸಭಾಭವನದಲ್ಲಿ ಜಿಲ್ಲಾಧ್ಯಕ್ಷರಾದ ಗೋಪಾಲ್ ಕೆ. ನೇರಳಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಂದಿನ ತಿಂಗಳು ನಡೆಯಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸ್ಥಾಪಕಾಧ್ಯಕ್ಷರು ಮಾತನಾಡಿ, ಜಯಂತಿಯ ದಿನದಂದು ಸಂಘದ ಪುರುಷ ಪದಾಧಿಕಾರಿಗಳು ಮತ್ತು ಸದಸ್ಯರು ಬಿಳಿ ಅಂಗಿ ಹಾಗೂ ನೀಲಿ ಶಾಲು ಧರಿಸುವಂತೆ […]

DAKSHINA KANNADA

*ಪೆರುವಾಯಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆಯ ವಲಯ ಮಟ್ಟದ ಆರಾಧನೆ ಮತ್ತು ಸಭೆ*

ವಿಟ್ಲ: ಫಾತಿಮಾ ಮಾತೆಯ ದೇವಾಲಯದ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆ ಪೆರುವಾಯಿ ಹಾಗೂ ಸೈಂಟ್ ಜೋನ್ ಪಾವ್ಲ್ ದ್ವಿತೀಯ ವಲಯದ ಪ್ರಾದೇಶಿಕ ಸಮಿತಿ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ವಲಯ ಮಟ್ಟದ ಸಂಘಟನಾ ಸಭೆಯು ಇತ್ತೀಚೆಗೆ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಪೆರುವಾಯಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ. ಫಾ. ಸೈಮನ್ ಡಿ’ಸೋಜ ಹಾಗೂ ಸಾಲೆತ್ತೂರು ಚರ್ಚ್‌ನ ಧರ್ಮಗುರುಗಳಾದ ವಂ. ಫಾ. ಮನೋಜ್ ಪುಡ್ತಾ ದೊ ಅವರ […]