Month: November 2025

DAKSHINA KANNADA HOME

*ಮಂಗಳೂರು ಆಯುಷ್ ನಲ್ಲಿ ಔಷಧ ಖರೀದಿಯಲ್ಲಿ ಭಾರೀ ಅಕ್ರಮ :ಶಾಸಕ ವೇದವ್ಯಾಸ ಕಾಮತ್ ಆರೋಪ

ಮಂಗಳೂರು ಆಯುಷ್ ನಲ್ಲಿ ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಧಿಕಾರಿಗಳು ಹಣದ ಆಸೆಗೆ ಅವಧಿ ಮೀರಿದ ಔಷಧ ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದು ತಿಳಿದ ಕೂಡಲೇ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಇದು ಸಾರ್ವಜನಿಕರ ಆರೋಗ್ಯದ ವಿಷಯವಾಗಿದ್ದರೂ ಗಂಭೀರವಾಗಿ ಪರಿಗಣಿಸದ ಇಲಾಖೆಯ ನಿರ್ಲಕ್ಷ್ಯ ಖಂಡನೀಯ. ಎಂದು ಶಾಸಕ ವೇದವ್ಯಾಸ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಯಾರನ್ನು ರಕ್ಷಿಸಲು ಇಲ್ಲಿ ಹುನ್ನಾರ ನಡೆಯುತ್ತಿದೆ? […]

DAKSHINA KANNADA HOME STATE

ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಭಂಡಾರಿ ನೇಮಕ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 194(4)ರ ಮೇರೆಗೆ ಸಭಾಪತಿಯವರು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರನ್ನು ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ. ಸಮಿತಿಯ ಸದಸ್ಯರಾಗಿ ಭಾರತಿ ಶೆಟ್ಟಿ, ಎಸ್.ವಿ. ಸಂಕನೂರ, ನಿರಾಣಿ ಹಣಮಂತ್ ರುದ್ರಪ್ಪ, ಶರವಣ ಟಿ.ಎ., ಡಾ|ಚಂದ್ರಶೇಖರ ಬಸವರಾಜ ಪಾಟೀಲ, ಕೆ.ಎಸ್. ನವೀನ್, ತಿಪ್ಪಣ್ಣಪ್ಪ ಕಮಕನೂರ, ರಾಮೋಜಿಗೌಡ ಅವರನ್ನು ಇದೇ ಸಂದರ್ಭದಲ್ಲಿ ನೇಮಕ ಮಾಡಲಾಗಿದೆ.

DAKSHINA KANNADA HOME

*ಶ್ರೀಮತಿ ಚಂಚಲಾ ತೇಜೋಮಯ ಇವರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ*

ಮಂಗಳೂರು : ರಾಯಚೂರಿನಲ್ಲಿ ನಡೆದ 72ನೇ ಅಖಿಲ ಭಾರತ ಸರಕಾರಿ ಸಪ್ತಾಹ -2025 ರ ಕಾರ್ಯಕ್ರಮದಲ್ಲಿ ಶ್ರೀಮತಿ ಚಂಚಲ ತೇಜೋಮಯ ಅಧ್ಯಕ್ಷರು ಯಶಸ್ವಿನಿ ಶ್ರೀ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತ ಬಲ್ಮಠ ಮಂಗಳೂರು ಇವರನ್ನು ಶ್ರೇಷ್ಠ ಸಹಕಾರಿ ಎಂದು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇದು ಮೈಸೂರು ಪ್ರಾಂತ್ಯದಲ್ಲಿ ಪ್ರಥಮವಾಗಿ ಮಹಿಳೆಗೆ ಸಿಕ್ಕಿದ ಗೌರವವಾಗಿದೆ. ಶ್ರೀಮತಿ ಚಂಚಲಾ ತೇಜೋಮಯ ಸುಮಾರು 25ವರ್ಷಗಳ ಹಿಂದೆ ಸರಕಾರಿ ಪ್ರಾಥಮಿಕ ಶಾಲೆ ಬಲ್ಮಠ ಇಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲು ತನ್ನ […]

HOME LATEST NEWS STATE

*ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ:ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಕರ್ನಾಟಕಕ್ಕೂ ಟೆನ್ಷನ್*

ಬೆಂಗಳೂರು, ನ18: ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿಯೂ ಜೋರಾಗಿದೆ. ಈ ವೈರಸ್ ಕರ್ನಾಟಕಕ್ಕೂ ಟೆನ್ಷನ್ ಹೆಚ್ಚಿಸಿದ್ದು, ಸದ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಬರಿಮಲೆ ಅಯ್ಯಪ್ಪ ಭಕ್ತರಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಈಗಾಗಲೇ ಕೇರಳದಲ್ಲಿ ನೂರಾರು ಜನರಿಗೆ ಬಾಧಿಸುತ್ತಿರುವ ಈ ವೈರಸ್‌, ರಾಜ್ಯದಿಂದ ಶಬರಿ ಮಲೆಗೆ ಹೋಗುವ ಭಕ್ತರ ಟೆನ್ಷನ್ಗೆ ಕಾರಣವಾಗಿದೆ. […]

HOME LATEST NEWS STATE

*ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಸುಳ್ಳು ಮಾಹಿತಿ ಪ್ರಕಟಿಸಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು*

ಬೆಂಗಳೂರು, ನವೆಂಬರ್ 18; ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 28665/2025, 28668/2025 ಮತ್ತು 28675/2025ಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ 2025ನೇ ಸೆಪ್ಟೆಂಬರ್ 25 ಆದೇಶದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸೂಚಿಸಿದೆ.ಅದರಂತೆ ಆಯೋಗದಿಂದ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಫಿಡೆವಿಟ್ ನ್ನು (Affidavit) ಅ ಸಲ್ಲಿಸಲಾಗಿರುತ್ತದೆ. ಸಮೀಕ್ಷೆಯ ಮಾಹಿತಿ ಹಾಗೂ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು […]

DAKSHINA KANNADA HOME LATEST NEWS

ಫುಲ್ ಮಿಲ್ಸ್’ ಸಿನಿಮಾ ರಾಜ್ಯಾದ್ಯಂತ : ನ.21: ಬಿಡುಗಡೆ

ಮಂಗಳೂರು: ಟೈಟಲ್ ನಿಂದಲೇ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟರಾದ ಲಿಖಿತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಮೂರು ವರ್ಷಗಳ ಕಾಲ ಈ ಸಿನಿಮಾಕ್ಕೆ ದುಡಿದಿದ್ದು ಕಥೆ ತುಂಬಾ ಚೆನ್ನಾಗಿದೆ. ಚಿತ್ರದ ನಿರ್ದೇಶಕ ವಿನಾಯಕ್ ಇನ್ಸ್ಟಾಗ್ರಾಮ್ ಮೂಲಕ ನನ್ನನ್ನು ಸಂಪರ್ಕಿಸಿದರು. ಅವರು ಹೇಳಿದ ಕಥೆ ಕೇಳಿ ಖುಷಿಯಾಗಿ ಸಿನಿಮಾಕ್ಕೆ ಬಂಡವಾಳ ಹಾಕಿದ್ದೇನೆ. ಒರಿಯರ್ದೊರಿ ಅಸಲ್, ಮದಿಮೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟು ನನ್ನನ್ನು ಬೆಳೆಸಿರುವ ಹಿರಿಯ ರಂಗಭೂಮಿ […]

DAKSHINA KANNADA HOME

*ಸಿಒಡಿಪಿ ಯಿಂದ “ಲಿಂಗ ಸಮಾನತೆ ಮತ್ತು ನ್ಯಾಯ” ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮ*

ಮಂಗಳೂರು. ನ18 : ಸಿಒಡಿಪಿ ಯಿಂದ “ಲಿಂಗ ಸಮಾನತೆ ಮತ್ತು ನ್ಯಾಯ” ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮವನ್ನು ನ 17ರಂದು ಸಿಒಡಿಪಿಯಲ್ಲಿ ಆಯೋಜಿಸಲಾಯಿತು. KROSS ಬೆಂಗಳೂರು ಹಾಗೂ CODP®️ ಮಂಗಳೂರಿನ ಸಹಯೋಗದಲ್ಲಿ ಮಹಿಳಾ ಸದೃಢೀಕರಣ ಯೋಜನೆ ಘಟಕದಡಿ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಶ್ರೀ ರಾಜಶೇಖರ್, ಸಂಯೋಜಕ – ಮಹಿಳಾ ಸದೃಢೀಕರಣ ಯೋಜನೆ (KROSS, ಬೆಂಗಳೂರು), ಡಾ. ರೋಹನ್ ಎಸ್. ಮೊನಿಸ್, ಮುಖ್ಯ ಆಡಳಿತಾಧಿಕಾರಿ – ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಹಾಗೂ […]

COMMUNITY NEWS DAKSHINA KANNADA HOME

*ರಚನಾ ಕ್ರೈಸ್ತ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಆಯ್ಕೆ*

ಮಂಗಳೂರು : ನ 17: ರಚನಾ – ಮಂಗಳೂರಿನ ಕಥೊಲಿಕ ವಾಣಿಜ್ಯ ಮಹಾಮಂಡಳಿಯ 26 ನೇ ಮಹಾಸಭೆಯು ನ16 ರಂದು ನಗರದ ಬೆಂದೂರು ಸಭಾಂಗಣದಲ್ಲಿ ನೆರವೇರಿತು. ಕ್ರೈಸ್ತ ಮುಖಂಡ ಹಾಗೂ ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಗೊಂಡರು. ಕ್ರೈಸ್ತ ಸಮುದಾಯದ ಉದ್ಯಮಶೀಲತೆಯನ್ನು ಹೆಚ್ಚಿಸಲು 1999 ರಲ್ಲಿ ಆರಂಭಗೊಂಡ ರಚನಾ ಇದುವರೆಗೆ ಉದ್ಯಮಿಗಳನ್ನು ಬಲಪಡಿಸಲು ಹಾಗೂ ಯುವಜನತೆ ಉದ್ಯಮ ರಂಗಕ್ಕೆ ಬರಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ರಚನಾ ಪ್ರಶಸ್ತಿಗಳ ಮೂಲಕ ಅವರನ್ನು […]

COMMUNITY NEWS DAKSHINA KANNADA HOME LATEST NEWS

“ಮೂಲ ಕ್ರಿಸ್ತ ಸಮುದಾಯ ಜನರನ್ನು ಒಂದಾಗಿಸುತ್ತದೆ” ಪವಿತ್ರ ಸಭೆಯ ಬೆಳವಣಿಗೆಗೆ ಬದಲಾವಣೆ ಅಗತ್ಯ: ಫಾ. ಸುನಿಲ್ ಜೋರ್ಜ್ ಡಿಸೋಜ

ಬಂಟ್ವಾಳ ವಿಟ್ಲ : ನ 16. : ಒಬ್ಬರು ಬದಲಾದರೆ ಕುಟುಂಬ ಬದಲಾಗುತ್ತದೆ. ಕುಟುಂಬ ಬದಲಾದರೆ ದೇವಾಲಯಗಳಲ್ಲಿ ಬದಲಾವಣೆಯಾಗುತ್ತದೆ. ದೇವಾಲಯಗಳಲ್ಲಿ ಬದಲಾವಣೆಯಾದರೆ ಇಡೀ ಪವಿತ್ರ ಸಭೆಯು ಬದಲಾಗುತ್ತದೆ. ಈ ಬದಲಾವಣೆಯ ಮೂಲವೇ ಕಿರು ಕ್ರಿಸ್ತ ಸಮುದಾಯ ಎಂದು ಮಂಗಳೂರು ಕಥೋಲಿಕ ಕಿರು ಕ್ರಿಸ್ತ ಸಮುದಾಯ ಪವಿತ್ರ ಸಭೆಯ ನಿರ್ದೇಶಕ ವಂ. ಗುರುಗಳಾದ ಸುನಿಲ್ ಜೋರ್ಜ್ ಡಿಸೋಜ ಅವರು ಅಭಿಪ್ರಾಯವಿತ್ತರು.ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಸಮುದಾಯ ಭವನದಲ್ಲಿ ಸಂತ ಜಾನ್ ಪಾವ್ಲರ ದ್ವಿತೀಯ ವಿಟ್ಲ ವಲಯ ಇದರ ಕಿರು […]

DAKSHINA KANNADA HOME LATEST NEWS

ಕೆಂಪು ಕಲ್ಲು ಗಣಿಗಾರಿಕೆ: ಅರ್ಜಿ ಹಾಕಿದವರಿಗೆ ತಕ್ಷಣ ಲೈಸನ್ಸ್ ಮಂಜೂರು ಮಾಡಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ

ಮಂಗಳೂರು: ನ 15: ಕೆಂಪು ಕಲ್ಲು ಗಣಿಗಾರಿಕೆಯ ಬಗೆಗಿನ ಗೊಂದಲಕ್ಕೆ ಸರಕಾರ ಪರಿಹಾರವನ್ನು ನೀಡಿದೆ, ಈಗ ಎಲ್ಲಾ ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಪರವಾನಗಿ ಹೊಮದಿರುವವರು ಈಗಾಗಲೇ ಗಣಿಗಾರಿ ಆರಂಭ ಮಾಡಿದ್ದಾರೆ. ಈಗ ಎಲ್ಲೂ ಕಲ್ಲಿನ ಕೊರತೆ ಇಲ್ಲ ಆದರೆ ಗಣಿಗಾರಿಗೆ ಪರವಾನಿಗೆ ಕೋರಿ ಅರ್ಜಿ ಹಾಕಿದವರಿಗೆ ತಕ್ಷಣ ಪರವಾನಿಗೆ ನೀಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಕೆಡಿಪಿ ಸಭೆಯಲ್ಲಿ ಆಗ್ರಹ ಮಾಡಿದರು. ಸಭೆಯು ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ […]