Month: November 2025

DAKSHINA KANNADA HOME

ಕನ್ನಡ ಅಭಿಮಾನ ಇರಲೇ ಬೇಕು, ಅಭಿಮಾನವಿದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ. ಸಚಿವರ ದಿನೇಶ್ ಗುಂಡೂರಾವ್

ಮಂಗಳೂರು .ನ 01 : ನವೆಂಬರ್ 1ರಂದು ನಮ್ಮ ರಾಜ್ಯ ಉದಯವಾಯಿತು. ಇದಕ್ಕಾಗಿ ಹೋರಾಡಿದ ಅನೇಕ ಮಹನೀಯರನ್ನು ಸಾಹಿತಿಗಳನ್ನು ಸಂಘ ಸಂಸ್ಥೆಗಳನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಕನ್ನಡನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿರಿಮೆ ತುಂಬಾ ವೈಶಿಷ್ಟ್ಯತೆಗಳಿಂದ ಕೂಡಿದೆ. ಅನೇಕ ಸುಪ್ರಸಿದ್ದ ರಾಜಮನೆತನದವರು, ಧೀರರು ಈ ನಾಡಿನಲ್ಲಿ ಆಳ್ವಿಕೆ ನಡೆಸಿ ಅನೇಕ ಅಮೂಲ್ಯ ಮತ್ತು ಜನಪರವಾದ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿರುತ್ತಾರೆ. ಇವರು ತಮ್ಮ ಆಡಳಿತದ ಕಾಲದಲ್ಲಿ ಕನ್ನಡನಾಡು-ನುಡಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದು ಅವರೆಲ್ಲರ ಕೊಡುಗೆಯನ್ನು ಸ್ಮರಿಸುತ್ತೇನೆ. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು […]

DAKSHINA KANNADA HOME

*ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ: ಕೆ ಅಜಿತ್ ಕುಮಾರ್ ರೈ ಮಾಲಾಡಿ*

ಮಂಗಳೂರು: ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ. ಸಮಾಜ ಬಾಂಧವರೊಳಗಿನ ಬಾಂಧವ್ಯವನ್ನು ಪುನರುತ್ಥಾನ ಮಾಡುವ ಮಹೋನ್ನತವಾದ ಕಾರ್ಯವನ್ನು ನಾವು ಮಾಡಬೇಕಾಗಿದೆ. ನಮ್ಮವರು ಜಗತ್ತಿನಾದ್ಯಂತ ಚದುರಿ, ಪಸರಿಸಿ ಹೋಗಿದ್ದಾರೆ. ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ, ಎಲ್ಲಿದ್ದಾರೆ ಎಂಬ ವಿಷಯ, ಮಾಹಿತಿ ನಮ್ಮಲಿಲ್ಲ. ಸಹಸ್ರಾರು ಸಮಾಜ ಬಾಂಧವರು ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸಿ ಅವರಿಗೆ ಸಹಾಯ ಮಾಡುವ ಹಾಗೂ ಬಂಟ ಸಮಾಜವನ್ನು ಒಗ್ಗೂಡಿಸಿ ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ […]

DAKSHINA KANNADA INETRNATIONAL NATIONAL

ಜೆಮೀಮಾ ರೊಡ್ರಿಗಸ್; ಅಂದು ಅವಮಾನ ಇಂದು ವಿಶ್ವದಿಂದಲೇ ಸನ್ಮಾನ; ಭಾರತ ಮಹಿಳಾ ತಂಡಕ್ಕೆ ಕರಾವಳಿ ಹುಡುಗಿಯೇ ಆಸರೆ!

ಮಂಗಳೂರು: ಜೆಮೀಮಾ ರೊಡ್ರಿಗಸ್ ಬಗ್ಗೆ ಇಂದು ಜಗತ್ತು ಮಾತನಾಡುತ್ತಿದೆ. ಅಸಾಧ್ಯ ಎಣಿಸಿದ್ದನ್ನು ಸಾಧ್ಯವಾಗಿಸಿದ ಕುಡ್ಲದ ಕುವರಿ. 339 ರನ್ ಸಿಡಿಸಿ ಘರ್ಜಿಸುತ್ತಿದ್ದ ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿಶ್ವ ಕಪ್ ಗೆಲ್ಲುವ ಕಣಸಿಗೆ ಸಿಂಹಸ್ವಪ್ನಳಾದ ಆಟಗಾರ್ತಿ. ಇನ್ನೇನು ಭಾರತ ಆಸಿಸ್ ಗೆ ಶರಣಾಗುತ್ತದೆ ಎನ್ನುವಷ್ಟರಲ್ಲಿ ದಿಟ್ಟವಾಗಿ ಹೋರಾಡಿದ ಯುವತಿ. ಭಾರತ ವನಿತೆಯರ ತಂಡ ಫೈನಲ್ ಗೆ ಲಗ್ಗೆ ಇಡಲು ಜೆಮೀಮಾ ರೊಡ್ರಿಗಸ್ ಶ್ರಮ ಅವಿರತ. 134 ಎಸೆತಗಳಲ್ಲಿ ಅಜೇಯ 127 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. […]