Month: June 2025

DAKSHINA KANNADA HOME LATEST NEWS

ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್‌ವಿ ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಗಳಾಗಿ ದರ್ಶನ್ ಎಚ್ ವಿ ಅವರು ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಮಂಗಳೂರಿನ ನಿರ್ಗಮಿತ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು.

DAKSHINA KANNADA

ಕಟ್ಟಡ ನಿರ್ಮಾಣ ನಿಯಮಗಳ ಸರಳೀಕರಣಕ್ಕೆ ಚಿಂತನೆ – ಸಚಿವ ದಿನೇಶ್ ಗುಂಡೂರಾವ್

ಮಂಗಳೂರು ಜೂ18 ಮನೆ ನಿರ್ಮಾಣ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನಿಯಮಗಳನ್ನು ಸರಳೀಕರಿಸುವ ಬಗೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸುವುದಾಗಿ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್  ಹೇಳಿದರು.     ಅವರು ಬುಧವಾರ ಸುಳ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ  ನೀಡಿ ಸುಳ್ಯ ನಗರ ಯೋಜನಾ ಪ್ರಾಧಿಕಾರದಲ್ಲಿ ನಡೆದ ಸಭೆಯಲ್ಲಿ  ಮಾತನಾಡಿದರು.   ನಿವೇಶನಗಳ ನೋಂದಣಿ, ನಕ್ಷೆ ಮಂಜೂರಾತಿ,  ಖಾತೆ, 9/11, ಏಕ ನಿವೇಶನ ಸೇರಿದಂತೆ […]

DAKSHINA KANNADA

ದೆಹಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಮೈ ಭಾರತ್ ನ ಯುವ ರಾಯಭಾರಿಯಾಗಿ ಶ್ರೀಕಾಂತ್ ಪೂಜಾರಿ‌ ಬಿರಾವು ಆಯ್ಕೆ

ಪುತ್ತೂರು:  ಈ ಬಾರಿ ದೆಹಲಿಯಲ್ಲಿ ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮ ದಲ್ಲಿ ಮೈ ಭಾರತ್ ನವದೆಹಲಿಯ ಮೈ ಭಾರತ್ ನ ಯುವ ರಾಯಭಾರಿಯಾಗಿ ಪಾಲ್ಗೊಳ್ಳಲು ದಕ್ಷಿಣ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶ್ರೀಕಾಂತ್ ಪೂಜಾರಿ ಬಿರಾವು ಕರ್ನಾಟಕದಿಂದ ಆಯ್ಕೆಯಾಗಿ ಪ್ರತಿನಿದಿಸಲಿದ್ದಾರೆ.ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಮೈ ಭಾರತ್ (ನೆಹರು ಯುವ ಕೇಂದ್ರ) ನವದೆಹಲಿ ಇದರ ವತಿಯಿಂದ ದೇಶದ ಪ್ರತಿ ರಾಜ್ಯದಿಂದ 15 ವರ್ಷ ದಿಂದ 28 ವರ್ಷ ವಯೋಮಿತಿ ವರೆಗಿನ ಯುವಜನರನ್ನು ನೇಮಕ ಮಾಡುತ್ತಿದ್ದು, […]

DAKSHINA KANNADA

ಮಂಗಳೂರು ಧರ್ಮ ಪ್ರಾಂತ್ಯದ ಪ್ಯಾಸ್ಟೋರಲ್ ಕಮಿಷನ್ಸ್‌ ಸಂಯೋಜಕರಾಗಿ ಫಾ. ನವೀನ್ ಪಿಂಟೊ ನೇಮಕ

ಮಂಗಳೂರು ಜೂನ್ 18 : ಮಂಗಳೂರು ಧರ್ಮ ಪ್ರಾಂತ್ಯದ ಪ್ಯಾಸ್ಟೋರಲ್ ಕಮಿಷನ್ಸ್ ನೂತನ ಸಂಯೋಜಕರಾಗಿ ಫಾ. ನವೀನ್ ಪಿಂಟೊ ಅವರನ್ನು ನೇಮಕ ಮಾಡಲಾಗಿದೆ. ಜೂನ್‌ 18 ರಿಂದ ಅನ್ವಯವಾಗುವಂತೆ ಈ ನೇಮಕಾತಿ ಆದೇಶವನ್ನು ಧರ್ಮ ಪ್ರಾಂತ್ಯ ಹೊರಡಿಸಿದೆ. ಫಾ. ನವೀನ್ ಪ್ರಸ್ತುತ ಕೊಡಿಯಾಲ್‌ ಬೈಲ್‌ ಬಿಷಪ್ಸ್ ಹೌಸ್‌ನಲ್ಲಿ 2023 ರಿಂದ ಜ್ಯುಡೀಶಿಯಲ್‌ ವಿಕಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2022 ರಿಂದ 2025 ರವರೆಗೆ ಜೆಪ್ಪು ಸೈಂಟ್‌ ಜೋಸೆಫ್ ಸೆಮಿನರಿಯ ಆಡಳಿತಾಧಿಕಾರಿ ಆಗಿಯೂ ಸೇವೆ ಸಲ್ಲಿಸುತ್ತಿರುವ ಅವರು ಸೆಮಿನರಿಯಲ್ಲಿ […]

Breaking News DAKSHINA KANNADA HOME LATEST NEWS STATE

ಮಂಗಳೂರು: ಭೀಕರ ಕಾರು ಅಪಘಾತ ಇಬ್ಬರು ಯುವಕರು ದಾರುಣ ಸಾವು

ಮಂಗಳೂರು: ರಾ.ಹೆ.66 ಜಪ್ಪಿನಮೊಗರು ಬಳಿ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮೃತರನ್ನು ಕೊಂಚಾಡಿಯ ಓಂಶ್ರೀ (24) ಮತ್ತು ಮಲ್ಲಿಕಟ್ಟೆಯ ಅಮನ್ ರಾವ್ (23) ಎಂದು ಗುರುತಿಸಲಾಗಿದೆ. ಓಂಶ್ರೀ ಅವರು ದ.ಕ. ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರಿನಲ್ಲಿ ನಾಲೈದು ಮಂದಿ ಪ್ರಯಾಣಿಸುತ್ತಿದ್ದು ಕಾರನ್ನು ಅಮನ್ ರಾವ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ತಲಪಾಡಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ […]

DAKSHINA KANNADA HOME LATEST NEWS STATE UDUPI

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧಿಕಾರಿ ಸೇರಿ ಹಲವರ ವರ್ಗಾವಣೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಉಡುಪಿ ಡಿಸಿ ವಿದ್ಯಾಕುಮಾರಿ ಅವರನ್ನು ಸೇರಿ ಹಲವು  ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ದರ್ಶನ್ ಎಚ್ ವಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಮುಲ್ಲೈ ಮುಗಿಲನ್ ಅವರನ್ನು ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಆಂಡ್ ಸ್ಟಾಂಪ್ಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿರುವ ದರ್ಶನ್ ಎಚ್‌ವಿ ವಾಣಿಜ್ಯ […]

Breaking News DAKSHINA KANNADA HOME LATEST NEWS NATIONAL STATE

ಮಳೆಯ ರಜೆ; ಮಕ್ಕಳ ನೆಚ್ಚಿನ ಡಿಸಿ ಮುಲ್ಲೈ ಮುಗಿಲನ್ ವರ್ಗಾವಣೆ

ಮಂಗಳೂರು, ಜೂ.17: ಮಳೆಯ ರಜೆಯ ಮೂಲಕ ಮಕ್ಕಳ ನೆಚ್ಚಿನ ಹಾಗೂ ಜಿಲ್ಲೆಯ ದಕ್ಷ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿ ಗುರುತಿಸಿಕೊಂಡಿದ್ದ ಮುಲ್ಲೈ ಮುಗಿಲನ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮುಲೈ ಮುಗಿಲನ್ ಅವರನ್ನು ಇನ್ಸ್‌ಪೆಕ್ಟರ್ ಜನರಲ್‌ ಆಫ್‌ ರಿಜಿಸ್ಟ್ರೇಷನ್‌ ಆಂಡ್ ಸ್ಟಾಂಪ್ಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿರುವ ದರ್ಶನ್ ಎಚ್‌ವಿ ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದರು.

DAKSHINA KANNADA

ರಾಷ್ಟ್ರೀಯ ಹೆದ್ದಾರಿ ಗುಂಡಿಗಳಿಂದ ಬಡಪಾಯಿಗಳ  ಬಲಿ   ರಸ್ತೆಯ ಗುಂಡಿ ಕಲ್ಲುಗಳಿಂದ ಮುಚ್ಚುವ ಕೆಲಸ ಟ್ರಾಫಿಕ್ ಪೊಲೀಸರ ಮಾನವೀಯತೆ

ಮಂಗಳೂರು ಜೂನ್ 17 ಮೂರು ದಿನಗಳ ಹಿಂದೆ, ನಂತೂರ್‌ನ ರಸ್ತೆಯಲ್ಲಿ ಒಂದು ದುರಂತ ಅಪಘಾತ ಸಂಭವಿಸಿತು. ಒಬ್ಬರು ಜೀವ ಕಳೆದುಕೊಂಡ ಆ ಘಟನೆಯ ಬಳಿಕ, ರಸ್ತೆಯನ್ನು ದುರಸ್ತಿ ಮಾಡಲಾಯಿತು ಎಂದು ಜನರಿಗೆ ಭರವಸೆ ನೀಡಲಾಯಿತು. ಆದರೆ ಇವತ್ತು, ಅದೇ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಮತ್ತೆ ಕಾಣಿಸಿಕೊಂಡಿವೆ. ಇದು ನಮ್ಮ ಆಡಳಿತದ ವೈಫಲ್ಯದ ಒಂದು ದೊಡ್ಡ ನಾಟಕವಾಗಿದೆ. ಈ ಗುಂಡಿಗಳು ಕೇವಲ ಮಣ್ಣಿನ ಹೊಂಡಗಳಲ್ಲ, ಇದು ಭ್ರಷ್ಟಾಚಾರದ ಕಾಮಗಾರಿಯ ಫಲಿತಾಂಶವಾಗಿದೆ. ದಕ್ಷಿಣ ಕನ್ನಡದ ರಸ್ತೆಗಳ ಕಳಪೆ ಕಾಮಗಾರಿಯನ್ನು […]

DAKSHINA KANNADA

ದ. ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳ* *ಒಕ್ಕೂಟ ರಚನೆ*

ಮಂಗಳೂರು ಜೂನ್17 *ದ. ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳ* *ಒಕ್ಕೂಟ ರಚನೆ* *ಅಧ್ಯಕ್ಷರಾಗಿ ಸದಾಶಿವ ಉಳ್ಳಾಲ್, ಸಂಚಾಲಕರು ಗಳಾಗಿ ಕೆ. ಎಂ ಮುಸ್ತಫ ಸುಳ್ಯ, ದಿನಕರ್ ಹೇರೂರು ಉಡುಪಿ ಆಯ್ಕೆ* *ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರೂಪಿಸುವಂತೆ ಆಗ್ರಹ, 9/11 ನಿಯಮ ಗಳ ಸರಳೀಕರಣಕ್ಕೆ ಬೇಡಿಕೆ*ಉಭಯ ಜಿಲ್ಲೆಗಳ 2 ನಗರಾಭಿವೃದ್ಧಿ ಮತ್ತು 6 ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರು ಗಳು ಮತ್ತು ಸದಸ್ಯರು ಗಳ ಸಭೆ ಮಂಗಳೂರು ಡಿಸಿಸಿ ಕಚೇರಿ ಯಲ್ಲಿ […]

DAKSHINA KANNADA

ಕದ್ರಿ ಶಿವಭಾಗ್   ಅಪಾರ್ಟ್ಮೆಂಟಿನ ಹಿಂಬದಿಯ ಬೃಹತ್ ತಡೆಗೋಡೆ ಕುಸಿದು  ಫ್ಲ್ಯಾಟ್ ಗಳಿಗೆ ತೀವ್ರ ಹಾನಿ   ಶಾಸಕ ವೇದವ್ಯಾಸ ಕಾಮತ್  ಭೇಟಿ

ಮಂಗಳೂರು ಜೂನ್ 17 ನಗರದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಗೆ ಕದ್ರಿ ಶಿವಭಾಗ್ ನ ಮುಖ್ಯ ರಸ್ತೆಯ ಸುಂದರಿ ಅಪಾರ್ಟ್ಮೆಂಟಿನ ಹಿಂಬದಿಯ ಬೃಹತ್ ತಡೆಗೋಡೆ ಕುಸಿದು ಅಲ್ಲಿನ ಫ್ಲ್ಯಾಟ್ ಗಳಿಗೆ ತೀವ್ರ ಹಾನಿಯಾಗಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಭೇಟಿ ನೀಡಿ ಪರಿಶೀಲಿಸಿದರು. ತೀವ್ರ ಮಳೆಯಿಂದ ತಡೆಗೋಡೆ ಇದ್ದ ಭಾಗದ ಗುಡ್ಡವೇ ಕುಸಿದಿದ್ದು, ಆ ರಭಸಕ್ಕೆ ಅಪಾರ್ಟ್ಮೆಂಟಿನ ಎರಡು ಮನೆಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಣ್ಣು ಕುಸಿದ ನಂತರ ಇದೀಗ ಅಲ್ಲಿನ ಮರಗಳೂ ಸಹ […]