Month: April 2025

HOME LATEST NEWS STATE

PUC ಫಲಿತಾಂಶ ಪ್ರಕಟ: ಉಡುಪಿ ಪ್ರಥಮ-ವಿದ್ಯಾರ್ಥಿನಿಯರದ್ದೇ ಮೇಲುಗೈ

ಬೆಂಗಳೂರು : 2024-25ನೇ ಸಾಲಿನ ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಶೇ.73.45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 53.29ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07ರಷ್ಟು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 82.54ರಷ್ಟು ಉತ್ತೀರ್ಣರಾಗಿದ್ದಾರೆ. ಶೇಕಡಾವರು ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ […]

DAKSHINA KANNADA HOME LATEST NEWS

ಮಹೇಶ್ ಭಟ್ ವಿರುದ್ಧ ಸ್ವಪಕ್ಷದಿಂದಲೇ ನಡೆಯಿತಾ ಷಡ್ಯಂತ್ರ? ಆತನ ಆಪ್ತರಿಂದಲೇ ಸ್ಪೋಟಕ ಮಾಹಿತಿ!

ಮಂಗಳೂರು: ಬಂಟ್ವಾಳ ತಾಲೂಕಿನ ಮಾಣಿಲದ ಅಪ್ರಾಪ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಮಹೇಶ್ ಭಟ್ ಗೆ ಜಾಮೀನು ಮಂಜೂರಾಗಿದೆ. ಕದ್ದುಮುಚ್ಚಿ ಓಡಾಡುತ್ತಿದ್ದ ಭಟ್ ಜಾಮೀನು ಮಂಜೂರಾಗುತ್ತಿದ್ದಂತೆ ಊರಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದಾನೆ. ಈ ನಡುವೆ ಮಹೇಶ್ ಭಟ್ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎನ್ನುವ ಚರ್ಚೆಗಳು ಆತನ ಆಪ್ತ ವಲಯದಿಂದಲೇ ಕೇಳಿಬಂದಿದೆ. ರಾಜಕೀಯವಾಗಿ ಮುನ್ನಲೆಗೆ ಬರುತ್ತಿರುವ ಮಹೇಶ್ ಭಟ್ ವಿರುದ್ಧ ಸ್ಥಳೀಯ ನಾಯಕರೇ ಷಡ್ಯಂತ್ರ ಮಾಡಿದ್ದಾರೆ ಎಂಬ ಮಾತು ವಿಟ್ಲದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದಲಿತ ಬಾಲಕಿಯನ್ನು ಮುಂದಿಟ್ಟುಕೊಂಡು ಅವರದ್ದೇ ಪಕ್ಷದವರು […]

HOME INETRNATIONAL LATEST NEWS

ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ವೀಸಾ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

ರಿಯಾದ್: ಸೌದಿ ಅರೇಬಿಯಾವು ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಜ್ ಯಾತ್ರೆ ಹಿನ್ನೆಲೆ ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸೌದಿ ಸರ್ಕಾರ ತಿಳಿಸಿದೆ. ಈ ನಿಷೇಧವು ಹಜ್ ಯಾತ್ರೆಯು ಮುಕ್ತಾಯಗೊಳ್ಳುವವರೆಗೆ ಅಂದರೆ ಜೂನ್ ಮಧ್ಯದವರೆಗೆ ನಿಷೇಧವು ಜಾರಿಯಲ್ಲಿರಲಿದೆ. ಸೌದಿ ಅರೇಬಿಯಾ ಉಮ್ರಾ, ವ್ಯಾಪಾರ ಮತ್ತು ಕೌಟುಂಬಿಕ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನೋಂದಣಿ ಇಲ್ಲದ ವ್ಯಕ್ತಿಗಳು ಹಜ್ ನಿರ್ವಹಿಸಲು ಪ್ರಯತ್ನಿಸುವುದನ್ನು ತಡೆಯಲು, ಜನಸಂದಣಿಯನ್ನು ನಿಯಂತ್ರಿಸಲು, […]

HOME LATEST NEWS NATIONAL

ಅಡುಗೆ ಅನಿಲದ ದರ ಏರಿಸಿದ ಕೇಂದ್ರ: 50 ರೂ. ಹೆಚ್ಚಳ

ಮಂಗಳೂರು: ದಿನನಿತ್ಯದ ವಸ್ತುಗಳ ದರ ಹೆಚ್ಚಳದ ನಡುವೆಯೇ ಅಡುಗೆ ಅನಿಲದ ದರವನ್ನು 50 ರೂಪಾಯಿಗೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಇದು ಸಾಮಾನ್ಯ ಸಿಲಿಂಡ‌ರ್ ಜತೆ ಉಜ್ವಲಾ ಯೋಜನೆಗೂ ಅನ್ವಯವಾಗಲಿದೆ. ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಅಡುಗೆ ಅನಿಲದ ದರವನ್ನು ಉಜ್ವಲಾ ಯೋಜನೆ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೆಚ್ಚಿಸಲಾಗಿದೆ. ಹೊಸ ದರದ ಅನ್ವಯ 14.2 ಕೇಜಿ ಅಡುಗೆ ಅನಿಲದ ದರ […]

DAKSHINA KANNADA HOME LATEST NEWS

ಅಪ್ರಾಪ್ತೆಗೆ ಕಿರುಕುಳ ನೀಡಿದ ಪ್ರಕರಣ: ಅರೋಪಿ ಮಹೇಶ್ ಭಟ್‌ಗೆ ಜಾಮೀನು

ಮಂಗಳೂರು: ಬಂಟ್ವಾಳ ತಾಲೂಕಿನ ಮಾಣಿಲದ ದಲಿತ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಸ್.ಟಿ.ಎಸ್.ಸಿ.-1 (ಪೊಕ್ಸೊ ನ್ಯಾಯಾಲಯ) ಸೋಮವಾರ ಶರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿ ಮಹೇಶ್ ಭಟ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ವಿಶೇಷ ಸರಕಾರಿ ಅಭಯೋಜಕರ, ಅರ್ಜಿದಾರ ಪರ ವಕೀಲರ ಮತ್ತು ಪಿರ್ಯಾದಿದರಾರರು ಮತ್ತಾಕೆಯ ಹೆತ್ತವರನ್ನು ನ್ಯಾಯಾಧೀಶರು ವಿಚಾರಣೆಗೊಳಪಡಿಸಿದ್ದರು. ಕೃತ್ಯ ನಡೆಸಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ, ಆತನನ್ನು ಬಂಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ […]

DAKSHINA KANNADA HOME LATEST NEWS

ಸುಳ್ಯದಲ್ಲಿ ತಾಯಿ-ಮಗ ವಿಷ ಸೇವನೆ: ಕೊನೆಯುಸಿರೆಳೆದ ಮಗ

ಸುಳ್ಯ: ಇಲಿ ಪಾಷಾಣ ಸೇವಿಸಿ ತಾಯಿ-ಮಗ ಆತ್ಮಹತ್ಯೆಗೆ ಯತ್ನಿಸಿದ ಘಟನೆ  ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ನಡೆದಿದೆ. ಇದರಲ್ಲಿ ಮಗ ಮೃತಪಟ್ಟಿದ್ದಾನೆ. ಮೃತಪಟ್ಟವನನ್ನು ನಾಲ್ಕೂರು ಗ್ರಾಮದ ನಡುಗಲ್ಲಿನ ದೇರಪ್ಪಜ್ಜನಮನೆ ನಿವಾಸಿ ಕುಶಾಲಪ್ಪ ಗೌಡ ಎಂಬವರ ಮಗ ನಿತಿನ್ (32) ಎಂದು ಗುರುತಿಸಲಾಗಿದೆ. ತಾಯಿ-ಮಗ ಇಬ್ಬರು ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದಾರೆ ಎನ್ನಲಾಗಿದ್ದು ರವಿವಾರ ಮುಂಜಾನೆ ಇಬ್ಬರೂ ಅಸ್ವಸ್ಥಗೊಂಡಿರುವುದು ತಿಳಿದು ಬಂದಿದೆ. ಈ ಪೈಕಿ ನಿತಿನ್ ಸ್ವಲ್ವ ಹೊತ್ತಿನಲ್ಲೇ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಸುಲೋಚನಾರನ್ನು […]

HOME LATEST NEWS NATIONAL

ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲ: ಬಿಜೆಪಿ ನಾಯಕನ ಮನೆಗೆ ಬೆಂಕಿ

ಇಂಫಾಲ್‌: ಕೇಂದ್ರದ ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲಿಸಿದ ಆರೋಪದ ಮೇಲೆ, ಬಿಜೆಪಿಯ ಮಣಿಪುರ ಘಟಕದ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷನ ಮನೆಗೆ ಗುಂಪೊಂದು ದಾಳಿ ಮಾಡಿ ಬೆಂಕಿ ಹಚ್ಚಿದೆ. ಬಿಜೆಪಿಯ ಮಣಿಪುರ ಘಟಕದ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅಸ್ಕರ್‌ ಅಲಿ ಮನೆಗೆ ಗುಂಪೊಂದು ಭಾನುವಾರ ರಾತ್ರಿ ದಾಳಿ ಮಾಡಿ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯು ಥೌಬಾಲ್‌ ಜಿಲ್ಲೆಯ ಲಿಲೊಂಗ್ ಎಂಬಲ್ಲಿ ನಡೆದಿದೆ. ವಕ್ಫ್‌ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿ ಅಸ್ಕರ್‌ ಅಲಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ […]

COMMUNITY NEWS DAKSHINA KANNADA HOME LATEST NEWS

ವಿಟ್ಲ: ಫಾತಿಮಾ ಮಾತಾ ದೇವಾಲಯದಲ್ಲಿ ಶಿಲುಬೆ ಯಾತ್ರೆ

ಬಂಟ್ವಾಳ: ತಾಲೂಕಿನ ವಿಟ್ಲದ ಪೆರುವಾಯಿಯ ಫಾತಿಮಾ ಮಾತಾ ದೇವಾಲಯದಲ್ಲಿ ಶಿಲುಬೆ ಯಾತ್ರೆಯು (ಖುರ್ಸಾವಾಟ್‌) ಇಂದು ನಡೆಯಿತು. ಮೊದಲು ನಡೆದ ಬಲಿಪೂಜೆಯನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹಾಸ್ಟೆಲ್‌ ವಾರ್ಡನ್‌ ವಂ. ರೂಪೇಶ್‌ ತಾವ್ರೊ ನೆರವೇರಿಸಿದರು. ನಂತರ ಚರ್ಚ್‌ ಆವರಣದಿಂದ ನಡೆದ ಶಿಲುಬೆ ಯಾತ್ರೆಯು ಸರಿಸುಮಾರು 2 ಕೀ.ಮೀ ಸಾಗಿ ತಾಬೋರ್‌ ಪರ್ವತ (ಗುಡ್ಡ ಪ್ರದೇಶ)ದಲ್ಲಿ ಸಂಪನ್ನಗೊಂಡಿತು. ಈ ವೇಳೆ ಯೇಸು ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ […]

DAKSHINA KANNADA HOME LATEST NEWS

ಕ್ರೈಸ್ತರ ಪವಿತ್ರವಾರದಲ್ಲಿ SSLC ಮೌಲ್ಯಮಾಪನ ರದ್ದು ಕೋರಿ ಕಥೋಲಿಕಾ ಸಭಾದಿಂದ ಮನವಿ

ಮಂಗಳೂರು: SSLC ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 15, 2025ರಿಂದ ಪ್ರಾರಂಭವಾಗಲಿದೆ. ಅಂದು ಕ್ರೈಸ್ತ ಸಮುದಾಯಕ್ಕೆ ಶುಭ ಗುರುವಾರ ಸೇರಿದಂತೆ ಮೂರು ದಿನಗಳ ನಿರಂತರ ಹಬ್ಬದ ಪ್ರಯುಕ್ತ ಕ್ರೈಸ್ತ ಶಿಕ್ಷಕರಿಗೆ ಮೌಲ್ಯಮಾಪನದಿಂದ ರಿಯಾಯಿತಿ ಕೋರುವಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ವತಿಯಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ. ಕಳೆದ ಶನಿವಾರ ಮನವಿ ಸಲ್ಲಿಸಿದ ನಿಯೋಗ, ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಶಿಕ್ಷಕರಿದ್ದು, ಏ.15 ಹಾಗೂ ಮೂರು ದಿನಗಳ ಕಾಲ ನಡೆಯುವ […]

DAKSHINA KANNADA HOME LATEST NEWS

ನಂಬರ್‌ ಪ್ಲೇಟ್‌ಗೆ ಪ್ಲಾಸ್ಟಿಕ್‌ ಮುಚ್ಚಿ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ದಂಡ

ಮಂಗಳೂರು: ಸ್ಕೂಟರ್ ಸವಾರನೊಬ್ಬ ತನ್ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ, ಹೆಲ್ಮೆಟ್ ಧರಿಸದೆ ಚಲಾಯಿಸುತ್ತಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸದ್ಯ ಈ ಪ್ರಕರಣದಲ್ಲಿ ವೈರಲ್‌ ಆಗಿದ್ದ ಸ್ಕೂಟರ್‌ನ್ನು ಪತ್ತೆಹಚ್ಚಿದ ಮಂಗಳೂರು ನಗರ ಪೊಲೀಸರು ದಂಡ ವಿಧಿಸಿದ್ದಾರೆ. ಮಾ.23ರಂದು ಸಂಜೆ 4 ಗಂಟೆಯಿಂದ 4:10ರ ಸಮಯಕ್ಕೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ  ಮುಚ್ಚಿ  ಹೆಲ್ಮೆಟ್ ಧರಿಸದೆ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು […]