Month: April 2025

DAKSHINA KANNADA HOME LATEST NEWS

ಮಂಗಳೂರು- ನಾಳೆಯಿಂದ ಎ.9 ರವರೆಗೆ ಜೆಇಇ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಮಂಗಳೂರು: ಎಪ್ರಿಲ್ 2 ರಿಂದ 9 ರವರೆಗೆ ನಡೆಯಲಿರುವ ಜೆಇಇ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ 300 ಮೀಟರ್ ಸುತ್ತಮುತ್ತಲಿನ ನಗರ ಪೋಲಿಸ್ ಕಮಿಷನರೇಟ್ ವ್ಯಾಪ್ತಿಯ – ಪ್ರದೇಶವನ್ನು ನಿಷೆೀಧಿತ ಪ್ರದೇಶವೆಂದು ಘೋಷಿಸಿ ನಿಷೆೀಧಾಜ್ಞೆ ಜಾರಿಗೊಳಿಸಿ ಉಪ ಪೋಲಿಸ್ ಆಯುಕ್ತ ಸಿದ್ದಾರ್ಥ್‌ ಗೋಯಲ್ ಆದೇಶಿಸಿದ್ದಾರೆ. 1)ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್, 2) ಐಓಎನ್ ಡಿಜಿಟಲ್ […]

DAKSHINA KANNADA HOME LATEST NEWS

ವಿದ್ಯಾರ್ಥಿನಿ ಮೇಲೆ ದೌರ್ಜನ್ಯ: ಆರೋಪಿ ಬಂಧನಕ್ಕೆ ದಲಿತ ಸಂಘಟನೆಗಳ ಆಗ್ರಹ

ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲ ಮಾಣಿಲ ಗ್ರಾಮದ ಮುರುವದಲ್ಲಿ ದಲಿತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ನಿವಾಸಿ ಮಹೇಶ್ ಭಟ್ ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಎಸಗಿರುವ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಸೆಕ್ಷನ್ ಹಾಗೂ ದಲಿತ ದೌರ್ಜನ್ಯ ಕಾಯಿದೆಯ ಅನ್ವಯ ಪ್ರಕರಣ ದಾಖಲಾಗಿದ್ದರೂ ಕೂಡ ಪೊಲೀಸ್ ಇಲಾಖೆ ಈ ಕುರಿತು ಕ್ರಮ ಜರುಗಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಕುರಿತು ತಕ್ಷಣ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ […]

HOME LATEST NEWS NATIONAL

ಮಹಾತ್ಮ ಗಾಂಧಿಯವರ ಮರಿಮೊಮ್ಮಗಳು ನಿಧನ

ನವದೆಹಲಿ: ಮಹಾತ್ಮ ಗಾಂದಿಯವರ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ ಅವರು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ನೀಲಂಬೆನ್  ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿಯವರ ಮೊಮ್ಮಗಳು. ಅವರು ನವಸಾರಿ ಜಿಲ್ಲೆಯ ಅಲ್ಕಾ ಸೊಸೈಟಿಯಲ್ಲಿರುವ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಜನವರಿ 30, 2008 ರಂದು ಮಹಾತ್ಮ ಗಾಂಧಿಯವರ 60 ನೇ ಪುಣ್ಯತಿಥಿಯಂದು, ನೀಲಂಬೆನ್ ಪಾರಿಖ್ ಅವರು ಬಾಪು ಅವರ ಕೊನೆಯ ಚಿತಾಭಸ್ಮವನ್ನು ಗೌರವಯುತವಾಗಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರ ಅನುಯಾಯಿಗಳು […]

DAKSHINA KANNADA HISTORY LATEST NEWS

ಮಂಗಳೂರು: 80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ಮನೆಯೊಂದರ ಕಿಟಕಿ ಬಾಗಿಲು ಮುರಿದು ಅಪಾರ ಮೌಲ್ಯದ ಚಿನ್ನಾಭರಣ ಕಳವು ಗೈದಿರುವ ಪ್ರಕರಣ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಮಂಗಳವಾರ ವರದಿಯಾಗಿದೆ. ಪೆರ್ಮುದೆ ನಿವಾಸಿ ಪ್ರವೀಣ್ ಪಿಂಟೊ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಕಳ್ಳರು ಸುಮಾರು 1.080 ಕೆ.ಜಿಯ ಸುಮಾರು 80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ. ಮನೆಯ ಮಾಲಕ ಪ್ರವೀಣ್ ಪಿಂಟೊ ಅವರು ಕುಟುಂಬ ಸಮೇತರಾಗಿ ಮಸ್ಕತ್ ನಲ್ಲಿದ್ದು, ಮಾ.31ರ ರಾತ್ರಿಯಿಂದ ಎ.1ರ ಬೆಳಗ್ಗೆ ಈ […]

COMMUNITY NEWS HOME

ಕವಿ ಮೆಲ್ವಿನ್ ರೊಡ್ರಿಗಸ್ – ಹೊಸದೆಹಲಿ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ನೇಮಕ

ಮಂಗಳೂರು : ಹೊಸದಿಲ್ಲಿಯ  ಕೇಂದ್ರ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಮಿತಿ ಮುಖ್ಯಸ್ಥರಾಗಿ ಕವಿ,  ಸಾಹಿತಿ  ಮೆಲ್ವಿನ್ ರೊಡ್ರಿಗಸ್   ನೇಮಕಗೊಂಡಿದ್ದಾರೆ. 24 ರಾಷ್ಟ್ರೀಯ ಭಾಷೆಗಳ ಸಾಹಿತ್ಯದ ಶ್ರೇಯೋಭಿವೃದ್ದಿಗಾಗಿ1954 ರಿಂದ  ಭಾರತ ಸರಕಾರದ  ಸಂಸ್ಕೃತಿ  ಸಚಿವಾಲಯದಡಿ ಶ್ರಮಿಸುತ್ತಿರುವ ಸ್ವಾಯತ್ತ ಸಂಸ್ಥೆ  ಸಾಹಿತ್ಯ ಅಕಾಡೆಮಿಯಾಗಿದೆ.  ಇದರ ಪಶ್ಚಿಮ ಪ್ರಾದೇಶಿಕ ವಲಯದಲ್ಲಿ ಗುಜರಾತಿ, ಮರಾಠಿ, ಸಿಂಧಿ ಮತ್ತು ಕೊಂಕಣಿ ಭಾಷೆಗಳಿದ್ದು, ಪ್ರಸ್ತುತ  ಮೆಲ್ವಿನ್ ರೊಡ್ರಿಗಸ್ ಕೊಂಕಣಿ ಭಾಷಾ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಲಹಾ […]

DAKSHINA KANNADA HOME

ಏ.3 ರಂದು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ 35ನೇ ಪದವಿ ಪ್ರದಾನ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಒಂದು ಘಟಕವಾದ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ತನ್ನ 35 ನೇ ಪದವಿ ಪ್ರದಾನ ಸಮಾರಂಭವನ್ನು ಏ. 3 ರಂದು ಬೆಳಿಗ್ಗೆ 10:00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಿದೆ ಎಂದು ಫಾದರ್‌ ಮುಲ್ಲರ್‌ ಚಾರಿಟೇಬಲ್‌ ಸಂಸ್ಥೆಯ ನಿರ್ದೇಶಕ ವ.ಫಾ ರಿಚರ್ಡ್‌ ಅಲೋಶಿಯಸ್‌ ಕೊವೆಲ್ಲೋ ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ‘ಈ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ […]

DAKSHINA KANNADA HOME LATEST NEWS

ಬೆಳ್ತಂಗಡಿ: 3 ತಿಂಗಳ ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಮನವಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ-ಮುಂಡ್ರೋಟ್ಟು ರಸ್ತೆಯಲ್ಲಿ ಅಂದಾಜು 3 ತಿಂಗಳ ಹೆಣ್ಣು ಮಗು ಪತ್ತೆಯಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಪುತ್ತೂರಿನ ನೆಲ್ಲಿಕಟ್ಟೆ, ಕೇರ್ ಆಫ್ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ಮಕ್ಕಳ ದತ್ತು ಕೇಂದ್ರದಲ್ಲಿ ದಾಖಲಿಸಲಾಗಿದೆ.                                             […]

HOME LATEST NEWS STATE

ನಾಳೆಯಿಂದ ರಾಜ್ಯದಲ್ಲಿ ಡೀಸೆಲ್‌ ದರ ಹೆಚ್ಚಳ: ಮಧ್ಯರಾತ್ರಿಯಿಂದಲೇ ಜಾರಿ!

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಹಾಲು ಮತ್ತು ಕರೆಂಟ್ ದರ ಹೆಚ್ಚಳವಾಗಿದ್ದು, ಇದರ ಮಧ್ಯೆ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರಿಂದ, ಡೀಸೆಲ್ ಬೆಲೆ ಲೀಟರ್‌ಗೆ 2 ರಿಂದ 3 ರೂಪಾಯಿಗಳಷ್ಟು ಹೆಚ್ಚಾಗಲಿದೆ. ಈ ಹಿಂದೆ ಶೇ 18.44ರಷ್ಟು ಇದ್ದ ತೆರಿಗೆ, ಇದೀಗ ಶೇಕಡ 21.17ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಬೆಂಗಳೂರಲ್ಲಿ ಡಿಸೇಲ್​ 88.99 ರೂಪಾಯಿಗೆ ಮಾರಾಟವಾಗುತ್ತಿದೆ. ರಾಜ್ಯ ಸರ್ಕಾರ ಕಳೆದ ವರ್ಷವೂ ಪೆಟ್ರೋಲ್​ ಮತ್ತು ಡೀಸೆಲ್​ […]

Breaking News DAKSHINA KANNADA HOME LATEST NEWS

ಉಪ್ಪಿನಂಗಡಿ: ಗುಡ್ಡೆಯಲ್ಲಿ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧ ಪತ್ತೆ..!

ಉಪ್ಪಿನಂಗಡಿ: ಹಿಂದೂ ಮಹಿಳೆಯೊಂದಿಗೆ ಅನ್ಯಕೋಮಿನ ವೃದ್ಧನೋರ್ವ ಗುಡ್ಡೆಯಲ್ಲಿ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಉಪ್ಪಿನಂಗಡಿಯ ಇಳಂತಿಲ ಸಮೀಪ ಹಿಂದೂ ಮಹಿಳೆಯೊಂದಿಗೆ ಓರ್ವ ವೃದ್ಧ ಇರುವುದನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದ್ದಾರೆ. ವೃದ್ಧ ಅಲ್ಲೇ ಸಮೀಪದ ಕರ್ವೇಲ್‌ ನಿವಾಸಿಯಾಗಿದ್ದು, ವೃದ್ದ ಮತ್ತು ಮಹಿಳೆ ಜೊತೆಯಾಗಿದ್ದುದ್ದನ್ನು ಕಂಡು ಇಬ್ಬರನ್ನೂ ಸ್ಥಳೀಯರು ಬೆನ್ನಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.  

DAKSHINA KANNADA HOME LATEST NEWS

ಸುಳ್ಯ: ನಿಯಂತ್ರಣ ತಪ್ಪಿ ಮನೆ ಮಹಡಿ ಮೇಲೆ ಬಿದ್ದ ಕಾರು

ಸುಳ್ಯ: ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಮನೆ ಮಹಡಿಯ ಮೇಲೆ ಬಿದ್ದು ಮನೆ ಮತ್ತು ಕಾರು ಜಖಂಗೊಂಡ ಘಟನೆ ಭಾನುವಾರ ಸುಳ್ಯದಲ್ಲಿ ನಡೆದಿದೆ. ನಿತ್ಯಾನಂದ ಮುಂಡೋಡಿ ಎಂಬುವವರ ಕಾರನ್ನು ಅವರ ಸೊಸೆ ಚಲಾಯಿಸಿಕೊಂಡು ಗುತ್ತಿಗಾರು ಕಡೆಗೆ ಹೊರಟಿದ್ದರು. ಚಿರೆಕಲ್‍ನ ಮನೆಯಿಂದ ಮುಖ್ಯರಸ್ತೆಗೆ ಬಂದು ಸ್ವಲ್ಪ ಮುಂದಕ್ಕೆ ಹೋದಾಗ ಕಾರಿಗೆ ಬ್ರೇಕ್ ಹಾಕಿದಾಗ ಬ್ರೇಕ್‍ನ ಅಡಿಗೆ ನೀರಿನ ಬಾಟಲ್ ಸಿಲುಕಿ ಬ್ರೇಕ್ ಸಿಗದ ಕಾರಣ ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿದ್ದ ಸೀತಮ್ಮ ಚಿರೆಕಲ್ಲು ಎಂಬವರ ಮನೆಯ ಮೇಲೆ ಬಿದ್ದಿದೆ. […]