Month: April 2025

COMMUNITY NEWS INETRNATIONAL LATEST NEWS

ಮುಂದಿನ ಪೋಪ್ ಯಾರು? ಪೋಪ್ ಫ್ರಾನ್ಸಿಸ್‌ ಉತ್ತರಾಧಿಕಾರಿ ಆಯ್ಕೆ ಹೇಗೆ?

ಪೋಪ್ ಫ್ರಾನ್ಸಿಸ್ ಅವರು ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರಕ್ಕೆ ವ್ಯಾಟಿಕನ್‌ನಲ್ಲಿ ಸಿದ್ದತೆ ನಡೆದಿದೆ. ಈ ನಡುವೆ, ಮುಂದಿನ ಪೋಪ್ ಯಾರು? ಎಂಬ ಕುತೂಹಲ ಹೆಚ್ಚಾಗಿದೆ. ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಗಳ ಆಯ್ಕೆ ನಡೆಯುವುದು ಹೇಗೆಂಬ ಪ್ರಶ್ನೆಯೂ ಕಾಡುವುದು ಸಹಜ. ಸಾಮಾನ್ಯವಾಗಿ ಹೊಸ ಪೋಪ್ ಅನ್ನು ಈಗ ಆಯ್ಕೆ ಮಾಡುವ ಕೆಲಸ. ಪೋಪ್ ಮರಣದ ನಂತರ 15 ರಿಂದ 20 ದಿನಗಳ ನಡುವೆ ಕಂಟ್ರೋವ್ ಎಂದು ಹೆಸರಿಸಲಾದ ಆಯ್ಕೆ ಪ್ರಕ್ರಿಯೆಯ ಮೂಲಕ ನಡೆಯುತ್ತದೆ. ಮುಂದಿನ ಪೋಪ್ ಯಾರು, ರೇಸ್‌ನಲ್ಲಿರುವ […]

COMMUNITY NEWS HOME INETRNATIONAL NATIONAL STATE

ನೂತನ ಪೋಪ್ ಆಯ್ಕೆಗೆ ಕರ್ನಾಟಕದವರಿಗಿಲ್ಲ ಅವಕಾಶ! ಭಾರತದಿಂದ ನಾಲ್ವರು ಭಾಗಿ

ವಾಷಿಂಗ್ಟನ್‌: l ನಿಧನರಾದ ರೋಮನ್ ಕ್ಯಾಥೋಲಿಕ್‌ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದಿಂದ ನಾಲ್ವರು ಕಾರ್ಡಿನಲ್‌ಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಕೇರಳ ಮೂಲದವರಿದ್ದು, ಕರ್ನಾಟಕದವರಿಗೆ ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ.ಈಸ್ಟರ್ ಭಾನುವಾರದಂದು ಕೊನೆಯ ಭಾಷಣ ಮಾಡಿದ್ದ ಪೋಪ್‌ ಫ್ರಾನ್ಸಿಸ್‌ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದರು. ಸಂಪ್ರದಾಯದ ಪ್ರಕಾರ ಮತದಾನಕ್ಕೆ ಅರ್ಹತೆ ಪಡೆದಿರುವ 138 ಕಾರ್ಡಿನಲ್‌ಗಳು ವ್ಯಾಟಿಕನ್‌ ಸಿಟಿಯ ಸಿಸ್ಟಿನ್‌ ಚಾಪೆಲ್‌ನಲ್ಲಿ ಸಮಾವೇಶ ನಡೆಸಲಿದ್ದಾರೆ. ಅಲ್ಲಿ ಅವರು ರಹಸ್ಯ ಮತದಾನ ಮಾಡುವ ಮೂಲಕ ಪೋಪ್‌ […]

DAKSHINA KANNADA HOME LATEST NEWS

Big Breaking: ಕ್ರೈಸ್ತರ ಪರಮೋಚ್ಛ ಗುರು ಪೋಪ್‌ ಫ್ರಾನ್ಸಿಸ್‌ ನಿಧನ

ವ್ಯಾಟಿಕನ್ ಸಿಟಿ: ಕ್ರಿಶ್ಚಿಯನ್‌ ಜಾಗತಿಕ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಇಂದು (ಏ.21-ಸೋಮವಾರ) ಕೊನೆಯುಸಿರೆಳೆದಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಪೋಪ್‌ ಫ್ರಾನ್ಸಿಸ್‌ ನಿಧನರಾಗಿದ್ದಾರೆ ಎಂದು ವ್ಯಾಟಿಕನ್‌ ಸಿಟಿ ಮೂಲಗಳು ಖಚಿತಪಡಿಸಿವೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 7:35 ಕ್ಕೆ ಫ್ರಾನ್ಸಿಸ್ ಇಹಲೋಕ ತ್ಯಜಿಸಿದರು ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ. ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರವಾಗಿರುವ ಇಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಪೋಪ್ ಫ್ರಾನ್ಸಿಸ್ […]

COMMUNITY NEWS

ಪೆರುವಾಯಿ ಫಾತಿಮಾ ಮಾತೆ ದೇವಾಲಯದಲ್ಲಿ ಈಸ್ಟರ್ ಸಂಭ್ರಮ

ಪೆರುವಾಯಿ/ವಿಟ್ಲ, ಎ.19: ಕರಾವಳಿಯಲ್ಲಿ ಕ್ರೈಸ್ತರು ಶನಿವಾರದಂದು ಕ್ರಿಸ್ತರು ಮರಣ ಗೆದ್ದು ಪುನರುತ್ಥಾನರಾದ ಹಬ್ಬವಾದ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಿದರು. ಚರ್ಚ್ ಗಳಿಗೆ ತೆರಳಿದ ಕ್ರೈಸ್ತರು ವಿವಿಧ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಿದರು. ಗುರುವಾರ ಬಳಿಕ ಶನಿವಾರದಂದು ಬಲಿಪೂಜೆಗಳು ಆರಂಭಗೊಂಡವು. ಘಂಟೆಗಳು ಮೊಳಗಿದವು. ಪೆರುವಾಯಿ ಫಾತಿಮಾ ಮಾತೆಯ ಇಗರ್ಜಿಯಲ್ಲಿ ಫಾ. ಸೈಮನ್ ಡಿಸೋಜಾ ನೇತೃತ್ವದಲ್ಲಿ ಈಸ್ಟರ್ ಆಚರಿಸಲಾಯಿತು. ಚರ್ಚ್ ಆವರಣದಲ್ಲಿ ಬೆಂಕಿ ಆಶಿರ್ವಚನ ಹಾಗೂ ಮೊಂಬತ್ತಿ ಮೆರವಣಿಗೆ ನಡೆಯಿತು. ಬಳಿಕ ಚರ್ಚ್ ನಲ್ಲಿ ಸ್ತೋತ್ರ ಹಾಡಲಾಯಿತು. […]

COMMUNITY NEWS DAKSHINA KANNADA HOME LATEST NEWS

ಕರಾವಳಿಯಲ್ಲಿ ಈಸ್ಟರ್‌ ಈವ್‌ ಆಚರಿಸಿದ ಕ್ರೈಸ್ತರು

ಮಂಗಳೂರು: ಕರಾವಳಿಯ ಕ್ರೈಸ್ತರು ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದ್ದು, ರವಿವಾರ ಯೇಸು ಕ್ರಿಸ್ತರ ಪುನರುತ್ಥಾನ ಸ್ಮರಣೆಯ ಈಸ್ಟರ್ ಹಬ್ಬವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಿದ್ದಾರೆ. ಮಂಗಳೂರಿನ ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈಸ್ಟರ್ ಜಾಗರಣೆಯ ಬಲಿಪೂಜೆಯನ್ನು ರೊಸಾರಿಯೋ ಕೆಥೆಡ್ರಲ್‌ನಲ್ಲಿ ನೆರವೇರಿಸಿದರು. ಶನಿವಾರ ರಾತ್ರಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆ ನಡೆಯಿತು. ವಿಶೇಷ ಪ್ರಾರ್ಥನಾ ವಿಧಿಯೊಂದಿಗೆ ಬಲಿಪೂಜೆಗಳು ಆರಂಭಗೊಂಡವು. ಸಂಜೆಯ ವೇಳೆ ಚರ್ಚ್‌ಗಳಲ್ಲಿ ಜತೆಯಾದ ಕ್ರೈಸ್ತರು, ಜಗತ್ತಿಗೆ ಬೆಳಕಾದ ಕ್ರಿಸ್ತರ ಬೆಳಕು(ಬೆಂಕಿ) ಆಶೀರ್ವಚನ […]

DAKSHINA KANNADA HOME LATEST NEWS

“ವಕ್ಫ್‌ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಪೊಲೀಸ್‌ ಜೀಪು ಬಳಸಿಲ್ಲ”

ಮಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನ ಅಡ್ಯಾರ್‌ನಲ್ಲಿ ನಿನ್ನೆ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಯ ಕಾರನ್ನು ಬಳಸಿದ ಬಗ್ಗೆ ವಿಡಿಯೋ ಸಮೇತ  ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿತ್ತು. ಇದಕ್ಕೆ  ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಭಟನೆಯ ಸಂದರ್ಭ ಬಂದೋಬಸ್ತಿನಲ್ಲಿದ್ದ ಎಸಿಪಿ (ಸಂಚಾರ ಉಪ ವಿಭಾಗ)ಯವರು ಕಾರ್ರಕ್ರಮ ಮುಗಿದ ಬಳಿಕ ಮಂಗಳೂರು ಕಡೆಗೆ ತೆರಳುವ ಸಂಚಾರ […]

DAKSHINA KANNADA HOME LATEST NEWS

ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್‌: ರಾಕೇಶ್‌ ಮಲ್ಲಿ ಸೇರಿ ನಾಲ್ವರ ವಿರುದ್ದ FIR

ಮಂಗಳೂರು: ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರನ ಮಗನ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತರಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನಲ್ಲೇನಿದೆ ರಿಕ್ಕಿ […]

COMMUNITY NEWS DAKSHINA KANNADA HOME LATEST NEWS

ಈಸ್ಟರ್ ಹಬ್ಬದ ಸಂದೇಶ ನೀಡಿದ ಧರ್ಮಾಧ್ಯಕ್ಷ ಅ.ವಂ. ಪೀಟರ್‌ ಪಾವ್ಲ್‌ ಸಲ್ದಾನ

ಮಂಗಳೂರು: ಈಸ್ಟರ್ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮಾಧ್ಯಕ್ಷ ಅ.ವಂ. ಪೀಟರ್‌ ಪಾವ್ಲ್‌ ಸಲ್ದಾನ ಅವರು ಶುಭಾಶಯ ಕೋರಿ ಈಸ್ಟರ್‌ ಸಂದೇಶ ನೀಡಿದ್ದಾರೆ. ಆ ಸಂದೇಶ ಹೀಗಿದೆ. “ಈಸ್ಟರ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಮರಣವನ್ನು ಜಯಿಸಿ ಪುನರುತ್ಥಾನರಾದ ಸಂತೋಷವನ್ನು ನಾವು ಆಚರಿಸುತ್ತೇವೆ. ಶಿಲುಬೆಯ ಮೇಲೆ ಅವರ ತ್ಯಾಗ ಮತ್ತು ಪುನರುತ್ಥಾನವು ನಮಗೆ ಆಶಾಕಿರಣವನ್ನು, ಕ್ಷಮೆಯನ್ನು ಮತ್ತು ದೇವರ ಶಾಶ್ವತ ಪ್ರೀತಿಯನ್ನು ತೋರಿಸುತ್ತದೆ. ಕ್ರಿಸ್ತರು ಮ್ರತ್ಯುಂಜಯರಾದ ಆಚರಣೆಯ ಈ ಪವಿತ್ರ ಈಸ್ಟರ್ ಹಬ್ಬದ ನಿಮಿತ್ತ ನಿಮ್ಮೆಲ್ಲರಿಗೂ […]

HOME LATEST NEWS STATE

ಮಾಜಿ ಡಾನ್​​ ಮುತ್ತಪ್ಪ ರೈ ಮಗನ ಮೇಲೆ ಗುಂಡಿನ ದಾಳಿ

ಮಂಗಳೂರು: ಮಾಜಿ ಡಾನ್​​ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ ಘಟನೆ ನಿನ್ನೆ ರಾತ್ರಿ ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿಯೇ ನಡೆದಿದೆ. ಬಿಡದಿಯಿಂದ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ರಿಕ್ಕಿ ರೈ, ಪ್ರತಿ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು. ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್​ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಮನೆಯ ಕೂಗಳತೆ ದೂರದಲ್ಲೇ ರಾತ್ರಿ ಸುಮಾರು 11.30ಕ್ಕೆ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಹಿಂಬದಿ […]

DAKSHINA KANNADA HOME LATEST NEWS

ವಿಶ್ವದಾದ್ಯಂತ ಇಂದು ಕ್ರೈಸ್ತರಿಗೆ ಗುಡ್‌ ಫ್ರೈಡೇ

ಮಂಗಳೂರು: ಕ್ರೈಸ್ತ ಧರ್ಮದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗುಡ್‌ ಫ್ರೈಡೇ. ಈ ದಿನವನ್ನು ಪ್ರತಿವರ್ಷ ಈಸ್ಟರ್‌ ಭಾನುವಾರದ ಮೊದಲ ಶುಕ್ರವಾರದಂದು ಆಚರಿಸಲಾಗುತ್ತದೆ. ಇದು ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾದ್ದರಿಂದ ಗುಡ್‌ ಫ್ರೈಡೇ ತನ್ನ ಹೆಸರಿನಲ್ಲಿ ಸಾಂಕೇತಿಕವಾಗಿ ಶುಭವನ್ನು ಸೂಚಿಸಿದರೂ ಕ್ರಿಶ್ಚಿಯನ್‌ ಸಮುದಾಯಕ್ಕೆ ಇದು ದುಃಖದ ದಿನವಾಗಿದೆ. ಈ ದಿನ ಪ್ರೀತಿ, ಜ್ಞಾನ ಮತ್ತು ಅಹಿಂಸೆಯ ಸಂದೇಶವನ್ನು ನೀಡಿದ ಹಾಗೂ ಮಾನವ ಕುಲದ ಕಲ್ಯಾಣಕ್ಕಾಗಿ ತನ್ನನ್ನು ತಾನೇ ತ್ಯಾಗ ಮಾಡಿದ ಏಸು ಕ್ರಿಸ್ತರ ತ್ಯಾಗವನ್ನು ಸ್ಮರಿಸಲಾಗುತ್ತದೆ. ಕ್ರೈಸ್ತ ಸಮುದಾಯದವರು ಈ […]