Month: August 2025

DAKSHINA KANNADA HOME LATEST NEWS

ಮಂಗಳೂರು: 7 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ

ಮಂಗಳೂರು: ತನ್ನ 7 ತಿಂಗಳ ಮಗುವಿನೊಂದಿಗೆ ತಾಯಿಯು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ವಿವರ ಸೆಲ್ವಿನ್‌ ಮಾಚಾದೋ ಅವರು ಇಂಟೀರಿಯರ್ ಡೆಕೊರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಕಳೆದೆರಡು ವರ್ಷಗಳಿಂದ   ಹೆಂಡತಿ ಬೆಲಿಂಡ ರೋಡ್ರಿಗಸ್ (30) ಮತ್ತು 7 ತಿಂಗಳ ಮಗ ಬ್ರೂಸ್ ಮಚಾಡೋ ಎಂಬುವವರ ಜೊತೆ ನಗರದ ಸೂಟರ್ ಪೇಟೆಯಲ್ಲಿ  ವಾಸವಾಗಿದ್ದರು. ಆ.7 ರಂದು ಸೆಲ್ವಿನ್‌ ಮಾಚಾದೋ ಕೆಲಸ ನಿಮಿತ್ತ ಹೊರಹೋಗಿದ್ದರು. ಅದೇ ದಿನ ಸಂಜೆ 7 ಗಂಟೆಗೆ ಮನೆಗೆ […]

DAKSHINA KANNADA HOME LATEST NEWS

ಸ್ನೇಹಿತರೊಂದಿಗೆ ಮಂಗಳೂರಿಗೆ ಹೋಗಿ ಬರುತ್ತೇನೆಂದ 23ರ ಯುವತಿ ನಾಪತ್ತೆ

ಮಂಗಳೂರು: 23 ವರ್ಷದ ಯುವತಿಯೋರ್ವಳು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖೈರುನ್ನಿಸ ಮಹಮ್ಮದ್ ನಾಸೀರ ಎಂಬುವವರ ಮಗಳಾದ ಶಾಹಿನ ಬಾನು  ಆ.7 ರಂದು ನಾನು ಸ್ನೇಹಿತೆಯರೊಂದಿಗೆ ಮಂಗಳೂರು ಪೇಟೆಗೆ ಹೋಗಿ ತಿರುಗಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾರೆ. ತಡರಾತ್ರಿಯಾದರೂ ಮನೆಗೆ ಬಾರದೆ ಇರುವುದರಿಂದ, ಗಾಬರಿಗೊಂಡ ಮನೆಯವರು ನೆರೆಕರೆ ಮನೆಯವರಲ್ಲಿ ವಿಚಾರಿಸಿ ಸುತ್ತ ಮುತ್ತ ಪ್ರದೇಶಗಳಲ್ಲಿ ಹುಡುಕಾಡಿದರೂ ಆಕೆಯ ಬಗ್ಗೆ […]

DAKSHINA KANNADA HOME

ಮಲ್ಲಿಕಟ್ಟೆ ಜಿಲ್ಲಾ ಕಾಂಗ್ರೇಸ್ ಕಚೇರಿ ಸಭಾಂಗಣದಲ್ಲಿ ಆಟಿದ ಕೂಟ ಕಾರ್ಯಕ್ರಮ

ಮಂಗಳೂರು ಆಗಸ್ಟ್ 08: ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೇಸ್ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೇಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ನೆರವೇರಿತು. ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ತುಳುನಾಡಿನ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಆಗಬೇಕು. ತುಳುನಾಡಿನ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕು. ಎಲ್ಲಾ ಜಾತಿ, ಧರ್ಮದವರೂ ಒಟ್ಟಾಗಿ ಇರಬೇಕೆನ್ನುವುದೇ ಆಟಿದ ಕೂಟದ ಉದ್ದೇಶ. ಇಂತಹ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ನಡೆಯಲಿ ಎಂದರು. […]

DAKSHINA KANNADA HOME LATEST NEWS

ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ದಾನ ಕಚೇರಿಗಳಲ್ಲಿ ಶೋಧ

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ರೋಶನ್ ಸಲ್ದಾನ ಮತ್ತಿತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೊರೇಟ್ ಆಫ್ ಎನ್‌ಫೋರ್ಸ್‌ಮೆಂಟ್ ಮಂಗಳೂರು ಸಬ್ ರೆನಲ್ ಕಚೇರಿಯು ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಗರದ 5 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಸ್ಟಾಂಪ್ ಟ್ಯೂಟಿಗಾಗಿ ಹಣ ವಸೂಲಿ ಮಾಡಿ, ಭರವಸೆ ನೀಡಿದ ಸಾಲಗಳನ್ನು ನೀಡದೆ ವಂಚನೆ ಮಾಡಿದ ರೋಶನ್ ಸಲ್ದಾನ, ಆತನ ಪತ್ನಿ ಡಫ್ನಿ ನೀತು ಡಿಸೋಜ ಮತ್ತಿತರರ ವಿರುದ್ಧ ಕಾನೂನು […]

DAKSHINA KANNADA HOME

ಒಡಿಶಾ ರಾಜ್ಯದಲ್ಲಿ ನಡೆದ ಕ್ರೈಸ್ತ ಧರ್ಮಗುರುಗಳ ಹಾಗೂ ಸನ್ಯಾಸಿನಿಯರ ಮೇಲಿನ ಹಿಂಸಾತ್ಮಕ ದಾಳಿಗೆ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಖಂಡನೆ

ಮಂಗಳೂರು ಆಗಸ್ಟ್ 07: ಜಲೇಶ್ವರ (ಒಡಿಶಾ) ಧರ್ಮಕ್ಷೇತ್ರದ ವ್ಯಾಪ್ತಿಯ ಗಂಗಾಧರ ಮಿಷನ್ ಕೇಂದ್ರದಲ್ಲಿ ನಿನ್ನೆ ಆಗಸ್ಟ್ 6ರಂದು ಬುಧವಾರ ನಡೆದ ಕ್ರೂರ, ಕಲ್ಪಿತ ಹಾಗೂ ಪೂರ್ವನಿಯೋಜಿತ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಹೀನಕೃತ್ಯವನ್ನು ಸುಮಾರು 70ಕ್ಕೂ ಹೆಚ್ಚು ಬಜರಂಗದಳದ ಕಾರ್ಯಕರ್ತರು ಕೈಗೊಂಡಿದ್ದು, ಇಬ್ಬರು ಕಥೊಲಿಕ್ ಧರ್ಮಗುರುಗಳು, ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಮತ್ತು ಅವರ ಒಬ್ಬ ಹಿಂಬಾಲಕರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂದು AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಹೇಳಿದರು. ದುಃಖಿತ ಕುಟುಂಬಗಳ ಮರಣ […]

DAKSHINA KANNADA HOME

ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ: ಶೈಕ್ಷಣಿಕ ಪ್ರಗತಿಯ ಇತಿಹಾಸಾತ್ಮಕ ಸಾಧನೆ

ಮಂಗಳೂರು: ಆ: 07. ಕೆನರಾ ಹೈಸ್ಕೂಲ್ ಅಸೋಸಿಯೇಷನ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಸಂಸ್ಥೆ ಕೆನರಾ ಇಂಜಿನಿಯರಿಂಗ್ ಕಾಲೇಜು (CEC), ತನ್ನ ಶೈಕ್ಷಣಿಕ ಪ್ರವಾಸದಲ್ಲಿ ಮತ್ತೊಂದು ಇತಿಹಾಸಾತ್ಮಕ ಸಾಧನೆ ಸಾಧಿಸಿದೆ. ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ (Autonomous Status) ಲಭಿಸಿದ್ದು, ಇದು ಭವಿಷ್ಯದ ಉದ್ಯೋಗಯೋಗ್ಯ ವಿದ್ಯಾರ್ಥಿಗಳನ್ನು ರೂಪಿಸಲು,ಹಾಗೂ ಶೈಕ್ಷಣಿಕ ಸ್ವಾತಂತ್ರ್ಯ ಮತ್ತುಬದ್ಧತೆಯನ್ನು ಹೆಚ್ಚಿಸುತ್ತದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇದರ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಪರಿಶೀಲಿಸಿ ಈ ಮಾನ್ಯತೆಯನ್ನು ಮಂಜೂರು ಮಾಡಿದೆ. ವಿಶ್ವೇಶ್ವರಯ್ಯ ತಾಂತ್ರಿಕ […]

DAKSHINA KANNADA HOME

ಸರ್ಕಾರದ ಬೊಕ್ಕಸದಿಂದ ಪಿಂಚಣಿ ಕೊಡಿ. ಜನರ ಜೇಬಿನಿಂದ ಅಲ್ಲ : ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು ಆಗಸ್ಟ್ 07: ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು, ಮುಚ್ಚಿಕೊಳ್ಳಲು ಪ್ರಯತ್ನಿಸಿ, “ಆ ನಿರ್ಧಾರ ನಮ್ಮದಲ್ಲ, ಹಿಂದಿನ ಸರ್ಕಾರದ್ದು” ಎಂದು ಬಾಲಿಶ ಹೇಳಿಕೆ ನೀಡಿ ಜನತೆಯ ಮುಂದೆ ಇನ್ನಷ್ಟು ಬೆತ್ತಲಾಗುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಅವಧಿಯ ಕರೆಂಟ್ ಬಿಲ್ಲುಗಳಲ್ಲಿ ಪಿಂಚಣಿ ಹಾಗೂ ಗ್ರ್ಯಾಚುಟಿ […]

HOME NATIONAL

ಮಂಗಳೂರು ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮೊದಲ ಸ್ಥಾನ

ನವದೆಹಲಿ ಅಗಸ್ಟ್ 07: ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಇದು ಕೇವಲ ಕರಾವಳಿಗೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಮಂಗಳೂರಿನ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ವಿಶ್ವದ ದೊಡ್ಡ ಡೇಟಾ ಸಂಗ್ರಹ ಸಂಸ್ಥೆಯಾದ ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕದಲ್ಲಿ […]

HOME

ಮಂಗಳೂರು ಧರ್ಮಪ್ರಾಂತ್ಯದ ಶತಮಾನ ಕಂಡ ಹಿರಿಯ ಧರ್ಮಗುರು ವಂ| ಅಲೋಶಿಯಸ್ ಡಿ’ಸೋಜಾ(100) ನಿಧನ; ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಆರು ಬಿಷಪರ ಜತೆಗೆ ಸೇವೆ ಸಲ್ಲಿಸಿದ್ದರು

ಮಂಗಳೂರು,ಆಗಸ್ಟ್ 7: ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಧರ್ಮಗುರು ಶತಾಯುಷಿ ವಂ| ಅಲೋಶಿಯಸ್ ಡಿ’ಸೋಜಾ(100) ಅವರು ಜಪ್ಪುವಿನ ನಿವೃತ್ತ ಧರ್ಮಗುರುಗಳ ನಿವಾಸವಾದ ಸಂತ ಜುಜೆವಾಜ್ ನಿವಾಸದಲ್ಲಿ ಗುರುವಾರ ನಿಧನ ಹೊಂದಿದರು.ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆ.8ರಂದು ಸಂಜೆ 4 ಗಂಟೆಗೆ ಮಂಗಳೂರಿನ ವೇಲೆನ್ಸಿಯಾದಲ್ಲಿರುವ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿದೆ. ವಂ| ಅಲೋಶಿಯಸ್ ಡಿ’ಸೋಜಾ ಅವರು ಆಗಸ್ಟ್ 24, 1953ರಂದು ಧರ್ಮಗುರುಗಳಾಗಿ ಸೇವೆ ಆರಂಭಿಸಿ ಸುಮಾರು 72 ವರ್ಷಗಳ ಕಾಲ ಯಾಜಕಾರಾಗಿ ಸೇವೆ ಸಲ್ಲಿಸಿದ್ದಾರೆ. 2025ರ […]

DAKSHINA KANNADA HOME

ಸುರತ್ಕಲ್ – ನಂತೂರು ನಡುವಿನ ಹೆದ್ದಾರಿ ಆ.07 ರಿಂದ 13ರವರೆಗೆ ದುರಸ್ತಿ ಕಾಮಗಾರಿ

ಮಂಗಳೂರು: ರಾ.ಹೆ 66 ರಲ್ಲಿ ಸುರತ್ಕಲ್ – ನಂತೂರು ನಡುವಿನ ಹೆದ್ದಾರಿ ದುರಸ್ತಿ ಕಾಮಗಾರಿ ಆ.7ಆಗಸ್ಟ್ 13ರವರೆಗೆ ಕೈಗೆತ್ತಿಕೊಳ್ಳುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಹೆದ್ದಾರಿ ರಿಪೇರಿ ಸಂಬಂಧ ಗುಂಡಿಗಳನ್ನು ಮುಚ್ಚುವುದು, ತೇಪೆ ಕಾರ್ಯ ಚರಂಡಿ ಸ್ವಚ್ಛಗೊಳಿಸುವುದು ಮುಂತಾದ ಕೆಲಸ ನಡೆಯಲಿದೆ. ಈ ರಿಪೇರಿ ಕೆಲಸವು ವಾಹನಗಳ ದಟ್ಟಣೆ ಇಲ್ಲದ ಸಮಯ( ಪೀಕ್ ಅವರ್ಸ್ ಹೊರತುಪಡಿಸಿ) ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3:00 ರವರೆಗೆ ಹಾಗೂ ರಾತ್ರಿ […]