Month: June 2025

DAKSHINA KANNADA

ಡೆಪ್ಯುಟಿ ಚೇರ್‌ ಮೆನ್‌ ವಿರುದ್ಧ 24 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ“  ಮಾಜಿ ಶಾಸಕ ಮೊಹಿಯುದ್ದೀನ್‌ ಬಾವಾ ಎಚ್ಚರಿಕೆ

ಮಂಗಳೂರು: 13 ”ಕನ್ಸ್ಟ್ರಕ್ಷನ್‌ ಸಂಸ್ಥೆಯೊಂದರ ಸಹ ಗುತ್ತಿಗೆದಾರನ ಬಿಲ್‌ ಕೇಳಲು ಹೋದಾಗ ಅಲ್ಲಿನ ಡೆಪ್ಯುಟಿ ಚೇರ್‌ ಮೆನ್‌ ಜೊತೆ ಗೌರವಯುತವಾಗಿ ವರ್ತಿಸಿದ್ದೇನೆ. ಆದರೆ 26 ಗಂಟೆಯ ನಂತರ ಎನ್ ಎಂಪಿಎ ಕಾರ್ಯದರ್ಶಿ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು ಯಾಕೆ? ಚೇರ್‌ಮೆನ್‌ ಒತ್ತಡದಿಂದ ಸೆಕ್ರಟರಿ ಮತ್ತು ಲೀಗಲ್‌ ಅಡ್ವೈಸರ್‌ ನನ್ನ ಮೇಲೆ ಸುಳ್ಳು ಕೇಸ್‌ ಹಾಕಿಸಿದ್ದಾರೆ. ಹಾಗಾಗಿ ಡೆಪ್ಯುಟಿ ಚೇರ್‌ ಮೆನ್‌ ವಿರುದ್ಧ 24 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ“ ಎಂದು ಸುರತ್ಕಲ್‌ ಮಾಜಿ ಶಾಸಕ ಮೊಹಿಯುದ್ದೀನ್‌ […]

DAKSHINA KANNADA

“ಬಿಜೆಪಿ ಸುಳ್ಳುನ್ನು ಸತ್ಯವೆಂದು ಬಿಂಬಿಸಿ ಅಪನಂಬಿಕೆ ಸೃಷ್ಟಿಸಿದೆ”

ಮಂಗಳೂರು: 13 ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳ ಕುರಿತು ಕೆಪಿಸಿಸಿ ಉಪಾಧ್ಯಕ್ಷ, ದ.ಕ.ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಎಂ.ಸಿ ವೇಣುಗೋಪಾಲ್ ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕರು, ವಿವಿಧ ಪದಾಧಿಕಾರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಸದಾ ಅಶಾಂತಿಗೆ ಪ್ರೇರಣೆ ನೀಡುತ್ತಾ ಬಂದಿದ್ದು, ಸುಳ್ಳುನ್ನು ಸತ್ಯವೆಂದು ಬಿಂಬಿಸಿ ಜನರಲ್ಲಿ ಅಪನಂಬಿಕೆ ಸೃಷ್ಟಿಸಿದೆ. ದ.ಕ. ಜಿಲ್ಲೆ ಶಾಂತಿ ಸೌಹಾರ್ದತೆಯ ಜಿಲ್ಲೆಯಾಗಿದ್ದು, ಶಿಕ್ಷಣ, ವೈದ್ಯಕೀಯ ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿ ಪಡೆದಿದೆ. […]

DAKSHINA KANNADA HOME LATEST NEWS

ಮುಡಿಪು: ನೂತನ ಕಾರಾಗೃಹ  ನಿರ್ಮಾಣ- ಗೃಹ ಸಚಿವರ ಭೇಟಿ

ಮಂಗಳೂರು:  ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು  ಮುಡಿಪು ಕುರ್ನಾಡು ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾ ಕಾರಾಗೃಹ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ನಿರ್ಮಾಣ ಹಂತದ ಕಟ್ಟಡ   ವೀಕ್ಷಿಸಿದ ಅವರು ಕಾಮಗಾರಿಗಳ ಮಾಹಿತಿ ಪಡೆದರು. ಕಾಮಗಾರಿಯನ್ನು ಉತ್ತಮ  ಗುಣಮಟ್ಟದಲ್ಲಿ ತ್ವರಿತಗತಿಯಲ್ಲಿ ನಡೆಸಿ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು. ಕಾರಾಗೃಹದ ಆವರಣ ಗೋಡೆ ಸೇರಿದಂತೆ ಅತ್ಯುನ್ನತ ಭದ್ರತಾ ವ್ಯವಸ್ಥೆ ನೂತನ ಕಾರಾಗೃಹ  ಸಂಕೀರ್ಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.  ಕಾರಾಗೃಹ ಇಲಾಖೆ ಡಿಐಜಿ ದಿವ್ಯಶ್ರೀ ಅವರು ಸಚಿವರಿಗೆ […]

DAKSHINA KANNADA HOME LATEST NEWS

ಕರ್ನಾಟಕ ಬ್ಯಾಂಕ್‌ನಿಂದ ಸ್ನೇಹಾಲಯಕ್ಕೆ ಹೃದಯಸ್ಪರ್ಶಿ ಕೊಡುಗೆ

ಮಂಗಳೂರು: ಕರ್ನಾಟಕ ಬ್ಯಾಂಕ್ ತನ್ನ ಸಿಎಸ್ಆರ್ ಫಂಡ್ ಮೂಲಕ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಕೊಡುಗೆ ನೀಡಿದೆ. ಜೂ.12 ರಂದು ಸ್ನೇಹಾಲಯದ ವೃದ್ಧರ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 10.57 ಲಕ್ಷ ರೂ. ಮೊತ್ತದ 50 ಬೆಚ್ಚಗಿನ ಕೋಟ್ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬು ಕವರ್‌ಗಳನ್ನು ದಾನವಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್  ವಿಶ್ವನಾಥ್ ಎಸ್.ಆರ್. ಮತ್ತು ಉಚ್ಚಿಲ ಶಾಖೆಯ ಮ್ಯಾನೇಜರ್ ಶಾಮ್ ಕುಮಾರ್ […]

DAKSHINA KANNADA

ನೃತ್ಯ ಭಜನೆ ಸ್ಪರ್ಧೆ ಸೀಸನ್ 3 ಎಸ್. ಡಿ. ಎಂ. ಉದ್ಯಮಾಡಳಿತ ಕಾಲೇಜಿಗೆ ಪ್ರಥಮ ಬಹುಮಾನ

ಮಂಗಳೂರಿನ ನಮ್ಮಕುಡ್ಲ ಚಾನಲ್ ಆಶ್ರಯದಲ್ಲಿ, ನ್ಯೂ ರವಿ ಇಂಡಸ್ಟ್ರೀಸ್ ಮುಖ್ಯ ಪ್ರಾಯೋಜನೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ನಮ್ಮಕುಡ್ಲ ನೃತ್ಯಭಜನೆ ಸ್ಪರ್ಧೆ ಸೀಸನ್ 3 ರ ಅಂತಿಮ ಸುತ್ತು ನಡೆಯಿತು.ಮಂಗಳೂರಿನ ಎಸ್. ಡಿ. ಎಂ. ಉದ್ಯಮಾಡಳಿತ ಕಾಲೇಜ್ ಭಜನಾ ತಂಡ 25 ಸಾವಿರ ರೂಪಾಯಿ ನಗದಿನೊಂದಿಗೆ ಒಂದನೇ ಬಹುಮಾನ,ಶೇಷಶಯನ ಕುಣಿತ ಭಜನಾ ತಂಡ ಬೈಕಂಪಾಡಿ 15 ಸಾವಿರದೊಂದಿಗೆ ದ್ವಿತೀಯ ಬಹುಮಾನ ಮತ್ತು ಈಶ್ವರಿ ಭಜನಾ ಮಂಡಳಿ ಪೊಳಲಿ 10 ಸಾವಿರದೊಂದಿಗೆ ತೃತೀಯಾ ಬಹುಮಾನ ಪಡೆಯಿತು. ಪುತ್ತೂರು […]

Breaking News DAKSHINA KANNADA INETRNATIONAL LATEST NEWS NATIONAL STATE

ಅಹಮದಾಬಾದ್ ವಿಮಾನ ದುರಂತ; ಮಂಗಳೂರು ಮೂಲದ ಮುಂಬೈ ನಿವಾಸಿ ಕ್ಲೈವ್ ಕುಂದರ್ ವಿಧಿವಶ

ಅಹಮದಾಬಾದ್: ಇಂದು ಮಧ್ಯಾಹ್ನ ನಡೆದ ವಿಮಾನ ಅಪಘಾತದಲ್ಲಿ ಮಂಗಳೂರು ಮೂಲದ ಸಹ ಪೈಲೆಟ್ ಕ್ಲೈವ್ ಕುಂದರ್ ಸಾವನ್ನಪ್ಪಿದ್ದಾರೆ. ಕ್ಲೈವ್ ಕುಂದರ್ ಅವರು ಕ್ರೈಸ್ತ ಸಮುದಾಯದ ಪ್ರೊಟೆಸ್ಟೆಂಟ್ ಧರ್ಮಸಭೆಗೆ ಸೇರಿದವರಾಗಿದ್ದಾರೆ. ಮುಂಬೈನ ಸಂತ ಕ್ರೂಜ್ ಕಲೀನಾ ಧರ್ಮಸಭೆಗೆ ಸೇರಿದವರಾಗಿದ್ದಾರೆ. ಕ್ಲೈವ್ ಅವರ ತಾಯಿ ಮಂಗಳೂರು ಮೂಲದವರು ಎನ್ನಲಾಗಿದ್ದು, ಪ್ರಸ್ತುತ ಆಸ್ಟ್ರೇಲಿಯಾ ದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಆದರೆ ಇದು ಅಧಿಕೃತವಾಗಿ ದೃಢಪಟ್ಟಿಲ್ಲ. ಕ್ಲೈವ್ ಅವರ ತಾತನ ಮನೆ ಮಂಗಳೂರಿನಲ್ಲಿದ್ದು, ಅಲ್ಲಿ ಪ್ರಸ್ತುತ ಯಾರೂ ಇಲ್ಲ ಎನ್ನಲಾಗುತ್ತಿದೆ.

DAKSHINA KANNADA HOME LATEST NEWS

ಅಹಮದಾಬಾದ್‌ ವಿಮಾನ ದುರಂತ: ಮಂಗಳೂರು ಬಿಷಪ್ ದಿಗ್ಭ್ರಮೆ, ಸಂತಾಪ

ಮಂಗಳೂರು: ಗುಜರಾತಿನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅಪಾರ ಸಾವು ನೋವು ಸಂಭವಿಸಿದ ಬಗ್ಗೆ ಆಘಾತ ವ್ಯಕ್ತ ಪಡಿಸಿರುವ ಅವರು ಸಾವನ್ನಪ್ಪಿರುವ ಪ್ರಯಾಣಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮೃತ ಪಟ್ಟವರ ಆತ್ಮಗಳಿಗೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

DAKSHINA KANNADA HOME LATEST NEWS

ನಾಳೆಯಿಂದ ಪಿಲಿಕುಳದಲ್ಲಿ ಹಣ್ಣುಗಳ ಮೇಳ

ಮಂಗಳೂರು: ರೈತರು ಹಾಗೂ ಉತ್ಪಾದಕರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ನಾನಾ ಮೇಳಗಳು ಮತ್ತು ವಸ್ತು ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ ದಶಕದಿಂದ ಹಣ್ಣುಗಳ ಉತ್ಸವ ಮತ್ತು ಹಲಸು ಮೇಳವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು, ಸಾರ್ವಜನಿಕರಿಂದ ವಿಶಿಷ್ಟ ಮೆಚ್ಚುಗೆಗಳನ್ನು ಗಳಿಸಿದೆ. ಈ ಬಾರಿ ಹಣ್ಣುಗಳ ಮೇಳವನ್ನು ಜೂನ್ 14 ಮತ್ತು 15 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಪಿಲಿಕುಳದ ಅರ್ಬನ್ ಹಾಥ್ ಮಳಿಗೆಗಳ ಸಂಕೀರ್ಣ, ಡಾ. ಶಿವರಾಮ ಕಾರಂತ […]

DAKSHINA KANNADA

ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಲು ನಿರಂತರ ಶ್ರಮ ಅಗತ್ಯ

ಮಂಗಳೂರು, ಜೂ.12  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ  ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಗುರುವಾರ  ನಗರದ ಪುರಭವನ ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು.    ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ವಿರುದ್ಧ […]

DAKSHINA KANNADA

ರಾಜ್ಯ ಸರಕಾರದ 2 ವರ್ಷಗಳ ಸಂಭ್ರಮ: ಮಾಹಿತಿ ಪ್ರದರ್ಶನ

ಮಂಗಳೂರು, ಜೂ.12 ಕರ್ನಾಟಕ ಸರಕಾರ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನಾ ಸಂಭ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಮಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಕುರಿತ ಮಾಹಿತಿ ಪ್ರದರ್ಶನಕ್ಕೆ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಅವರು ಗುರುವಾರ ಚಾಲನೆ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸಿ ಜನರ ಗಮನ ಸೆಳೆಯುವಂತೆ ಮಾಡುತ್ತಿದ್ದು, ಈ ಯೋಜನೆಗಳು ಜನರ ಮನೆಯ ಬಾಗಿಲಿಗೆ ತಲುಪಿಸುವುದರ […]