Month: June 2025

DAKSHINA KANNADA

ಮಂಗಳೂರು ಏರ್‌ಪೋರ್ಟ್‌ ಸಂಪರ್ಕಿಸುವ ಮರಕಡ ರಸ್ತೆ ಅಗಲೀಕರಣ, ತುರ್ತು ರಿಪೇರಿಗೆ ಆಗ್ರಹ

ಮಂಗಳೂರು: ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಮರವೂರು ಸೇತುವೆಯಿಂದ ಮರಕಡ ನಡುವಿನ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ದಿಪಡಿಸುವುದಕ್ಕೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಪತ್ರ ಬರೆದಿದ್ದಾರೆ. ಮಂಗಳೂರು ನಗರದಿಂದ ಏರ್ ಪೋರ್ಟ್ ಗೆ ಸಂಪರ್ಕಿಸುವ ಮುಖ್ಯರಸ್ತೆಯು ಮರಕಡದವರೆಗೆ ಈಗಾಗಲೇ ಚತುಷ್ಪಥ ರಸ್ತೆಯಾಗಿ ಅಭಿವೃದ್ದಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಮರವೂರು ಸೇತುವೆ ಮತ್ತು ಮರಕಡ ನಡುವಿನ […]

DAKSHINA KANNADA

ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರ ಹದ್ದಿನ ಕಣ್ಣು

ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ ವೇದಿಕೆಗಳು ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯನ್ನೂ ಒಳಗೊಂಡಿವೆ. ಆದರೆ, ಕೆಲವರು ಈ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡು ಆಶ್ಲೀಲ ಪದಗಳನ್ನು ಬಳಸುವುದು, ಮಹಿಳೆಯರ ಬಗ್ಗೆ ಅವಾಚನೀಯ ಕಾಮೆಂಟ್‌ಗಳನ್ನು ಮಾಡುವುದು ಮತ್ತು ದ್ವೇಷ ಭಾಷಣವನ್ನು ಹರಡುವುದು ಹೆಚ್ಚಾಗುತ್ತಿದೆ. ಇಂತಹ ಕೃತ್ಯಗಳನ್ನು ತಡೆಯಲು ಪೊಲೀಸ್ ಇಲಾಖೆಯು ಸೋಶಿಯಲ್ ಮೀಡಿಯಾದ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದ್ದು, ಆಶ್ಲೀಲತೆಯಲ್ಲಿ ತೊಡಗುವವರಿಗೆ ಜೈಲು ಶಿಕ್ಷೆ ಖಚಿತ ಎಂದು ಎಚ್ಚರಿಕೆ ನೀಡಿದೆ. *ಕಾನೂನಿನ ಕರಾಳ ನೆರಳು*ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗವು ಸೋಶಿಯಲ್ […]

DAKSHINA KANNADA HOME LATEST NEWS

ಸ್ನೇಹಾಲಯ ಸಂಸ್ಥೆಯ ನೂತನ ಸೌಲಭ್ಯ ಟೆರೇಸ್ ರೂಫಿಂಗ್ ಉದ್ಘಾಟನೆ

ಮಂಗಳೂರು : ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ ಸ್ನೇಹಾಲಯ ಸಂಸ್ಥೆಯು ತಮ್ಮ ವ್ಯಸನ ನಿವಾರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸಿನ ಉದ್ಘಾಟನೆಯನ್ನು ನೆರವೇರಿಸಿದರು. ಈ ಸೌಲಭ್ಯವನ್ನು ಮಂಗಳೂರಿನ MRPLಸಂಸ್ಥೆಯ ಸಾಂಸ್ಥಿಕ ಸಮಾಜಿಕ ಯೋಜನೆಯಡಿ( CSR ಉಪಕ್ರಮದ ಅಡಿಯಲ್ಲಿ) ಪ್ರೋತ್ಸಾಹಿಸಲ್ಪಟ್ಟು ಸದರಿ ಸೌಲಭ್ಯವನ್ನು ವ್ಯಸನ ಮುಕ್ತ ಸಮಾಜಕಾಗಿ ರೊಗಿಗಳ ಚೇತರಿಕೆಯ ಹಾದಿಯಲ್ಲಿ ಸಬಲೀಕರಣಗೊಳ್ಳುವ ಅಭಿವ್ಯಕ್ತಿಶೀಲ ಕಲಾ ಚಿಕಿತ್ಸೆ ಮತ್ತು ವಿವಿಧ ಗುಣಪಡಿಸುವ ಶಾರಿರಿಕ್ ಹಾಗು ಮನಾಸಿಕ ಚಟುವಟಿಕೆಗಳಿಗೆ ಮೀಸಲಿಡಲಾಗುವುದು. […]

DAKSHINA KANNADA

ಈದುಲ್ ಅಳ್ಹಾ ತ್ಯಾಗ ಸಮರ್ಪನೆ ಪ್ರಪಂಚಕ್ಕೆ ಸಾರುವ ಸಂದೇಶ

ಮಂಗಳೂರು ಜೂನ್ 7 ಬದ್ರಿಯಾ ಜುಮಾ ಮಸೀದಿ ಬಜಾಲ್ ನಂತೂರಿನಲ್ಲಿ ಅಧ್ಯಕ್ಷರಾದ ಮಾನ್ಯ! ಅಬ್ದುಲ್ ರವೂಫ್ ರವರ ಸಹಬಾಗಿತ್ವ ಹಾಗೂ ಸ್ಥಳೀಯ ಖತೀಬರಾದ ಬಹು!* ಅಬ್ದುಲ್ ನಾಸಿರ್ ಸಅದಿ ಯವರ ನೇತ್ರ್ ತ್ವದಲ್ಲಿ ಈದುಲ್ ಅಳ್ಹಾ (ಸಂಭ್ರಮದ ಸಡಗರ) ಆಚರಿಸಲಾಯಿತು ಪ್ರಸ್ತುತ ಕಾರ್ಯಕ್ರಮದ ಪ್ರಾರಂಭದಲ್ಲಿ ಖತೀಬರು ಬಾಷಣಗೈದರು ತನ್ನ ಭಾಷಣದಲ್ಲಿ ಮನುಷ್ಯರಾದ ನಮಗೆ ತ್ಯಾಗ ಸಮರ್ಪನೆ ಸಹನೆ ಕ್ಷಮೆ ಅಗತ್ಯವಾಗಿದೆ ದೀನೀ ಕಾರ್ಯದಲ್ಲಿ ಜಮಾಅತರಾದ ಪ್ರತಿಯೊಬ್ಬರೂ ಕೈಜೋಡಿಸಿ ಪರಸ್ಪರ ದ್ವೇಷ ಕೋಪ ವನ್ನು ಪರಸ್ಪರ ಕ್ಷಮೆಯನ್ನು ನೀಡಿ […]

HOME

ಕರಾವಳಿಯಲ್ಲಿ ಬಕ್ರೀದ್ ಹಬ್ಬದ ಸಂಭ್ರಮ

ಮಂಗಳೂರು;ಕರಾವಳಿ ಯಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶನಿವಾರ ಸಂಭ್ರಮ, ಸಡಗರದಿಂದ ಆಚರಿಸಿದರು.ನಗರದ ಬಾವುಗುಡ್ಡೆಯ ಈದ್ದಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತಾ ಪ್ರವಚನ ನಡೆಯಿತು. ಈದುಲ್ ಅಝಾ ಅಥವಾ ಬಕ್ರೀದ್ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿ ದಾನದ ಸಂಕೇತವಾಗಿದೆ. ಹಬ್ಬವು ದೇವನ ಅನುಸರಣೆ ಮೂಲಕ ಸಮಾನತೆಯ ಸಂದೇಶ ವನ್ನು ನೀಡುತ್ತದೆ. ನಾಡಿನಲ್ಲಿ ಶಾಂತಿ, ಸಾಮರಸ್ಯ ಸ್ಥಾಪನೆಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧ ರಾಗಿರಬೇಕು. […]

HOME

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಳೆಯಿಂದ ಉಂಟಾಗಿರುವ ಅವ್ಯವಸ್ಥೆಗಳು ಸೇರಿದಂತೆ ಜನಸಾಮಾನ್ಯರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಶಾಸಕ ವೇದವ್ಯಾಸ ಕಾಮತ್ ರವರು ತುರ್ತು ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ಪಾಲಿಕೆ ವ್ಯಾಪ್ತಿಯಲ್ಲಿ ವಿಪರೀತ ಮಳೆ ಸುರಿದಿದ್ದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಲ್ಲ. ಇನ್ನೊಂದೆಡೆ ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳೆತ್ತದಿರುವಿಕೆಯಿಂದ ಮನೆಗಳಿಗೆ ಮಳೆ ನೀರು ನುಗ್ಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸಾಲದ್ದಕ್ಕೆ ಮಳೆಯಿಂದ […]

HOME

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ – ಸಚಿವರಿಂದ ವಿತರಣೆ

ಮಂಗಳೂರು, ಜೂ. 6: ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೆಂಗರೆಯ ಇಬ್ಬರು ಮೀನುಗಾರರ ಮನೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಶುಕ್ರವಾರ ಭೇಟಿ ನೀಡಿದರು.ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು, ಪ್ರತಿ ಕುಟುಂಬಕ್ಕೆ ಮಿನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಇನ್ನೂ ನಡೆಯುತ್ತಿದೆ. ರಾಜ್ಯ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸಚಿವರು ತಿಳಿಸಿದರು.ಸಂಕಷ್ಟ ಪರಿಹಾರ ನಿಧಿಯಿಂದ ಮೀನುಗಾರರ […]

DAKSHINA KANNADA HOME

ಕ್ರೈಸ್ತ ಶಿಕ್ಷಣ ವರ್ಷ ಪ್ರಾರಂಭೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಜೂ. 6: ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಪೆರುವಾಯಿಫಾತಿಮಾ ಮಾತೆಯ ದೇವಾಲಯದಲ್ಲಿ 2025 – 26 ನೇ ಸಾಲಿನ ಕ್ರೈಸ್ತ ಶಿಕ್ಷಣ ವರ್ಷ ಪ್ರಾರಂಭೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ವಿಶ್ವಾಸ ನಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂಬ ಧ್ಯೇಯ ವಾಕ್ಯದೊಂದಿಗೆ ಕ್ರೈಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು, ಹೆತ್ತವರು, ಉಪಾಧ್ಯಕ್ಷರು, ಕಾರ್ಯದರ್ಶಿಗಳೊಂದಿಗೆ ಶಿಕ್ಷಣದ ವರ್ಷವನ್ನು ಉದ್ಘಾಟಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿವಂಗತ ಹೆನ್ರಿ ಡಿಸೋಜ ಇವರ ಸ್ಮರಣಾರ್ಥವಾಗಿ 2024 – 25 ನೇ ಸಾಲಿನ ಎಸ್.ಎಸ್.ಎಲ್.ಸಿ. […]

Breaking News HOME LATEST NEWS NATIONAL STATE

ಕೊನೆಗೂ ಕಪ್ ಗೆದ್ದ ಆರ್ ಸಿಬಿ; 18 ವರ್ಷಗಳ ತಪಸ್ಸಿನ ಫಲ; ನಿಯತ್ತಿಗೆ ಸಂದ ಜಯ; ಕೊಹ್ಲಿ ಐಪಿಎಲ್ ಗೆ ವಿದಾಯ?

ಮಂಗಳೂರು, ಜೂ. 3: ಐಪಿಎಲ್ ಇತಿಹಾಸದಲ್ಲೇ ಚರಿತ್ರೆ ನಿರ್ಮಾಣವಾಗಿದ್ದು, ಆರ್ ಸಿಬಿ ಮೊದಲ ಬಾರಿಗೆ ಐಪಿಎಲ್ ಗೆದ್ದು ಬೀಗಿದೆ. ಕಳೆದ 18 ವರ್ಷಗಳಿಂದ ವಿರಾಟ್ ಕೊಹ್ಲಿ ಉಳಿಸಿಕೊಂಡು ಬಂದಿದ್ದ ನಿಯತ್ತಿನ ಫಲವಾಗಿದೆ. ಕೊಹ್ಲಿ ಕಳೆದ 18 ವರ್ಷಗಳಿಂದ ಆರ್ ಸಿಬಿ ಪರವಾಗಿಯೇ ಆಡಿದ್ದರು. ಪ್ರತೀ ಐಪಿಎಲ್ ಸಂದರ್ಭದಲ್ಲೂ ಅಭಿಮಾನಿಗಳು ಕಪ್ ನಮ್ಮದೇ ಎನ್ನುತ್ತಿದ್ದರು. ಕನ್ನಡಿಗರು ಕೂಡ ಆರ್ ಸಿಬಿ ಬಿಟ್ಟು ಇತರ ಫ್ಯಾಂಚಯಿಸಿಗೆ ಹೋದರೂ ಕೊಹ್ಲಿ ಆರ್ ಸಿಬಿಗೆ ಕೈ ಕೊಡಲಿಲ್ಲ. ಹಣದಾಸೆಗೆ ಬೇರೆ ತಂಡ ಸೇರಲಿಲ್ಲ. […]

DAKSHINA KANNADA HOME LATEST NEWS STATE

ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸಬೇಡಿ: ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರು ಸುಶಿಕ್ಷಿತರು, ಬುದ್ಧಿಜೀವಿಗಳು. ಕೆಲವೇ ಕೆಲವು ಜನರಿಂದ ಈ ಜಿಲ್ಲೆಯ ಘನತೆಗೆ ಚ್ಯುತಿ ತರುವ ಪ್ರಯತ್ನವಾಗುತ್ತಿದೆ. ಇದನ್ನು ಮಟ್ಟಹಾಕಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಪ್ರಯತ್ನಪಡುವ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಇದು ಖಂಡನೀಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಶೇ.99ಜನರಿಗೆ ಈ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಬೇಕು, ಅಭಿವೃದ್ಧಿಯಾಗಬೇಕು. ಈ ಜಿಲ್ಲೆಗೆ ಹೊಸ ಕೈಗಾರಿಕೆಗಳು […]